ಸದಸ್ಯ:DAMINI.N REDDY/ನನ್ನ ಪ್ರಯೋಗಪುಟ

ಇಂಡಿಯನ್ ಆಯಿಲ್

ಇಂಡಿಯನ್ ಆಯಿಲ್ ಕಂಪನಿ ಲಿಮಿಟೆಡ್ ಆಗಿ ೧೯೫೯ ರಲ್ಲಿ ಇಂಡಿಯಲ್ ಆಯಿಲ್ ತನ್ನ ಕಾರ್ಯಾಚರಣೆಯನ್ನು ಪ್ರಾರಂಭಿಸಿತು. ಇಂಡಿಯ ರಿಫೈನರೀಸ್ ಲಿಮಿಟೆಡ್‌ನೊಡನೆ ವಿಲೀನದೊಂದಿಗೆ ೧೯೬೪ ರಲ್ಲಿ ಇಂಡಿಯನ್ ಆಯಿಲ್ ಕಾರ್ಪೊರೇಶನ್ ರೂಪಿತವಾಯಿತು.

Indian Oil Regional Office
LPG Tanker

ಇಂಡಿಯನ್ ಆಯಿಲ್ ಕಾರ್ಪೊರೇಷನ್ , ಅಥವಾ ಇಂಡಿಯನ್ ಆಯಿಲ್ , ಎನ್ನುವುದು ಭಾರತದ ಸರ್ಕಾರಿ-ಮಾಲೀಕತ್ವದ ತೈಲ ಮತ್ತು ಅನಿಲ ಕಂಪನಿಯಾಗಿದೆ. ಇದು ಭಾರತದ ಅತೀ ದೊಡ್ಡ ವಾಣಿಜ್ಯಿಕ ಸಂಸ್ಥೆಯಾಗಿದ್ದು, ೨೦೦೯ ರ ಫಾರ್ಚ್ಯೂನ್ ಗ್ಲೋಬಲ್ ೫೦೦ ಪಟ್ಟಿಯಲ್ಲಿ ೧೦೫ ನೇ ಶ್ರೇಣಿಯನ್ನು ಪಡೆದುಕೊಂಡಿದೆ. ಇಂಡಿಯನ್ ಆಯಿಲ್ ಮತ್ತು ಅದರ ಅಂಗಸಂಸ್ಥೆಗಳು ಪೆಟ್ರೋಲಿಯಂ ಮಾರುಕಟ್ಟೆಯಲ್ಲಿ ೪೭% ರಷ್ಟು, ಸಂಸ್ಕರಣೆ ಸಾಮರ್ಥ್ಯದಲ್ಲಿ ೪೦% ರಷ್ಟು ಮತ್ತು ಭಾರತದಲ್ಲಿನ ಪೈಪ್‌ಲೈನ್‌ಗಳ ಪ್ರಮುಖ ವಿಭಾಗದಲ್ಲಿ ೬೭% ಪಾಲನ್ನು ಹೊಂದಿವೆ. ಇಂಡಿಯಲ್ ಆಯಿಲ್ ಕಂಪನಿಗಳ ಸಮೂಹವು ಭಾರತದಲ್ಲಿ ೧೯ ತೈಲ ಸಂಸ್ಥರಣಾಗಾರಗಳಲ್ಲಿ ೧೦ರ ಮಾಲೀಕತ್ವ ಮತ್ತು ಕಾರ್ಯನಿರ್ವಹಣೆಯನ್ನು ಹೊಂದಿದ್ದು, ಪ್ರತಿ ವರ್ಷ ೬೦.