ನನ್ನ ಹೆಸರು ಜತಿನ್ ಧರ್ಮವೀರ್.ನನ್ನ ಊರು ಮೈಸೂರು.ನಾನು ನನ್ನ ಪ್ರೈಮರಿ ವಿದ್ಯಾಭ್ಯಾಸವನ್ನು ಐಡಿಎಲ್ ಜಾವಾ ರೋಟರಿ ಶಾಲೆಯಲ್ಲಿ ಮಾಡಿರುವೆ.ನನ್ನ ಹೈ ಸ್ಕೂಲ್ ವಿದ್ಯಾಭ್ಯಾಸ ವನ್ನು ಶ್ರೀ ರಾಮಕೃಷ್ಣ ವಿದ್ಯಶಾಲದಲ್ಲಿ ಮಾಡಿರುವೆ.ಅದು ರೆಸಿಡೆನ್ಸಿ ಸ್ಕೂಲ್ ಆಗಿದ್ದು ಅಲ್ಲಿ ನಾನು 5 ವರ್ಷ ಇದ್ದೆ.ಅಲ್ಲಿಂದ ನಾನು ಬಹಳಷ್ಟು ಕಲಿತಿರುವೆ. ನನ್ನ ತಂದೆಯ ಹೆಸರು ಧರ್ಮವೀರ್.ನನ್ನ ತಾಯಿಯ ಹೆಸರು ಧಾನ್ಯವತಿ.ನಾನು ಈಗ ಕ್ರೈಸ್ಟ್ ವಿಶ್ವವಿದ್ಯಾಲಯದಲ್ಲಿ ಬಿ.ಎ ಇನ್ ಥಿಯೇಟರ್ ಸ್ಟಡಿಸ್,ಇಂಗ್ಲಿಷ್ ಹಾಗೂ ಸೈಕೋಲಾಜಿ ಪದವಿಯನ್ನು ಮಾಡುತಿರುವೆ.ನಾನು ಪಿ.ಯು.ಸಿ ಯಲ್ಲಿ ವಿಜ್ಞಾನ ಓದಿರುವೆ.ಆದರೆ ನನ್ನ ಆಸೆ ಕಲಾವಿದ ಆಗುವುದರಲ್ಲಿ ಇರುವುದರಿಂದ ಈ ಪದವಿ ಮಾಡುತಿರುವೆ.ನನ್ನ ಆಸೆ ಚಲನಚಿತ್ರವನ್ನು ಬರೆದು ನಿರ್ದೇಶಿಸುವುದು.ಕ್ರಿಸ್ಟೋಫರ್ ನೋಲನ್ ನನ್ನ ಈ ನಿರ್ಧಾರಕ್ಕೆ ಕಾರಣವಾಗಿರುವರು.ಆದರೆ ಇವರೊಬ್ಬರೇ ಅಲ್ಲ .ಮಾರ್ಟಿನ್ ಸ್ಕೋರ್ಸಿಸಿ, ಕ್ಯೂನಟಿನ್ ಟ್ರಂಟಿನೊ,ಡೇವಿಡ್ ಲಿನ್ಚ್,ಸ್ಟೇನ್ಲೆಯ್ ಕುಬ್ರಿಕ್,ಅಲ್ಫ್ರೆಡ್ ಹಿಚುಕಾಕ್, ಟೆರೇನ್ಸ್ ಮಾಲಿಕ್ ,ಡೇವಿಡ್ ಫಿಂಚೆರ್,ಜರ್ಸ್ಮುಚ್,ಉಪೇಂದ್ರ ಹಾಗೂ ಇತ್ಯಾದಿ ನಿರ್ದೇಶಕರು ಕೂಡ ಪ್ರಭಾವ ಬೀರಿರುವರು.ನನಗೆ ನಟನೆಯಲ್ಲೂ ಕೂಡ ಆಸಕ್ತಿ ಇರುವುದು.ನನಗೆ ಬಹಳ ಪ್ರಿಯವಾದ ನಟರು ಢನಿಯಲ್ ಡೇ ಲೇವಿಸ್,ಹೆಥ್ ಲೆಡ್ಜೆರ್,ರೋಬೇರ್ಟ್ ಡಿ ನಿರೋ,ಮಾರ್ಲನ್ ಬ್ರಾಂಡೊ,ಅಲ್ ಪಚಿನೋ,ಲೀನಾರ್ಡೊ ಡಿ ಕ್ಯಾಪ್ರಿಓ,ಹಾಗೂ ಇತ್ಯಾದಿ.ನಾನು ಚಿತ್ರ ಕಲೆಯನ್ನು ಕೂಡ ಮಾಡುವೆ.ಇದ್ದು ನನ್ನ ಬಗ್ಗೆ ನಾನು ಹೇಳಿರುವೆ.ಹೇಳಲು ಇನಷ್ಟು ಯಂದರೆ ಆ 5 ವರ್ಷ ಹಾಸ್ಟೆಲ್ ನಲ್ಲಿ ಕಳೆದ ಸಮಯದಲ್ಲಿ.ಆ ಹಾಸ್ಟೆಲ್ ಬೇರೆ ಹಾಸ್ಟೆಲ್ ರೀತಿ ಇರಲಿಲ್ಲ.ಅಲ್ಲಿ ದಿವಸದ ಮಾಡುವಿಕೆಗೆ ಒಂದು ಸಮಯ ಪಟ್ಟಿ ಇತ್ತು. ಬೆಳಗೆ 5ಕ್ಕೆ ಎದ್ದು ನಮ್ಮ ಬೆಳಗಿನ ಕೆಲಸ ಮುಗಿಸಿ ನಂತರ ಪ್ರಾರ್ಥನೆಗೆ ಹೊರಡುವುದಾಗಿತ್ತು.ನಂತರ ಮೈದಾನದಲ್ಲಿ ಓಡಿ ಬಂದು ತಿಂಡಿಗೆ ಹೊರಡ ಬೇಕಿತ್ತು.ನಂತರ ನಮ್ಮ ತರಗತಿಗಳಿಗೆ ತೆರಳಿ 4 ಗಂಟೆ ವರೆಗೂ ಶಾಲೆ ನಡೆಯುತ್ತಿತ್ತು.ಸಂಜೆ ತಿಂಡಿ ಮುಗಿಸಿ ನಾವು ಆಟಕ್ಕೆ ತೆರಳ ಬೇಕಿತ್ತು.ಅಲ್ಲಿ 24 ಮೈದಾನಗಳು ಇದವು.ಆಟದ ನಂತರ ಮತ್ತೆ ಪ್ರಾರ್ಥನೆ ಮಾಡಿ ನಂತರ ಓದಲು ತೆರಳ ಬೇಕಿತ್ತು. ಓದಿದ ನಂತರ ಊಟಕ್ಕೆ ಹೋಗಿ ಬಂದು ಅರ್ದ ಗಂಟೆ ಆದ ನಂತರ ಮತ್ತೇ ಓದಲು ಕೂರಬೇಕಿತ್ತು. ಆನಂತರ ರಾತ್ರಿ 10:30 ಗೆ ಮಲಗ ಬೇಕಿತು.ಇಂಥ ಶಿಸ್ತಿನ ಶಾಲೆಯಲ್ಲಿ ನಮಂತವರು ಒದಿದ ಮೇಲೆ ತರ್ಲೆ ಮಾಡುವುದು ಖಚಿತ.ಆದರೆ ಅಲ್ಲಿ ಬಹಳಷ್ಟು ಕಲಿತಿರುವೆ.