ಯಕ್ಷಗಾನ ವೇಷಧಾರಿ

ದೀಕ್ಷಾ ಎಂಬುದು ನನ್ನ ಹೆಸರು. ನನ್ನ ಅಜ್ಜಿಗೆ ನನಗೆ 'ಭಾಗ್ಯ' ಎಂದು ಹೆಸರಿಡಬೇಕು ಎಂದು ಬಹಳ ಆಸೆ ಇತ್ತು. ಆದರೆ ಕೊನೆಯಲ್ಲಿ ನನಗೆ 'ದೀಕ್ಷಾ' ಎಂದು ನಾಮಕರಣ ಮಾಡಲಾಯಿತು. ನನ್ನ ಜನ್ಮದಿನ ೨೭ ನೇ ಮಾರ್ಚ್, ೨೦೦೦. ನಾನು ಹುಟ್ಟಿ ಬೆಳೆದ ಊರು ಬೆಂಗಳೂರು. ನನ್ನ ತಂದೆಯ ಹೆಸರು ಸುಧೀಂದ್ರ ಹೊಳ್ಳ, ತಾಯಿ ಅನುಪಮ ಹೊಳ್ಳ. ನನ್ನ ತಂದೆ ಆಕ್ಸಿಸ್ ಕಮ್ಯುನಿಕೇಷನ್ಸ್ ಎಂಬ ಕಂಪನಿಯಲ್ಲಿ ಕೆಲಸ ಮಾಡುತ್ತಾರೆ. ನನ್ನ ತಂದೆ ಯಕ್ಷಗಾನ ಕಲಾವಿದರೂ ಹೌದು.‌ ನನ್ನ ಅಮ್ಮ ಸುಮಾರು ೧೫ ವರ್ಷಗಳ ಕಾಲ ಇಂಗ್ಲಿಷ್ ಶಿಕ್ಷಕಿಯಾಗಿ ಸೇವೆ ಸಲ್ಲಿಸಿದ್ದಾರೆ.

ವಿದ್ಯಾಭ್ಯಾಸ

ಬದಲಾಯಿಸಿ

ನಾನು ಶ್ರೀ ಶ್ರೀ ರವಿಶಂಕರ್ ವಿದ್ಯಾ ಮಂದಿರ್ ಶಾಲೆಯಲ್ಲಿ ೧೦ನೇ ತರಗತಿಯವರೆಗೂ ವಿದ್ಯಾಭ್ಯಾಸ ಮಾಡಿದೆ. ಪದವಿ ಪೂರ್ವ ಶಿಕ್ಷಣವನ್ನು ಮಲ್ಲೇಶ್ವರದಲ್ಲಿರುವ ವಿದ್ಯಾ ಮಂದಿರ್ ಪದವಿ ಪೂರ್ವ ಕಾಲೇಜಿನಲ್ಲಿ ಮುಗಿಸಿದೆ. ಆ ಎರಡು ವರ್ಷಗಳ ಕಾಲ ನಾನು ವಿಜ್ಞಾನ ಕ್ಷೇತ್ರದ ಕಡೆ ಆಸಕ್ತಿ ತೋರಿ ಪಿ.ಸಿ.ಎಂ.ಬಿ ವಿಷಯಗಳನ್ನು ಓದಿದರೂ, ನನಗೆ ಕಲೆಗಳ ವಿಷಯಗಳ ಮೇಲೆ ಹೆಚ್ಚು ಪ್ರೀತಿ ಇದೆ ಎಂದು ತಿಳಿಯಿತು. ಈಗ ನಾನು ಕ್ರೈಸ್ಟ್ ವಿಶ್ವವಿದ್ಯಾಲಯದಲ್ಲಿ ಜೆ.ಪೀ. ಇಂಗ್ಲಿಷ್, ಎಂದರೆ ಪತ್ರಿಕೋದ್ಯಮ, ಮನೋವಿಜ್ಞಾನ ಹಾಗೂ ಇಂಗ್ಲೀಷ್ ವಿಷಯಗಳನ್ನು ಓದುತ್ತಿದ್ದೇನೆ.


