ಸಂಗೋಳ್ಳಿ ರಾಯಣ್ಣ

ಬದಲಾಯಿಸಿ
 
ಸಂಗೋಳ್ಳಿ ರಾಯಣ್ಣ

ಸಂಗೋಳ್ಳಿ ರಾಯಣ್ಣ (೧೫ ಅಗಸ್ಟ್ ೧೭೯೮-೨೬ ಜನೇವರಿ ೧೮೩೨) ರಾಣಿ ಕಿತ್ತೂರು ಚೆನ್ನಮ್ಮ ಅವರ ಕಿತ್ತೂರು ಸಂಸ್ಥಾನದ ಪ್ರಸಿದ್ಧ ಹಾಗು ಶಕ್ತಿಶಾಲಿ ಸೈನಿಕ, ಹಾಗು ಭಾರತದಲ್ಲಿ ಬ್ರಿಟೀಷ್ ಸಾಮ್ರಾಜ್ಯಶಾಹಿ ಮತ್ತು ದಿ ಈಸ್ಟ್ ಇಂಡಿಯ ಕಂಪನಿಯ ವಿರುದ್ದ ಪ್ರಮುಖ ಹೋರಾಟಗಾರರಲ್ಲಿ ಒಬ್ಬರು.ಇವರ ಜೀವನಾಧಾರಿತ ಕನ್ನಡ ಚಲನಚಿತ್ರ ಸಂಗೋಳ್ಳಿ ರಾಯಣ್ಣ ೨೦೧೨ ರಲ್ಲಿ ಬಿಡುಗಡೆಯಾಗಿದೆ.



೧೫ ಅಗಸ್ಟ್ ೧೭೯೮ ರಲ್ಲಿ ಬೆಳಗಾವಿ ಜ್ಜಿಲ್ಲೆಯ ಬೈಲಹೋಂಗಲ ತಾಲುಕಿನ ಸಂಗೋಳ್ಳಿ ಯಲ್ಲಿ ದೋಡ್ಡ ಬರಮಪ್ಪ ಬಾಲಪ್ಪ ರಾಗನ್ನವರ್ ಇವರ ಮಗನಾಗಿ ಜನಿಸಿದರು. ಕಿತ್ತೂರು ಸೈನ್ಯದ ಪ್ರಮುಖ(Chief) ಸೈನಿಕರಾಗಿದ್ದರು.

ಇತಿಹಾಸ

ಬದಲಾಯಿಸಿ

೧೮೨೪ ರಲ್ಲಿ ಬ್ರಿಟೀಷ್ ಅಧೀಕಾರದ ವಿರುದ್ಧ ನಡೆದ ಬಂಡಾಯದಲ್ಲಿ ಭಾಗವಹಿಸಿದ್ದರು ಅದಕ್ಕಾಗಿ ಬ್ರಿಟೀಷ್ರಿಂದ ಸೆರೆಯಾದರು, ಕೆಲವು ದಿನಗಳ ನಂತರ ಅವರನ್ನು ಬಿಡುಗಡೆ ಮಾಡಲಾಯಿತು. ಹೋರ ಬಂದ ನಂತರ ಬ್ರಿಟೀಷರ ವಿರುದ್ದದ ಬಂಡಾಯವನ್ನು ತೀವ್ರಗೊಳಿಸಿದರು. ರಾಣಿ ಚೆನ್ನಮ್ಮ ಅವರ ಮರಣದ ನಂತರ ಅವರ ದತ್ತು ಮಗನಾದ ಶಿವಲಿಂಗಪ್ಪನನ್ನು ಕಿತ್ತೂರಿನ ಯುವರಾಜನಾಗಿ ಮಾಡಲಾಯಿತು.

