ಯೋಜಿಸುವಿಕೆ

ಪೀಠಿಕೆ

ಯೋಜಿಸುವಿಕೆಯು ನಿರ್ವಹಣಾ ಪ್ರಕ್ರಿಯೆಯಲ್ಲಿ ನೆರವೇರಿಸಬೇಕಾದ ಆರಂಭಿಕ ಕಾರ್ಯವಾಗಿದೆ. ಯಾವುದೇ ವ್ಯವಸ್ಥಾಪಕನು ಸಂಘಟನೆ, ನಿರ್ದೇಶನ ಮತ್ತು ನಿಯಂತ್ರಣ ಕಾರ್ಯಗಳನ್ನು ಕೈಗೊಳ್ಳುವ ಮೊದಲು ಯೋಜನೆಯನ್ನು ಸಿದ್ಧಪಡಿಸಬೇಕು. ಯೋಜಿಸುವಿಕೆಯು ನಿರ್ವಹಣೆಯ ಇನ್ನಿತರ ಕಾರ್ಯಗಳಿಗೆ ಆಧಾರವಾಗಿರುವುದರಿಂದ, ಇದನ್ನು ನಿರ್ವಹಣಾ ಕಾರ್ಯಗಳ ಮೂಲಭೂತ ಚಟುವಟಿಕೆ ಎಂದು ಹೇಳಬಹುದು. ಸ್ಪಷ್ಟವಾದ ಯೋಜನೆ ಇಲ್ಲದಿದ್ದರೆ ನಿರ್ವಹಣೆಯ ಉಳಿದೆಲ್ಲ ಕಾರ್ಯಗಳು ಪರಿಣಾಮಕಾರಿಯಾಗುವಿದಿಲ್ಲ.

ಯೋಜಿಸುವಿಕೆಯ ಅರ್ಥ ಮತ್ತು ವ್ಯಾಖ್ಯೆಗಳು ಯೋಜನೆಯು ನಿರ್ದಿಷ್ಟ ಗುರಿ ಅಥವಾ ಉದ್ದೇಶವನ್ನು ಸಾಧಿಸಲು ಅಗತ್ಯವಾದ ಪೂರ್ವ ನಿರ್ಧರಿತ ಕಾರ್ಯಮಾರ್ಗವಾಗಿದೆ. ಇದು ಏನನ್ನು ಮಾಡಬೇಕು, ಯಾವಾಗ, ಎಲ್ಲಿ, ಹೇಗೆ ಮತ್ತು ಯಾರಿಂದ ಅದನ್ನು ಮಾಡಿಸಬೇಕು ಎಂಬುದನ್ನು ಪೂರ್ವಭಾವಿಯಾಗಿ ನಿರ್ಧರಿಸುವುದಕ್ಕೆ ಸಂಬಂಧಿಸಿದೆ.

ವ್ಯಾಖ್ಯೆಗಳು
ಕೂಂಟ್ಜ್ ಮತ್ತು ಓ’ಡೊನೆಲ್ ರವರ ಪ್ರಕಾರ, “ಯೋಜಿಸುವಿಕೆಯು ಏನು ಮಾಡಬೇಕು, ಹೇಗೆ ಮಾಡಬೇಕು, ಯಾವಾಗ ಮಾಡಬೇಕು ಮತ್ತು ಅದನ್ನು ಯಾರು ಮಾಡಬೇಕು ಎಂಬುದನ್ನು ಪೂರ್ವಭಾವಿಯಾಗಿ ನಿರ್ಧರಿಸುವುದಾಗಿದೆ. ಯೋಜಿಸುವಿಕೆಯು ನಾವು ಎಲ್ಲಿದ್ದೇವೆ ಮತ್ತು ಎಲ್ಲಿಗೆ ಹೋಗಬೇಕು ಎಂಬುದರ ನಡುವಿನ ಸಂಪರ್ಕ ಸೇತುವೆಯಾಗಿದೆ. ಇದು ಯೋಜನೆ ಇಲ್ಲದಿದ್ದಾಗ ಕಾರ್ಯ ಸಾಧ್ಯವಾಗದ ಕಾರ್ಯಸಾಧ್ಯವಾಗುವಂತೆ ಮಾಡುತ್ತದೆ.”

