pu college
pes university

ನನ್ನ ಪರಿಚಯ

ಬದಲಾಯಿಸಿ

ನನ್ನ ಹೆಸರು ಸಹನ.ನಾನು ಹುಟ್ಟಿದ್ದು ಜೂನ್ ೪ ೩೦೦೩ ಹಾಸನ ಜಿಲ್ಲೆಯ ಚೆನ್ನಾರಾಯಪಟ್ಟಣ ತಾಲೂಕಿನಲ್ಲಿ.ನನ್ನ ತಂದೆಯ ಹೆಸರು ಹನುಮಂತ,ಅವರು ಸರ್ಕಾರಿ ಕೆಲಸದಲ್ಲಿದ್ದಾರೆ,ನನ್ನ ತಂದೆ ಒಬ್ಬ ಶ್ರಮಜೀವಿ ತನ್ನ ಕುಟುಂಬಕ್ಕಾಗಿ ಹಗಲು ರಾತ್ರಿ ಕೆಲಸ ಮಾಡುತ್ತಾರೆ ಅವರಿಗೆ ನಾನು ಓದಿ ದೊಡ್ಡ ವ್ಯಕ್ತಿಯಗಬೇಕು ಎಂಬ ಆಸೆ,ನಾನು ಕೂಡ ನನ್ನ ತಂದೆಯ ಆಸೆಯನ್ನು ನೆರವೇರಿಸಲು ಶ್ರಮಪಟ್ಟು ಓದುತ್ತಿದ್ದೇನೆ,ಹಾಗೂ ನನಗೆ ಬರವಸೆ ಇದೆ ನಾನು ಅವರ ಆಸೆಯನ್ನು ನರವೇರಿಸುತ್ತೇನೆ ಎಂದು ಹಾಗೂ ನನ್ನ ತಂದೆ ತಾಯಿಯನ್ನು ಸುಖವಾಗಿ ನೋಡಿಕೊಳ್ಳುತ್ತೇನೆ,ಅವರ ವಯಸ್ಸಾದ ಕಾಲದಲ್ಲಿ ಅವರ ಬೆನ್ನೆಲುಬಾಗಿ ನಿಲ್ಲುತ್ತೇನೆ. ನನ್ನ ತಾಯಿಯ ಹೆಸರು ಚಂದ್ರಕಲಾ,ಅವರು ಗೃಹಿಣಿ. ನನ್ನ ೩ನೇ ವಯಸ್ಸಿನ ವರೆಗೂ ನನ್ನ ಅಜ್ಜಿ ಮನೆಯಲ್ಲಿಯೇ ಇದ್ದೆ.ನನಗೆ ಅಜ್ಜಿ ಮನೆ ಅಂದರೆ ತುಂಬಾ ಇಷ್ಟ.ನನ್ನ ಅಜ್ಜಿ ಊರು ದೇವಿಗೆರೆ ಎಂಬ ಒಂದು ಪುಟ್ಟ ಹಳ್ಳಿ,ನನ್ನ ಬಾಲ್ಯದ ದಿನಗಳನ್ನು ಹೆಚ್ಚಾಗಿ ನನ್ನ ಅಜ್ಜಿ ಊರಿನಲ್ಲಿಯೇ ಕಳೆದಿದ್ದೇನೆ.ರಜೆ ಬಂದರೆ ಸಾಕು ಅಜ್ಜಿ ಊರಿಗೆ ಓಡಿ ಹೋಗುತ್ತಿದ್ದೆ,ನನ್ನ ಅಜ್ಜಿ ಮಾಡುತ್ತಿದ್ದ ತಿಂಡಿ ತಿನಿಸುಗಳನ್ನು ತಿನ್ನುತ್ತ ನನ್ನ ಸ್ನೇಹಿತರ ಜೊತೆ ಆಟವಾಡುತ್ತ ನನ್ನ ರಜೆ ದಿನಗಳನ್ನು ಕಳೆಯುತ್ತಿದ್ದೆ.ನನ್ನ ಅಜ್ಜಿ ನನಗೆ ಇಷ್ಟವೆಂದು ರವೆ ಉಂಡೆಯನ್ನು ತಿನ್ನಲು ಮಾಡಿಕೊಡುತ್ತಿದ್ದರು,ಶನಿವಾರ ಬಂದರೆ ಸಾಕು ಊರಲ್ಲಿ ನಡೆಯುವ ಸಂತೆಗೆ ಕರೆದು ಕೊಂಡು ಹೋಗಿ ನಾನು ಕೆಳಿದ್ದನ್ನೆಲ್ಲ ಕೊಡಿಸುತಿದ್ದರು.ನಾನು ಸ್ನೇಹಜೀವಿ,ನಾನು ಒಳ್ಳೆ ಮನಸ್ಸುಳ್ಳ ವ್ಯಕ್ತಿತ್ವವನ್ನು ಒಂದಿದ್ದೇನೆ,ಹಾಗೂ ನಾನು ಪರಿಸರಪ್ರೇಮಿ.ನನ್ನ ನಂಬಿ ಬಂದವರನ್ನು ನಾನು ಕೈ ಬಿಡುವುದಿಲ್ಲ.

