ಸಿ ಮರಿಜೋಸೆಫ್

ಬದಲಾಯಿಸಿ
  • ವೃತ್ತಿಯಲ್ಲಿ ವೈಮಾನಿಕ ಇಂಜಿನಿಯರು, ಪ್ರವೃತ್ತಿ: ಕನ್ನಡ ಸಾಹಿತ್ಯದ ವಿದ್ಯಾರ್ಥಿ.
  • ಎಚ್‌ಎಎಲ್‌ ಕಾರ್ಖಾನೆಯಲ್ಲಿ ಕನ್ನಡ ಗ್ರಂಥಾಲಯ ಹುಟ್ಟುಹಾಕಿದ್ದೆ ಮತ್ತು ಕನ್ನಡದ ಮೇಷ್ಟ್ರು ಆಗಿದ್ದೆ.
  • ಇಂಗ್ಲಿಷಿನಿಂದ ಕನ್ನಡಕ್ಕೆ ಮತ್ತು ಕನ್ನಡದಿಂದ ಇಂಗ್ಲಿಷಿಗೆ ಅನುವಾದ ಮಾಡ್ತೀನಿ.
  • ಕನ್ನಡದ ಪತ್ರಿಕೆಗಳಲ್ಲಿ ಆಗಾಗ್ಗೆ ಲೇಖನ ಬರೀತೀನಿ.
  • ಕ್ರೈಸ್ತರ ಕನ್ನಡವಾರ್ತೆ ಮಾಸಪತ್ರಿಕೆ, ಅನ್ಯೋನ್ಯ, ದೈವೇಚ್ಛೆ, ಫಾದರ್‌ ಅಂತಪ್ಪ ಅಭಿನಂದನ, ಮತ್ತಿತರ ಸ್ಮರಣ ಸಂಚಿಕೆಗಳ ಸಂಪಾದಕನಾಗಿದ್ದೆ.
  • ಪ್ರಕಟಿತ ಪುಸ್ತಕಗಳು: ಎಸ್ತೆರ್‌ (ನಾಟಕ ಸಂಪಾದನೆ), ಲಡಾಖಿನಿಂದ ಮುನ್ನಾರಿಗೆ (ಪ್ರವಾಸಕಥನ), ರಬೀಂದ್ರ ಗೀತಾಂಜಲಿ (ಪದ್ಯಾನುವಾದ), ಇಂಚರ (ಕ್ರೈಸ್ತಭಕ್ತಿಗೀತೆಗಳ ಸಂಗ್ರಹ),  ಫರ್ಡಿನೆಂಡ್‌ ಕಿಟೆಲ್‌, ಕ್ರಿಸ್ತಾಚರಣೆ, ಪೂಜಾಪಂಚಾಂಗ
  • ೧೮೬೧ರ ಶಾರ್ಬೊನೊ ಸ್ವಾಮಿಗಳ ಲತೀನ್-ಕನ್ನಡ ನಿಘಂಟು ಮರುಮುದ್ರಣ.
  • ೧೮೫೫ರ ಬೊತೆಲೊ ಸ್ವಾಮಿಗಳ ಕನ್ನಡ-ಲತೀನ್ ನಿಘಂಟು ಮರುಮುದ್ರಣ.
  • ಕನ್ನಡ ಕ್ರಿಸ್ತುವರ ಸಂಸ್ಕೃತಿ ಮತ್ತು ಇತಿಹಾಸಾಧ್ಯಯನ ನನ್ನ ಹವ್ಯಾಸ.
  • ನಾನೊಬ್ಬ ನಿರಂತರ ಪ್ರವಾಸಿ.