ಸದಸ್ಯ:Dr. Giridhar S/ನನ್ನ ಪ್ರಯೋಗಪುಟ
ಆರೋಗ್ಯದಲ್ಲಿ ಲಿಂಗ ಅಸಮಾನತೆಗಳು
ವಿಶ್ವ ಆರೋಗ್ಯ ಸಂಸ್ಥೆಯಪ್ರಕಾರ [೧] ಆರೊಗ್ಯ ಎಂಬುದಕ್ಕೆ ಕೇವಲ ಯಾವುದೇ ರೋಗವು ಗೈರು ಹಾಜರಿಯಾಗಲಿ ಅಥವಾ ಊಹಿಸುವಿಕೆಯಾಗಲಿ ತೀರ್ಮಾನಕ್ಕೆ ಬರುವುದು ಆರೋಗ್ಯವಲ್ಲ. ಅದು ಸಂಪೂರ್ಣ ದೈಹಿಕವಾಗಿ, ಮಾನಸಿಕವಾಗಿ ಹಾಗೂ ಸಾಮಾಜಿಕವಾಗಿ ಉತ್ತಮವಿರುವಿಕೆಯಾಗಿದೆ. ಆರೋಗ್ಯ ಕೇವಲ ರೋಗ ರಹಿತ ಸ್ಥಿತಿ ಮಾತ್ರವಲ್ಲದೇ ವ್ಯಕ್ತಿಗಳ ಮಾನಸಿಕ ಮತ್ತು ದೈಹಿಕ ಶಕ್ತಿಗಳ ನಡುವೆ ಅಪೂರ್ಣ ಹೊಂದಾಣಿಕೆ ಇರುವಂತಹ ಒಂದು ಪರಿಸ್ಥಿತಿಯನ್ನು ತಿಳಿಸುತ್ತದೆ. ದೈಹಿಕ ಮತ್ತು ಮಾನಸಿಕ ಆರೋಗ್ಯಗಳು ಒಂದು ನಾಣ್ಯದ ಎರಡು ಮುಖಗಳಿದ್ದಂತೆ. ಒಂದರಿಂದ ಉಂಟಾದ ತೊಂದರೆ ಸಹಜವಾಗಿ ಇನ್ನೊಂದು ಅಂಶದ ಮೇಲೆ ಪ್ರಭಾವ ಬೀರುತ್ತದೆ. ಆಧುನಿಕ ಆರೋಗ್ಯ ತಜ್ಞರ ಪ್ರಕಾರ, ಆರೋಗ್ಯ ಸಮರ್ಥವಾದ, ಶಕ್ತಿ ಶಾಲಿಯಾದ ಮನಸ್ಸು ಮತ್ತು ನಿಯಂತ್ರಿಸಲ್ಪಟ್ಟ, ಉದ್ದೇಶಗಳು ಕೂಡಿ ಇತರೆ ದೈಹಿಕ ಹಾಗೂ ಮಾನಸಿಕ ಕ್ರಿಯೆಯನ್ನು ಸೇರಿದ್ದು, ಎಲ್ಲವೂ ಸಮರ್ಪಕವಾಗಿ ಕಾರ್ಯ ನಿರ್ವಹಿಸುತ್ತಿದ್ದರೆ ಅಂತಹ ವ್ಯಕ್ತಿಯನ್ನು ಆರೋಗ್ಯವಂತ ವ್ಯಕ್ತಿ ಎಂದು ಕರೆಯುತ್ತಾರೆ. ಆಧುನಿಕ ಯುಗದಲ್ಲಿ ಮಾನಸಿಕ ಆರೋಗ್ಯವು ಬಹು ಮುಖ್ಯವಾದದ್ದು.ಸಮಾಜದಲ್ಲಿ ಶತಶತಮಾನಗಳಿಂದಲೂ ಸ್ತ್ರೀ-ಪುರುಷರನ್ನು ಕಾಣುವ ದೃಷ್ಟಿಕೋನ ವೈವಿಧ್ಯಮಯವಾಗಿ ಬೆಳೆದುಬಂದಿದೆ. ಲಿಂಗ ಎಂಬ ಪದವು ಸ್ತ್ರೀ-ಪುರುಷರಿಗಿರುವ ಶಾರೀರಿಕ ವ್ಯತ್ಯಾಸಗಳಿಗೆ ಅನ್ವಯಿಸುತ್ತದೆ. ಆರೋಗ್ಯದಲ್ಲಿ ಲಿಂಗ ಅಸಮಾನತೆಯು ಸರ್ವಕಾಲಿಕ ಮತ್ತು ಜಾಗತಿಕ ವಿದ್ಯಮಾನವಾಗಿದೆ. ಮಹಿಳೆಯರು ದ್ವಂದ್ವ ಪಾತ್ರ ನಿರ್ವಹಣೆಯಿಂದ ದೈಹಿಕ ಮತ್ತು ಮಾನಸಿಕ ಖಾಯಿಲೆಗಳು ಉಂಟಾಗುತ್ತಿವೆ. ಇದರಿಂದ ಸಮಾಜದಲ್ಲಿ ಜನನ ಮರಣಗಳಲ್ಲಿ ಲಿಂಗ ಅಸಮಾನತೆಗಳು ಉಂಟಾಗುತ್ತದೆ.
