ಸದಸ್ಯ:Gopala Krishna A/Divya
ನಾವು ಈ ಬಾರಿ ಪರಿಚಯಿಸುತ್ತಿರುವ ವಿಕಿಪೀಡಿಯ ಸಾಧಕಿ ದಿವ್ಯ ಹೆಚ್. ಎಮ್.
ದಿವ್ಯ ಅವರು ಮೂಲತಃ ಹಾಸನದವರು. ಇವರು ಶಿಕ್ಷಣಕ್ಕೆಂದು ಮಂಗಳೂರಿಗೆ ಬಂದರು. ತಮ್ಮ ಪ್ರಾಥಮಿಕ ಶಿಕ್ಷಣವನ್ನು ಚಿನ್ಮಯ ವಿದ್ಯಾಲಯದಲ್ಲಿ ಮುಗಿಸಿ ಕಾಲೇಜು ಶಿಕ್ಷಣವನ್ನು ಮಂಗಳೂರಿನ ಸಂತ ಆಗ್ನೆಸ್ ಕಾಲೇಜಿನಲ್ಲಿ ಮುಗಿಸಿದ್ದರು. ಪ್ರಸ್ತುತ ಮಂಗಳೂರಿನಲ್ಲಿಯೇ ಆರ್ಟಿಕಲ್‌ಶಿಪ್ ತರಬೇತಿಯನ್ನು ಪಡೆಯುತ್ತಿದ್ದಾರೆ.
ದಿವ್ಯ ಅವರು ವಿಕಿಪೀಡಿಯಕ್ಕೆ ತಮ್ಮ ಸಂಪಾದನೆಯನ್ನು ಪ್ರಾರಂಭಿಸಿದ್ದು ೨೦೧೫ರಲ್ಲಿ. ನಂತರ ಇವರು ಸಕ್ರಿಯ ಸದಸ್ಯರಾಗಿ ಕೆಲಸ ಮಾಡಿದ್ದಾರೆ. ಔಷಧೀಯ ಸಸ್ಯಗಳು ಯೋಜನೆಯಲ್ಲಿ ಸಕ್ರಿಯರಾಗಿ ಪಾಲ್ಗೊಂಡಿದ್ದಾರೆ. ಮಂಗಳೂರಿನಲ್ಲಿ ೨೦೧೬ರಲ್ಲಿ ನಡೆದ ಮಿನಿ TTT ಯಲ್ಲಿಯೂ ಭಾಗವಹಿಸಿದ್ದಾರೆ. ದಿವ್ಯ ಅವರು ತಮ್ಮ ವಿಕಿಪೀಡಿಯ ಪಯಣದ ಬಗ್ಗೆ ತಮ್ಮ ಬ್ಲಾಗ್‌ನಲ್ಲಿ ಬರೆದುಕೊಂಡಿದ್ದಾರೆ. ಆಗ್ನೆಸ್ ಕಾಲೇಜಿನಲ್ಲಿ ಪ್ರಥಮವಾಗಿ ವಿಕಿಪೀಡಿಯ ಕಾರ್ಯಾಗಾರ ನಡೆದ ನಂತರ ತಮ್ಮನ್ನು ತಾವೇ ವಿಕಿಪೀಡಿಯದಲ್ಲಿ ಹೇಗೆ ತೊಡಗಿಸಿಕೊಂಡರು ಎಂಬುದನ್ನು ತಿಳಿಸಿದ್ದಾರೆ.