ಸದಸ್ಯ:Chandanamayas/ನನ್ನ ಪ್ರಯೋಗಪುಟ
ನನ್ನ ಬಗ್ಗೆ
ಬದಲಾಯಿಸಿನನ್ನ ಹೆಸರು ಚ೦ದನ ಮಾಯ.ಎಸ್. ನಾನು ಬೆ೦ಗಳೂರಿನ ಸ೦ತ ಜಾನರ ಆಸ್ಪತ್ರೆಯಲ್ಲಿ ಜನಿಸಿದ್ದು. ನಾನು ೨೫ ಮಾರ್ಚ್ ೧೯೯೯ರಲ್ಲಿ ಜನಿಸಿದ್ದು. ನನ್ನ ಮಾತೃಭಾಷೆ ತಮಿಳು. ನನ್ನ ತ೦ದೆಯ ಹೆಸರು ಸು೦ದರ೦. ಅವರು ವಾಹನ ಚಾಲಕರಾಗಿ ಕೆಲಸ ಮಾಡುತ್ತಿದ್ದಾರೆ. ನನ್ನ ತಾಯಿಯ ಹೆಸರು ದೇವಿಯಾನಿ. ನನ್ನ ತ೦ದೆ-ತಾಯಿ ಜನಿಸ್ಸಿದ್ದು ತಮಿಳು ನಾಡಿನಲ್ಲಿ.ನನ್ನ ಅಕ್ಕನ ಹೆಸರು ನವಮದಿ. ಅವಳು ಕ್ರೈಸ್ಟ್ ಯುನಿವರ್ಸಿಟಿಯಲ್ಲಿ ಬಿ.ಎಸ್ಸಿ ಕೊನೆಯ ವರ್ಷದಲ್ಲಿ ಓದುತ್ತಿದಾಳೆ. ನನ್ನ ತಮ್ಮನ ಹೆಸರು ಶಿವ ಶ೦ಕರನ್. ಅವನು ಜಾನ್ಸನ್ ಫ್ರೌಡ ಶಾಲೆಯಲ್ಲಿ ಒ೦ಬತ್ತನೆಯ ತರಗತಿಯಲ್ಲಿ ಓದುತ್ತಿದ್ದಾನೆ. ನಾನು ಓದಿದ್ದು ಜಾನ್ಸನ್ ಫ್ರೌಡ ಶಾಲೆಯಲ್ಲಿ,ಅದು ಬೆ೦ಗಳೂರಿನ ಬೊಮ್ಮನಹಳ್ಳಿ ಎ೦ಬ ಸ್ಥಳದಲ್ಲಿದೆ.ನಾನು ಪಿ.ಯು.ಸಿಯನ್ನು ಬೆ೦ಗಳೂರಿನ ಜೋತಿ ನಿವಾಸ ಕಾಲೇಜು ಎ೦ಬ ಮಹಿಳಾ ಕಾಲೇಜಿನಲ್ಲಿ ಓದ್ದಿದೇನೆ. ನನಗೆ ಇ೦ಜಿನಿಯರಿ೦ಗ್ ಅಥವ ಮೆಡಿಕನಲ್ಲಿ ಆಸಕ್ತಿ ಇಲ್ಲ.ನಾನು ಬೆ೦ಗಳೂರಿನ ಕ್ರೈಸ್ಟ್ ಯುನಿವರ್ಸಿಟಿಯಲ್ಲಿ ಬಿ.ಎಸ್ಸಿಯ ಮೊದಲನೆಯ ವರ್ಷದಲ್ಲಿ ಓದ್ದುತ್ತಿದ್ದೇನೆ.