ಸ್ತ್ರೀ ಪಕ್ಷಪಾತ
ಬದಲಾಯಿಸಿನಮ್ಮ ಸಾಮಾಜಿಕ ರಚನೆಗಳು, ಸಾಂಸ್ಕ್ರತಿಕ ರೂಢಿ, ಆಚರಣೆಗಳು ಮತ್ತು ಕಾನೂನುಗಳು ಅಂಚಿನಲ್ಲಿರುವ ಮಹಿಳೆಯರ ದಬ್ಬಾಳಿಕೆಯನ್ನು ಶಾಶ್ವತಗೊಳಿಸುತ್ತೀವೆ. ಈ ಅಸಮಾನ ಸಾಮಾಜಿಕ ವ್ಯವಸ್ಥೆಯ ಪರಿಣಾಮವಾಗಿ ಮಹಿಳೆಯರು ಸಾಮಾನ್ಯವಾಗಿ ಹೆಚ್ಚು ಹೆಚ್ಚು ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಈ ಅಸಮಾನತೆಯ ಪರಿಣಾಮವಾಗಿ ಮಹಿಳೆಯರು ಪುರುಷರಿಗಿಂತ ಆರೋಗ್ಯದ ಸಂಪನ್ಮೂಲಗಳ ಮೇಲೆ ನಿಯಂತ್ರಣ ಹೊಂದಲು ಸಾಧ್ಯವಾಗಿಲ್ಲ. ಉದಾಹರಣೆಗೆ, ಪಿತೃಪ್ರಧಾನ ವ್ಯವಸ್ಥೆಯಲ್ಲಿ ವಾಸಿಸುವ ಮಹಿಳೆಯರು ಸಾಮಾನ್ಯವಾಗಿ ತೃತೀಯ ಶಿಕ್ಷಣವನ್ನು ಪಡೆಯುತ್ತಾರೆ. ಹಾಗೂ ಲಿಂಗ ತಾರತಮ್ಯದ ಪರಿಣಾಮದಿಂದ ಮಹಿಳೆಯರು ಕಾರ್ಮಿಕ ಕೆಲಸಗಳನ್ನು ನಿರ್ವಹಿಸುತ್ತಿದ್ದಾರೆ. ಇದರ ಪರಿಣಾಮವಾಗಿ ಸ್ತ್ರೀ ಜನನದ ನೀರಿಕ್ಷೆ, ಆರೋಗ್ಯಕರ ಸ್ಥಿತಿ ಹಾಗೂ ಸಾಂಕ್ರಮಿಕ ರೋಗಗಳ ವಿರುದ್ಧ ಹೋರಾಟದ ಮನೋಭಾವ ಸಾಮಾನ್ಯವಾಗಿ ಪುರುಷರಿಗಿಂತ ಕಡಿಮೆ ಇರುತ್ತದೆ.
