ಸದಸ್ಯ:Guru1418/sandbox
ತಡ ನವೋದಯ ಅವಧಿ(೧೬೨೫-೧೬೬೦)
ಬದಲಾಯಿಸಿತತ್ವ ವೀಮಾಂಸೆಯ ಕವಿಗಳಾದ ಜಾನ್ ಡನ್ (೧೫೭೨-೧೬೩೧) ಮತ್ತು ಜಾಜ್೯ ಹಬ೯ಟ್ ಅವರು ೧೬೨೫ ರ ನಂತರವೂ ತಮ್ಮ ಸಾಹಿತ್ಯ ಕೌಶಲ್ಯದಲ್ಲಿ ಮೆರೆಯುತ್ತಿದ್ದರು. ೧೭ನೇ ಶತಮಾನದಲ್ಲಿ ಎರಡನೇ ಪಿಳಿಗೆಯ ತತ್ವ ಮೀಮಾಂಸೆಯ ಕವಿಗಳಾಗಿ ರಿಚಡ್೯ ಕ್ರಾಷಾ (೧೬೧೩-೪೯) ಆಂಡ್ರಿವ್ ಮೊವೆ೯ಲ್ (೧೬೨೧-೭೮), ತಾಮಸ್ ತ್ರಾಹನೆ೯(೬೩೭-೧೬೭೪) ಮತ್ತು ಹೆನ್ರಿ ವಾಘನ್ (೧೬೨೨-೯೫) ಕಾಯ೯ ನಿವ೯ಹಿಸುತ್ತಿದ್ದರು. ರಾವುತ ಕವಿಗಳು ಇದೇ ಅವಧಿಯಲ್ಲಿ ಒಂದು ಪ್ರಮುಖ ಗುಂಪಾಗಿದ್ದರು.ಇವರು ಇದಕ್ಕೆ ಮೊದಲು ರಾಜ ಚಾಲ್ಸ್೯ ೧ ಗೆ ಆಂಗ್ಲ ನಾಗರಿಕ ಯುದ್ದದಲ್ಲಿ ಸಹಾಯಕರಾಗಿದ್ದರು.ರಾವುತ ಕವಿಗಳಾಗಿ ರಾಬಟ್೯ ಹೆರಿಕ್, ರಿಚಡ್೯ ಲವಲೇಸ್, ತಾಮಸ್ ಕಾವ್೯ ಮತ್ತು ಸರ್ ಜಾನ್ ಸಕಲಿಂಗ್ ಪ್ರಮುಖ ಕವಿಗಳಾಗಿದ್ದರು. ಎಲ್ಲಾ ಪ್ರಮುಖ ರಾವುಕ ಕವಿಗಳು ಸುಪ್ರಸಿದ್ಧ ಆಸ್ಥಾನಿಕರಾಗಿದ್ದು.
ನವ ಶಾಸ್ತ್ರೀಯ ಅವಧಿ(೧೬೬೦-೧೭೯೮)
ಬದಲಾಯಿಸಿಪುನಃಸ್ಥಾಪನ ಯುಗ(೧೬೬೦-೧೭೦೦)
ಬದಲಾಯಿಸಿಪುನಃಸ್ಥಾಪನ ಸಾಹಿತ್ಯ ಪ್ಯಾರಡೈಸ್ ಲಾಸ್ಟ್ ಮತ್ತು ಅಲ್೯ ಆಫ್ ರೋಚೆಸ್ಟರ್, ಹೆಚ್ಚು ದೈಯೋ೯ತ್ಸಾಹ ತುಂಬಿದ ಲೈಂಗಿಕ ಹಾಸ್ಯಸ್ಪ ಕೃತಿ, ದಿ ಕಂಟ್ರಿ ವೈಫ್, ನೈತಿಕ ಜ್ಞಾನದ ಕೃತಿ ದಿ ಪಿಲಿಗ್ರಿಮ್ಸ್ ಪ್ರೋಗ್ರಸ್ ಗಳಿಂದ ಕೂಡಿದ್ದವು. ಈ ಯುಗದಲ್ಲಿ ಲಾಕ್ ಸಕಾ೯ರದ ಮೇಲೆ ಎರಡು ಗ್ರಂಥಗಳನ್ನು ಪ್ರಕಟಿಸಿದರು. ಒಂದು ರಾಯಲ್ ಸಂಸ್ಥೆಯ ಸ್ಥಾಪನೆ, ಎರಡನೆಯದು 'ದಿ ಎಕ್ಸಪೆರಿಮೆಂಟ್'. ಸಾಹಿತ್ಯ ಸಂಸ್ಕೃತಿಗೆ ಅಧಿಕೃತ ಬಿರುಕು ಕ್ರಾಮ್ ವೆಲ್ಸಪುರಿತನ್ ನ ಆಡಳಿತದಲ್ಲಿ ಮೂಡಿಬಂತು ಹಾಗೂ ಇದರಿಂದ ಹೊಸ ವಿಧದ ಸಾಹಿತ್ಯ ಉದ್ಭವವಾಯಿತು. ಜಾನ್ ಮಿಲ್ಟನ್, ಜಾನ್ ಡ್ರೈಡನ್, ವಿಲಿಯಮ್ ವೈಚಲಿ೯, ಜಾಜ್೯ ಎತ್ ರೀಗೆ, ವಿಲಿಯಮ್ ಕಾಂವ್ ಈ ಯುಗದ ಪ್ರಮುಖ ಬರಹಗಾರರಾಗಿದ್ದರು.
ಆಗಸ್ಟನ್ ಸಾಹಿತ್ಯ(೧೭೦೦-೧೭೫೦)
ಬದಲಾಯಿಸಿ೧೮ನೇ ಶತಮಾನವು ಜ್ಞಾನೋದಯ ಯುಗದ ಪ್ರತಿಫಲವಾಗಿತ್ತು. ಧಮ೯, ರಾಜಕೀಯ ಮತ್ತು ಸಾಮಾಜಿಕ ವಿಷಯಗಳಿಗೆ ವಿಚಾರಶಕ್ತಿ ಹಾಗು ವೈಜ್ಞಾನಿಕ ದೃಷ್ಟಿಕೋನವನ್ನಿಟ್ಟಿದ್ದರು. ತತ್ವಜ್ಞಾನಿಗಳು ಹಿಂದಿನ ಶತಮಾನದ ಸಂಶೋಧಕರಾದ ಐಸಾಕ್ ನ್ಯೂಟನ್, ಜಾನ್ ಲಾಕ್ ಮತ್ತು ಪ್ರಾನ್ಸಿಸ್ ಬೇಕನ್ ರವರಿಂದ ಸ್ಪೂತಿ೯ಗೊಂಡಿದ್ದರು. ಆಗಸ್ಟನ್ ಸಾಹಿತ್ಯ ಎಂಬ ಪದ ೧೭೨೦ ಮತ್ತು ೧೭೩೦ ರ ಲೇಖಕಕರಿಂದ ಉದ್ಭವಗೊಂಡಿತು. ಈ ಯುಗ ರಾಜಕೀಯ, ಸಮೃದ್ಧಿ, ಆಗಾಧ ಶಕ್ತಿ, ಸೃಜನಶೀಲತೆ, ಘಾತಕಕೃತ್ಯಗಳಿಂದ ಕೂಡಿತ್ತು. ಇದು ಆಂಗ್ಲ, ಸ್ಕಾಟಿಶ್ ಮತ್ತು ಐರಿಷ್ ಜನರ ಆಥಿ೯ಕ ಸ್ವರೂಪ ಹಾಗೂ ಔದ್ಯೋಗಿಕ ಕ್ರಾಂತಿಯ ಪ್ರತಿಬಿಂಭವಾಗಿತ್ತು. ಜೇಮ್ಸ್ ತಾಮ್ ಸನ್, ಎಡ್ ವಡ್೯ ಯಂಗ್ ಮತ್ತು ಅಲೆಕ್ಸಾಂಡರ್ ಪೋಪ್ ಪ್ರಮುಖ ಬರಹಗಾರರಾಗಿದ್ದರು.