ವಿದ್ಯಾಭ್ಯಾಸ

ಬದಲಾಯಿಸಿ

ವಿಧ್ಯಾ ಭ್ಯಾಸ

ಬದಲಾಯಿಸಿ

ವಿಧ್ಯಾಭ್ಯಾಸಕ್ಕೆ ಬೆಂಗಳೂರು ಎಂಬ ಹೊಸ ನಗರಕ್ಕೆ ಬಂದೆ. ನವೋದಯ ಶಾಲೆಗೆ ಸೇರಿದೆ ಅಲ್ಲಿ ೫ವರ್ಷ ಓದಿ ನಂತರ ಎಸ್ ಎಸ್ ಎಂ ಪಬ್ಲಿಕ್ ಶಲೆಯಲ್ಲಿ ಹತ್ತನೇ ತರಗತಿಯ ವರೆಗೂ ವ್ಯಾಸಂಗ ಮಾಡಿದೆ,ನಾನು ಶಾಲೆಯಲ್ಲಿ ಓದುತ್ತಿರಬೇಕಾದರೆ ನನ್ನ ಶಿಕ್ಷಕರಿಗೆ ಅಚ್ಚು ಮೆಚ್ಚಿನ ವಿದ್ಯಾರ್ಥಿ ಎಂದು ಹೆಸರು ಗಳಿಸಿದ್ದೆ,ಎಸ್ ಎಸ್ ಎಲ್ ಸಿ ಯಲ್ಲಿ 87% ತೆಗೆದು ಶಾಲೆಯನ್ನು ಮುಗಿಸಿದೆ.ಪೀ.ಯಿ.ಎಸ್ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ಯಲ್ಲಿ ಶೇಕಡಾ ೯೩% ಗಳಿಸಿದೆ.ನನಗೆ ಸಂಗೀತ ಮತ್ತು ಡಾನ್ಸ್ ಎಂದರೆ ತುಂಬಾ ಇಷ್ಟ.ಡಾನ್ಸ್ ಮಾಡುವುದು ನನ್ನ ಹವ್ಯಾಸ.ನನ್ನ ಬಿಡುವಿನ ಸಮಯದಲ್ಲಿ ಹಾಸ್ಯ ಪುಸ್ತಕಗಳನ್ನು ಓದಲು ತುಂಬಾ ಇಷ್ಟ.ನನಗೆ ಪ್ರಯಾಣ ಮಾಡುವುದೆಂದರೆ ತುಂಬಾ ಇಷ್ಟ.ನಾನು ನನ್ನ ರಾಜೇ ದಿನಗಳಲ್ಲಿ ನನ್ನ ಅಜ್ಜಿ ಊರಾದ ದೆವಿಗೆರೆ ಎಂಬ ಹಳ್ಳಿಗೆ ಹೋಗಲು ಇಷ್ಟ ಪಡುತ್ತೇನೆ.ನನಗೆ ನನ್ನ ಅಜ್ಜಿ ತಾತ ಎಂದರೆ ಪ್ರಾಣ.ಅವರಿಗೂ ಅಷ್ಟೇ ನಾನೆಂದರೆ ತುಂಬಾ ಇಷ್ಟ.ನಾನು ನನ್ನ ಎಲ್ಲ ರಜಗಳಲ್ಲು ನನ್ನ ಅಜ್ಜಿ ಊರಿಗೆ ಹೋಗಲು ಬಯಸುತ್ತೇನೆ.ನನ್ನ ರಾಜೇ ದಿನಗಳನ್ನು ಸುಮ್ಮನೆ ಮನೆಯಲ್ಲಿಯೇ ಕೂತು ಕಳೆಯಲು ನನಗೆ ಸ್ವಲ್ಪವೂ ಇಷ್ಟವಿಲ್ಲ,ಹೊಸ ಹೊಸ ಸ್ಥಳಗಳಿಗೆ ಹೋಗಿ ನನ್ನ ರಾಜೇ ದಿನಗಳನ್ನು ಕಳೆಯಲು ತುಂಬಾ ಇಷ್ಟ.ನನ್ನ ದೈನಂದಿನ ದಿನಗಳಲ್ಲಿ ಸುಸ್ತಾಗಿ ಬೇಸರವಾದಾಗ ನಾನು ಪ್ರಯಾಣ ಮಾಡಲು ಬಯಸುತ್ತೇನೆ.