ನನ್ನ ಹೆಸರು ಗೋಕುಲನಾತ್. ನಾನು ಹುಟ್ಟಿದ್ದು ಕೇರಳದ ತ್ರಿಷೂರಿನಲ್ಲಿ. ಪ್ರಸ್ತುತ ನಾನು ಮಂಗಳೂರಿನ ಕದ್ರಿಯಲ್ಲಿ ವಾಸಿಸುತ್ತಿದ್ದೇನೆ. ನನ್ನ ಶಾಲಾಶಕ್ಷಣವನ್ನು ಚಿನ್ಮಯ ಶಾಲೆಯಲ್ಲಿ ಪೂರೈಸಿದ್ದೇನೆ. ನಾನು ಶಾರದಾ ಕಾಲೇಜಿನಲ್ಲಿ ನನ್ನ ಪದವಿಪೂರ್ವ ಶಿಕ್ಷಣವನ್ನು ಪೂರೈಸಿದ್ದೇನೆ. ಪ್ರಸ್ತುತ ನಾನು ಸಂತ ಅಲೋಷಿಯಸ್ ಕಾಲೇಜಿನಲ್ಲಿ ಪದವಿ ಶಿಕ್ಷಣವನ್ನು ಮಾಡುತ್ತಿದ್ದೇನೆ. ನಾನು ಈ ಕಾಲೇಜಿನ ಪ್ರಥಮ ಬಿ.ಕಾಂ. ವಿದ್ಯಾರ್ಥಿ. ಫುಟ್ ಬಾಲ್ ಆಡುವುದು, ವಾಲಿ ಬಾಲ್ ಆಡುವುದು, ಚೆಸ್ ಆಡುವುದು ನನ್ನ ಹವ್ಯಾಸಗಳು. ಕೇರಳದಲ್ಲಿ ಹುಟ್ಟಿದರೂ ಮಂಗಳೂರು ನನಗೆ ಬಹಳ ಇಷ್ಟ. ಇಲ್ಲಿಯ ಜನರ ಜೊತೆ ತುಂಬಾ ಬೆರೆತಿದ್ದೇನೆ. ನನ್ನ ಮಾತೃ ಭಾಷೆ ಕೊಂಕಣಿ. ಆದರೆ ನಾನು ಹೆಚ್ಚಾಗಿ ತುಳು ಭಾಷೆಯಲ್ಲಿಯೇ ಮಾತನಾಡುತ್ತೇನೆ. ನಾನು ಚಿಕ್ಕಂದಿನಿಂದಲೂ ಆಟೋಟದಲ್ಲಿ ಮುಂದಿದ್ದೇನೆ. ನಾನು ಹಲವಾರು ಕ್ರೀಡೆಗಳಲ್ಲಿ ಭಾಗವಹಿಸಿ ಅನೇಕ ಪ್ರಶಸ್ತಿಗಳನ್ನು ಗಳಿಸಿದ್ದೇನೆ. ಬಿ.ಕಾಂ. ನಂತರ ಎಮ>ಬಿ.ಎ. ಮಾಡಬೇಕೆಂದು ನನ್ನ ಆಸೆ.