ಡಿಎನ್ಎ ಸಂಯೋಜನೆ (ಡಿಎನ್ಎ ಕಂಪ್ರೆಸ್ಸಿಂಗ್)[೧]

ಡಿಎನ್ಎ

ಸಂಶೋಧಕರು ಅತಿ ಪ್ರಮಾಣದ ಜೆನೆಟಿಕ್ ಮಾಹಿತಿಯನ್ನು ಜೀವಕೋಶದಲ್ಲಿ ಸಂಯೋಜನೆ (ಕಂಪ್ರೆಸ್ಸ್) ಮತ್ತು ವಿಭಜನೆ (ಡೇಕಂಪ್ರೆಸ್ಸ್) ಮಾಡುವ ವಿಧಾನವನ್ನು ಕೊಂಡುಹಿಡಿದಿದ್ದಾರೆ. ಇದು ಹೊಸ ಚಿಕಿತ್ಸೆಗಳ ಅಭಿವೃದ್ಧಿಗೆ ಸಹಾಯ ಮಾಡಿದೆ. ದೊಡ್ಡ ಮಾಹಿತಿಗಳನು ಇಮೇಲ್ ಮೂಲಕ ಕಳೆಸುವಾಗ ನಾವು ಅದನ್ನು ಚಿಕ್ಕ ಗಾತ್ರಕ್ಕೆ ಸಂಯೋಜಿಸಿ (ಕಂಪ್ರೆಸ್ಸ್) ನಂತರ ಕಳೆಸುತ್ತೇವೆ. ಅಂದರೆ "ಬಿಳಿ ಬಿಳಿ ಬಿಳಿ...." ಯಂದು ಬರೆಯುವ ಬದಲು "ಬಿಳಿ*೧೦೦೦" ಯಂದು ಬರೆಯುವುದು.[೨] ಇದೇ ವಿಧಾನವನ್ನು ಡಿಎನ್ಎಯಲ್ಲೂ ಉಪಯೋಗಿಸಲಾಗಿದೆ ಎಂದು 'ಕೋಬಿ ಬೆನೆನ್ ಸನ್' ಎಂಬ ಇಟಿಹೆಚ್ ಇಲಾಖೆ[೩], ಬಯೋಸಿಸ್ಟಮ್ ವಿಜ್ಞಾನ ಮತ್ತು ಎಂಜಿನೀರಿಂಗ್ ನ ಸಂಕ್ಲೇಷಿತ ಜೀವಶಾಸ್ತ್ರ(ಸಿಂಥೆಟಿಕ್ ಬಯೋಲೊಜಿ) ವಿಭಾಗದ ಮುಖ್ಯಸ್ಥರು ಹೇಳಿದ್ದಾರೆ.

ಈ ಕಾರ್ಯ ಜೀವಕೋಶದಲ್ಲಿ ಹೀಗೆ ನೆಡೆಯುವುದು:
ಕಾರ್ಯ

ಡಿಎನ್ಎ ಸಂಯೋಜನೆ (ಕಂಪ್ರೆಸ್ಸಿಂಗ್) ಮುಕಾಂತರ ವಿಷಯವನ್ನು ಜೀವಕೋಶಕ್ಕೆ ಕಲಿಸಲಾಗುವುದು ನಂತರ, ಅಲ್ಲಿ ಆ ವಿಷಯವನ್ನು ತನ್ನ ಮೊದಲು ರೂಪಕ್ಕೆ ಬದಲಾಯಿಸಲಾಗುತ್ತದೆ, ಅದನ್ನು ಡಿಎನ್ಎ ವಿಭಜನೆಯೆನ್ನುತ್ತಾರೆ (ಡಿಎನ್ಎ ಡಿಕಂಪ್ರೆಸ್ಸಿಂಗ್).

