ಸದಸ್ಯ:Indu shree Gowda K V/sandbox
ನನ್ನ ಹೆಸರು ಇಂದುಶ‍್ರೀ ಕೆ.ವಿ. ನಾನು ಪ್ರಥಮ ಬಿ.ಬಿ.ಎಂ.ಸಂತ ಆಲೋಶಿಯಸ್ ಕಾಲೇಜಿನಲ್ಲಿ ಒದುತ್ತಿದ್ದೆನೆ.
ಹರಿಹರ :
ಕಾವ್ಯವಸ್ತು,ಶೈಲಿ,ಛಂದಸ್ಸಿನಲ್ಲಿ ಹೊಸತನ ತಂದ ಮಹತ್ವದ ಕವಿ ಹರಿಹರ. ಇವನು ೧೩ನೆಯ ಶತಮಾನದ ಪೂರ್ವಭಾಗದಲ್ಲಿ ಬದುಕಿದ್ದನೆಂದು ಒಪ್ಪಿಕೊಳ್ಳಲಾಗಿದೆ. ಪಂಪಾಕ್ಷೇತ್ರದ ವಿರೂಪಾಕ್ಷನ ಪರಮ ಭಕ್ತನಾಗಿದ್ದ ಹರಿಹರ ದೋರ ಸಮುದ್ರದ ಹೊಯ್ಸಳನ ರಾಜಾತ್ತನದಲ್ಲಿ ಕರಣಿಕನಾಗಿದ್ದ. ವಿರಕ್ತಿ ಹೊಂದಿದ ಈತ ತನ್ನ ಇಷ್ಟದೈವವಾದ ಹಂಪೆಯ ವಿರೂಪಾಕ್ಷನ ಸನ್ನಿಧಿಯಲ್ಲಿ ಕಾವ್ಯರಚನೆ ಮಾಡಿದನೆಂದು ತಿಳಿದು ಬರುತ್ತದೆ. ಇವನು ನೂರಾರು ರಗಳೆಗಳನ್ನು ಬರೆದಿರುವನು. ಅವು ಪುರಾತನರು,ನುತನರು ಮುಂತಾದ ಶಿವ ಶರಣರ ಕಥಗಳನ್ನು ನಿರೂಪಿಸುತ್ತವೆ. 'ಪಂಪಾಶತಕ','ರಕ್ಷಾಶತಕ'ವೆಂಬೆರಡು ಶನಕ; 'ಮುಡಿಗೆ ಅಷ್ಟಕ', 'ಪುಷ್ಷರಗಳೆ' ಮುಂತಾದ ಸಂಕೀರ್ಣ ರಗಳೆಗಳನ್ನೂ ಬರೆದಿದ್ದಾನೆ. 'ಗಿರಿಜಾ ಕಲ್ಯಾಣ' ವೆಂಬ ಚಂಪುಕೈತಿಯನ್ನೂ ಹರಿಹರನು ರಚಿಸಿದ್ದಾನೆ.
'ಬಸವರಾಜ ದೇವರ ರಗಳೆ' ಮತ್ತು 'ತಂಬಿಯಣ್ಣನ ರಗಳೆ'ಗಳು ಹರಿಹರ ವಿರಚಿತ ದೀರ್ಘರಗಳೆಗಳು.