ನನ್ನ ಹೆಸರು ಕ್ರಿಸ್ಟನ್ ನೊರೊನ್ಹ. ನಾನು ಹುಟ್ಟಿದ್ದು ೨೨ ಆಗೋಸ್ತು ೧೯೯೭, ಕರಾವಾರದ ಕುಮ್ಟಾ ಎಂಬ ಗ್ರಾಮದಲ್ಲಿ. ನನ್ನ ತಂದೆ ಜೋಸೆಫ್‌ ನೊರೊನ್ಹ ಹಾಗೂ ತಾಯಿ ಸವಿತಾ ನೊರೊನ್ಹ. ನನ್ನ ಅಣ್ಣನ ಹೆಸರು ಸುಜೊಯ್ ನೊರೊನ್ಹ ಹಾಗೂ ತಂಗಿ ಸಿಯೋನ ನೊರೊನ್ಹ. ನಾನು ಕುಮ್ಟಾದ ನಿರ್ಮಲಾ ಕಾನ್ವೆಂಟ್ ಶಾಲೆಯಲ್ಲಿ 10ನೇ ತರಗತಿ ಮುಗಿಸಿ ಮಂಗಳೂರಿನ ಸಂತ ಅಲೋಶಿಯಸ್ ಪದವಿ ಪೂರ್ವ ಕಾಲೇಜಿನಲ್ಲಿ ಪದವಿ ಪೂರ್ವ ಕಲಿಕೆ ಮುಗಿಸಿದೆ. ಈಗ ನಾನು ಸಂತ ಅಲೋಶಿಯಸ್ ಕಾಲೇಜಿನಲ್ಲಿ ಬಿ.ಕಾಂ. ಪದವಿ ವ್ಯಾಸಂಗ ಮಾಡುತ್ತಿದ್ದೇನೆ. ನನಗೆ ಹಾಡುವುದೆಂದರೆ ಪಂಚ ಪ್ರಾಣ. ಎಲ್ಲಾರೊಂದಿಗೆ ಸಂತೋಷದಿಂದ ಇರುತ್ತೇನೆ. ಉತ್ತಮವಾಗಿ ಕಲಿತು ವೊಳ್ಳೆಯ ವ್ಯವಹಾರವನ್ನು ಪ್ರಾರಂಭಿಸುವ ಗುರಿ ನನ್ನದಾಗಿದೆ.ಇದಿಷ್ಟು ನನ್ನ ಕಿರು-ಪರಿಚಯ.