ರಾಯಣ್ಣ ಕಿತ್ತೂರಿನ ಎಲ್ಲ ಪ್ರಜೆಗಳನ್ನು ಒಗ್ಗೊಡಿಸಿ ಗೆರಿಲ್ಲಾ ತರಹದ ಯುದ್ದವನ್ನು ಪ್ರಾರಂಬಿಸಿದರು. ಸರಕಾರಿ ಕಚೇರಿಗಳಿಗೆ ಬೆಂಕಿಯಿಟ್ಟರು, ಖಜಾನೆಗಳನ್ನು ಲೂಟಿ ಮಾಡಿದರು, ಕಿತ್ತೂರು ತನ್ನ ಭೂಮಿಯ ಬಹಳಷ್ಟು ಭಾಗವನ್ನು ಹಿಂದಕ್ಕೆ ಪಡೆಯಲಾಯಿತು ಮತ್ತು ಉಳಿದುಕೊಂಡಿದ್ದಕ್ಕೆ ಅಗಾಧವಾಗಿ ತೆರಿಗೆ ಮಾಡಲಾಯಿತು, ಭೂಮಾಲಿಕರಿಗೆ ತೆರಿಗೆ ವಿಧಿಸಿ ಬಂದ ಹಣದಲ್ಲಿ ದೊಡ್ಡ ಸೈನ್ಯವನ್ನು ಕಟ್ಟಿದರು.

ಬ್ರಿಟಿಷ್ ಪಡೆಗಳು ಮುಕ್ತ ಯುದ್ಧದಲ್ಲಿ ಅವರನ್ನು ಸೋಲಿಸಲು ಸಾಧ್ಯವಾಗಲಿಲ್ಲ, ಆದ್ದರಿಂದ ಒಬ್ಬ ವಿಶ್ವಾಸಘಾತುಕತನ ಸಹಾಯದಿಂದ ೧೮೩೧ ಎಪ್ರಿಲ್ ನಲ್ಲಿ ರಾಯಣ್ಣನನ್ನು ಸೆರೆಹಿಡಿದು ಮರಣದಂಡನೆ ವಿಧಿಸಿಲಾಯಿತು, ೨೬ ಜನೇವರಿ ೧೮೩೨ ರಲ್ಲಿ ಬೆಳಗಾವಿ ಜಿಲ್ಲೆಯ ನಂದಗಡದಿಂದ ೪ ಕಿಲೋಮೀಟರ್ ದೂರದಲ್ಲಿರುವ ಆಲದ ಮರಕ್ಕೆ ನೇಣುಹಾಕಲಾಯಿತು,

ಸ್ಮರಣಾರ್ಥ

ಬದಲಾಯಿಸಿ

ರಾಯಣ್ಣನ ಆಪ್ತ ಗೆಳೆಯನೊಬ್ಬ ರಾಯಣ್ಣನ ಸಮಾಧಿಯ ಮೇಲೆ ಆಲದ ಗಿಡ ನೆಟ್ಟು ಬೆಳೆಸಿದರು ಇಂದು ಅದು ದೋಡ್ಡ ಮರವಾಗಿ ಬೆಳೆದಿದೆ ಹಾಗು ಸಮಾಧಿಯ ಹತ್ತಿರ ಅಶೋಕ ಸ್ತಂಬ ಮತ್ತು ದೇವಸ್ತಾನವನ್ನು ಸ್ತಾಪಿಸಲಾಗಿದೆ, ದೇವಸ್ತಾನದ ಒಳಗಡೆ ಕಟ್ಟಿಗೆಯಿಂದ ಮಾಡಲಾದ ರಾಯಣ್ಣನ ಪ್ರತಿಮೆಯನ್ನು ಇರಿಸಲಾಗಿದೆ, ಪ್ರತಿಮೆಯ ತೂಕವು ರಾಯಣ್ಣನ ತೂಕಕ್ಕೆ ಸಮವಾಗಿದೆ,

ಸಂಸ್ಕೃತಿ

ಬದಲಾಯಿಸಿ

ಲಾವಣಿಗಳು

ಉತ್ತರ ಕರ್ನಾಟಕದ ವಿರೋಚಿತ ಜನಪದ ಪದ್ಯಗಳಾದ ಗೀ ಗೀ ಪದಗಳು (Ballads) ಮತ್ತು ಇತರೆ ಹಾಡುಗಳನ್ನು ಸಂಗೊಳ್ಳಿ ರಾಯಣ್ಣ ಮತ್ತು ಸ್ವಾತಂತ್ರ್ಯಪೂರ್ವ ಕರ್ನಾಟಕದ ಇತರ ವ್ಯಕ್ತಿಗಳು ಕಿತ್ತೂರು ಚೆನ್ನಮ್ಮನ ಬಗ್ಗೆ ಹಾಡಿದ್ದಾರೆ

