ಅ ಆ ಇ ಈ ಉ ಊ ಋ ೠ ಎ ಏ ಐ ಒ ಓ ಅಂ ಅಃ

ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಲ ವ ಶ

ಮುತ್ತುಗಳ ಬಗ್ಗೆ ಇರುವ ತಪ್ಪು ಗ್ರಹಿಕೆಗಳು ಬದಲಾಯಿಸಿ

ಕೆಲವರು ಮುತ್ತುಗಳನ್ನು ದೇವರ ಕಂಬನಿಗಳೆಂದು ನಂಬಿದ್ದರು.


ಮುತ್ತುಗಳು ಹೇಗೆ ತಯಾರಾಗುತ್ತವೆ? ಬದಲಾಯಿಸಿ

ಯಾವುದಾದರು ಪರೋಪಜೀವಿ(parasite) ದಾಳಿ ಮಾಡಿದಾಗ, ಅಥವಾ ಯಾವುದಾದರು ಹೊರ ಪದಾರ್ಥವು(foreign substance), ಸಿಂಪಿಯ ಕವಚ ಹಾಗು ಚಿಪ್ಪುಗಳ ನಡುವೆ ಸಿಲುಕಿ ಕೊಂಡರೆ, ಸಿಂಪಿಯ ಕವಚಕ್ಕೆ ಕಿರಿಕಿರಿ ಉಂಟಾಗುತ್ತದೆ. ಕಿರಿಕಿರಿ ಉಂಟಾಗಲು ಶುರುವಾದಾಗ, ಮುತ್ತನ್ನು ತಯಾರು ಮಾಡಲು ಶುರುಮಾಡುತ್ತದೆ. ಸಿಂಪಿಯ ಕವಚಕ್ಕೆ ಕಿರಿಕಿರಿ ಉಂಟಾಗಿ ಅಲ್ಲಿ ಗಾಯವಾದಂತೆ ಆಗುತ್ತದೆ. ಹೀಗೆ ಆದ ಗಾಯವನ್ನು ಗುಣಪಡಿಸಿಕೊಳ್ಳಲು, ಮೊದಲು ಮುತ್ತು ಚಿಪ್ಪನ್ನು ತಯಾರಿಸುತ್ತದೆ.

ಗಾಯವಾದಾಗ ಸಿಂಪಿಯು ಎರಡು ರೀತಿಯ ಪ್ರೋಟೀನನ್ನು ಹೊರಹಾಕುತ್ತದೆ. ಅವು ಕೊಂಚಿನ್(conchin) ಮತ್ತು ಪೆರ್ಲುಸಿನ್(perlucin). ಈ ಎರಡು ಪ್ರೋಟೀನ್ ಗಳು ಸೇರಿ ಕೊಂಕಿಯೊಲಿನ್ (conchiolin) ಎಂಬ ಒಂದು ಮೇಟ್ರಿಕ್ಸ್ ಆಗಿ ರೂಪುಗೊಳ್ಳುತ್ತದೆ. ಸಿಂಪಿಗಳೂ ಆರೊಗೊನೈಟ್ (aroganite) ಹರಳುಗಳನ್ನು ಆ ಮೇಟ್ರಿಕ್ಸ್ ನಲ್ಲಿರುವ ಖಾಲಿ ಜಾಗಗಳಲ್ಲಿ ತುಂಬುತ್ತವೆ. ಆರೊಗೊನೈಟ್ ಹರಳುಗಳಲ್ಲಿ ಕಾಲ್ಶಿಯಂ ಕಾರ್ಬೊನೇಟ್ (calcium carbonate) ಇರುತ್ತದೆ. ಈ ರೀತಿಯಲ್ಲಿ ಆಗಿರುವ ಕೊಂಕಿಯೊಲಿನ್ ಮತ್ತು ಆರೊಗೊನೈಟ್ ಮಿಶ್ರಣವೇ ಮುತ್ತು ಚಿಪ್ಪು (Nacre). ಸಿಂಪಿಯು ಹೊರ ಪದಾರ್ಥದ ಮೇಲೆ ಈ ಮುತ್ತು ಚಿಪ್ಪಿನ ಪದರವನ್ನು ಹರಡುತ್ತಾ ಹೋಗುತ್ತದೆ. ಪದರಗಳ ಮೇಲೆ ಪದರವನ್ನು ಹರಡಿ, ಆ ಹೊರ ಪದಾರ್ಥವನ್ನು ಒಂದು ಮೃದುವಾದ ಮುತ್ತಾಗಿ ಹೊರಹಾಕುತ್ತದೆ. ಹೀಗೆ ಹೊರ ಪದಾರ್ಥವನ್ನು ಮುತ್ತಾಗಿ ಬದಲಾಯಿಸುವುದರಿಂದ ಸಿಂಪಿಗೆ ಆದ ಕಿರಿಕಿರಿಯು ಕಡಿಮೆ ಆಗುತ್ತದೆ. ಇದುವೇ ಸಿಂಪಿಗಳು ಮುತ್ತುಗಳನ್ನು ತಯಾರಿಸುವ ಅದ್ಭುತ ಪ್ರಕ್ರಿಯೆ. ಕೆಲವರು, ಒಂದು ಕಾಳು ಮರಳು ಸಿಂಪಿಗಳಲ್ಲಿ ಹೊರಪದಾರ್ಥವಾಗಿ ಕಿರಿಕಿರಿ ಮಾಡಲು ಪ್ರಯತ್ನಿಸಿದಾಗ ಮಾತ್ರ, ಮುತ್ತು ಚಿಪ್ಪು ಹರಡಿಕೆ ಶುರುವಾಗುತ್ತದೆ ಎನ್ನುತ್ತಾರೆ. ಆದರೆ ಮರಳಲ್ಲದೆ, ಯಾವುದೇ ವಿದೇಶಿ ಪದಾರ್ಥಗಳು ಅವುಗಳ ಮಧ್ಯೆ ಉಳಿದರೆ, ಅದರಿಂದ ಸಿಂಪಿಗೆ ಕಿರಿಕಿರಿ ಉಂಟಾಗಿ ಮುತ್ತು ಚಿಪ್ಪು ಹರಡಿಕೆ ಶುರುವಾಗುತ್ತದೆ.