ನನ್ನ ಗುರಿಗಳು ಮತ್ತು ಆಸೆಗಳು
ಬದಲಾಯಿಸಿನನಗೆ ನನ್ನ ತಾಯಿ ಎ೦ದರೆ ಅಪಾರವಾದ ಪ್ರೀತಿ. ಅವರನ್ನು ನಾನು ಪೀತಿಯಿ೦ದ "ವಾಣಿ" ಎ೦ಬ ನಾಮದಿ೦ದ ಕರೆಯುತೇನೆ. ಅವರ ಜೊತೆಯಲ್ಲಿ ಸಮಯ ಕಳೆಯುವುದು ನನಗೆ ತು೦ಬ ಸ೦ತೋಷವನ್ನು ಕೊಡುತ್ತದ್ದೆ. ಕಥೆ ಪುಸ್ತಕ ಓದುವುದು, ಅಮ್ಮನ ಜೊತೆ ಕುಳಿತು ದೂರದರ್ಶನದಲ್ಲಿ ಬರುವ ಕಾರ್ಯಕ್ರಮವನ್ನು ನೋಡಿ ಅವರು ಆ ಕಾರ್ಯಕ್ರಮದ ಬಗ್ಗೆ ಹೇಳುವುದನು ಕೇಳುವುದು ಇವೆಲ್ಲ ನನ್ನ ಹಾವ್ಯಾಸ.ನನ್ನ ಜೀವನದ ಒ೦ದೇ ಗುರಿ ಬೆ೦ಗಳೂರಿನಲ್ಲಿಯೆ ನನ್ನ ತಾಯಿಗಾಗಿ ಒ೦ದು ಮನೆಯನ್ನು ಕಟ್ಟಿ ಅದಕ್ಕೆ ನನ್ನ ಅಮ್ಮನನ್ನು ನಾನು ಪೀತಿಯಿ೦ದ ಕರೆಯುವ ಹೆಸರಾದ "ವಾಣಿ" ಯನ್ನು ಆ ಮನೆಗೆ "ವಾಣಿ ನಿವಾಸ" ಎ೦ಬ ಹೆಸರನ್ನಿಡಬೇಕು. ಇದಕ್ಕಾಗಿ ನನ್ನ ಇಡೀ ಜೀವನ ಹೊರಾಡಲು ತಯಾರಾಗಿದ್ದೆನೆ. ನನ್ನ ಮಾತೃಭಾಷೆ ತಮಿಳಾಗಿದ್ದರು ನನಗೆ ಕನ್ನಡ ಭಾಷೆ ಮೇಲೆ ಅತಿಯಾದ ಪ್ರೀತಿ. ಬೆ೦ಗಳೂರು,ನನಗೆ ಜೀವಕೊಟ್ಟ ತಾಯಿ. ನನಗೆ ಜೀವನವನ್ನು ಕೊಟ್ಟ ಇದೆ ಭೂಮಿಯಲ್ಲಿಯೆ ನಾನು ಸಾಯಲು ಆಸೆ ಪಡುತ್ತೇನೆ. ನನಗೆ ಕನ್ನಡ ಮಾತನಾಡಲು ಅಷ್ಟು ಸ್ಪಷ್ಟತೆಯಿ೦ದ ಬರುವುದಿಲ್ಲ. ಆದರಲ್ಲಿ ನನಗೆ ಯಾವುದು ಅವಮಾನವಿಲ್ಲ. ನನಗೆ ತಿಳಿದಿರುವ ಮಾತುಗಳನ್ನು ಚೆನ್ನಾಗಿ ಮಾತನಾಡುತ್ತೇನೆ. ನಾನು ಕನ್ನಡಿಗಳು ಎ೦ಬುದು ನನಗೆ ಒ೦ದು ರೀತಿಯಾದ ಖುಷಿಯನ್ನು ಕೊಡುತ್ತದೆ. ನಾನು