ಉಲ್ಲೇಖಗಳು

ಬದಲಾಯಿಸಿ
  1. ಗೋಪಾಲಕೃಷ್ಣನ್ (ಸಂಪಾದಕ), ಸುಬ್ರಹ್ಮಣ್ಯನ್; ಗೋಪಾಲಕೃಷ್ಣನ್, ಎಸ್ (2007) ಸಂಪಾದನೆ. ದಕ್ಷಿಣ ಭಾರತದ ದಂಗೆಗಳು:1800 ರ ಮೊದಲು ಮತ್ತು ನಂತರ (. 1 ನೇ ಆವೃತ್ತಿ ಆವೃತ್ತಿ.). ಚೆನೈ: ಪಲಾನಿಯಪ್ಪ ಸಹೋದರರು. ಪು. 103. ISBN 9788183795005.
  2. ಆರ್ ಪಿ, ಸಾಂಬಶಿವ ರೆಡ್ಡಿ. "ಮಿಸಲ್ಲೆನಿ". ಡೆಕ್ಕನ್ ಹೆರಾಲ್ಡ್, ಬೆಂಗಳೂರು. 2012 ನವೆಂಬರ್ 5 ರಂದು ಮರುಸಂಪಾದಿಸಲಾಗಿದೆ.
  3. ಅಲಿ, ಶಾಂತಿ ಸಾದಿಕ್ (1996) ಡೆಕ್ಕನ್ ಆಫ್ರಿಕನ್ ಪ್ರಸರಣ: ಮಧ್ಯಯುಗದ ಆಧುನಿಕ ಸಮಯ. ದೆಹಲಿ: ಓರಿಯಂಟ್ ಬ್ಲ್ಯಾಕ್ಸ್ವ್ಯಾನ್. ಪು. 232. ISBN 9788125004851.
  4. ಖಜಾನೆ,ಮುರಳಿದರ (8 ಏಪ್ರಿಲ್ 2008) "ನಾವು ನಿಮ್ಮ ಮತಕ್ಕಾಗಿ ಬಂದಿದ್ದೇವೆ ..." ದಿ ಹಿಂದೂ 2012 ನವೆಂಬರ್ 30 ರಂದು ಮರುಸಂಪಾದಿಸಲಾಗಿದೆ.
  5. ದತ್ತ, ಅಮರೆಶ್ (ಆವೃತ್ತಿ.) (1988). ಎನ್ಸೈಕ್ಲೋಪೀಡಿಯಾ ಆಫ್ ಇಂಡಿಯನ್ ಲಿಟರೇಚರ್:ದೇವರಾಜ ಇಂದ ಜ್ಯೋತಿ ಗೆ, ಸಂಪುಟ 2.ದೆಹಲಿ ಸಾಹಿತ್ಯ ಆಕೆಡಮಿ ಪು. 1293. ISBN 9788126011940.
  6. ಖಜಾನೆ,ಮುರಳಿದರ (31 ಅಕ್ಟೋಬರ್ 2012)."ಸಂಗೊಳ್ಳಿ ರಾಯಣ್ಣನ ಬಿಡುಗಡೆಯ ರಾಜ್ಯೋತ್ಸವದ ಆಚರಣೆ".ದಿ ಹಿಂದೂ. 2012 ನವೆಂಬರ್ 30 ರಂದು ಮರುಸಂಪಾದಿಸಲಾಗಿದೆ.

ಬಾಹ್ಯ ಸಂಪರ್ಕಗಳು

ಬದಲಾಯಿಸಿ
  1. ರಾಯಣ್ಣನ ಲಾವಣಿಗಳು
  2. ಭಾರತೀಯ ಸ್ವಾತಂತ್ರ್ಯ ಹೋರಾಟಗಾರ