 
ಗೋಲ ಗುಮ್ಮಟ, ಬಿಜಾಪುರ

ಪ್ರವಾಸ

ಬದಲಾಯಿಸಿ

ನನ್ನ ಅಮ್ಮನ ಊರು ಮಲೆನಾಡಿನ ತೀರ್ಥಹಳ್ಳಿ ತಾಲೂಕಿನಲ್ಲಿರುವ ದುಡ್ಲೇಮನೆ ಎಂಬ ಚಿಕ್ಕ ಹಳ್ಳಿ. ಪ್ರತೀ ಬೇಸಿಗೆ ರಜದಲ್ಲಿ ಅಜ್ಜಿಯೊಡನೆ ರೈಲಿನಲ್ಲಿ ಅಲ್ಲಿಗೆ ಹೋಗುವುದು ಖಚಿತವಾದ ವಿಷಯ. ಅಲ್ಲಿನ ಸೌಂದರ್ಯವನ್ನು ವರ್ಣಿಸಲು ಒಂದು ನಾಲಿಗೆ ಸಾಲದು. ಗುಡ್ಡ ಬೆಟ್ಟಗಳ ಮಧ್ಯೆ, ಹಚ್ಚ ಹಸಿರು ಗದ್ದೆಗಳ ನಡುವೆ, ಹಳ್ಳ ಕೊಳ್ಳಗಳ ದಾಟಿ, ತೋಟಗಳಲ್ಲಿ ಸುತ್ತಾಡುವುದು ನನಗೆ ಅಚ್ಚು ಮೆಚ್ಚು. ಅಲ್ಲಿರುವ ನಾಯಿ, ಬೆಕ್ಕು, ದನ ಇತ್ಯಾದಿ ಪ್ರಾಣಿಗಳ ಒಡನಾಟದಲ್ಲಿ ಇರುವುದು ನನ್ನ ಮನಸ್ಸಿಗೆ ಶಾಂತಿ ನೀಡುತ್ತದೆ. ಅಲ್ಲಿಗೆ ಹೋದಾಗಲೆಲ್ಲ ನನಗೆ ಮರಳಿ ಬೆಂಗಳೂರಿಗೆ ಬರುವ ಮನಸ್ಸೇ ಆಗುವುದಿಲ್ಲ. ಮಲೆನಾಡಿನ ಸ್ವಚ್ಛ ವಾತಾವರಣ ಹಾಗೂ ಅಂದ ಚಂದವನ್ನು ಬಿಟ್ಟು ಬರುವುದು ಕಷ್ಟ ಸಾಧ್ಯ..!