ಪುರುಷರ ವಿರುದ್ಧದ ಅಸಮಾನತೆಗಳು
ಬದಲಾಯಿಸಿಜಾಗತಿಕ ಆರೋಗ್ಯದ ಲಿಂಗ ಅಸಮಾನತೆಗಳು ಬಹುಮಟ್ಟಿಗೆ ಮಹಿಳೆಗೆ ವಿರುದ್ಧವಾಗಿದ್ದರೂ, ಪುರುಷರು ಸಹ ಅಸಮಾನತೆಗೆ ಒಳಗಾಗುವ ಸಂದರ್ಭಗಳಿವೆ. ಅಂತಹ ಒಂದು ಉದಾಹರಣೆಯಂದರೆ, ಯುದ್ಧಗಳು. ಪುರುಷರು ಯುದ್ಧಗಳ ಸಂದರ್ಭಗಳಲ್ಲಿ ತಕ್ಷಣವೇ ಸಂತ್ರಸ್ಥರಾಗುತ್ತಾರೆ. ೧೯೫೫ರಂದ ೨೦೦೨ರವರೆಗಿನ ೧೩ ದೇಶಗಳಲ್ಲಿನ ಯುದ್ಧಗಳ ಕುರಿತ ಅಧ್ಯಯನಗಳ ಪ್ರಕಾರ ೮೧ ರಷ್ಟು ಎಲ್ಲಾ ಎಲ್ಲಾ ಹಿಂಸಾತ್ಮಕ ಯುದ್ಧಗಳಲ್ಲಿನ ಸಾವುಗಳು ಪುರುಷರೇ ಆಗಿದ್ದರು. ಹಾಗೆಯೇ ಪರಿಸರದಲ್ಲಿನ ತೀರ್ವ ಬದಲಾವಣೆಗಳು, ಪುರುಷರಲ್ಲಿನ ಹೆಚ್ಚಿನ ಪ್ರಮಾಣದ ಮಧ್ಯಸೇವನೆ ಇವು ಪುರುಷರ ಮಾನಸಿಕ ಒತ್ತಡಕ್ಕೆ ಸಂಬಂಧಿಸಿವೆ. ಇದು ಪುರುಷರ ಮರಣ ಪ್ರಮಾಣದ ಏರಿಕೆಗೆ ಕಾರಣವಾಗಿವೆ. ವಿಶ್ವದ ಎಲ್ಲಾ ದೇಶಗಳಲ್ಲಿ ಪುರುಷರಿಗಿಂತ ಮಹಿಳೆಯರು ಧೀರ್ಘಕಾಲ ಬದುಕುಳಿಯುತ್ತಾರೆ. ಇದಕ್ಕೆ ಸಂಬಂಧಿಸಿದಂತೆ ಎಲ್ಲಾ ವಯಸ್ಕ ಗುಂಪಿನ ಜೀವಿತಾವಧಿ ಕುರಿತಂತೆ ವಿಶ್ವಾಸರ್ಹ ದಾಖಲೆಗಳು ಲಭ್ಯವಿವೆ. ಒಟ್ಟಾರೆ ಅಭಿವೃದ್ದಿ ಹೊಂದಿದ ದೇಶಗಳಲ್ಲಿ ಆರೋಗ್ಯದ ಸ್ಥಿತಿಗತಿಗಳು (ಜೀವಿತಾವಧಿ) ಮಹಿಳೆಯರಿಗಿಂತ ಪುರುಷರ ಆರೋಗ್ಯ ಸ್ಥಿತಿ ಕೆಳಮಟ್ಟದಲ್ಲಿದೆ.
ಲಿಂಗ ಅಸಮಾನತೆಯ ರೂಪಗಳು
ಬದಲಾಯಿಸಿ- ಸ್ತ್ರೀ-ಪುರುಷ ಲಿಂಗ ಅನುಪಾತ
- ಆರೋಗ್ಯ ಫಲಿತಾಂಶ
- ಆರೋಗ್ಯ ರಕ್ಷಣೆ ಪ್ರವೇಶ
- ಜನನದಲ್ಲಿ ಅಸಮಾನತೆ
- ಮರಣದಲ್ಲಿ ಅಸಮಾನತೆ
- ಕೌಟುಂಬಿಕ ಅಸಮಾನತೆ
- ಪ್ರಾಥಮಿಕ ಸೌಲಭ್ಯಗಳಲ್ಲಿ ಅಸಮಾನತೆ
- ವೃತ್ತಿಪರತೆಯಲ್ಲಿ ಅಸಮಾನತೆ
- ನಾಯಕತ್ವ/ಮಾಲೀಕತ್ವದಲ್ಲಿ ಅಸಮಾನತೆ
- ರಾಜಕೀಯ ಕ್ಷೇತ್ರದಲ್ಲಿ ಅಸಮಾನತೆ
- ಧಾರ್ಮಿಕ ಅಸಮಾನತೆ
- ಶೈಕ್ಷಣಿಕ ಅಸಮಾನತೆ
- ಆರ್ಥಿಕ ಅಸಮಾನತೆಗಳು
ಲಿಂಗ ಅಸಮಾನತೆಯ ಪ್ರಮುಖ ಅಂಶಗಳು
