ಮೂಲತಹ ಕರ್ನಾಟಕದ ಮಂಗಳೂರಿನವನಾದ ನಾನು,ಕ್ರೈಸ್ಟ್ ವಿಶ್ವವಿದ್ಯಾನಿಲಯದಲ್ಲಿ ಬಿ.ಯಸ್ಸಿ ಪದವಿಯ ವ್ಯಾಸಾಂಗವನ್ನು ಮಾಡುತ್ತಿದ್ದೇನೆ.ನನ್ನ ಪ್ರಾಥಮಿಕ ಶಿಕ್ಷಣವನ್ನು ವಿಟ್ಲದಲ್ಲಿಯೇ ಮುಗಿಸಿ ನಂತರ ಪ್ರೌಢ ಶಿಕ್ಷಣಕ್ಕಾಗಿ ಅಳಿಕೆಯ ಶ್ರೀ ಸತ್ಯ ಸಾಯಿ ಲೋಕ ಸೇವಾ ಸಂಸ್ಥೆಯನ್ನು ಸೇರಿ,ನಂತರ ಪದವಿ ಪೂರ್ವ ಹಂತದವರೆಗಿನ ಶಿಕ್ಷಣವನ್ನು ಅಲ್ಲಿಯೇ ಮುಗಿಸಿದ್ದೇನೆ. ಮುಖ್ಯವಾಗಿ ಸಾಹಿತ್ಯದಲ್ಲಿ ಆಸಕ್ತಿ ಹೊಂದಿರುವ ನಾನು ರಾಜಕಾರಣದ ಮೇಲೂ ಆಸಕ್ತಿಯನ್ನು ಹೊಂದಿರುತ್ತೇನೆ.ಯುವ ಬರಹಗಾರನಾಗಿ ಗುರುತಿಸಿಕೊಂಡು ಅನೇಕ ಕಾರ್ಯಕ್ರಮಗಳಲ್ಲಿ ಪಾಲ್ಗೊಂದಡಿದ್ದೇನೆ.ಬೆಂಗಳೂರಿನ ಮಂದಾರ ಅಕಾಡೆಮಿಯವರು ನೀಡುವ 'ವಚನ ಮಂದಾರ' ರಾಜ್ಯ ಪ್ರಶಸ್ತಿಯನ್ನು ೨೦೧೪ನೇ ಸಾಲಿನಲ್ಲಿ ಪಡೆದುಕೊಂಡಿರುತ್ತೇನೆ.ಹಾಗೆಯೇ ೨೦೧೧ರ ನವೆಂಬರ್ ೧ರಂದು ಕಾರ್ಕಳದಲ್ಲಿ ನಡೆದ ರಾಜ್ಯ ಮಟ್ಟದ ಯುವ ಕವಿಗೋಷ್ಟಿಯ ಅಧ್ಯಕ್ಷತೆಯನ್ನು ವಹಿಸುವ ಗೌರವಕ್ಕೆ ಪಾತ್ರನಾಗಿದ್ದೇನೆ. ಸಾಹಿತ್ಯ ಮಾತ್ರವಲ್ಲದೆ ಪರಿಸರ ಸಂಬಧಿ ಕಾರ್ಯದಲ್ಲೂ ತೊಡಗಿರುವ ನನ್ನನ್ನು ಗುರುತಿಸಿರುವ 'ವಿಜಯ ಕರ್ನಾಟಕ' ದಿನಪತ್ರಿಕೆ ನನ್ನನ್ನು ೨೦೧೪-೧೫ನೇ ಸಾಲಿನಲ್ಲಿ ತನ್ನ ಬೆಂಗಳೂರು ಜಿಲ್ಲೆಯ ಪರಿಸರ ರಾಯಭಾರಿಯಾಗಿ ಘೋಷಿಸಿದೆ. ಸಮಾಜ ಸೇವೆಯಲ್ಲೂ ಆಸಕ್ತಿ ಹೊಂದಿರುವ ನಾನು ಪ್ರಸ್ತುತ ಬೆಂಗಳಊರಿನ 'ಹೆಡ್ ಸ್ತ್ರೀಮ್ಸ್' ಎಂಬ ಸರಕಾರೇತರ ಸಂಸ್ಥೆಯಲ್ಲಿ ಇಂಟರ್ನಿಯಾಗಿ ಕೆಲಸ ಮಾಡುತ್ತಿದ್ದೇನೆ. ಇವೆಲ್ಲ ಅಲ್ಲದೆ,ಕರಾವಳಿಯ ಗಂಡು ಕಲೆ ಯಕ್ಷಗಾನದಲ್ಲಿ ಪಾತ್ರ ನಿರ್ವಹಿಸಿರುವ ಅನುಭವವಿದೆ. ತೆಂಕುತಿಟ್ಟು ಶೈಲಿಯನ್ನು ಉಬರಡ್ಕ ಉಮೇಶ ಶೆಟ್ಟಿಯವರಲ್ಲಿಯೂ ಬಡಗು ತಿಟ್ಟು ಶೈಲಿಯನ್ನು ಶಂಕರ ಬಾಳೆಕುದ್ರು ಅವರಲ್ಲಿಯೂ ಅಭ್ಯಾಸವನ್ನು ಮಾಡಿದ್ದೇನೆ.