ಟಿ.ಬಾಲಸರಸ್ವತಿ ಭಾರತೀಯ ನೃತ್ಯ ಕಲೆಯಲ್ಲಿ ಪ್ರಖ್ಯಾತ ಹೆಸರು. ಭರತನಾಟ್ಯ ಕಲೆಯನ್ನು ಭಾರತ ಮತ್ತು ವಿಶ್ವದ ವಿವಿದೆಡೆಗಳಲ್ಲಿ ಪ್ರಖ್ಯಾತಗೊಳಿಸುವಲ್ಲಿ ಬಾಲಸರಸ್ವತಿಯವರ ಕೊಡುಗೆ ಮಹತ್ವದ್ದು.

ಆರಂಭಿಕ ಜೀವನ ಹಾಗು ಇವರ ವ್ಯಕ್ತಿತ್ವ

ಬದಲಾಯಿಸಿ

ಇವರು ಭರತನಾಟ್ಯದಲ್ಲಿ ಪ್ರಖ್ಯಾತ ನೃತ್ಯಕಾರರು. ಇವರು ೧೩ ಮೇ ೧೯೧೮ ಇಸವಿಯಲ್ಲಿ, ತಂಜಾವೂರಿನಲ್ಲಿ ಜನಿಸಿದರು. ಇವರು ದೇವದಾಸಿ ಜನಾಂಗದಲ್ಲಿ ಜನಿಸಿದರು. ಇವರ ಕುಟುಂಬದವರೆಲ್ಲಾ ದೇವಾಲಯಗಳಲ್ಲಿ ಸಂಗೀತಕಾರರಾಗಿ ಮತ್ತು ನೃತ್ಯಕಾರರಾಗಿ ಸೇವೆ ಸಲ್ಲಿಸುತ್ತಿದ್ದರು. ಇವರು ಚಿಕ್ಕಂದಿನಿಂದಲೇ ಕುಟುಂಬದ ಸಹಾಯದಿಂದ ಸಂಗೀತವನ್ನು ಕಲಿತರು.ತಾಯಿ, ಜಯಮಾಲ ಗಾಯಕರಾಗಿದ್ದು ಬಾಲಸರಸ್ವತಿ ತರಬೇತಿಗೆ ಉತ್ತೇಜನ ನೀಡಿದರು ಮತ್ತು ಇವರ ಜೊತೆಗಾರರಾಗಿದ್ದರು. ಇವರು ೪ನೇ ವಯಸ್ಸಿನಲ್ಲಿ ನೃತ್ಯ ಕಲಿಯಲು ಆರಂಭಿಸಿದರು. ಇವರ ಮೊದಲನೆಯ ಗುರು ಕಂಢಪ್ಪಪಿಳೈ. ಇವರು ೭ನೇ ವಯಸ್ಸಿನಲ್ಲಿ ಕಾಂಚಿಪುರಂನಲ್ಲಿರುವ ದೇವಸ್ಥಾನದಲ್ಲಿ ರ ರಂಗಪ್ರವೇಶ ನೀಡಿದರು. ಇವರ ಕಿರಿಯ ಸಹೋದರರು ಟಿ. ರಂಗನಾಥನ್ ಮತ್ತು ಟಿ.ವಿಶ್ವನಾಥನ್ ಅವರು ಸಂಗೀತಗಾರರು ಭಾರತ ಮತ್ತು ಸಂಯುಕ್ತ ರಾಷ್ಟ್ರದಲ್ಲಿ ಪ್ರಮುಖ ಪ್ರದರ್ಶಕರು ಮತ್ತು ಶಿಕ್ಷಕರು ಆಗಿದ್ದರು. ಇವರ ಕಲೆ ಭಕ್ತಿ ಪ್ರಧಾನವಾಗಿತ್ತು.ಇವರ ಶೃಂಗಾರ ಅಭಿನಯ ಬಹಳ ಪ್ರತ್ಯೇಕವಾಗಿತ್ತು. ಇವರು ತುಂಬಾ ಶಿಸ್ತಿನಿಂದ ಕಲೆಯನ್ನು ಅಭ್ಯಾಸ ಮಾಡುತ್ತಿದ್ದರು. ಚಿಕ್ಕ ವಯಸ್ಸಿನಲ್ಲಿ ಇವರಿಗೆ ಎಷ್ಟೇ ಕಷ್ಟ ಬಂದರು ತಮ್ಮ ಜೀವನವನ್ನು ನಾಟ್ಯಕ್ಕೆ ಮೀಸಲಾಗಿಟ್ಟಿದ್ದರಿಂದ ಜಗತ್ತಿನಾದ್ಯಂತ ಹೆಸರುವಾಸಿಯಾಗಿದ್ದರು.ಬಾಲಸರಸ್ವತಿ ವೇದಿಕೆ ಮೇಲೆ ಹೋಗಿದ್ದ ತಕ್ಷಣ ವಿದ್ಯುತ್ ಸಂಚಾರವಾದಂತೆ ಇವರ ನೃತ್ಯವನ್ನು ನೋಡಿದರೆ ರೋಮಾಂಚನವಾಗುತ್ತಿತು . ಅವರು ಪ್ರೇಕ್ಷಕರನ್ನು ಯಾವಾಗಲೂ ಗೌರವಿಸುತ್ತಿದ್ದರು. ಅವರು "ನಿಮ್ಮ ಕಾಯಕವನ್ನು ನೀವು ಮಾಡಿ, ಫಲಾಫಲಗಳ ಅಪೇಕ್ಷೆಯನ್ನು ಬಿಡಿ" ಎಂಬ ಜ್ಞಾನದ ಮಾತನ್ನು ಹೇಳುತ್ತಿದ್ದರು. ಅವರಿಗೆ ಎಲ್ಲಾದಕ್ಕಿಂತ ತಮ್ಮ ಕಲೆಯ ಮೇಲೆ ಒಲವು ಹೆಚ್ಚಾಗಿತ್ತು. ಅವರು ನಿಜವಾದ ಸಾಧಕಿಯಾಗಿದ್ದರು. ಮೇ ೧೩ ಅವರ ಜನಿಸಿದ ದಿನ, ಆ ದಿನದಂದು ಭರತನಾಟ್ಯದ ಮೇಲೆ ಒಲವಿರುವವರೆಲ್ಲಾ ಅವರನ್ನು ನೆನಸುತ್ತಾರೆ.