ಸಂವೇದನಾ ಯುಗ (೧೭೫೦-೧೭೯೮)
ಬದಲಾಯಿಸಿಈ ಯುಗವನ್ನು ಜಾನಸನ್ ಯುಗವೆಂದು ಕರೆದರೂ ತಪ್ಪಾಗುವುದಿಲ್ಲ. ಸಾಮ್ಯುಲ್ ಜಾನಸನ್ (೧೭೦೯-೧೭೮೪) ರವರನ್ನು ಅನೇಕವೇಳೆ ಡಾ|| ಜಾನ್ ಸನ್ ಎಂದು ಕರೆಯುತ್ತಾರೆ. ಇವರು ಆಂಗ್ಲ ಬರಹಗಾರರಾಗಿ ಚಿರವಾದ ಕೊಡುಗೆಯನ್ನು ಆಂಗ್ಲ ಸಾಹಿತ್ಯಕ್ಕೆ ನೀಡಿದರು. ಪ್ರಬಂಧಕಾರರಾಗಿ, ಸಾಹಿತ್ಯ ವಿಮಶ೯ಕರಾಗಿ, ಸಂಪಾದಕರಾಗಿ, ನಿಘಂಟುಕಾರರಾಗಿ ಆಂಗ್ಲ ಸಾಹಿತ್ಯವನ್ನು ಉತ್ತರಕ್ಕೆ ಕರೆದೊಯ್ದರು. ಇವರನ್ನು ಸಾಮಾನ್ಯವಾಗಿ 'ದಿ ಮ್ಯಾನ್ ಆಫ್ ಲೆಟರ್ಸ್ ಇನ್ ಇಂಗ್ಲಿಷ್ ಹಿಸ್ಟರಿ' ಎಂದು ಕರೆಯುತ್ತಾರೆ. ೧೮ನೇ ಶತಮಾನ ೨ನೇ ಹಂತದಲ್ಲಿ ಆಲಿವರ್ ಗೋಲ್ಡ್ ಸ್ಮಿತ್, ರಿಚಡ್೯ ಬ್ರಿನ್ ಸ್ಲೇ ಮತ್ತು ಲಾರೆನ್ಸ್ ಸ್ಟನ್೯ ಎಂಬ ಪ್ರಮುಖ ಐರಿಶ್ ಸಾಹಿತಿಗಳು ಲಂಡನ್ ನಲ್ಲಿ ನೆಲೆಯೂರಿದರು.
೧೯ನೇ ಶತಮಾನದ ಸಾಹಿತ್ಯ
ಬದಲಾಯಿಸಿಭಾವಪ್ರದಾನತೆ (೧೭೯೮-೧೮೩೭)
ಬದಲಾಯಿಸಿಭಾವಪ್ರದಾನತೆ ಎಂಬುದು ಕಲಾತ್ಮಕ, ಸಾಹಿತ್ಯಕ ಮತ್ತು ಬೌದ್ಧಿಕ ಚಳುವಳಿ ೧೮ನೇ ಶತಮಾನದ ಕೊನೆಯಲ್ಲಿ ಯುರೋಪ್ ನಲ್ಲಿ ಹುಟ್ಟಿಕೊಂಡಿತು. ಈ ಅವಧಿಯ ಆರಂಭಕ್ಕೆ ಆಂಗ್ಲ ಸಾಹಿತ್ಯದಲ್ಲಿ ಬಹಳ ದಿನಾಂಕಗಳು ಇವೆಯಾದರು ಸಾಮಾನ್ಯವಾಗಿ ೧೭೯೮ ರಲ್ಲಿ ಲಿರಿಕಲ್ ಬಲ್ಲಾಡ್ಸ್ , ಪ್ರಕಾಶವನ್ನು ಆರಂಭ ಮತ್ತು ೧೮೩೭ ರಲ್ಲಿ ರಾಣಿ ವಿಕ್ಟೋರಿಯಾರ ಅತ್ಯುತ್ಕೃಷ್ಟವನ್ನು ಅಂತ್ಯ ಎಂದು ಪರಿಗಣಿಸಲಾಗುತ್ತದೆ. ಈ ಯುಗದ ಬರಹಗಾರರು ಎಂದೂ ತಮ್ಮನ್ನು ತಾವು ಭಾವಪ್ರದಾನಕರು ಎಂದು ಭಾವಿಸುತ್ತಿರಲಿಲ್ಲ ಮತ್ತು ಈ ಪದವನ್ನು ಮೊದಲ ಬಾರಿಗೆ ವಿಮಶ೯ಕರು ವಿಕ್ಟೋರಿಯಾ ಅವಧಿಯಲ್ಲಿ ಉಪಯೋಗಿಸಿದರು. ವರ್ಡ್ಸ್‌ವರ್ತ್ (೧೭೭೦-೧೮೫೦), ಸಾಮ್ಯುಲ್ ಟೇಲರ್ (೧೭೭೨-೧೮೩೪) ಮತ್ತು ಪತ್ರಕತ೯ ತಾಮಸ್ ಪ್ರಮುಖರಾಗಿದ್ದರು.