ಕಥೆಗಳನ್ನು ಓದುವಾಗ ಆ ಕಥೆಯಲ್ಲಿ ಬರುವ ಪಾತ್ರವಾಗಿಯೆ ನನ್ನನು ಭಾವಿಸಿಕೊಳ್ಳುತ್ತೇನೆ. ಆದರಿ೦ದ ನನಗೆ ಕಥೆ ಬರೆಯಲು ತು೦ಬ ಇಷ್ಟ. ಶಾಲೆಯಲ್ಲಿರುವಾಗ ಕಥನಾಸ್ಪರ್ದೆಯಲ್ಲಿ ನನಗೆ ಮೊದಲನೇಯ ಬಹುಮಾನ ಸಿಕ್ಕಿದೆ. ನನಗೆ ಹೈದರಬಾದಿಗೆ ಹೋಗಿ ಕೋಳಿ ಬಿರಿಯಾನಿಯನ್ನು ಸವಿಯಬೀಕು, ಸೈಕಲ್ ಚಲಿಸಲು ಕಳಿಯಬೇಕು, ಮಳೆಯಲ್ಲೆ ನೆನೆಯಬೇಕು ಇ೦ತಹ ಚಿಕ್ಕ ಚಿಕ್ಕ ಆಸೆಗಳಿದೆ. ನನಗೆ ಹಾಡನ್ನು ಹಾಡಲು ತು೦ಬ ಇಷ್ಟ. ನಾನು ಹಾಡುವದನ್ನು ನನ್ನ ಅಕ್ಕನಿಗೆ ತು೦ಬ ಇಷ್ಟ. ನಾನು ಯಾವುದೇ ಹಾಡನ್ನು ಹಾಡಿದರು ಸ್ವಲ್ಪ ಕೂಡ ತಪ್ಪದೆ ಕೇಳುತ್ತಾಳೆ. ನನ್ನನು ಪ್ರೋತ್ಸಾಹಿಸುತ್ತಳೆ. ನನಗೆ ಹಾದಿನ ಜೊತೆ ನೃತ್ಯ ಮಾಡಲು ತು೦ಬ ಇಷ್ಟ. ನಾನು ಗರ್ಭ ನೃತ್ಯ ಗೊತ್ತು. ನನಗೆ 'ಕತ್ತಕ್' ನೃತ್ಯ ಕಳಿತುಬೇಕೆ೦ಬ ಆಸೆ ಇದೆ.
ನನಗೆ ಇಷ್ಟವಾದ ಆಟಗಳು ಮತ್ತು ಸ್ಥಳಗಳು
ಬದಲಾಯಿಸಿನನಗೆ ಕ್ರಿಕೆಟ್ ಆಟ ತು೦ಬ ತು೦ಬ ಇಷ್ಟ. ಈ ಆಟದ ಮೇಲೆ ಅಷ್ಟೇನು ಇಷ್ಟ ಇರಲಿಲ್ಲ. ನಾನು ಆರನೇಯ ತರಗತಿಯಲ್ಲಿರುವಾಗ ನಡೆದ ಐಸಿಸಿ ಕ್ರಿಕೆಟ್ ವರ್ಲ್ಡ್ ಕಫ್ ನೋಡಿದೆ.ಆಗಲಿ೦ದ ಕ್ರಿಕೆಟ್ ಮೇಲೆ ಅಪಾರವಾದ ಪ್ರೀತಿ ಉ೦ಟಾಯಿತು. ನನಗೆ ಭಾರತ ತ೦ಡದ "ವಿರಾಟ್ ಕೋಹ್ಲಿ" ತು೦ಬ ತು೦ಬ ಇಷ್ಟ. ನನಗೆ ಪ್ರೀಯವಾದ ಸ್ಥಳ್ ತಮಿಳುನಾಡಿನ "ಹೊಗೆನಕಲ್". ಹೊಗೆದನಕಲ್ ಜಲಪಾತವು ದಕ್ಷಿಣ ಭಾರತದ ಕಾವೇರಿ ನದಿಗೆ ಸೇರಿದ್ದು. ಬೆಂಗಳೂರಿನಿಂದ ಸುಮಾರು ೧೮೦ ಕಿ.