ಬಿರುದು ಮತ್ತೆ ಪ್ರಶಸ್ತಿ

ಬದಲಾಯಿಸಿ

.ಇವರಿಗೆ "ಅಭಿನಯ ರಾಣಿ" ಎಂಬ ಬಿರುದು ದೊರೆತ್ತಿದೆ.ಮ್ಯುಸಿಕ್ ಅಕಾಡೆಮಿ ಮಡ್ರಾಸನಿಂದ 'ಸಂಗೀತ ಕಲಾನಿಧಿ'ಎಂಬ ಬಿರುದನ್ನು ಪಡೆದ ಏಕೈಕ ನೃತ್ಯ ಕಲಾವಿದೆ. ಅವರಿಗೆ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ದೊರಕಿದೆ. ಅವರಿಗೆ ಪದ್ಮವಿಭುಷಣ ಪ್ರಶಸ್ತಿಯೂ ದೊರಕಿದೆ.

ವೃತಿಜೀವನ

ಬದಲಾಯಿಸಿ

ನೃತ್ಯದಲ್ಲಿ ಆಕೆಯ ಕೊಡುಗೆ ಬಹಳ ಮುಖ್ಯವಾಗಿ ನೋಡಲಾಗಿದೆ. ದೇವದಾಸಿ ಜನಾಂಗಕ್ಕೆ ಮೀಸಲಾಗಿದ್ದ ನೃತ್ಯವನ್ನು ಎಲ್ಲಾ ಜನಾಂಗದವರು ಅದನ್ನು ಗೌರವದಿಂದ ಕಾಣುವಂತೆ ಮಾಡಿದರು ಮತ್ತು ಈ ಕಲೆಯನ್ನು ಎಷ್ಟೊಂದು ದೇಶದಲ್ಲಿ ತಿಳಿಯುವಂತೆ ಮಾಡಿದರು. ನಂತರ ಅವರದೇಆದ ಶಾಲೆಯನ್ನು ನಿರ್ಮಿಸಿ ಅಲ್ಲಿ ಓದಲು ಬಂದ ಮಕ್ಕಳಿಗೆ ನೃತ್ಯದ ಶಿಕ್ಷಣವನ್ನು ನೀಡುತ್ತಿದ್ದರು. ಇವರು ಬೇರೆ ಬೇರೆ ದೇಶಕ್ಕೆಲ್ಲಾ ಹೋಗಿ ಶಿಕ್ಷಣವನ್ನು ನೀಡಿದರು. ಹೀಗೆ ಇವರ ಇಡೀ ಕುಟುಂಬ ನಮ್ಮ ಆಧುನಿಕ ಕಲೆಯನ್ನು ಮುಂದೆ ತಂದರು. ಈಕೆ ನಮ್ಮ ಭಾರತದ ಆಧುನಿಕ ಕಲೆಯನ್ನು ಇಡೀ ಜಗತ್ತಿಗೆ ಹಬ್ಬಿಸಲು ಕಾರಣವಾದ ೧೦೦ನಲ್ಲಿ ಒಬ್ಬ ಮುಖ್ಯ ವ್ಯಕ್ತಿ ಎಂದು ಒಂದು ಪತ್ರಿಕೆಯಲ್ಲಿ ಬರೆದಿದ್ದಾರೆ . ಈಕೆಯನ್ನು ಎಲ್ಲಾ ನೃತ್ಯ ಕಲಾವಿದರು