ನನ್ನ ಪರಿಚಯ

 ನನ್ನ ಹೆಸರು ದೀಪ . ನನ್ನ ತಂದೆ ನಿತ್ಯಾನಂದ ನಾಯಕ್ , ತಾಯಿ ಸುರೇಖಾ ನಾಯಕ್ . ನಾನು ಹುಟ್ಟಿದ್ದು ಮಂಗಳೂರಿನಲ್ಲಿ . ನಾನು ನನ್ನ ಪ್ರಾರ್ಥಮಿಕ ಹಾಗೂ ಫ್ರೌಡ ಶಿಕ್ಷಣವನ್ನು ಇನ್ಫ್ಯಾಂಟ್ ಜೀಸಸ್ ಜೋಯ್ಲಂಡ್ ಶಾಲೆಯಲ್ಲಿ ಪೋರ್ಣಗೊಳಿಸಿದ್ದೇನೆ . ಹತ್ತನೇ ತರಗತಿಯಲ್ಲಿ ನಾನು ೫೩೬ ಅಂಕಗಳನ್ನು ಪಡೆದೆ . ನಂತರ ಸಹ್ಯಾದ್ರಿ ಪದವಿ ಪೂರ್ವ ಕಾಲೇಜಿನಲ್ಲಿ ಪಿಸಿಎಂಸಿ ಎಂಬ ಕಾಂಬಿನೇಶನ್ ನಲ್ಲಿ ಶಿಕ್ಷಣವನ್ನು ಪಡೆದು , ದ್ವಿತೀಯ ಪಿಯುಸಿಯಲ್ಲಿ ೫೧೦ ಅಂಕಗಳನ್ನು ಪಡೆದಿದ್ದೇನೆ . ಪ್ರಸ್ತುತವಾಗಿ ನಾನು ಸಂತ ಅಲೋಶಿಯಸ್ ಕಾಲೇಜಿನಲ್ಲಿ ಬ್ಯಾಚುಲರ್ ಆಫ್ ಸೈನ್ಸ್ ಎಂಬ ಅಭ್ಯಾಸವನ್ನು ಮಾಡುತಿದ್ದೇನೆ . 
 ನನಗೆ ಸಂಗೀತ ಮತ್ತು ನ್ರತ್ಯ ಎಂದರೆ ತುಂಬಾ ಇಷ್ಟ . ಬಾಲ್ಯದಲ್ಲಿ ಭರತನಾಟ್ಯ ನ್ರತ್ಯ ೨ ಕಲಿತಿದ್ದು ಕಾರಣಾಂತರಗಳಿಂದ ಆ ನ್ರತ್ಯವನ್ನು ಮುಂದುವರಿಸಲಾಗದಿದ್ದುದು ನನ್ನ ದುರಾದೃಷ್ಟ . ಅದರೊಂದಿಗೆ ಕರ್ನಾಟಕ ಶಾಸ್ತ್ರೀಯ ಸಂಗೀತದ ಅಭ್ಯಾಸವು ಕೂಡ ಅರ್ಧದಲ್ಲಿಯೇ ನಿಂತು ಹೋಗಿತ್ತು . ಆದರೆ ನಾನೀಗ ಪುನಃ ಆ ಸಂಗೀತ ಅಭ್ಯಾಸವನ್ನು ಶ್ರೀಮತಿ ಶೀಲಾ ದಿವಾಕರ್ ಅವರ ಬಳಿ ಕಲಿಯುತ್ತಿದ್ದೇನೆ . 
 ಪ್ರೌಢ ಶಿಕ್ಷಣ ಅಭ್ಯಾಸದ ಕಾಲದಲ್ಲಿ ಸ್ಕೌಟ್ ಅಂಡ್ ಗೈಡ್ಸ್ ನಲ್ಲಿ ರಾಜ್ಯ ಪುರಸ್ಕಾರ ಪ್ರಶಸ್ತಿಯನ್ನು ಪದೆದಿರುವೆನು .ಶಾಲೆಯ ಎಲ್ಲಾ ಚಟುವಟಿಕೆಗಳಲ್ಲಿ ಭಾಗವಹಿಸುತ್ತಿದ್ದು ಅನೇಕ ಬಹುಮಾನಗಳನ್ನು ಪಡೆದಿದ್ದೇನೆ . "ಬೆಸ್ಟ್ ಟಾಲೆಂಟೆಡ್ ಸ್ಟೂಡೆಂಟ್ " ಹಾಗು " ಬೆಸ್ಟ್ ಔಟ್ ಗೋಯಿಂಗ್ ಸ್ಟೂಡೆಂಟ್ " ಎಂಬ ಟ್ರೋಫಿಯನ್ನು ಕೂಡ ನನಗೆ ಶಾಳವತಿಯಿಂದ ಕೊಟ್ಟಿದ್ದರು .


ಈ ಸದಸ್ಯರ ಊರು ಮಂಗಳೂರು.