ಧಾರ್ಮಿಕ ಉಲ್ಲೇಖಗಳಲ್ಲಿ ಮುತ್ತುಗಳು ಬದಲಾಯಿಸಿ

  • ಹಿಂದೂ ಪುರಾಣಗಳಲ್ಲಿ ಉಲ್ಲೇಖಗಳು: ಪುರಾಣಗಳ ಪ್ರಕಾರ ಜಗತ್ತಿನ ಮೊದಲ ಮುತ್ತು ಕೃಷ್ಣನಿಗೆ ಸಿಕ್ಕಿತ್ತು, ಹಾಗು ಆ ಮುತ್ತನ್ನು ತನ್ನ ಮಗಳಾದ ಪಂಡಾಲಳ ಮದುವೆಗೆ ಉಡುಗೊರೆಯಾಗಿ ಕೊಟ್ಟಿದ್ದನು ಎಂದು ಹೇಳಲಾಗಿದೆ. ಗರುಡಪುರಾಣದಲ್ಲಿಯೂ ಕೂಡ ಮುತ್ತಿನ ಬಗ್ಗೆ ಉಲ್ಲೇಖವಿದೆ. ಅಷ್ಟೇ ಅಲ್ಲದೆ, ಆಯುರ್ವೇದದಲ್ಲಿಯೂ ಸಹ ಮುತ್ತುಗಳಿಗೆ ಬಹಳ ಪ್ರಾಮುಖ್ಯತೆ ಇದೆ. ಮಾರ್ಕೋ ಪೋಲೋನ ಪ್ರಕಾರ, ಮಲಬಾರಿನ ರಾಜರು ೧೦೪ ಮಾಣಿಕ್ಯಗಳು ಹಾಗು ಮುತ್ತುಗಳನ್ನು ಹೊಂದಿದ ಹಾರವನ್ನು ಹಾಕಿಕೊಳ್ಳುತ್ತಿದ್ದರು. ೧೦೪ ಮಾಣಿಕ್ಯಗಳು ಮತ್ತು ಮುತ್ತುಗಳು ರಾಜನ ಬೆಳಗ್ಗಿನ ಮತ್ತು ಸಂಜೆಯ ೧೦೪ ಪ್ರಾರ್ಥನೆಗೆ ಸಮವಾಗಿದ್ದವು. ಪುರಾಣಗಳಲ್ಲಿ ಮಹಾವಿಷ್ಣುವಿನ ಎದೆಯ ಮೇಲಿದ್ದ ಮುತ್ತು ಪ್ರಸಿದ್ಧವಾದದ್ದು. ಅದರ ಹೆಸರು ಕೌಸ್ತುಭ. ಇದಲ್ಲದೆ ಹಲವಾರು ಜನಪದ ಕಥೆಗಳಲ್ಲಿಯೂ ಸಹ ಮುತ್ತುಗಳನ್ನು ವರ್ಣಿಸಲಾಗಿದೆ.