ಸದಸ್ಯ:Christon.noronha/sandbox
ವಾಣಿಜ್ಯ ಬ್ಯಾಂಕುಗಳು
ಬದಲಾಯಿಸಿವಾಣಿಜ್ಯ ಬ್ಯಾಂಕುಗಳು ಹಣಕಾಸಿನ ಸಂಸ್ಥೆಗಳಾ , ವ್ಯಾಪಾರ ಮತ್ತು ಇನ್ನಿತರ ಉದ್ಧೇಶಕ್ಕೈ ಸಾಲ ಕೊಡುವ ಮತ್ತು ಠೇವುಗಳನ್ನು ಸ್ವೀಕರಿಸುವ ಸಂಸ್ಥೆಗಳಾಗಿವೆ.ಬ್ಯಾಂಕೋ ಎಂದರೆ ಹಿಂದಿನ ಕಾಲದ ಸಾಹುಕಾರರ ಉಪಯೋಗಿಸುತ್ತಿದ್ದ ಬೆಂಚು ಅಥವಾ ಬಾಕು ಎಂದಾರ್ಥವಾಗುತ್ತದೆ.ವ್ಯಾಪಾರಸ್ಥರು ತಮ್ಮಲ್ಲಿ ಅಧಿಕ ಇದ್ದ ಹಣವನ್ನು ಸುರಕ್ಶತೆಗಾಗಿ ಅಕ್ಕಸಾಲಿಗರಿಗೆ ಒಪ್ಪಿಸುತ್ತಿದ್ದರು. ಅಕ್ಕಸಾಲಿಗರು ಠೇವಣಿ ಇಟ್ಟ ವ್ಯಾಪಾರಸ್ತರಿಗೆ ಅವರಿಟ್ಟ ಠೇವಣಿಯ ಮೌಲ್ಯದಷ್ತು ರಾಶಿದಿಯನ್ನು ಕೊಡುತ್ತಿದ್ದರು. ರಶೀದಿಗಳಿಗೆ ಅಕ್ಕಸಾಲಿಗರ ಪಾವತಿ ಚೀಟಿ'ಗಳೆಂದು ಕರೆಯುತ್ತಿದ್ದರು. ಈ ಪಾವತಿ ಚೀಟಿಯನ್ನು ಹೊಂದಿದವರಿಗ ಠೇವಣಿಯ ಹಣ ವಾಪಾಸ ಪಡೆಯಲು ಹಕ್ಕು ಇರುತಿತ್ತು. ಮಾರುಕಟ್ಟೆಯಲ್ಲಿ ಬೆಂಚು ಹಾಕಿಕೊಂಡು ಅದರ ಮೇಲೆ ಕುಳಿತು ಸಾಹುಕಾರರು ಹಣದ ಲೇವಾ ದೇವಿ ವ್ಯವಹಾರವನ್ನು ಮಾಡುತ್ತಿದ್ದರು. ಇಂಗ್ಲೆಂಡಿನಲ್ಲಿ ಅಕ್ಕಸಾಲಿಗರು ಕೈಗೊಂಡ ಹಣದ ಲೇವಾದೇವಿ ವ್ಯಾವಹಾರಗಳಲ್ಲಿ ಇಂದಿನ ಬ್ಯಾಂಕ್ ವ್ಯವಹಾರ ಪದ್ಧತಿಯ ಉಗಮವನ್ನು ಕಾಣಬಹುದು.ಈ ಪ್ರಕಾರ ಹಣದ ಲೇವಾದೇವಿ ವ್ಯವಹಾರ ಮಾಡುವಾಗ ಅವರಿಗೆ ಹೊಸ ಅನುಭವದ ಅರಿವಾಯಿತು. ಎಲ್ಲಾ ಠೇವಣಿದಾರರು ಒಂದೇ ವೇಳೆಗೆ ತಾವಿಟ್ಟ ಠೇವಣಿಯ ಹಣವನ್ನು ವಾಪಾಸಕೇಳಲು ಬರುವುದಿಲ್ಲವೆಂಬ ವಿಶ್ವಾಸ ಅವರಗಾಯಿತು. ಅದರಿಂದಅವರ ಠೇವಣಿಯ ಹಣವನ್ನು ತಮ ಬಳಿ ಸೋಮಾರಿಯಾಗಿಡುವುದಕ್ಕೆ ಬದಲು ಅಗತ್ಯವಿದ್ದವರಿಗೆ ಸಾಲ ಕೊಟ್ಟು ಬಡ್ಡಿಯನ್ನು ಸಂಪಾದಿಸಲು ಪ್ರಾರಂಭಿಸಿದರು. ಈ ರೀತಿ ಕೇವಲ ಭದ್ರತೆಗಾಗಿ ಇಟ್ಟ ಠೇವಣಿಯ ರೂಪದಲ್ಲಿನ ಹಣವು ಸಾಲ ಕೊಡುವ ವ್ಯವಹಾರಕ್ಕಾಗಿ ಬಳಸಲ್ಪಡುವ ಸಾಧನವಾಯಿತು.ಕ್ರಮೇಣ ಸ್ವತಂತ್ರ ಬ್ಯಾಂಕಿಗ್ ಸಂಸ್ಥೆಗಳು ವಾಣಿಜ್ಯ ವ್ಯವಹಾರಗಳಿ ಸಾಲ ನೀಡಲು ಅಸ್ತಿತ್ವದಲ್ಲಿ ಬಂದವು.