೨ ಮಿಲಿಯನ್ ಮೆಟ್ರಿಕ್ ಟನ್‌ನಷ್ಟು ಸಂಯೋಜಿತ ಸಂಸ್ಕರಣಾ ಸಾಮರ್ಥ್ಯವನ್ನು ಹೊಂದಿದೆ. ರಾಷ್ಟ್ರದಲ್ಲಿ ಇಂಡಿಯನ್ ಆಯಿಲ್ ೧೭೬೦೬ ರಷ್ಟು ಸಂಖ್ಯೆಯಲ್ಲಿ ಅತಿದೊಡ್ಡ ಮತ್ತು ವ್ಯಾಪಕವಾದ ಇಂಧನ ಕೇಂದ್ರಗಳ ಸರಣಿಯನ್ನು ಹೊಂದಿದೆ (೧೫೫೫೭ ಸಾಮಾನ್ಯ ಆರ್ಓಗಳು ಮತ್ತು ೨೦೪೯ ಕಿಸಾನ್ ಸೇವಾ ಕೇಂದ್ರಗಳು). ಇದು ಆಟೋ ಎಲ್‌ಪಿಜಿ ವಿತರಣಾ ಕೇಂದ್ರಗಳನ್ನು (ಎಎಲ್‌ಡಿಎಸ್) ಸಹ ಪ್ರಾರಂಭಿಸಿದೆ. ಇದು ತನ್ನ ೪೯೦೦ ಭಾರತೀಯ ಹಂಚಿಕೆದಾರರ ನೆಟ್‌ವರ್ಕ್ ಮುಖಾಂತರ ೪೭.೫ ಮಿಲಿಯನ್‌ಗೂ ಹೆಚ್ಚು ಮನೆಗಳಿಗೆ ಇಂಡೇನ್ ಅಡುಗೆ ಅನಿಲವನ್ನು ಪೂರೈಸುತ್ತದೆ. ಇದಕ್ಕೆ ಹೆಚ್ಚಿನದಾಗಿ, ಫರಿದಾಬಾದ್ ನಲ್ಲಿರುವ ಭಾರತೀಯ ಆಯಿಲ್‌ನ ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರ (ಆರ್ & ಡಿ) ವು ಕಾರ್ಪೊರೇಶನ್‌ನ ಕಾರ್ಯನಿರ್ವಹಣೆ ವಿಭಾಗಗಳಿಗೆ ಮತ್ತು ದೇಶದ ಮತ್ತು ವಿದೇಶದ ತನ್ನ ಗ್ರಾಹಕರಿಗೆ ಅಗತ್ಯವಾದ ತಂತ್ರಜ್ಞಾನ ಪರಿಹಾರಗಳನ್ನು ಬೆಂಬಲಿಸುತ್ತದೆ, ಅಭಿವೃದ್ಧಿಪಡಿಸುತ್ತದೆ ಮತ್ತು ಒದಗಿಸುತ್ತದೆ. ತರುವಾಯು, ಇಂಡಿಯನ್ ಆಯಿಲ್ ಟೆಕ್ನಾಲಜೀಸ್ ಲಿಮಿಟೆಡ್ - ಪೂರ್ಣ ಸ್ವಾಮ್ಯದ ಅಂಗಸಂಸ್ಥೆಯನ್ನು 2003 ರಲ್ಲಿ ಇಂಡಿಯನ್ ಆಯಿಲ್‌ನ ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರದಲ್ಲಿ ಅಭಿವೃದ್ಧಿಪಡಿಸಿದ ತಂತ್ರಜ್ಞಾನಗಳನ್ನು ಮಾರುಕಟ್ಟೆ ಮಾಡುವ ಗುರಿಯೊಂದಿಗೆ ಸ್ಥಾಪಿಸಲಾಯಿತು. ಇದನ್ನು ರಾಯಲ್ ಡಚ್ ಶೆಲ್ ಮತ್ತು ಬ್ರಿಟಿಷ್ ಪೆಟ್ರೋಲಿಯಂನ ಆರ್ & ಡಿ ವಿಭಾಗಗಳಿಂದ ಆದರ್ಶಪ್ರಾಯವಾಗಿ ಪಡೆಯಲಾಗಿದೆ.