ವಿಭಜನೆ

[೪] ಈ ವಿಧಾನವು ಡಿಜಿಟಲ್ ಕಡತಗಳ ಆದಾರದ ಮೇಲೆ ಪ್ರೇರಣೆ ಪಡೆದ ವಿಷಯವಾಗಿರುವುದೆಂದು ಸಂಶೋಧಕರು ತಿಳಿಸುತ್ತಾರೆ. ಇದು ಜೈವಿಕ ವ್ಯವಸ್ಥೆಯಲ್ಲಿ ಮನುಶ್ಯ ಕಂಡ ಅತಿ ದೊಡ್ಡ ರೋಗ ಪರಿಹಾರ ತಂತ್ರಜ್ಞಾನವಾಗಿದೆ. ಈ ಪರಿಹಾರಗಳು ಹಲವಾರು ಜೀವಶಾಸ್ತ್ರ ತಜ್ಞರು ಮತ್ತು ಬಯೋಸಿಸ್ಟಮ್ ವಿಜ್ಞಾನಿಗಳು ಅಥವ ಜೈವಿಕ ತಂತ್ರಜ್ಞಾನ ಓದುವವರಿಗೆ ಸಹಾಯ ಮಾಡಿದೆ. ಈಗಿನ ತಂತ್ರಜ್ಞಾನದಲ್ಲಿ ಹೆಚ್ಚುಪ್ರಮಾಣ ಮಾಹಿತಿ ಇರುವ ಡಿಎನ್ಎಯನ್ನು ಜೀವಕೋಶದಲ್ಲಿ ತುಂಬಿಸಲಾಗದು, ಏಕೆಂದರೆ 'ಮಾಹಿತಿಯನ್ನು ವರ್ಗಾವಣೆ ಮಾಡಲು ಉಪಯೋಗಿಸುವ ಮಾಧ್ಯಮಕ್ಕೆ, ಹೆಚ್ಚು ಪ್ರಮಾಣದ ಡಿಎನ್ಎ ಮಾಹಿತಿಯನ್ನು ವರ್ಗಾವಣೆ ಮಾಡುಲು ಆಗದು' ಎಂದು ವಿಜ್ಞಾನಿ ಡಾ.ಕೋಬಿ ಬೆನೆನ್ ಸನ್ ಮತ್ತು ಡಾ.ನಿಕೋಲಸ್ ಲ್ಯಾಪಿಕ್ಯೂ ಹೇಳಿದ್ದಾರೆ. ಡಿಎನ್ಎ ಸಂಯೋಜನೆಯ ಮುಲಭೂತ ತತ್ವ "ವರ್ಗವಣೆ ಮಾಡುವ ಡಿಎನ್ಎ ಅನುಕ್ರಮದಲ್ಲಿ, ಪದೇ ಪದೇ ಬರುವ ಅಂಶಗಳನ್ನು ಒಮ್ಮೆ ಮಾತ್ರ ಬಳಸಿರಲಾಗುತ್ತದೆ". ಇದಕ್ಕೆ ಉಧಾಹರಣೆ "ಪ್ರಮೋಟರ"[೫]. ನಾಲ್ಕು ಬೇರೆ ಬೇರೆ ಅನುವಂಶಿಕ ಧಾತುಗಳಲ್ಲಿ ಒಂದೇ ಪ್ರಮೋಟರ ಇದ್ದರೆ, ಆ ನಾಲ್ಕು ಅನುವಂಶಿಕ ಧಾತುಗಳನ್ನು ಸಂಯೋಜಿಸಿ (ಕಂಪ್ರೆಸ್ಸ್) ಅದರಲ್ಲಿ ಒಂದೇ ಪ್ರಮೋಟರ ಅನ್ನು ಅಳವಡಿಸಲಾಗುತದೆ. ಇಟಿಹೆಚ್ ಸಂಶೋಧಕರು ವರ್ಗಾವಣೆ ಮಾಡಲು ಬೇಕಾಗಿರುವ ಡಿಎನ್ಎಯನ್ನು ನಿರ್ದಿಷ್ಟ ನಿಯಮಗಳ ಮೂಲಕ ಜೋಡಿಸುತ್ತಾರೆ. ಇದನ್ನು "ಕಂಪ್ರೆಸ್ಸ್ಡ್ ಎನ್ಕೋಡಿಂಗ್" ಯಂದು ಕರೆಯುತ್ತಾರೆ. ಮೇಲಿನ ಉದಾಹರಣೆಯ ನಾಲ್ಕು ಅನುವಂಶಿಕ ಧಾತುಗಳನ್ನು ಜೋಡಿಸಿದ ನಂತರ ಅದಕ್ಕೆ 'ಕಾರ್ಯ ತಡೆಯುವ' ಅನುಕ್ರಮ ಮತ್ತು 'ರಿಕಾಂಬಿನೆಸ್'[೬] ಕಿಣ್ವಗೆ ಸ್ವಂತವಾದ ಅಂಟುವ ತಾಣಗಳು ಸೇರ್ಪಡಿಸಲಾಗುತದೆ. ರಿಕಾಂಬಿನೇಸ್ ಒಂದು ಕಿಣ್ವ, ಅದು ಡಿಎನ್ಎ ಅನುಕ್ರಮ (ಸ್ಟ್ರಾಂಡ್) ಅನ್ನು ಬಿಡಿಸಿ, ತಿರುಗಿಸಿ ಮತ್ತು ಪುನಃ ಸೇರಿಸುವ ಕೆಲಸ ಮಾಡುತ್ತದೆ. ಇಲ್ಲಿ ಅದು ಡಿಎನ್ಎಯ ವಿಭಜನ (ಡಿಕಂಪ್ರೆಸ್ಸಿಂಗ್ )ತಂತ್ರಾಂಶವಾಗಿರುತದೆ. ಮೇಲಿನ ಉದಾಹರಣೆಯಲ್ಲಿ ಜೋಡಿಸಿಯಾಗಿರುವ ಡಿಎನ್ಎಯನ್ನು ಜೀವಕೋಶದಲ್ಲಿ ವಿಭಜನೆ ಮಾಡಿದರೆ, ಪ್ರತಿ ಅನುವಂಶಿಕ ಧಾತುವಿಗೆ ಒಂದೊಂದು ಪ್ರಮೋಟರ ಸಿಗುತ್ತದೆ.

