kn-4 ಈ ಸದಸ್ಯರು ಕನ್ನಡ ಭಾಷೆಯನ್ನು ಸಹಜ-ಭಾಷೆಯ ಮಟ್ಟದಲ್ಲಿ ಮಾತನಾಡಬಲ್ಲರು.

ಡಾ.ಬಿ.ಎನ್.ಯಶೋಧ[೧] ಮೈಸೂರು ವಿಶ್ವವಿದ್ಯಾನಿಲಯದ ಮಹಾರಾಜ ಕಾಲೇಜಿನ ರಾಜ್ಯಶಾಸ್ತ್ರ[೨] ವಿಭಾಗದ ಮುಖ್ಯಸ್ಥರು ಹಾಗೂ ಸಹ ಪ್ರಾಧ್ಯಾಪಕರು.

ಜನನ, ವಿದ್ಯಾಭ್ಯಾಸಸಂಪಾದಿಸಿ

ಹೆಗ್ಗಡದೇವನಕೋಟೆಯ ತುಂಬಸೋಗೆ ಗ್ರಾಮದವರು. ತಂದೆ ಬಿ.ಎನ್.ನಂಜುಂಡಯ್ಯ, ತಾಯಿ ಮಣಿಯಮ್ಮ. ಪಿ.ಯು.ಸಿಯವರೆಗೆ ಹೆಗ್ಗಡದೇವನಕೋಟೆಯಲ್ಲಿ ವಿದ್ಯಾಭ್ಯಾಸ ಮಾಡಿ, ನಂತರ ಮೈಸೂರಿನ ಮಹಾರಾಣಿ ಕಲಾ ಮತ್ತು ವಾಣಿಜ್ಯ ಕಾಲೇಜಿನಲ್ಲಿ ಬಿ.ಎ ಪದವಿಯನ್ನು ಮತ್ತು ಮೈಸೂರು ವಿಶ್ವವಿದ್ಯಾನಿಲಯದ ಮಾನಸ ಗಂಗೋತ್ರಿಯಲ್ಲಿ ರಾಜ್ಯಶಾಸ್ತ್ರ ಎಂ.ಎ ಪದವಿಯನ್ನು ಗಳಿಸಿದ್ದಾರೆ. ಇವರು ಸಂಶೋಧನೆಯನ್ನು "ಮೈಸೂರು ವಿಶ್ವವಿದ್ಯಾನಿಲಯದ ಅಂಬೇಡ್ಕರ್ ಸಂಶೋಧನಾ ಮತ್ತು ವಿಸ್ತರಣಾ ಕೇಂದ್ರದಲ್ಲಿ" ಡಾ.ಜೆ.ಸೋಮಶೇಖರ್ ಅವರ ಮಾರ್ಗದರ್ಶನದಲ್ಲಿ "ರಾಷ್ಟ್ರ ನಿರ್ಮಾಣದಲ್ಲಿ ಅಂಬೇಡ್ಕರ್ ಅವರ ಪಾತ್ರ-ಒಂದು ಅಧ್ಯಯನ" ಎಂಬ ವಿಷಯದ ಬಗ್ಗೆ ಪಿ.ಎಚ್‍ಡಿ ಪದವಿಯನ್ನು ಪಡೆದಿದ್ದಾರೆ.

ವೃತ್ತಿ ಜೀವನಸಂಪಾದಿಸಿ

೧೯೮೭ರಲ್ಲಿ ರಾಜ್ಯಶಾಸ್ತ್ರದ ಅಧ್ಯಾಪಕಿಯಾಗಿ ಮಹಾರಾಜ ಕಾಲೇಜಿ[೩][೪]ಗೆ ಪ್ರವೇಶಿಸಿ ೨೯ ವರ್ಷಗಳ ವೃತ್ತಿ ಅನುಭವಗಳನ್ನು ಪಡೆದಿರುತ್ತಾರೆ.

ಆಸಕ್ತಿ ವಿಷಯಗಳುಸಂಪಾದಿಸಿ

  1. ಅಧ್ಯಾಪನ ಮತ್ತು ಬೋಧನೆ
  2. ಸಾಹಿತ್ಯ ಮತ್ತು ಸಂಶೋಧನೆ

ಪ್ರಕಟಿತ ಸಂಶೋಧನಾ ಕೃತಿಗಳುಸಂಪಾದಿಸಿ

ಅಂಬೇಡ್ಕರ್ ಅವರ ರಾಷ್ಟ್ರನಿರ್ಮಾಣದ ಪರಿಕಲ್ಪನೆ - ೨೦೧೦

ಸಂಪಾದಿತ ಕೃತಿಸಂಪಾದಿಸಿ

  1. ಡಾ.ಬಿ.ಆರ್. ಅಂಬೇಡ್ಕರ್ ಅವರ ಬಹುಮುಖಿ ಚಿಂತನೆ - ೨೦೧೪
  2. ಪೊಲಿಟಿಕಲ್, ಎಕಾನಾಮಿಕ್ ಅಂಡ್ ಸೋಷಿಯಲ್ ಕಾನ್‍ಸಿಕ್‍ವೆನ್ಸಿಸ್ ಆಫ್ ಲೋಕಲ್ ಬಾಡಿಸ್ ಇನ್ ಕರ್ನಾಟಕ - ೨೦೧೫

ಉಲ್ಲೇಖಗಳುಸಂಪಾದಿಸಿ

  1. http://maharajas.uni-mysore.ac.in/sites/default/files/Yeshoda.pdf
  2. http://maharajas.uni-mysore.ac.in/content/political-science
  3. http://maharajas.uni-mysore.ac.in/sites/default/files/academic_progress.pdf
  4. http://maharajas.uni-mysore.ac.in/sites/default/files/prospectus.pdf