ಕ್ರೈಸ್ಟ್ ವಿಶ್ವವಿದ್ಯಾಲಯ ,ಎನ್.ಸಿ.ಸಿ 

ನೊ ೨ ಕಾಯ್ ೯ ಕರ್ನಾಟಕ ಬಿನ್ ಹೊಸುರು ರಸ್ತೆ ಬೆಂಗಳೂರು

ನ್ಯಾಷನಲ್ ಕ್ಯಾಡೆಟ್ ಕಾರ್ಪ್ಸ್ (ಎನ್.ಸಿ.ಸಿ) ಕ್ರೈಸ್ಟ್ ಯುನಿವೆರ್ಸಿಟಿ ಯಲ್ಲಿ ಶುರುವಾಗಿ ೨೦೧೩ ರ ವೇಳೆಗೆ ೪೪ ವರ್ಷಗಳು ಪೂರೈಸಿವೆ. ೪೫ರ ಹರೆಯದ ಎನ್.ಸಿ.ಸಿ ಕ್ರೈಸ್ಟ್ ಯುನಿವೆರ್ಸಿಟಿ ಕಂಪನಿ ಇಂದಿಗು,ಎಂದೆದಿಗು ಸೇವೆ ,ಸಾಧನೆ ಮಾಡಬೇಕೆಂದು ಬರುವ ಯುವ ಮನಸ್ಸಿನ ಯುವಕ ಯುವತಿಯರಿಗೆ ನೇರ ಹಾಗು ದಿಟ್ಟ ಹೆಜ್ಜೆಯಾಗಿ ಸ್ಪೂರ್ತಿಯಾಗುತದ್ದೆ.೧೯೬೯ರಲ್ಲಿ ಸ್ಥಾಪಿತ ಗೊಂಡ ಎನ್ಸಿಸಿ ಇಲ್ಲಿಯವರೆಗು ಪ್ರತಿ ಹೆಜ್ಜೆಯಲ್ಲು ಮೈಲಿಗಲ್ಲನ್ನು ಸಾಧಿಸುತ್ತ ಬಂದಿದೆ.ಎನ್ಸಿಸಿ ಕಂಪನಿ ಇಷ್ಟು ಎತ್ತರಕ್ಕೆ ಬೆಳೆಯಲು ಅಧಿಕಾರಿಗಳು ವಹಿಸಿದ್ದ ಶ್ರಮ ಶ್ಲಾಘನೀಯಾ.

ಕ್ರೈಸ್ಟ್ ಯುನಿವೆರ್ಸಿಟಿ ಯಲ್ಲಿ ಇಲ್ಲಿಯವರೆಗು ಅಧಿಕಾರ ವಹಿಸಿದ್ದ ಎ.ಎನ್.ಒ ಗಳು, ಕ್ಯಾಪ್ಟನ್ ಶ್ರೀನಿವಾಸ್ ಲೆಫ಼್ಟಿನೆಂಟ್ ಶ್ರೀನಿವಾಸ್ ಮೆಜರ್ ಜೇಮ್ಸ್ ಅಲುಕರ ಲೆಫ಼್ಟಿನೆಂಟ್ ಜ಼ೇವಿಯರ್ ವಿನ್ಸೆನ್ಟ್ ಕ್ಯಾಪ್ಟನ್ ಅಜಯ್ .ಪಿ ಲೆಫ಼್ಟಿನೆಂಟ್ ಫಿನು ಜೊಸ್

