ಸದಸ್ಯ:Hegde akshay/ನನ್ನ ಪ್ರಯೋಗಪುಟ3

ಶ್ರೀ ಚಂದ್ರನಾಥ ಸ್ವಾಮಿ ಬಸದಿ, ಉಪ್ಪಿನಂಗಡಿ

ಈ ಬಸದಿಯು ಪುತ್ತೂರು ತಾಲೂಕು ಉಪ್ಪಿನಂಗಡಿ ಗ್ರಾಮ ಮತ್ತು ಉಪ್ಪಿನಂಗಡಿ ಊರಿನಲ್ಲಿದೆ.

ಬಸದಿಯನ್ನು ತಲುಪಲು ಪ್ಪಿನಂಗಡಿ ಬಸ್ ನಿಲ್ದಾಣದಿಂದ ಪೂರ್ವಾಭಿಮುಖವಾಗಿ ರಸ್ತೆಯಲ್ಲಿ ಅರ್ಧ ಕಿಲೋಮೀಟರ್ ದೂರ ಚಲಿಸಿ ಗಾಂಧಿಪಾರ್ಕ ಬಳಿ ಸಾಗಬೇಕು. ಬಸದಿಯು ಕಾರ್ಕಳ ಮಠಕ್ಕೆ ಸೇರಿದೆ. ಬಸದಿಯು ಇತ್ತೀಚಿಗೆ ಎಂದರೆ ೧೯೫೯ರಲ್ಲಿ ಜೀರ್ಣೋದ್ಧಾರಗೊಂಡು ಪಂಚಕಲ್ಯಾಣ ನಡೆಯಿತು. ಬಸದಿ ಸುಮಾರು ಮುನ್ನೂರು ವರ್ಷ ಹಳೆಯದಾಗಿರಬಹುದು.

ಶಿಲಾನ್ಯಾಸ

ಬದಲಾಯಿಸಿ

ಬಸದಿಯಲ್ಲಿ ಪದ್ಮಾವತಿ ಅಮ್ಮನವರ ಮೂರ್ತಿ ಇದೆ. ಬ್ರಹ್ಮ ದೇವರ ಮೂರ್ತಿಯಿದೆ. ನಂದಿಬಟ್ಟಲು, ಬಸದಿಯನ್ನು ಪ್ರವೇಶಿಸುವಾಗ ಎಡ-ಬಲ ಬದಿಗಳಲ್ಲಿ ಗೋಪುರಗಳಿವೆ. ಬಸದಿಯ ಮುಖಮಂಟಪದಲ್ಲಿ ಗೋಡೆಗೆ ನೇತುಹಾಕಿದ್ದ ದ್ವಾರಪಾಲಕರ ಚಿತ್ರಗಳಿವೆ. ಗೋಡೆಯ ಮೇಲೆ ಎರಡು ಬದಿಯಲ್ಲಿ ಸಮ್ಮೇದ ಶಿಖರ್ಜಿ ಮತ್ತು ಯಾತ್ರಾಸ್ಥಳದ ಚಿತ್ರವನ್ನು ಬಿಡಿಸಲಾಗಿದೆ. ಆದರೆ ಅಲ್ಲಿ ಜಯಗಂಟೆ, ಜಾಗಟೆಯನ್ನು ತೂಗುಹಾಕಲಾಗಿದೆ. ಹಾಗೂ ತೀರ್ಥಂಕರರಾದ ಸ್ವಾಮಿಯ ಬಳಿಗೆ ಹೋಗುವ ಮಂಟಪವನ್ನು ತೀರ್ಥಂಕರರ ಮಂಟಪ ಎಂದು ಕರೆಯಲಾಗುತ್ತದೆ. ೧೯೫೯ರ ಮೊದಲು ಗಂಧಕುಟಿ ಮತ್ತು ತೀರ್ಥಂಕರರ ಮಂಟಪಗಳಿದ್ದವು. ಈಗ ಗರ್ಭಗುಡಿಯಲ್ಲಿ ತೀರ್ಥಂಕರರ ಎದುರು ಇದೆ. ಗಂಡ ಕುಟಿಯ ಬಳಿಯಲ್ಲಿ ಬ್ರಹ್ಮದೇವರ ಮೂರ್ತಿ ಇದೆ.ಮೂಲ ನಾಯಕನ ಮೂರ್ತಿ ಪಂಚಲೋಹದ್ದು, ಸುಮಾರು ೨೦ ಇಂಚು ಇರಬಹುದು. ಖಡ್ಗಾಸನ ಭಂಗಿಯಲ್ಲಿದೆ.ಬಸದಿಯ ಅಂಗಳದಲ್ಲಿ ಎಡ ಮೂಲೆಯಲ್ಲಿ ಕ್ಷೇತ್ರಪಾಲನ ಸನ್ನಿಧಿಯಿದೆ. ಅಲ್ಲಿ ಮೂರ್ತಿಗಳು, ತ್ರಿಶೂಲ ಮತ್ತು ನಾಗಕಲ್ಲು ಇದೆ.[]