ಯೋಜಿಸುವಿಕೆಯ ಮಹತ್ವ

  1. ಯೋಜನೆಯು ಮಾರ್ಗದರ್ಶನ ನೀಡುತ್ತದೆ
  2. ಯೋಜಿಸುವಿಕೆಯು ಅನಿಶ್ಚಿತತೆಯ ಅಪಾಯವನ್ನು ಕಡಿಮೆಮಾಡುತ್ತದೆ
  3. ಯೋಜನೆಯು ಅತಿವ್ಯಾಪಿಸಿದ ಮತ್ತು ವ್ಯರ್ಥಚಟುವಟಿಕೆಗಳನ್ನು ಕಡಿಮೆ ಮಾಡಿತ್ತದೆ
  4. ಯೋಜನೆಯು ಹೊಸ ಕಲ್ಪನೆಗಳಿಗೆ ಅವಕಾಶ ಒದಗಿಸಿಕೊಡುತ್ತದೆ
  5. ಯೋಜಿಸುವಿಕೆಯು ನಿರ್ಣಯ ಕೈಗೊಳ್ಳುವುದಕ್ಕೆ ಅನುವು ಮಾಡುತ್ತದೆ
  6. ಯೋಜಿಸುವಿಕೆಯು ನಿಯಂತ್ರಣಕ್ಕಾಗಿ ಅಗತ್ಯವಾದ ಕಾರ್ಯಪ್ರಮಾಣಗಳನ್ನು ಅಥವಾ ಪ್ರಮಾಣೀಕೃತ ಮೌಲ್ಯಗಳನ್ನು ಸ್ಥಾಪಿಸುತ್ತದೆ

ಯೋಜಿಸುವಿಕೆಯ ಮಿತಿಗಳು

  1. ಯೋಜಿಸುವಿಕೆಯು ಕಠಿಣತೆಗೆ ಆಸ್ಪದ ನೀಡುತ್ತದೆ
  2. ಯೋಜಿಸುವಿಕೆಯು ಬದಲಾಗುವ ಪರಿಸ್ಥಿತಿಗಳಲ್ಲಿ ನಿಶ್ಚಲಗೊಳ್ಳಬಹುದು
  3. ಯೋಜನೆಯು ಸೃಜನಶೀಲತೆಯನ್ನು ಮಿತಗೊಳಿಸುತ್ತದೆ
  4. ಯೋಜನಾ ಪ್ರಕ್ರಿಯೆ ಹೆಚ್ಚು ವೆಚ್ಚವನ್ನು ಒಳಗೊಂಡಿದೆ
  5. ಯೋಜಿಸುವುಕೆಗೆ ಹೆಚ್ಚಿನ ಸಮಯದ ಅಗತ್ಯವಿದೆ
  6. ಯೋಜನೆಯು ಯಶಸ್ಸನ್ನು ಖಾತರಿಗೊಳಿಸುವುದಿಲ್ಲ

ಯೋಜಿಸುವಿಕೆಯ ಪ್ರಕ್ರಿಯೆ ಅಥವಾ ಯೋಜನಾ ಪ್ರಕ್ರಿಯೆಯಲ್ಲಿನ ಹಂತಗಳು

  1. ಉದ್ದೇಶಗಳನ್ನು ಸ್ಥಾಪಿಸುವುದು
  2. ಯೋಜಿಸುವಿಕೆಯ ಪ್ರಮಿತಿ ಅಥವಾ ಊಹೆಗಳನ್ನು ಅಭಿವೃದ್ಧಿಪಡಿಸುವುದು
  3. ಪರ್ಯಾಯ ಕಾರ್ಯಮಾರ್ಗಗಳನ್ನು ಗುರುತಿಸುವುದು
  4. ಪರ್ಯಾಯ ಕಾರ್ಯಮಾರ್ಗಗಳ ವಿಶ್ಲೇಷಣೆ
  5. ಉತ್ತಮ ಪರ್ಯಾಯ ಕಾರ್ಯಮಾರ್ಗದ ಆಯ್ಕೆ
  6. ಯೋಜನೆಗಳನ್ನು ಜಾರಿಗೊಳಿಸುವುದು
  7. ಪ್ರಗತಿ ವಿಶ್ಲೇಷನೆ ಅಥವಾ ಮುಂಬರಿಕೆ

ಯೋಜನೆಯ ವಿಧಗಳು

  1. ಉದ್ದೇಶಗಳು
  2. ಕಾರ್ಯತಂತ್ರಗಳು
  3. ನೀತಿಗಳು
  4. ಕಾರ್ಯವಿಧಾನಗಳು
  5. ವಿಧಾನಗಳು
  6. ನಿಯಮಗಳು
  7. ಕಾರ್ಯಕ್ರಮಗಳು
  8. ಮುಂಗಡ ಪತ್ರ