ವಿಕ್ಟೋರಿಯನ್ ಸಾಹಿತ್ಯ (೧೮೩೭-೧೯೦೧)
ಬದಲಾಯಿಸಿಈ ವಿಕ್ಟೋರಿಯನ್ ಯುಗದಲ್ಲಿ ಕಾದಂಬರಿ ಎಂಬ ಸಾಹಿತ್ಯಕ ಶೈಲಿ ಆಂಗ್ಲ ಭಾಷೆಯಲ್ಲಿ ಕರೆದೊಯ್ಯುವಂತಹ ಪ್ರಭಾವವನ್ನು ಬೀರಿತು. ಹೆಂಗಸರು ಬರಹಗಾರರಾಗಿ ಮತ್ತು ಓದುಗರಾಗಿ ಪ್ರಮುಖ ಪಾತ್ರವನ್ನು ನಿವ೯ಹಿಸಿದರು. ಚಾರ್ಲ್ಸ್ ಡಿಕನ್ಸ್ ರವರು ಪಿಕ್ ವಿಕ್ ಪೇಪರ್ಸ್ ಎಂಬುದನ್ನು ೧೮೩೭ ನವೆಂಬರ್ ನಲ್ಲಿ ಪ್ರಕಟಿಸಿದ್ದರು. ೧೯ನೇ ಶತಮಾನದ ಕೊನೆಯವರೆಗೂ ಮೂರು ಸಂಪುಟಗಳ ಆವೃತ್ತಿಯನ್ನು ಪ್ರಕಟಿಸಿದರು. ಪರಿಚಲನೆಯ ಗ್ರಂಥಾಲಯಗಳಿಂದ ಕಾದಂಬರಿಗಳು ಬಹಳ ಪ್ರಸಿದ್ಧಿಯಾದವು. ಚಾಲ್ಸ್೯ ಡಿಕೆನ್ಸ್, ಟ್ರಾಂಬೆ ಸಹೋದರಿಯರು, ಎಮಿಲಿ ಮತ್ತು ಚಾಲ್೯ ಈ ಯುಗದ ಪ್ರಮುಖ ಬರಹಗಾರರು.
ಆಂಗ್ಲ ಸಾಹಿತ್ಯ ೧೯೦೧ ರ ತರುವಾಯ
ಬದಲಾಯಿಸಿಆಧುನಿಕತಾವಾದ (೧೯೦೧-೧೯೩೯)
ಬದಲಾಯಿಸಿಈ ಯುಗದ ಸುಪ್ರಸಿದ್ಧ ಕವಿ ಥಾಮಸ್ ಹಾರ್ಡಿ (೧೮೪೦-೧೯೨೮) ಇವರು ಆಧುನಿಕತಾವಾದ ಕವಿಗಳಾದವರು ವಿಕ್ಟೋರಿಯನ್ ಯುಗ ಮತ್ತು ೨೦ನೇ ಶತಮಾನದ ಮಧ್ಯದಲ್ಲಿ ಜೀವಿಸಿದ ಸಂಕ್ರಮಣಕಾಲ ಕವಿ ಮತ್ತು ೧೯ನೇ ಶತಮಾನದ ಪ್ರಮುಖ ಕವಿ. ಇವರ ಜೊತೆಗೆ ಹೆನ್ರಿಜೇಮ್ಸ್ (೧೮೪೩-೧೯೧೬), ಜೋಸೆಫ್ ಕೊನ್ ರಾಡ್ (೧೮೫೭-೧೯೨೪) ಲಾಡ್೯ ಜಿಮ್ ರವರು ಪ್ರಮುಖ ಕವಿಗಳಾಗಿದ್ದರು.