ಏಕೆಂದರೆ ಪ್ರಯಾಣ ಮಾಡುವಾಗ ನನಗೆ ನೆಮ್ಮದಿ ಸಿಗುತ್ತದೆ ಹಾಗೆ ನನ್ನ ಚಿಂತೆಗಳೆಲ್ಲ ದೂರವಾಗುತ್ತದೆ ಮತ್ತು ನನ್ನ ದೈನಂದಿನ ಜೀವನದಿಂದ ವಿಶ್ರಾಂತಿ ದೂರವಾಗುತ್ತದೆ.ನನಗೆ ನನ್ನ ಅಜ್ಜಿ ಊರು ಏಕೆ ಇಷ್ಟವೆಂದರೇ ಅದು ಒಂದು ಹಳ್ಳಿ ಹಾಗೂ ಅದು ಒಂದು ಸುಂದರವಾದ ಪ್ರದೇಶ.ಅಲ್ಲಿ ದಿನ ನಿತ್ಯ ಬೆಳಗಿನ ಸಮಯದಲ್ಲಿ ನವಿಲುಗಳು ಕಾಣಿಸುತ್ತವೆ ಅವು ಬಹಳ ಸುಂದರವಾಗಿ ಕುಣಿಯುವುದನ್ನು ನೋಡಲು ಚಂದ.ಸಿಹಿ ತಿನಿಸುಗಳಲ್ಲಿ ನನಗೆ ಜಿಲೇಬಿ ಎಂದರೆ ತುಂಬಾ ಇಷ್ಟ.ನನಗೆ ಹೊಸ ಹೊಸ ಚಲನಚಿತ್ರಗಳನ್ನು ನೋಡಲು ಇಷ್ಟ.ನನಗೆ ಇಷ್ಟವಾದಾಗಲೆಲ್ಲಾ ನನ್ನ ಸ್ನೇಹಿತರ ಜೊತೆಗೆ ಸಿನೆಮಾ ನೋಡಲು ಹೋಗುತ್ತೇನೆ. ನನಗೆ ಚಿತ್ರ ಬಿಡಿಸಲೂ ಕೂಡ ಆಸಕ್ತಿ ಇದೆ ಯಾವಾಗಲಾದರೂ ಒಮ್ಮೆ ಚಿತ್ರವನ್ನು ಕೂಡ ಬಿಡಿಸಲು ಇಷ್ಟ ಪಡುತ್ತೇನೆ. ನನಗೆ ಪ್ರಾಣಿಗಳೆಂದರೆ ತುಂಬಾ ಇಷ್ಟ,ಅದರಲ್ಲೂ ನಾಯಿಯನ್ನು ಸಾಕುವುದೆಂದರೆ ಇನ್ನೂ ಇಷ್ಟ.ನನಗೆ ಸ್ನೇಹಿತರು ಎಂದರೆ ತುಂಬಾ ಇಷ್ಟ.ನನ್ನ ಅಥ್ಮೀಯ ಗೆಳತಿಯ ಹೆಸರು ನಿಶಾ.ಅವಳು ನನ್ನ 10 ವರ್ಷಗಳ ಸ್ನೇಹಿತೆ.ನಾನು ನನ್ನ ಸ್ನೇಹಿತರ ಜೊತೆ ಸಮಯ ಕಳೆಯಲು ಬಯಸುತ್ತೇನೆ. ನಾನು ಪ್ರತಿನಿತ್ಯ ಒಂದು ಗಂಟೆಗಳ ಕಾಲ ಯೋಗಾಭ್ಯಾಸ ಮಾಡುತ್ತೇನೆ.ಇದು ನಾನು ನನ್ನ ಅಕ್ಕನಿಂದ ಕಲಿತ ಅಭ್ಯಾಸ.ನನಗೆ ಚಿಕ್ಕ ವಯಸ್ಸಿನಿಂದಲೂ ಮೂಗಿನ ಮೇಲೆಯೇ ಕೋಪ.ಆದರೆ ಇದರ ಪರಿಣಾಮಗಳನ್ನು ಎದುರಿಸಿದ ಬಳಿಕ ನನ್ನ ಕೋಪವನ್ನು ಕಡಿಮೆ ಮಾಡಿಕೊಂಡಿದ್ದೇನೆ.