                                                                               ಕ್ರೈಸ್ಟ್ ವಿಶ್ವವಿದ್ಯಾಲಯದ           ಇತಿಹಾಸ 

೧೯೬೯ರ ಕಾಲೇಜು ಶುರುವಾದ ಹೊಸ್ತರಲ್ಲಿ ಒಬ್ಬ ಮಧ್ಯಮ ವಯಸ್ಸಿನ ಸ್ಮಾರ್ಟ್ ಆರ್ಮಿ ಅಧಿಕಾರಿ ತರಗತಿಗೆ ಬಂದು "ಜಂಟಲ್ಮ್ಯಾನ್", ನಾನು ಲೆಫ್ಟಿನೆಂಟ್ಕರ್ನಲ್ ಜೆ ಡಬ್ಲು ಶೊರ್ಸ್ ಎಂದು ಆರಂಭಿಸಿದರು,ನಾನು 14ನೇ ಮೈಸೂರು ಬೆಟಾಲಿಯನ್ ನ ಕಮಂಡರ್. ನನ್ನ ಬೆಟಾಲಿಯನ್ ನಲ್ಲಿ ಈ ಕಾಲೇಜಿನ (ಅಂದರೆ ಕ್ರೈಸ್ಟ್ ಕಾಲೇಜು) ವಿದ್ಯಾರ್ಥಿಗಳನ್ನು ತೆಗೆದುಕೊಳ್ಳಲು ನಿಮ್ಮ ಪ್ರಾಂಶುಪಾಲರು ಆಮಂತ್ರಿಸಿದ್ದಾರೆ. ಹಾಗೆ ಹೇಳುತ್ತ ತಮ್ಮಅಪ್ಲಿಕೇಶನ್ಫಾರ್ಮ್ಗಳನ್ನು ತುಂಬಿಸಿಕೊಂಡು ಹೋದರು. ಮುಂದಿನ ಶನಿವಾರ ಅವರು ಕೆಲವು ಆರ್ಮಿ ಒಫ಼ಿಸೆರ್ ಗಳ ಜೊತೆ ಬಂದು ಎನ್ಸಿಸಿ ಎಂದರೆ ಏನು ಅಂತಾ ಹೇಳುತ್ತ ಕ್ರೈಸ್ಟ್ ಕಾಲೇಜಿನಲ್ಲಿ ಎನ್ಸಿಸಿ ಕೇಂದ್ರ ಒಂದನ್ನು ತೆರೆದರು. ಸುಮಾರು ೪ ದಶಕಗಳಿಂದ ಎನ್ಸಿಸಿ ಕಂಪನಿ ಕ್ರೈಸ್ಟ್ ಯುನಿವೆರ್ಸಿಟಿ ಯಲ್ಲಿ ಮಾತ್ರ ಅಲ್ಲದೆ ಇಡೀ ರಾಜ್ಯದಲ್ಲಿ ತನ್ನದೆ ಆದ ಛಾಪು ಮುಡಿಸಿದೆ. ೧೯೬೯-೭೦ರಲ್ಲಿ ನಮ್ಮ ಕಂಪನಿಯಲ್ಲಿ ೨೦ ಕ್ಯಾಡೆಟ್ಸ್ ಇದ್ದರು . ೧೯೭೦-೭೨ ಈ ಎರಡು ವರ್ಷಗಳಾ ಅವಧಿಯಲ್ಲಿ ಅಮೋಘ ಸಾಧನೆಯನ್ನುಮಾಡಿವೆ.ಆಗಿನ ರಾಜ್ಯ ಪಾಲ ಧರ್ಮವಿರ್ ಅವರಿಗೆ ಗಾರ್ಡ್ ಒಫ಼್ ಹಾನೊರ್ ಕೊಟ್ಟಿದ್ದರು.