ಗೌರವಿಸುತ್ತಾರೆ ಮತ್ತು ನೆನೆಸುತ್ತಾರೆ. ಇವರು ತಮ್ಮ ಜೀವನವನ್ನೇ ಮುಡುಪಾಗಿ ಇಟ್ಟಿದ್ದಕ್ಕು ಸಾರ್ಥಕವಾಯಿತು. ಈಕೆಯನ್ನು ನಮ್ಮ ಭಾರತಕ್ಕೆ ಒಂದು ಮಹಾ ಕೊಡುಗೆ ಎಂದು ಕಾಣಬಹುದು. ಇವರು ಫೆಬ್ರವರಿ ೯ ೧೯೮೪ ರಂದು ಮರಣ ಹೊಂದಿದರು. ಇವರ ಮೊಮ್ಮಗ ಇವರ ಜೀವನದ ಮೇಲೆ ಒಂದು ಸಣ್ಣ ಕಥೆಯನ್ನು ತೆಗೆದಿದ್ದಾರೆ. ಇವರ ಜೀವನ ಚಿತ್ರವನ್ನು ನೋಡಿ ಬಹಳ ಕಲಾವಿದರು ಇವರಲ್ಲಿ ಇರುವ ಕಲೆಯ ದೃಷ್ಟಿಯನ್ನು ಬದಲಾಯಿಸಿಕೊಂಡಿದ್ದಾರೆ . ಇವರು ಮಾಡುವ ನೃತ್ಯದಲ್ಲಿ ನೃತ್ಯಕ್ಕಿಂತ ಅಭಿನಯವೇ ಹೆಚ್ಚು ಕಾಣಿಬರುತ್ತದೆ. ಇದರಿಂದ ಇವರು ಮಾಡುತ್ತಿದ್ದ ನೃತ್ಯ ಪ್ರದರ್ಶನ ಪ್ರೇಕ್ಷಕರನ್ನು ಬಹಳ ಬೇಗ ಮುಟ್ಟುತ್ತಿತ್ತ್ತು . ಹಾಗಾಗಿ ಇವರ ಕಲೆಯನ್ನು ನೋಡಲು ಬಹಳ ಕಡೆಯಿಂದ ಜನರು ನೋಡಲು ಬರುತ್ತಿದ್ದರು. ಬಾಲಸರಸ್ವತಿ ಮತ್ತು ಅವರ ಹಾಗೆ ಕಲೆಯನ್ನು ಎತ್ತಿ ಹಿಡಿದಿದ್ದು ರುಕ್ಮಿಣಿಮಿನಿದೇವಿ ಅರುಂದಾಲೆ. ಇವರಿಬ್ಬರೂ ಇಡೀ ಜಗತ್ತಿನಲ್ಲಿ ಹೆಸರುವಾಸಿಯಾಗಿದ್ದರು . ಎಷ್ಟೋಂದು ಕಲಾವಿದರು ಇವರನ್ನು ಪೂಜಿಸುತ್ತಾರೆ .


--ಉಲ್ಲೆಖಗಳು-- [] [] [] [] [] []

  1. [[೧]]
  2. ರುಕ್ಮಿಣಿಮಿನಿದೇವಿ ಅರುಂದಾಲೆ.
  3. [[೨]]
  4. [[೩]]
  5. [[೪]]
  6. ದೇವದಾಸಿ