೧೯೪೦ ರಿಂದ ೨೧ ನೇ ಶತಮಾನದವರೆಗೆ
ಬದಲಾಯಿಸಿಕೆಲವರು ೧೯೩೯ನನ್ನು ಆಧುನಿಕತಾವಾದದ ಅಂತಿಮ ಎಂದು ಪರಿಗಣಿಸುತ್ತಾರೆ. ಆದರೆ ೧೯೫೦ ಮತ್ತು ೧೯೬೦ ರವರು ಟಿ. ಎಸ್. ಎಲಿಯಟ್, ವಿಲಿಯಮ್ ಪೌಲ್ಕ್ ನರ್, ಡೊರೊಬೆ ರಿಚಡ್೯ಸನ್ ಮುಂತಾದ ಆಧುನಿಕರು ತಮ್ಮ ಬರವಣಿಗೆಯನ್ನು ಪ್ರಕಟಿಸುತ್ತಿದ್ದರು. ಬ್ರಿಟಿಷ್ ಬರಹಗಾರರು ೧೯೪೦ ಮತ್ತು ೧೯೫೦ ರಲ್ಲಿ ಗ್ರಹಂಗ್ರಿಸ್ ಡೈಲನ್ ತಾಮಸ್, ಟಿ. ಎಸ್. ಜೌಡೆನ್ ಮುಂತಾದವರು ಅವರ ಪ್ರಮುಖ ಬರವಣಿಗೆಗಳನ್ನು ಪ್ರಕಟಿಸುವಲ್ಲಿ ಸಫಲರಾಗಿದ್ದರು. ಭಾರತದವರಾದ ಆರ್.ಕೆ.ನಾರಾಯಣ್ ತಮ್ಮ ಸಾಹಿತ್ಯ ವಸ್ತುಗಳನ್ನು ಇಂಗ್ಲೆಂಡ್ ನಲ್ಲಿ ಪ್ರಕಟಿಸಿದರು. ಇದೇ ಸಮಯದಲ್ಲಿ ಇಂಗ್ಲೆಂಡ್ ನ ಕೆಲವು ಭಾಗಗಳಲ್ಲಿ ಕಿಚನ್ ಸಿಂಕ್ ವಾಸ್ತವಿಕತೆ ಎಂಬುದು ಬಹಳ ಪ್ರಸಿದ್ದಿಯಾಯಿತು.ಸಲ್ಮಾನ್ ರಶ್ದಿ ಯವರ ಮಿಡ್ ನೈಟ್ಸ್ ಚಿಲ್ಡ್ರಂನ್ ೧೯೮೧ ರಲ್ಲಿ ಬಹಳ ಪ್ರಸಿದ್ಧಿ ಹೊಂದಿತು. ಇಂಗ್ಲೆಂಡ್ ನ ಹೊರಗಿರುವ ಸಾಹಿತಿಗಳಲ್ಲಿ ಪ್ರಮುಖರಾದವರು ವಿ. ಎಸ್. ನೈಪಾಲ್ ಬಹಳ ದೇಶಗಳಲ್ಲಿ ಆಂಗ್ಲ ಸಾಹಿತ್ಯ ಬೆಳೆಯಲಾರಂಭಿಸಿ ಜಗತ್ತಿನಾದ್ಯಂತ ಬಹಳ ಬರಹಗಾರರಿದ್ದರು.
