ನನ್ನ ಕೊಡಗು

ಭೂಲೋಕದ ಸ್ವರ್ಗ ಎಂದರೆ ಅದು ನನ್ನ ಹುಟ್ಟೂರಾದ ಕೊಡಗು ಎಂದೇ ನಾನು ಭಾವಿಸುತ್ತೇನೆ. ಗಾಳಿ, ಬೆಳಕು, ನೀರು ಇವು ಪರಿಶುದ್ಧವಾಗಿ ಸಿಗುವಂತ್ತಿದ್ದರೆ ಅದು ಕೊಡಗಿನಲ್ಲಿ ಮಾತ್ರ. ಹವಾನಿಯಂತ್ರಿತ ಕೊಠಡಿಯಲ್ಲಿರುವುದು ಒಂದೇ ನಮ್ಮ ಕೊಡಗಿನಲ್ಲಿರುವುದು ಒಂದೇ. ನೆಮ್ಮದಿಯ ತಾಣ, ಶಾಂತಿಯ ಬೀಡು, ಶಿಸ್ತುಬದ್ಧ ಜೀವನ. ಒಂದು ರಾಷ್ಟ್ರ ಹೇಗಿರಬೇಕು ಎಂದು ಕನಸು ಕಾಣುವುದಾದರೆ ಅದು ಕೊಡಗಿನಂತಿರಬೇಕು ಎಂದರೆ ತಪ್ಪಾಗಲಾರದು.

ಇಂತಹ ಕೊಡಗಿನ ಶಾಂತಿಯನ್ನು ಕದಡಲು ಬಂದಿರುವ ಏಕೈಕ ಸಮಸ್ಯೆ ಎಂದರೆ ಅದುವೇ "ಕಸ್ತೂರಿ ರಂಗನ್ ವರದಿ" ಎಂಬ ಮಹಾ ಮಾರಿ. ಇದರಿಮ್ದ ನೆಮ್ಮದಿಯಿಂದ ಸಾಗುತ್ತಿದ್ದ ಜನರ ಬದುಕಿನ ಶಾಂತಿಯನ್ನು ಕಲಕಿದಂತಾಗಿದೆ.

ಕೊಡಗಿನ ಭೂಪಟದಲ್ಲಿಯ ಒಂದು ಭಾಗ ಪಾರ್ಶ್ವವಾಯುವಿಗೆ ತುತ್ತಾದ ಹಾಗೆ ಆಗುವುದರಲ್ಲಿ ಸಂಶಯವಿಲ್ಲ. ಆ ಭಾಗ ಇದ್ದೂ ಸತ್ತಂತಿರುತ್ತದೆ. ಮನುಷ್ಯರಿಗೆ ವಾಸಕ್ಕೆ ಯೋಗ್ಯವಲ್ಲದ ಪ್ರದೇಶ ಇದ್ದು ಏನು ಪ್ರಯೋಜನ. ಪ್ರಾಣಿ-ಪಕ್ಷಿಗಳಿಗೋಸ್ಕರ, ಪರಿಸರವನ್ನು ಕಾಪಾಡುವ ನೆಪದಲ್ಲಿ ನೆಮ್ಮದಿಯಿಂದ ಬದುಕುತ್ತಿದ್ದ ಜನರನ್ನು ತ್ರಿಶಂಕು ಸ್ತಿತಿಗೆ ತರುವುದು ಯಾವ ನ್ಯಾಯ?

ಕಸ್ತೂರಿ ರಂಗನ್ ವರದಿಯ ಪೂರ್ತಿ ಕಟ್ಟುಪಾಡುಗಳೇನು? ಎಂಬುವುದು ನಿಜವಾಗಿಯೂ ಸಾಮಾನ್ಯ ಜನರಿಗೆ ಅರ್ಥವಾಗಿಲ್ಲ, ಆದರೆ ಎಲ್ಲಾ ಸರಿಯಾಗಿ ಇದ್ದ ನಮ್ಮ ಆಸ್ತಿ-ಪಾಸ್ತಿಗಳ ಮೇಲೆ ಈ ವರದಿ ಬಂದಿದ್ದಾದರೂ ಏಕೆ? ಬಂದ ಮೇಲೆ ಅದರ ಪರಿಣಾಮ ಏನಾದರೊಂದು ಇದ್ದೆ ಇರುತ್ತದೆ ಅದು ಏನು? ಎಂಬ ಯಕ್ಷ ಪ್ರಶ್ನೆ ಎಲ್ಲರ ಮನದಲ್ಲೂ ಕಾಡುತ್ತಿದೆ.

"ನಮ್ಮ ಉಳಿವಿಗೆ ಹೋರಾಟ ಮಾಡುವುದು ತಪ್ಪೇ?"