ಸದಸ್ಯ:Jatin Dharmaveer/WEP
ವಿಧಾನ ನಟನೆ: ವಿಧಾನ ನಟನೆ ನಟನೆಯ ಹೊಸ ಹಾಗೂ ಚಾಲನೆಯಲ್ಲಿ ಇರುವ ನಟನೆಯ ಶೈಲಿ. ಈ ಶೈಲಿಯನ್ನು ಇಂದಿನ ನಟರು ಪಾಲಿಸುತಿರುವರು. ನಟನೆಯ ಶೈಲಿಯು ಕಾಲದಿಂದ ಕಾಲಕ್ಕೆ ಬದಲ್ಲಾಗುತ ಬಂದಿದೇ. ಈ ಶೈಲಿಯು 20ನೇ ಶತಮಾನದಲ್ಲಿ ಶುರುವಾಗಿದು, ಇಂದಿನವರೆಗು ಪ್ರಪಂಚದೆಲ್ಲೆಳೆಡೆ ಖ್ಯಾತಿಯನ್ನು ಪಡೆದುಕೊಂಡಿದೆ.
ಕೊನ್ಸ್ಟ್ಯಾಂಟಿನ್ ಸ್ಟೇನಿಸ್ಲಾವ್ಸ್ಕಿ:
ಈ ಶೈಲಿಯನ್ನು ಮೊದಲ ಬಾರಿಗೆ ಕಾಂಸ್ತಂಟಿನ್ ಸ್ಟೇನಿಸ್ಲಾವ್ಸ್ಕಿ ಎನ್ನುವ ವ್ಯಕ್ತಿಯು ಈ ಶೈಲಿಯನ್ನು ಸ್ವತಃ ಶೃಸ್ಟಿಸಿ ಪ್ರಯೋಗಿಸಿದರು.ಸ್ಟೇನಿಸ್ಲಾವ್ಸ್ಕಿಯು ರಷ್ಯಾದಲ್ಲಿ ಒಬ್ಬ ನಟ ಆಗಿದ್ದರು. ಅಂದಿನ ಕಾಲದಲ್ಲಿ ನಟನೆಯು ಬಹಳ ಸರಳ ಹಾಗೂ ಬಹಳ ನೀರಸವಾಗಿ ಇರುತಿತ್ತು. ಆದರೆ , ಈ ನಟ ಒಂದು ವಿಭಿನ್ನ ಶೈಲಿಯನ್ನು ಪ್ರಯೋಗಿಸಿದರು. ಅಂದು,ನಟರು ತಮ್ಮ ಪಾತ್ರವನ್ನು ಅನುಭವಿಸದೆ ಬರೀ ನಟಿಸುತ್ತಿದ್ದರು. ಆದರಿಂದ ನಾಟಕ ಗಲ್ಲನು ನೋಡುವುದಕ್ಕೆ ಬಹಳ ನೀರಸವಾಗಿ ಇರುತಿತ್ತು. ನಟರು ತಮ್ಮ ಪಾತ್ರವನ್ನು ಅನುಭವಿಸಿ ನಟಿಸದಾಗ,ಅದನ್ನು ನೋಡಿ ಜನ ಬೆರಗಾದರು. ನಟನೆಯು ಬಹಳ ಸತ್ಯವಾಗಿ ಹೊರಬಂದು, ಜನರಿಗೆ ಬಹಳ ಮನಮೆಚ್ಚುವಂತೆ ಆಯಿತು.ವಿಧಾನ ನಟನೆಯ ಮುಖ್ಯ ಗುರಿಯು ನಟರಿಗೆ ತಮ್ಮ ಪಾತ್ರದಲ್ಲಿ ಹಾಗೂ ಅವರ ಪ್ರತಿ ಕೆಲಸದಲ್ಲಿ ಸತ್ಯವನ್ನು ಹುಡುಕುವುದಾಗಿದೇ. ಸ್ಟೇನಿಸ್ಲಾವ್ಸ್ಕಿ ಯು ಈ ಸತ್ಯವನ್ನು ಪಡೆಯಲು ನಟರಿಗೆ ಒಂದಷ್ಟು ಹಂತಗಳನ್ನು ರಚಿಸಿದರು. ಅದು 'ಸ್ಟೇನಿಸ್ಲಾವ್ಸ್ಕಿಯ ವಿಧಾನ ನಟನೆ'ಯಂದೇ ಹೆಸರು ಮಾಡಿ, ಒಂದು ಹೊಸ ನಟನೆಯ ವಿಧಾನಆಯಿತು.ಸ್ಟೇನಿಸ್ಲಾವ್ಸ್ಕಿಯು ಮೂರು ಪುಸ್ತಕ ಕೂಡ ರಚಿಸಿದ್ದಾರೆ. 'ಆನ್ ಆಕ್ಟರ್ ಪ್ರಿಪರೆಸ್','ಬಿಲ್ಡಿಂಗ್ ಆ ಕಾರಕಟರ್' ಹಾಗೂ 'ಕ್ರಿಯೆಟಿಂಗ್ ಆ ರೋಲ್'.