ನಾನು ಅಕ್ಟೋಬರ್ ತಿಂಗಳಲ್ಲಿ ಸಿಕ್ಕ ರಜದಲ್ಲಿ ಉತ್ತರ ಕರ್ನಾಟಕದ ಹಲವು ಪ್ರಸಿದ್ಧ ತಾಣಗಳಿಗೆ ಭೇಟಿ ನೀಡಿದ್ದೆ. ಶಾಲೆಯಲ್ಲಿ ಇರುವಾಗ ಪಠ್ಯ ಪುಸ್ತಕಗಳಲ್ಲಿ ಈ ತಾಣಗಳ ಬಗ್ಗೆ ಓದಿದ ನೆನಪಾಯಿತು. ಹಂಪಿಯ ಕಲ್ಲಿನ ರಥ ಕಂಡಾಕ್ಷಣ ರೋಮಾಂಚನವಾಗಿ ವಿಜಯನಗರ [] ಸಾಮ್ರಾಜ್ಯದ ವೈಭವದ ಬಗ್ಗೆ ಅಚ್ಚರಿ ಉಂಟಾಯಿತು. ಬಿಜಾಪುರದಲ್ಲಿ ಗೋಲಗುಮ್ಮಟದ ವಾಸ್ತುಶಿಲ್ಪ ನೋಡಿ ಆ ಕಾಲದಲ್ಲಿ ಏನೂ ಉಪಕರಣಗಳಿಲ್ಲದೆ ಕಾರ್ಮಿಕರು ಇಷ್ಟು ಸುಂದರವಾದ ಕಟ್ಟಡಗಳನ್ನು ಹೇಗೆ ಕಟ್ಟಿದರು ಎಂದು ಆಶ್ಚರ್ಯವಾಯಿತು. ಬಾದಾಮಿ [] ಚಾಲುಕ್ಯರು ಬಂಡೆ ಇಂದ ಕೊರೆದ ಬಾದಾಮಿ ಗುಹೆಗಳನ್ನು ವೀಕ್ಷಿಸಿ ಅವರ ಪ್ರಾವೀಣ್ಯತೆಗೆ ಮಾರು ಹೋದೆ. ಪಟ್ಟದಕಲ್ಲು ಹಾಗೂ ಐಹೊಳೆ []ಕೂಡ ಉತ್ತಮ ಕಟ್ಟಡಶೈಲಿಗೆ ಉದಾಹರಣೆಯಾಗಿ ನಿಂತಿವೆ. ಕೂಡಲಸಂಗಮದಲ್ಲಿ ಬಸವಣ್ಣನವರು[] ಸಮಾಧಿಯಾದ ಸ್ಥಳ ನೋಡಿ ಜೀವನ ಸಾರ್ಥಕವಾಯಿತು ಎಂದೇ ತಿಳಿದೆ. ಅಲ್ಲಿನ ಶಾಂತಿ ಹಾಗೂ ಪಾವಿತ್ರತೆ ಮನಮುಟ್ಟುವಂತಿದೆ. ಈ ಪ್ರವಾಸ ನನಗೆ ಇತಿಹಾಸದ ಬಗ್ಗೆ ಹಲವಾರು ಹೊಸ ವಿಷಯಗಳನ್ನು ತಿಳಿಸಿ, ನನ್ನ ದೃಷ್ಟಿಕೋನವನ್ನು ಬದಲಾಯಿಸಿತು.

