ಹಚ್ಚೆ-ಒ೦ದು ಜನಪದ ಕಲೆ
  ಮಾನವ ಸ೦ಘಜೀವಿ. ಒಬ್ಬ೦ಟಿಯಾಗಿ ಬದುಕಲು ಮಾನವನಿಗೆ ಅಸಾಧ್ಯ. ಅದಕ್ಕೆ ಆತ ಪರಸ್ಪರ ಹೊ೦ದಿಕೊ೦ಡು ಬದುಕಲು ಪ್ರಾರ೦ಭಿಸಿದ. ಆತ ತನಗೇ ಅರಿವಿಲ್ಲದ೦ತೆ ಒ೦ದು ಸ೦ಕೀಣ೯ತೆಯನ್ನು,ಸ೦ಕೀಣ೯ತೆಯ 

ಬಲೆಯನ್ನು ತನ್ನ ಸುತ್ತ ಹೆಣೆದುಕೊ೦ಡ., ಅದು ಕ್ರಮೇಣ "ನಾಗರೀಕತೆ"ಯಾಗಿ ಬೆಳೆದು ಬಂದಿತು.

ಆ ನಾಗರಿಕತೆಗೆ ತನ್ನದೆ ಆದ ಆಚರಣೆ-ನ೦ಬಿಕೆಗಳಿದ್ದವು.,ತನ್ನದೇ ಆದ ಸಾಮಾಜಿಕ ಕಟ್ಟು-ಪಾಡುಗಳಿದ್ದವು, ತನ್ನದೇ ಆದ ವೈಶಿಷ್ಟ್ಯಗಳಿದ್ದವು.ಜಗತ್ತಿನ ಪ್ರತಿಯೊಂದು ನಾಗರಿಕತೆಯೊಂದಿಗೂ ಒಂದಲ್ಲ-ಒಂದು ಕಲೆ ಜೊತೆ-ಜೊತೆಯಾಗಿ ಬೆಳೆದು ಬಂದಿದೆ.ಆ ನಾಗರಿಕತೆಯೂ ಅಳಿದು ಎಷ್ಟೋ ಸಾವಿರ ವಷ೯ಗಳಾದರೂ ಸಹ ಆ ಕಲೆಗಳು ಮಾತ್ರ ಇಂದಿನವರೆಗೂ ಬದುಕಿವೆ. ಅಂತಹ ಕಲೆಗಳಲ್ಲಿ " ಹಚ್ಚೆ" ಪ್ರಮುಖವಾದುದು.ಕ್ರಿ. ಪೂ ೨೦೦೦ದ ಹಿಂದೆಯೇ ಈಜಿತಪ್ಟಿನಲ್ಲಿ ಈ ಕಲೆ ಬಳಕೆಯಲ್ಲಿರುವುದು ಕಂಡು ಬರುತ್ತದೆ.ಗ್ರೀಕರು,ರೋಮನ್ನರಲ್ಲಿ ಇದು ಪ್ರಚಾರವಾಗಿತ್ತೆಂಬುದನ್ನು ನಾವು ಕಾಣಬಹುದು.ಇದು "ಪಾಲಿನೇಷಿಯನ್" ಮೂಲದ ವಿಶಿಷ್ಟ ಕಲೆ.

  ಹಸಿರು ಗಿಡ ಮೂಲಿಕೆಗಳಿಂದ ತಯಾರಿಸಿದ ರಸ,ದೇಹದ ಮೇಲೆ ಹಳದಿ ಮಿಶ್ರಿತ ಹಸಿರು ರೂಪವನ್ನು ಶಾಶ್ವತವಾಗಿ ಕೊಡುವುದರಿಂದ ಅದಕ್ಕೆ ಪಚ್ಚೆ (ಹಚ್ಚೆ) ಎಂಬ ಹೆಸರು ಬಂದಿದೆ ಎಂಬುದಾಗಿ ಉಲ್ಲೇಖವಿದೆ. ಪೂವಿ೯ಕರು 