ಬದಲಾಯಿಸಿ- ಸ್ತ್ರೀಯರಿಗೆ ಸಮಾನತೆ, ಸ್ವಾತಂತ್ರ್ಯ ಮತ್ತು ಸಮಾನ ಅವಕಾಶಗಳು ಸಂವಿಧಾನಬದ್ಧವಾಗಿ ನೀಡಿದ್ದರೂ ಪ್ರಾಯೋಗಿಕವಗಿ ದೊರೆತಿಲ್ಲ
- ಮಹಿಳೆಯರನ್ನು ಅಸಾಧಾರನೆ ಮತ್ತು ನಿರ್ಲಕ್ಷ್ಯದಿಂದ ಕಾಣಲಾಗುತ್ತದೆ
- ಉದ್ಯೋಗದಲ್ಲಿ ಮತ್ತು ವೇತನದಲ್ಲಿ ತಾರತಮ್ಯ
- ಉದ್ಯೋಗಸ್ತ ಮಹಿಳೆಯರಿಗೆ ಕಿರುಕುಳ, ದೌರ್ಜನ್ಯ, ಹಿಂಸೆ ಮತ್ತು ಶೋಷಣೆ
- ಮಹಿಳೆಯರ ದ್ವಂದ್ವ ಪಾತ್ರ ನಿರ್ವಹಣೆಯಿಂದ ದೈಹಿಕ ಮತ್ತು ಮಾನಸಿಕ ಸಮಸ್ಯೆಗಳು
- ರಾಜಕೀಯ ಕ್ಷೇತ್ರದಲ್ಲಿ ಅಸಮಾನತೆ
- ಅನಿಷ್ಟ ಸಂಪ್ರದಾಯಗಳು: ಉದಾ: ಬಾಲ್ಯ ವಿವಾಹ, ವರದಕ್ಷಿಣೆ, ದೇವದಾಸಿ ಪದ್ದತಿ
- ಹೆಣ್ಣುಗಳ ಮಾರಾಟ, ಹೆಣ್ಣು ಬ್ರೂಣ ಹತ್ಯೆ ಕೌಟುಂಬಿಕ ಹಿಂಸೆ
- ಸ್ತ್ರೀಯರಿಗಿಂತಲೂ ಪುರುಷರು ಪ್ರಭಲರು ಎಂಬ ಕಲ್ಪನೆ
ಲಿಂಗ ಅಸಮಾನತೆಗೆ ಕಾರಣಗಳು
ಬದಲಾಯಿಸಿ- ಪಿತೃ ಪ್ರಧಾನ ಸಮಾಜ
- ಅವಿಭಕ್ತ ಕುಟುಂಬದ ಪ್ರಾಧಾನ್ಯತೆ
- ಧಾರ್ಮಿಕ ಮತ್ತು ಸಾಮಾಜಿಕ ಕಾರಣಗಳು
- ಅನಕ್ಷರತೆ ಮತ್ತು ಮೂಢ ನಂಬಿಕೆಗಳು
- ಮಹಿಳೆಯರ ಶಾರೀರಿಕ ಮತ್ತು ಮಾನಸಿಕ ದೌರ್ಬಲ್ಯಗಳು
- ಸಾಂಸ್ಕೃತಿಕ ನಿಯಮಗಳ ಮತ್ತು ಆಚರಣೆಗಳು
- ಗಂಡು ಮಗುವಿಗೆ ಆದ್ಯತೆ
- ಸ್ತ್ರೀ ಜನನಾಂಗದ ಊನಗೊಳಿಸುವಿಕೆ
- ಹಿಂಸೆ ಮತ್ತು ನಿಂದನೆ
- ಬಡತನ
- ಆರೋಗ್ಯ ರಕ್ಷಣಾ ವ್ಯವಸ್ಥೆ ಕೊರತೆ
- ರಚನಾತ್ಮಕ ಲಿಂಗ ದಬ್ಬಾಳಿಕೆ
ಪರಿಹಾರಗಳು
ಬದಲಾಯಿಸಿ- ಸ್ತ್ರೀ-ಪುರುಷರಲ್ಲಿ ಸಮಾನತೆಯ ಮನೋಭಾವನೆಯನ್ನು ಮೂಡಿಸುವುದು
- ಸಂವಿಧಾನಾತ್ಮಕ ಸೌಲಭ್ಯ ಕಲ್ಪಿಸುವುದು: ಶಾಸನಗಳು(ಮಹಿಳೆಯರಿಗೆ ಸಂಬಂಧಿಸಿದಂತೆ)
- ಮಹಿಳಾ ಅಭಿವೃದ್ದಿ ಮತ್ತು ಮಹಿಳಾ ಸಬಲೀಕರಣ ಆಧಾರಿತ ಯೋಜನೆಗಳು
- ಮಹಿಳೆಯರ ಹಕ್ಕುಗಳ ರಕ್ಷಣೆ (ಅಂತರಾಷ್ಟ್ರೀಯ ಮಹಿಳಾ ದಿನ)[೨]
- ಮಹಿಳೆಯರನ್ನು ಮುಖ್ಯವಾಹಿನಿಗೆ ತರುವುದು
- ಸ್ತ್ರೀ ಸಬಲೀಕರಣ
ಮಹಿಳಾ ಅಭಿವೃದ್ದಿ ಯೋಜನೆಗಳು
ಬದಲಾಯಿಸಿ- ಮಡಿಲು ಯೋಜನೆ[೩]
- ಆರೋಗ್ಯ ಭಾಗ್ಯ ಯೋಜನೆ
- ಭಾಗ್ಯಲಕ್ಷ್ಮಿ ಯೋಜನೆ