ಹಾಗು ರಾಶ್ತ್ಟ್ರ ಪತಿ "ವಿವಿ ಗಿರಿ"ಅವರಿಂದ ಆಗಿನ ಸಿಯುಒ ಪ್ರಶಸ್ತಿಯನ್ನು ಪಡೆದಿದ್ದರು. ೧೯೭೯-೮೦ ರಲ್ಲಿ ಲೆಫ಼್ಟಿನೆಂಟ್ ಜೇಮ್ಸ್ ಅಲುಕರ ಅವರಿಗೆ ಭಾರತದ ಸೇನೆ ಯಿಂದ ಕ್ಯಾಪ್ಟನ್ ಯಂದು ಬಡ್ಥಿ ಯಾಗಿ,ಕರ್ನಾಟಕ ಹಾಗು ಗೋವಾ ಡೈರೆಕ್ತ್ರಟ್ ನ ಪರೇಡ್ ಕಮಂಡರ್ ಆದರು. ೧೯೮೦-೮೨ ರಲ್ಲಿ ಕರ್ನಾಟಕ ಹಾಗು ಗೋವಾ ಡೈರೆಕ್ತ್ರಟ್ ದೀ ಬೆಸ್ಟ್ ಡೈರೆಕ್ತ್ರಟ್ ಎಂದು ಪ್ರಶಸ್ತಿ ಪಡೆಯಿತು ಹಾಗು ಕರ್ನಾಟಕ ಸರ್ಕಾರದ ಅಂದಿನ ಮಾನ್ಯ ಮುಖ್ಯ ಮಂತ್ರಿ ಗಳುನಮ್ಮ ಕ್ರೈಸ್ಟ್ ಕಾಲೇಜೆಗೆ ದೀ ಬೆಸ್ಟ್ ಇನ್ಸ್ಟಿಟ್ಯುಟ್ ಟ್ರೊಫೀ ಯನ್ನು ಕೊಟ್ಟು ಪುರಸ್ಕರಿಸಿತು. ೧೯೮೩-೮೫ ರಲ್ಲಿ ಕ್ಯಾಪ್ಟನ್ ಜೇಮ್ಸ್ ಅಲುಕರ ಸತತ ಮೂರನೆ ಬಾರಿ ಪರೇಡ್ ಕಮಂಡರ್ ಆಗಿ ಆಯ್ಕೆಗೊಂಡರು. ವನ ಮಹೊತ್ಸವದ ಅಂಗವಾಗಿ ಕೆಡೆಟ್ಸ್ ಗಳು ಗಿಡ ನೆಡುವ ಕಾರ್ಯ ಕ್ರಮವನ್ನು ಹೊಂದಿಕೊಂಡಿದ್ದರು. ೧೯೮೫-೮೬ ರಲ್ಲಿ ೫ ನೇ ಬಾರಿಗೆ ಪರೇಡ್ ಕಮಂಡರ್ ಆಗಿ ಆಯ್ಕೆ ಗೊಂಡರು ಹಾಗು ಮುಖ್ಯಮಂತ್ರಿ ಗಳಿಂದ ಎರಡನೇ ಬಾರಿ ಪದಕ ವನ್ನು ಪಡೆದರು. ೧೯೮೮-೯೦ ರಲ್ಲಿ ಕ್ಯಾಪ್ಟನ್ ಜೇಮ್ಸ್ ಅಲುಕರ ಅವರಿಗೆ ಮತ್ತೆ ಬಡ್ಥಿಯಾಗಿ ಮೆಜರ್ ಆದರು.ರಾಜ್ಯದ ಎರಡನೆ ಕಮಂಡರ್ ಆಗಿ ನೇಮಕಗೊಂಡರು. ನಮ್ಮ ಕಾಲೇಜಿನ ಕ್ಯಾಡೆಟ್ಸ್ ಗಳು ಎನ್ಸಿಸಿ ನಡೆಸಿದ ವಿವಿಧ ಶಿಬಿರಗಳಲ್ಲಿ ಫ಼ಯರಿಂಗ್ನಲ್ಲಿ ಮೊದಲ ಸ್ಥಾನ ಗಳಿಸಿದರೆ ,ಡ್ರಿಲ್ ಸ್ಪರ್ಧೆ ಹಾಗು ಆರ್.ಡಿ ಪರೇಡ್ ನಲ್ಲಿ ದ್ವಿತೀಯಾ ಸ್ಥಾನ ಗಳಿಸಿರುತ್ತದೆ.