ನಾನು ದಾನೇಶ್ ಹುನ್ನೂರ. ನನ್ನ ತಂದಯ ಹೆಸರು ಶ್ರೀಕಾಂತ ಮತ್ತು ತಾಯಿ ಶೋಭಾ. ನಾನು ಮೂಲತಃ ಬೆಳಗಾವಿ ಜಿಲ್ಲೆಯ ಅಥಣಿ ತಾಲ್ಲೂಕಿನ ಸುಟ್ಟಟ್ಟಿ ಗ್ರಾಮದ ನಿವಾಸಿ. ಪ್ರಸ್ತುತವಾಗಿ ರಾಣಿಚನ್ನಮ್ಮ ವಿಶ್ವವಿದ್ಯ್ಶಾಲಯ ಅಥಣಿ ಬೆಳಗಾವಿ ಜಿಲ್ಲೆಯ ಒಂದು ತಾಲೂಕು ಕೇಂದ್ರ. ಭಾರತದ ಜನಗಣತಿ ಪ್ರಕಾರ ೩೯,೨೦೦ ಜನಸಂಖ್ಯೆಯನ್ನು ಹೊಂದಿರುತ್ತದೆ. ಒಟ್ಟು ಜನಸಂಖ್ಯೆಯು ಸುಮಾರು ೪೦೦,೦೦೦. ಜಿಲ್ಲಾ ಕೇಂದ್ರವಾದ ಬೆಳಗಾವಿ ನಗರದಿಂದ ಸುಮಾರು ೧೨೫ ಕಿ.ಮಿ. ದೂರವಿದ್ದು, ಐತಿಹಸಿಕ ಕೇಂದ್ರವಾದ ವಿಜಯಪುರದಿಂದ ಸುಮಾರು ೭೫ ಕಿ.ಮಿ. ದೂರವಿದೆ. ಮಹಾರಾಷ್ಟ್ರ ಗಡಿಗೆ ಅಂಟಿಕೊಂಡಿರುವ ಅಥಣಿಯು ಬೆಳಗಾವಿ ಜಿಲ್ಲೆಯ ಅತ್ಯಂತ ವಿಶಾಲವಾದ ತಾಲೂಕು ಆಗಿದ್ದು ೧೯೯೫.೫ ಚ.ಕಿ.ಮಿ. ವಿಸ್ತೀರ್ಣ ಹೊಂದಿದೆ. ಇಲ್ಲಿನ ಪ್ರಮುಖ ಕಸುಬು ವ್ಯವಸಾಯವಾಗಿದ್ದು, ಭೂಮಿಯ ಬಹುತೇಕಪಾಲು ಕೃಷಿಗೆ ಬಳಕೆಯಾಗುತ್ತದೆ. ಕಬ್ಬು ಇಲ್ಲಿನ ಪ್ರಮುಖ ಬೆಳೆಯಾಗಿದೆ. ಸುಮಾರು ೪ ಸಕ್ಕರೆ ಕಾರ್ಖಾನೆಗಳಿವೆ. ಕೃಷ್ಣಾ ನದಿಯು ತಾಲೂಕಿನುದ್ದಕ್ಕೂ ಹರಿದು ಹೋಗುವುದರಿಂದ ರೈತರಿಗೆ ಅನುಕೂಲಕರವಾಗಿದೆ. ಅಥಣಿಯು ಸುಮಾರು ೮೯ ಗ್ರಾಮಗಳನ್ನೊಳಗೊಂಡಿದೆ. ಇದಲ್ಲದೆ ಅಥಣಿಯು ಶೈಕ್ಷಣಿಕವಾಗಿಯೂ ಪ್ರಗತಿ ಹೊಂದಿದ್ದು ೩೦೦ರಕ್ಕೂ ಹೆಚ್ಚು ಪ್ರಾಥಮಿಕ ಶಾಲೆಗಳಿದ್ದು, ಸುಮಾರು ೧೫ಕ್ಕೂ ಹೆಚ್ಚು ಮಹಾವಿದ್ಯಾಲಯಗಳನ್ನು ಹೊಂದಿದೆ. ಸುಮಾರು ೬೮% ಜನರು ಶಿಕ್ಷಣವಂತರಿದ್ದಾರೆ. ಗಡಿಯ ಮಹರಾಷ್ಟ್ರದ ನಗರಗಳಾದ ಮಿರಜ, ಸಾಂಗಲಿ, ಜತ್ತ ಹಾಗೂ ರಾಜ್ಯದ ಪ್ರಮುಖ ಮತ್ತು ವಾಣಿಜ್ಯ ನಗರಗಳಿಗೆ ರಸ್ತೆಯ ಸಂಪರ್ಕವನ್ನು ಹೊಂದಿರುತ್ತದೆ.

ರಾಣಿಚನ್ನಮ್ಮ ವಿಶ್ವವಿದ್ಯ್ಶಾಲಯ್

ಬದಲಾಯಿಸಿ

ಸಕ್ಕರೆ ಕಾರ್ಖಾನೆ

ಬದಲಾಯಿಸಿ