ನನ್ನ ಗುರಿ

ಬದಲಾಯಿಸಿ

.

ಅತೀ ದೊಡ್ಡ ಆಸೆ ಏನೆಂದರೆ ನಾನು ಒಬ್ಬ ದೊಡ್ಡ ವ್ಯಕ್ತಿಯಾಗಿ ನನ್ನ ತಂದೆ ತಾಯಿಯನ್ನು ಸಂತೋಷವಾಗಿ ನೋಡಿಕೊಳ್ಳಬೇಕು ಎಂಬುದು.ನನ್ನ ತಂದೆ ತಾಯಿ ನನಗಾಗಿ ಜೀವನದಲ್ಲಿ ಎಷ್ಟೋ ತ್ಯಾಗ ಮಾಡಿದ್ದಾರೆ ಆದ್ದರಿಂದ ನಾನು ಅವರಿಗೆ ಒಂದಿಂಚು ನೋವು ಕೊಡದೆ ಆದಷ್ಟು ಅವರನ್ನು ಚೆನ್ನಾಗಿ ನೋಡಿಕೊಳ್ಳುವ ಆಸೆ ನನದು.ನನಗೆ ಅಣ್ಣ ತಂಗಿ ಯಾರು ಇಲ್ಲ ಯಾವಾಗಲೂ ಅದು ನನ್ನನ್ನು ಕಾಡುತ್ತದೆ.ನನಗೆ ಪ್ರಯಾಣ ಮಾಡುವುದೆಂದರೆ ಇಷ್ಟ ವಿರುವುದರಿಂದ ಹೊರ ದೇಶಗಳಿಗೆ ಹೋಗಲು ನನಗೆ ತುಂಬಾ ಆಸೆ.ಕ್ರೈಸ್ಟ್ ಕಾಲೇಜಿಗೆ ಸೇರಬೇಕು ಎಂಬುದು ನನ್ನ ಬಹಳ ವರ್ಷದ ಆಸೆ ಆದರೆ ಪಿಯುಸಿ ಯಲ್ಲಿ ಅದು ಸಾಧ್ಯವಾಗಲಿಲ್ಲ,ಪಿಯುಸಿಯಲ್ಲಿ 93%ಗಳಿಸಿದೆ ಕ್ರೈಸ್ಟ್ ಕಲೇಜಿನಲ್ಲಿ ಪದವಿ ಶಿಕ್ಷಣ ಪಡೆಯಲು ಅವಕಾಶ ದೊರೆಯಿತು ನನ್ನ ಬಹಳ ವರ್ಷದ ಆಸೆ ನನಸಾಯಿತು ನನಗೆ ಹೇಳಲಾರದಷ್ಟು ಸಂತೋಷವಾಯಿತು.ಇದಿಷ್ಟು ನನ್ನ ಜೀವನದ ಗುರಿ ಹಾಗೂ ನನ್ನ ಆಸೆಗಳು.

           ಧನ್ಯವಾದಗಳು