ಡಿಎನ್ಎ ಸಂಯೋಜನೆಯ ಉಪಯೋಗಗಳು:

ಈ ಹೊಸ ವಿಧಾನದಿಂದ ಹೆಚ್ಚಾದ "ಜೆನೆಟಿಕ್ ಪ್ರೋಗ್ರಾಮ್ಮ್ಸ್" ಗಳನ್ನೂ ಅಡೆ-ತಡೆಗಳಿಲ್ಲದೆ ಜೀವಕೋಶದಲ್ಲಿ ವರ್ಗಾವಣೆ ಮಾಡಬಹುದು. ಈ ವಿಧಾನದಿಂದ ಹಲವಾರು ಸಂಕೀರ್ಣ ಪದಾರ್ಥಗಳು, ವೈದ್ಯಕೀಯಕ್ಕೆ ಬೇಕಾಗಿರುವ ಸಕ್ರಿಯ ಪದಾರ್ಥಗಳನ್ನು ಮತ್ತು ಮುತಾದವುಗಳ್ಳನು ಉತ್ಪದಿಸಬಹುದು. ವಿಜ್ಞಾನಿಗಳು ಮುಂದೆ ಇನ್ನು ಎತ್ತರದ ಸಾಧನೆಯನ್ನು ಮಾಡಲು ಪ್ರಯತ್ನಿಸುತ್ತಿದ್ದಾರೆ, ಅದರಲ್ಲಿ "ಕ್ಯಾನ್ಸರ್ ಟಾರ್ಗೆಟಿಂಗ್" ಒಂದಾಗಿದೆ. ಈ ವಿಧಾನದ ಪ್ರೋಗ್ರಾಮ್ ನಿಂದ ನಿರ್ದಿಷ್ಟ ಪದಾರ್ಥಗಳು ಮತ್ತು 'ಮಾರ್ಕರ್ಸ್' ಗಳನ್ನೂ ಗುರುತಿಸಬಹುದು. ಜೀವಕೋಶದಲ್ಲಿ ಸಾಂದ್ರತೆಯ ಆದಾರದ ಮೇಲೆ, ಇಲ್ಲಿ ಯಾವ ಜೀವಕೋಶ ಆರೋಗ್ಯಕರ ಮಾತು ಯಾವದು ಗೆಡ್ಡೆಯನ್ನು (ಟ್ಯೂಮುರ್) ಬೆಳೆಸುವ ಜೀವಕೋಶವೆಂದು ತಿಳಿದು, ನಂತರ ಡಿಎನ್ಎ ಪ್ರೋಗ್ರಾಮ್ ಅದನ್ನು ಕೊಲ್ಲುತ್ತದೆ. ಈ ವಿಧಾನವು ಎಲ್ಲಾದರ ಪರಿಹಾರವಾಗಿದ್ದು, ಇದರಲ್ಲಿ ರೋಗದ ಪರೀಕ್ಷೆ, ರೋಗನಿರ್ಣಯ ಮತ್ತು ರೋಗಕ್ಕೆ ಚಿಕಿತ್ಸೆ ಎಲ್ಲವೂ ಒಂದೇ ಸಮಯದಲ್ಲಿ ಮಾಡಬಹುದು. ಈ ವಿಧಾನವು "ಸೆಲ್ ಕಲ್ಚರ್" ನಲ್ಲಿ ಕೆಲೆಸ ಮಾಡಿದ್ದು, ಇದನ್ನು ಪ್ರಾಣಿಗಳಲ್ಲೂ ಪ್ರಯೋಗ ಮಾಡಲು ವಿಜ್ಞಾನಿಗಳು ನಿರ್ದರಿಸಿದ್ದಾರೆ.

ಉಲ್ಲೇಖಗಳು
  1. https://www.sciencedaily.com/releases/2017/11/171113123714.htm
  2. http://www.nanoappsmedical.com/zipping-dna/
  3. https://en.wikipedia.org/w/index.php?search=eth++institution+&title=Special:Search&go=Go&searchToken=eq869i6mvxdeiczlmp9y1aopu
  4. https://www.researchgate.net/post/What_is_the_mechanism_of_DNA_rezipping_in_transcription_elongation
  5. https://en.wikipedia.org/wiki/Promoter_(genetics)
  6. https://en.wikipedia.org/wiki/Recombinase