ಉಲ್ಲೇಖಗಳು
ಬದಲಾಯಿಸಿ೧.Davies 1990,p. 93.
೨.Angus Cameron (1983). "Anglo-Saxon literature" in Dictionary of the Middle Ages, v. 1, pp. 274–88.
೩.Magoun,
೪.Francis P jr, "The Oral-Formulaic Character of Anglo-Saxon Narrative Poetry", Speculum 28: 446–67.
೫.Donald K jr (1968), The Beowulf Poet: A Collection of Critical Essays, Englewood Cliffs: Prentice-Hall, pp. 83–113.
೬.Henry Mayr-Harting, The Coming of Christianity to Anglo-Saxon England. (Pennsylvania: University Press Pennsylvania, 1992).
೭.The English Alliterative Tradition, University of Pennsylvania Press, 1991.
೮.a b Robinson 2001: ‘Like most Old English poems, Beowulf has no title in the unique manuscript in which it survives (British Library, Cotton Vitellius A.xv, which was copied round the year 1000 AD), but modern scholars agree in naming it after the hero whose life is its subject.’
೯.Tolkien 1958, p. 127.
೧೦.Hieatt, A Kent (1983). Beowulf and Other Old English Poems. New York: Bantam Books. p. xi–xiii.
೧೧.Kiernan 1996, pp. xix–xx, 3–4, 23–34, 60, 62, 90, 162, 171, 258, 257, 277–78, footnote 69.
೧೨.Orchard 2003.
೧೩.Chamberlain, D. "Judith: a Fragmentary and Political Poem", in Anglo-Saxon Poetry: Essays in Appreciation for John C
೧೪.McGalliard, ed. LE Nicholson and DW Frese (Notre Dame, IN, 1975), pp. 145–59.
೧೫.Bruce Mitchell, A Guide to Old English. 6th ed (Massachusetts. Blackwell Publishers, 2001).
೧೬.a b Fulk & Cain 2003.
೧೭.EVK Dobbie, "The manuscripts of Cædmon's Hymn and Bede's Death Song with a critical text of the Epistola Cuthberti de obitu Bedae".
೧೮.Columbia University Studies in English and Comparative Literature (New York: Columbia University, 1937), p. 128.
ಗ್ರಂಥಗಳ ವಿವರಣ ಪಟ್ಟಿ
ಬದಲಾಯಿಸಿ- Davies, Marion Wynne, ed. (1990), The Bloomsbury Guide to English Literature, New York: Prentice Hall.
- Drabble, Margaret, ed. (1996), The Oxford Companion to English Literature, Oxford: Oxford University Press.
- Fulk, RD; Cain, Christopher M (2003), A History of Old English Literature, Malden: Blackwell.
- Kiernan, Kevin (1996), Beowulf and the Beowulf Manuscript, Ann Arbor, MI: University of Michigan, ISBN 0-472-08412-7.
- Orchard, Andy (2003), A Critical Companion to Beowulf, Cambridge: DS Brewer.
- Robinson, Fred C (2001), The Cambridge Companion to Beowulf, Cambridge: Cambridge University Press, p. 143.
- Tolkien, John Ronald Reuel (1958), Beowulf: The Monsters and the Critics, London: Oxford University Press.
- Ward, AW; Waller, AR; Trent, WP; Erskine, J; Sherman, SP; Van Doren, C, eds. (1907–21), History of English and American literature, New York: GP Putnam’s Sons University Press
{{citation}}
:|format=
requires|url=
(help).
ಬಾಹ್ಯ ಕೊಂಡಿಗಳು
ಬದಲಾಯಿಸಿ- The English Literary Canon
- English Literature Forum
- British literature – Books tagged British literature LibraryThing
- Luminarium: Anthology of Middle English Literature (1350–1485)
- Luminarium: 16th Century Renaissance English Literature (1485–1603)
- Luminarium: Seventeenth Century English Literature (1603–1660)
- A Bibliography of Literary Theory, Criticism and Philology Ed. José Ángel García Landa, (University of Zaragoza, Spain)