  • ೩೩೦೦೦ ಕ್ಕಿಂತ ಹೆಚ್ಚು ಉದ್ಯೋಗಿಗಳು
  • ೪೭೮೦೦ ಕ್ಕೂ ಹೆಚ್ಚು ಗ್ರಾಹಕರ ಟಚ್-ಪಾಯಿಂಟ್‌ಗಳು
  • ೧೩೪೦೦ ಕಿ.ಮೀ ಕ್ರಾಸ್ ಕಂಟ್ರಿ ಪೈಪ್‌ಲೈನ್‌ಗಳ ಜಾಲವನ್ನು ನಿರ್ವಹಿಸುತ್ತದೆ
  • ೬೦೦ ಕ್ಕೂ ಹೆಚ್ಚು ಪೇಟೆಂಟ್‌ಗಳ ದಾಸ್ತಾನು
  • ಒಟ್ಟು ಆದಾಯ 6,19,957.12 ಕೋಟಿ ರೂ. ಎಫ್ವೈ ೧೯ ರಲ್ಲಿ.
  • ಇಂಡಿಯಲ್ ಆಯಿಲ್ ಕಾರ್ಪೊರೇಶನ್ ಎರಡು ಪ್ರಮುಖ ದೇಶೀಯ ಪ್ರತಿಸ್ಪರ್ಧಿಗಳನ್ನು ಹೊಂದಿದ್ದು, ಅವುಗಳೆಂದರೆ, ಭಾರತ್ ಪೆಟ್ರೋಲಿಯಂ ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ. ಎರಡೂ ಸಹ ಇಂಡಿಯನ್ ಆಯಿಲ್ ಕಾರ್ಪೊರೇಶನ್‌ನಂತೆಯೇ ಸರ್ಕಾರಿ-ಸ್ವಾಮ್ಯದ ಸಂಸ್ಥೆಗಳಾಗಿವೆ. ಎರಡು ಖಾಸಗಿ ಪ್ರತಿಸ್ಪರ್ಧಿಗಳಿದ್ದು, ಅವು ಯಾವುವೆಂದರೆ ರಿಲಯನ್ಸ್ ಪೆಟ್ರೋಲಿಯಂ ಮತ್ತು ಎಸ್ಸಾರ್ ಆಯಿಲ್.
  • ಮಾರ್ಕೆಟಿಂಗ್ ವ್ಯವಸ್ಥಾಪಕರಾಗಿದ್ದು ಮತ್ತು ಪ್ರತಿಷ್ಠಿತ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್, ಲಖ್ನೋದಿಂದ ಎಂಬಿಎ ಪಡೆದ ಮಂಜುನಾಥ್ ಷಣ್ಮುಗಂ ಅವರನ್ನು ಉತ್ತರ ಪ್ರದೇಶ ರಾಜ್ಯದಲ್ಲಿ ಭ್ರಷ್ಟ ಪೆಟ್ರೋಲ್ ಸ್ಟೇಶನ್ ಅನ್ನು ಮುಚ್ಚಲು ಪ್ರಯತ್ನಿಸಿದಾಗ 2005 ರಲ್ಲಿ ಕೊಲೆ ಮಾಡಲಾಯಿತು ಮತ್ತು ಆಗ ತನ್ನ ಮಾರುಕಟ್ಟೆ ವ್ಯವಹಾರಗಳಲ್ಲಿ ಇಂಡಿಯನ್ ಆಯಿಲ್ ಕಾರ್ಪೊರೇಶನ್ ಕಳವಳವನ್ನು ಹೊಂದಿತು.
  • ಇಂಡಿಯಲ್ ಆಯಿಲ್‌ನ ಉತ್ಪನ್ನ ಶ್ರೇಣಿಗಳು ಪೆಟ್ರೋಲ್, ಡೀಸೆಲ್, ಎಲ್‌ಪಿಜಿ, ಆಟೋ ಎಲ್‌ಪಿಜಿ, ವಿಮಾನದ ಟರ್ಬೈನ್ ಇಂಧನ, ಲೂಬ್ರಿಕೆಂಟ್‌ಗಳು, ನಾಫ್ತಾ, ಬಿಟುಮೆನ್, ಪ್ಯಾರಾಫಿನ್, ಕೆರೋಸಿನ್ ಮುಂತಾದವು. ಎಕ್ಸ್‌ಟ್ರಾ ಪ್ರೀಮಿಯಂ ಪೆಟ್ರೋಲ್, ಎಕ್ಸ್‌ಟ್ರಾ ಮೈಲ್ ಡೀಸೆಲ್, ಸರ್ವೋ ಲೂಬ್ರಿಕೆಂಟ್‌ಗಳು, ಇಂಡೇನ್ ಎಲ್‌ಪಿಜಿ, ಆಟೋಗ್ಯಾಸ್ ಎಲ್‌ಪಿಜಿ, ಇಂಡಿಯನ್ ಆಯಿಲ್ ಏವಿಯೇಶನ್‌ಗಳು ಪ್ರಮುಖ ಬ್ರಾಂಡ್‌ಗಳಲ್ಲಿ ಕೆಲವು ಆಗಿವೆ.
  • ಇತ್ತೀಚೆಗೆ ಇಂಡಿಯನ್ ಆಯಿಲ್ ಕ್ರಯೋಜೆನಿಕ್ ಸಾಗಾಣಿಕೆಯ ಮೂಲಕ ಎಲ್ಎನ್‌ಜಿ (ಲಿಕ್ವಿಫೈಡ್ ನ್ಯಾಚುರಲ್ ಗ್ಯಾಸ್) ಪೂರೈಸುವ ಹೊಸ ವ್ಯಾಪಾರ ಸ್ವರೂಪವನ್ನು ಪರಿಚಿಯಿಸಿದೆ. ಇದನ್ನು "ಮನೆಬಾಗಿಲಲ್ಲಿ ಎಲ್‌ಎನ್‌ಜಿ" ಎಂದು ಕರೆಯಲಾಗುತ್ತದೆ. ಎಲ್‌ಎನ್‌ಜಿಯ ಪ್ರಧಾನ ಕಚೇರಿಯು ದೆಹಲಿಯ ಲೋಧಿ ರಸ್ತೆಯಲ್ಲಿರುವ ಸ್ಕೋಪ್ ಕಾಂಪ್ಲೆಕ್ಸ್‌ನಲ್ಲಿದೆ.ಇಂಡಿಯನ್ ಆಯಿಲ್‌ನ ಉತ್ಪನವಾದ LPGಯನ್ನು ಪ್ರಧಾನಮಂತ್ರಿ ನರೇಂದ್ರಮೋದಿಯವರ ಗ್ರಾಮಿಣ ಪ್ರದೇಶದ ಕುಟುಂಬದ ಸದಸ್ಯರಿಗೆ ಉಚಿತವಾಗಿ ೨೦೧೭ರಲ್ಲಿ ಕೂಡಲು ಆರಂಭಿಸಿದಾರೆ ಇದರಿಂದ ಅರಣ್ಯನಾಶ ಮತ್ತು ವಾಯುಮಾಲಿನ್ಯ ತಡೆಗಟ್ಟಲಾಗಿದೆ.