ಪೂಜಾ ವಿಧಾನ

ಬದಲಾಯಿಸಿ

ಅಮ್ಮನ ಮೂರ್ತಿಗೆ ಯಾವಾಗಲೂ ಪೂಜೆ ನಡೆಯುತ್ತದೆ. ಮಾತೆ ಪದ್ಮಾವತಿ ದೇವಿಯ ಮೂರ್ತಿ ಇದ್ದು ಪೂಜೆ ನಡೆಯುತ್ತದೆ. ವಿಶೇಷ ಸಂದರ್ಭಗಳಲ್ಲಿ ಬಳೆಗಳನ್ನು ಹಾಕಿ ಹೂವಿನ ಅಲಂಕಾರ ಮಾಡಿ ಪೂಜೆ ಮಾಡಲಾಗುತ್ತದೆ. ಆಗ ಮೂರ್ತಿಯನ್ನು ತೀರ್ಥಮಂಟಪದಲ್ಲಿ ಇಟ್ಟು ಪೂಜಿಸಲಾಗುತ್ತದೆ. ಈ ಅಮ್ಮನವರ ಮೂರ್ತಿ ಉತ್ತರಕ್ಕೆ ಮುಖ ಮಾಡಿಕೊಂಡಿದೆ. ಪಂಚಕಲ್ಯಾಣ ನಡೆದ ದಿನದ ವರ್ಧಂತೋತ್ಸವ ವರ್ಷದ ಮೇ ತಿಂಗಳಿನಲ್ಲಿ ನಡೆಯುತ್ತದೆ. ದಿನವೂ ಮೂಲಸ್ವಾಮಿಗೆ ಜಲಾಭಿಷೇಕ ಜರಗುತ್ತದೆ. ವಿಶೇಷ ದಿನಗಳಲ್ಲಿ ಮತ್ತು ಭಕ್ತರ ಕೋರಿಕೆಯ ಮೇರೆಗೆ ಕ್ಷೀರಾಭಿಷೇಕ ಪಂಚಾಮೃತ ಅಭಿಷೇಕವನ್ನು ನಡೆಸಲಾಗುತ್ತದೆ. ಶ್ರಾವಣ ಹುಣ್ಣಿಮೆಗೆ ಯಜ್ಞೋಪಪನೀತಧಾರಣೆ ನಡೆಯುತ್ತವೆ. ನಾಗರ ಪಂಚಮಿ, ಸಿರಿಯಾಳ ಷಷ್ಠಿ, ನೋಂಪಿಗಳು ಹುಣ್ಣಿಮೆ ನೊಂಪಿಗಳು ಭಕ್ತರ ಅಪೇಕ್ಷೆ ಮೇರೆಗೆ ನಡೆಯುತ್ತವೆ. ಪಂಚಕಲ್ಯಾಣ ನಡೆದ ದಿನ ವಾರ್ಷಿಕೋತ್ಸವದ ವಿಶೇಷ ಪೂಜೆ ಮಹಾವೀರ ನಿರ್ಮಾಣ ಪೂಜೆ ಮತ್ತು ನೋಂಪಿಗಳು ನಡೆಯುತ್ತವೆ. ಅಷ್ಟದಿಕ್ಪಾಲಕರ ಕಲ್ಲುಗಳಿಗೆ ಪೂಜೆ ಸಲ್ಲಿಕೆ ಆಗುತ್ತದೆ.

ಉಲ್ಲೇಖ

ಬದಲಾಯಿಸಿ
  1. ಶೆಣೈ, ಉಮಾನಾಥ ವೈ. ಕರಾವಳಿ ಕರ್ನಾಟಕದ ಜಿನ ಮಂದಿರಗಳ ದರ್ಶನ (೧ ed.). ಮಂಜೂಶ್ರೀ ಪ್ರಿಂಟರ್ಸ್. p. ‌೨೪೬-೨೪೭.