ಇತರರು:
ಈ ಶೈಲಿಯ ನಟನೆಯಲ್ಲಿ ಬಹಳಷ್ಟು ಮಂದಿ ತಮ್ಮ ಕೊಡುಗೆಯನ್ನು ನೀಡಿದ್ದಾರೆ. ಲೀ ಸ್ತ್ರಸ್ಬರ್ಗ್ ಯನ್ನುವ ವ್ಯಕ್ತಿಯು ಈ ಶೈಲಿಯಲ್ಲಿ ತಮ್ಮ ಕೊಡುಗೆಯನ್ನು ನೀಡಿದ್ದಾರೆ. ಇವರು ಮುಖ್ಯವಾಗಿ ನಟರ ಮಾನಸಿಕ ಅಂಶದ ಕಡೆ ಗಮನ ಹರಿಸಿದರು. ಸ್ತ್ರಸ್ಬರ್ಗ್ ತಮ್ಮ ಈ ಹೊಸ ಶೈಲಿಯನ್ನು ಇಂದಿನ ಬಹಳಷ್ಟು ಹಾಲಿವುಡ್ ನಟರಿಗೆ ಶಿಕ್ಷಣ ನೀಡಿದ್ದಾರೆ. ಮರಿಲಿನ್ ಮನ್ರೋಎ , ಸ್ಟೆಲ್ಲಾ ಅಡ್ಲೆರ್, ಹಾಗು ಇತರ ನಟರು ಮೊದಲಾದವರು. ಈ ಶೈಲಿಯ ಮತ್ತೊಂದು ಪ್ರಮುಖವಾದ ಶಿಕ್ಷಕರು ಸ್ಟೆಲ್ಲಾ ಅಡ್ಲೆರ್. ಇವರು ಕೂಡ ಬಹಳ ಹಾಲಿವುಡ್ ನಟರಿಗೆ ಪಾಠ ಕಲಿಸಿರುವರು. ಹಾಲಿವುಡ್ ನ ಅದ್ಬುತ ನಟ, ಮಾರ್ಲೆನ್ ಬ್ರಾಂಡೊವಿನ ಗುರು ಆಗಿದ್ದರು. ಹೀಗೆಯೇ ಮತ್ತೊಂದು ಪ್ರಮುಖ ಶಿಕ್ಷಕ ಸಾನ್ಫೋರ್ಡ್ ಮೆಯಿಸನೇರ್ . ಇವರು ನಟರ ನಡವಳಿಕೆಯ ಅಂಶದ ಬಗ್ಗೆ ಗಮನ ಹರಿಸಿದರು. ಇವರು ಕೂಡ ಬಹಳಷ್ಟು ನಟರಿಗೆ ಈ ಶೈಲಿಯ ಬಗ್ಗೆ ಹೇಳಿಕೊಟ್ಟಿದ್ದಾರೆ. ಎಲಿಯ ಕಜನ್ ಎಂಬ ನಿರ್ದೇಶಕ ಈ ಶೈಲಿಯ ನಟನೆಯನ್ನು ಮೊದಲ ಬಾರಿಗೆ ತೆರೆಯ ಮೇಲೆ ತಂದರು. ಇವರು ಮಾರ್ಲೆನ್ ಬ್ರಾಂಡೊ ಹಾಗೂ ಜೇಮ್ಸ್ ಡೀನ್ ಹಾಗೂ ಇತರೆ ಅದ್ಬುತ ನಟರನ್ನು ಕೂಡಿ ಬಹಳಷ್ಟು ಸುಂದರವಾದ ಚಿತ್ರಗಳನ್ನು ಮಾಡಿದರೆ. ಇವರು ನಟರ ನಿರ್ದೇಶಕ ಎಂದೇ ಹೆಸರು ಪಡೆದಿದ್ದರು.