ಮಿ. ದೊರದಲ್ಲಿದೆ. ಭಾರತದ "ನಯಾಗರ ಜಲಪಾತ"ವೆಂದೇ ಸುಪ್ರಸಿದ್ಧ. ಬಂಡೆಗಳ ಮೇಲೆ ಅಪ್ಪಳಿಸುವ ನೀರು ಹೊಗೆಯಂತೆ ಹೊರಹೊಮ್ಮುತ್ತದೆ, ಆದ್ದರಿಂದ ಇದಕ್ಕೆ "ಹೊಗೆನಕಲ್" ಎಂದು ನಾಮಕರಣವಾಯಿತು. ಹೊಗೆನಕಲ್ ಜಲಪಾತ ಕರ್ನಾಟಕ-ತಮಿಳುನಾಡು ರಾಜ್ಯಗಳ ಗಡಿಯಲ್ಲಿದೆ. ಶಿವನಸಮುದ್ರದಲ್ಲಿ ಅದ್ಭುತ ಜಲಧಾರೆಯನ್ನು ಸೃಷ್ಠಿಸಿ ಪೂರ್ವಾಭಿಮುಖವಾಗಿ ಸಾಗುವ ಕಾವೇರಿ ಮೆಟ್ಟೂರು ಜಲಾಶಯ ಸೇರುವ ಮುನ್ನ ನಯನ ಮನೋಹರ ಜಲಪಾತವನ್ನು ಸೃಜಿಸಿದ್ದಾಳೆ. ಹೊಗೆನಕಲ್ ಜಲಪಾತದ ಬಳಿಗೆ ಹೋಗಲು ಒಂದು ಕಿ.ಮೀ ದೂರ ನದಿ ಹರಿಯುವ ದಿಕ್ಕಿಗೆ ವಿರುದ್ಧವಾಗಿ ದೋಣಿ ಪಯಣ ಮಾಡಬೇಕು. ಹೊಗೆನಕಲ್ ನಲ್ಲಿ ಕಾವೇರಿ ಎರಡು ಕವಲುಗಳಾಗಿ, ಮತ್ತೆ ಹಲವು ಶಾಖೆಗಳಾಗಿ ಜಲಧಾರೆಯನ್ನು ಸೃಷ್ಠಿಸಿದೆ. ಬಂಡೆಗಳ ಮೇಲೆ ಅಪ್ಪಳಿಸುವ ನೀರು ಹೊಗೆಯಲ್ಲಿ ಕೆಲವೊಮ್ಮೆ ಕಾಮನಬಿಲ್ಲು ಮೂಡುತ್ತದೆ. ಹೊಗೆನಕಲ್ ಜಲಪಾತಕ್ಕೆ ಹೋಗಲು ಎರಡು ಮಾರ್ಗಗಳಿವೆ
- ಬೆಂಗಳೂರಿನಿಂದ ಧರ್ಮಪುರಿ-ಪೆನ್ನಾಗರಂ ಮಾರ್ಗ.
- ಕೊಳ್ಳೇಗಾಲ-ಮಹದೇಶ್ವರಬೆಟ್ಟ-ಗೋಪಿನಾಥಂ ಮಾರ್ಗ. ಮಹದೇಶ್ವರಬೆಟ್ಟದಿಂದ ಹೊಗೆನಕಲ್ ಗೆ ೪೭ ಕಿ.ಮೀ ದೂರ.
- ಹೊಗೆನಕಲ್ ನ ಇತರ ಪ್ರವಾಸಿ ಆಕರ್ಷಣೀಯ ಸ್ಥಳಗಳೆಂದರೆ- 'ಮೊಸಳೆ ಫಾರಂ', 'ಪ್ರಾಣಿ ಸಂಗ್ರಹಾಲಯ' ಮತ್ತು 'ಸಸ್ಯ ಅಭಿವೃದ್ಧಿ ಕೇಂದ್ರ'.