ಗರತಿತನದ, ಸೌಭಾಗ್ಯದ ಸಂಕೇತದ ಹಚ್ಚೆಯನ್ನು ಹಾಕಿಸಿಕೊಳ್ಳುತಿದ್ದರು.ಪಾಶ್ಚಾತ್ಯ ದೇಶಗಳಲ್ಲೂ ಸಹ ಹಚ್ಚೆ ಹಾಕಿಸಿಕೊಳ್ಳುವ ಪದ್ದತಿ ರೂಡಿಯಲ್ಲಿದೆ.ಕನಾ೯ಟಕದ ಅನೇಕ ಜಾತಿಗಳ ಉಪಕಸುಬು ಹಚ್ಚೆ ಹುಯ್ಯುವುದಾಗಿದೆ. ಕೆಲವರು ಭಿಕ್ಷೆಗೋಸ್ಕರ ಪ್ರವಾಸ ಹೊರಟಾಗ, ಹಚ್ಚೆ ಹಾಕುತ್ತಾ ನಿದಿ೯ಷ್ಟ ಊರುಗಳಲ್ಲಿ ಅಲೆಯುತ್ತಾರೆ.ಹಚ್ಚೆ ಹಾಕುವವರಿಗೆ ಸಮಾಜದಲ್ಲಿ ವಿಶಿಷ್ಟ ಸ್ಥಾನವಿದೆ.ಹಚ್ಚೆ ಹಾಕುವವರು, ಹಚ್ಚೆ ಹಾಕುವ ಮೂಲಕ ಹೆಣ್ಣು ಮಕ್ಕಳಿಗೆ ಮುತ್ತೈದೆತನ ತರುತ್ತಾರೆಂದು ಜನ ಸಾಮಾನ್ಯರು ತಿಳಿಯುತ್ತಾರೆ.

    ಹಚ್ಚೆ ಯ ಬಣ್ಣವು ಎರಡು ವಿಶೇಷ ಗುಣಗಳನ್ನು ಹೊಂದಿದೆ. :- ಅ) ಆ ಬಣ್ಣವು ಶಾಶ್ವತವಾಗಿ ದೇಹದ ಮೇಲೆ ಉಳಿಯುತ್ತದೆ. ಮತ್ತು ಆ) ದೇಹಕ್ಕೆ ಬರುವ ನಂಜನ್ನು ನುಂಗುವ ಶಕ್ತಿಯನ್ನು ಹೊಂದಿದೆ. 

ಹಚ್ಚೆ ಹಾಕುವವರು, ಹಾಕಿಸಿಕೊಳ್ಳುವವರ ಗಮನವನ್ನು ಬೇರೆಡೆಗೆ ಸೆಳೆಯಲು ಸುಶ್ರಾವ್ಯವಾಗಿ ಹಾಡುತ್ತಾರೆ.ಹಚ್ಚೆ ಚಿತ್ರ ಹಾಕಿಸಿಕೊ೦ಡದ್ದಕ್ಕಾಗಿ ವಿವಿಧ ರೀತಿಯ ಸ೦ಭಾವನೆ ನೀಡುತ್ತಾರೆ. ಮಲೆನಾಡಿನಲ್ಲಿ ಹಚ್ಚೆ ಹಾಕುವವರು

ಕೆಳಜಾತಿಯವರಾದರೂ ಹಚ್ಚೆ ಹಾಕುವ ಸಮಯದಲ್ಲಿ ಬ್ರಾಹ್ಮಣ ಮತ್ತು ಇತರ ಜಾತಿಯವರ ಮನೆಯ ಪಡಸಾಲೆಗೆ ಹೊಗಬಹುದು. ಇದು ಕಲೆಗೆ ಮತ್ತು ಕಲಾವಿದನಿಗಿರುವ ಅಪರಿಮಿತತೆಯನ್ನು ತೋರಿಸುತ್ತದೆ.

     ಹಚ್ಚೆ ಹಾಕಿಸಿಕೊಳ್ಳುವ ಒಲವು ಈಗ ಕಡಿಮೆಯಗುತ್ತಿದೆ. ಹಚ್ಚೆ ಹಾಕುವುದನ್ನು ಉಪಕಸುಬುನ್ನಾಗಿ ಬೆಳೆಸಿಕೊ೦ಡು ಬ೦ದ ಕಲಾವಿದರೂ ಮತ್ಯಾವುದೋ ಕಸುಬುಗಳನ್ನು ಅವಲ೦ಬಿಸ ತೊಡಗಿದ್ದಾರೆ. ಜನ 

ವಿದ್ಯಾವ೦ತರಾಗುತ್ತಾ ಹೊದ೦ತೆ ಅಥ೯ರಹಿತವಾಗಿ ಕಾಣುವ ಎಲ್ಲ ಆಚರಣೆಗಳ ಬಗ್ಗೆಯೂ ನಿರುತ್ಸಾಹ ತೋರುವುದು ಸಹಜ.ಹಚ್ಚೆ ನಮ್ಮೊಳಗೆ ನಮಗರಿವಿಲ್ಲದಂತೆ ಉಳಿದುಬಿಟ್ಟಿದೆ.....