 
ಸೆಂಟರ್ ಫ಼ಾರ್ ಸೋಶಿಯಲ್ ಆಕ್ಷನ್ ಸಂಸ್ಥೆಯ ಲೋಗೊ
 
ಹಾರ್ಮೊನಿಕ ವಾದ್ಯ

ಹವ್ಯಾಸಗಳು ಹಾಗೂ ಇತರ ಚಟುವಟಿಕೆಗಳು

ಬದಲಾಯಿಸಿ

ನನಗೆ ಬರೆಯುವುದರಲ್ಲಿ ತುಂಬಾ ಆಸಕ್ತಿ ಇದೆ. ಕಥೆ, ಕವನ ಹಾಗೂ ಚಿಕ್ಕ ಚಿಕ್ಕ ತುಣುಕುಗಳನ್ನು ನಾನು ಸಮಯ ಸಿಕ್ಕಿದಾಗೆಲ್ಲ ಬರೆಯುತ್ತೇನೆ. ಅದಲ್ಲದೆ ಪುಸ್ತಕ ಓದುವುದು ಕೂಡ ನನ್ನ ಅಚ್ಕು ಮೆಚ್ಚಿನ ಹವ್ಯಾಸ. ನನ್ನ ಅಮ್ಮ ಇಂಗ್ಲಿಷ್ ಅಧ್ಯಾಪಕರಾಗಿದ್ದ ಕಾರಣ ನನಗೆ ಪುಸ್ತಕಗಳನ್ನು ಓದುವ ಹವ್ಯಾಸ ಬಾಲ್ಯದಿಂದಲೇ ಬೆಳೆದು ಬಂದಿದೆ. ಸಧ್ಯಕ್ಕೆ ನಾನು ಹೆಚ್ಚಾಗಿ ಇಂಗ್ಲೀಷ್ ಪುಸ್ತಕಗಳನ್ನೇ ಓದುತ್ತಿದರೂ ಕನ್ನಡ ಸಾಹಿತ್ಯದ ಬಗ್ಗೆ ನನಗೆ ಬಹಳ ಪ್ರೀತಿಯಿದೆ. ನಾನು ನಾಲ್ಕು ವರ್ಷಗಳಿಂದ ಸಾಯಿತೇಜಸ್ ಚಂದ್ರಶೇಖರ್ ಅವರ ಬಳಿ ಹಾರ್ಮೋನಿಕ (ಮೌತ್ ಆರ್ಗನ್) ವಾದನವನ್ನು ಕಲಿಯುತ್ತಿದ್ದೇನೆ. ನನ್ನ ಗುರುಗಳ ಬಳಿ ಸುಮಾರು ೭೦ ಜನ ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ.ನಮ್ಮ ತಂಡದ ಹೆಸರು ಹಂಸನಾದ. ಹಂಸನಾದಕ್ಕೆ ಭಾರತದ ಮೊದಲನೆಯ ಹಾರ್ಮೋನಿಕ ತಂಡ ಎಂದು ಹೇಳಿಕೊಳ್ಳುವ ಹೆಮ್ಮೆಯಿದೆ. ಹಂಸನಾದ ಸದಸ್ಯೆಯಾಗಿ ನಾನು ಮುಂಬೈ, ಕೋಲ್ಕತಾ ಸೇರಿದಂತೆ ಬೆಂಗಳೂರಿನ ಹಲವಾರು ಕಡೆ ವೇದಿಕೆ ಹತ್ತಿ ಕಾರ್ಯಕ್ರಮ ನೀಡಿದ್ದೇನೆ. ಹಾರ್ಮೋನಿಕ್ ಅಲ್ಲದೆ ಮೆಲೋಡಿಕ ಎಂಬ ವಾದ್ಯವನ್ನೂ ನಾನು ನುಡಿಸಬಲ್ಲೆ. ಕರ್ನಾಟಕ ಶಾಸ್ತ್ರೀಯ ಸಂಗೀತದಲ್ಲಿ ನಾನು ಮೊದಲನೆಯ ಹಂತದ ಪರೀಕ್ಷೆಯನ್ನು ಪಾರು ಮಾಡಿದ್ದರೂ, ನಾನು ಸಂಗೀತ ಕ್ಷೇತ್ರದಲ್ಲಿ ಮುಂದುವರೆಯಲಿಲ್ಲ. ನನ್ನ ಅಜ್ಜಿ ಹಾಗೂ ಅಮ್ಮ ಇಬ್ಬರೂ ಬಟ್ಟೆ ಹೊಲಿಗೆಯಲ್ಲಿ ಪರಿಣಿತರಾದ ಕಾರಣ ನಾನೂ ಅಲ್ಪ ಸ್ವಲ್ಪ ಬಟ್ಟೆ ಹೊಲಿಯುವುದನ್ನು ಕಲಿತಿದ್ದೇನೆ. ವಿದ್ಯಾ ಮಂದಿರ್ ಕಾಲೇಜಿನಲ್ಲಿ ಸತತವಾಗಿ ಎರಡು ವರ್ಷಗಳ ಕಾಲ ‘ಬೆಸ್ಟ್ ಪರ್ಸನಾಲಿಟಿ‘ ಎಂಬ ಸ್ಪರ್ಧೆಯಲ್ಲಿ ಮೊದಲನೆಯ ಸ್ಥಾನ ಪಡೆದಿದ್ದೇನೆ. ಶಾಲೆ, ಕಾಲೇಜು ಹಾಗೂ ಹಂಸನಾದದ ಹಲವಾರು ಕಾರ್ಯಕ್ರಮಗಳಲ್ಲಿ ನಿರೂಪಕಿಯಾಗಿಯೂ ವೇದಿಕೆ ಹತ್ತಿದ್ದೇನೆ.

ನಾನು ಕಾಲೇಜಿನಲ್ಲಿ ಸಿ.ಎಸ್.ಎ[] (ಸೆಂಟರ್ ಫಾರ್ ಸೋಶಿಯಲ್ ಆಕ್ಷನ್) ಸಂಸ್ಥೆಯ 'ದೃಷ್ಟಿ' ಎಂಬ ನಾಟಕ ತಂಡದಲ್ಲಿದ್ದೇನೆ. ದೃಷ್ಟಿ ತಂಡ ನಗರದ ಹಲವೆಡೆ ಹೋಗಿ ಸಾಮಾಜಿಕ ಸಮಸ್ಯೆಗಳ ಬಗ್ಗೆ ಬೀದಿ ನಾಟಕಗಳನ್ನು ಪ್ರದರ್ಶಿಸುತ್ತದೆ. ಅಲ್ಲಿನ ಮಕ್ಕಳು ಹಾಗೂ ಜನರಲ್ಲಿ ಪ್ರಮುಖ ವಿಚಾರಗಳ ಬಗ್ಗೆ ಜಾಗೃತೆ ಮೂಡಿಸಲು ತರತರಹದ ನಾಟಕಗಳನ್ನು ರಚಿಸಿ, ನಟಿಸುತ್ತೇವೆ. ಮಕ್ಕಳ ಒಡನೆ ಕಾಲ ಕಳೆಯುವುದು, ಅವರು ನಮ್ಮನ್ನು 'ಅಕ್ಕ' ಅಥವಾ 'ಅಣ್ಣ' ಎಂದು ಪ್ರೀತಿಯಿಂದ ಕರೆದು ಮಾತು ಆಡಿಸುವಾಗ ಮೂಡುವ ಭಾವನೆಗಳು ವರ್ಣಿಸಲು ಅಸಾಧ್ಯ. ನಾವು ನಟಿಸಿದ ನಾಟಕದ ಸಾರಾಂಶ ಮಕ್ಕಳಿಗೆ ಅರ್ಥವಾಯಿತು ಎಂದು ತಿಳಿದಾಗ ನಾವು ನಮ್ಮದೇ ಆದ ಚಿಕ್ಕ ದಾರಿಯಲ್ಲಿ ಸಮಾಜಕ್ಕೆ ಏನೋ ನೀಡುತ್ತಿದ್ದೇವೆ ಎನ್ನುವ ತೃಪ್ತಿಯ ಭಾವನೆ ಉಂಟಾಗುತ್ತದೆ. ದೃಷ್ಟಿ ನನ್ನನ್ನು ಸಮಾಜದ ಒಬ್ಬ ಸತ್ಪ್ರಜೆಯನ್ನಾಗಿ ಮಾಡುವುದರಲ್ಲಿ ಬಹಳ ಸಹಾಯ ಮಾಡಿದೆ.

ಪತ್ರಿಕೋದ್ಯಮ ಕ್ಷೇತ್ರದಲ್ಲಿ ಏನಾದರೂ ಸಾಧನೆ ಮಾಡಬೇಕು ಎಂಬ ಆಸಕ್ತಿ ನನ್ನಲ್ಲಿದೆ. ನನ್ನ ಕುಟುಂಬ, ಗೆಳೆಯರು ಹಾಗೂ ಶಿಕ್ಷಕರ ಆಶೀರ್ವಾದದಿಂದ ಒಬ್ಬ ಒಳ್ಳೆಯ ವ್ಯಕ್ತಿಯಾಗಿ ಬಾಳಬೇಕೆಂದು ನಾನು ಇಚ್ಛಿಸುತ್ತೇನೆ.


ಉಲ್ಲೇಖನಗಳು

ಬದಲಾಯಿಸಿ


  1. http://historyofindia-madhunimkar.blogspot.com/2009/09/vijaynagar-kingdom.html
  2. https://www.karnataka.com/badami/
  3. https://www.gounesco.com/the-cradle-of-temple-architecture-aihole-badami-pattadakal/
  4. http://salimathss.blogspot.com/2012/11/life-history-of-basavanna.html
  5. http://csa.christuniversity.in/