ಸದಸ್ಯ:Chandan Vasu/ನನ್ನ ಪ್ರಯೋಗಪುಟ

ಸಮಾಜಶಾಸ್ತ್ರ ಬದಲಾಯಿಸಿ

 
ಕಾರ್ಲ್ ಮಾರ್ಕ್ಸ್

ಸಾಮಾಜಿಕ ಗುಂಪುಗಳ ಅಧ್ಯಯನವೇ ಸಮಾಜಶಾಸ್ತ್ರ. ಗುಂಪುಗಳೆಂದರೆ ಜನರ ಸಮೂಹ. ಈ ಜನರು ಪರಸ್ಪರರೊಡನೆ ಕ್ರಿಯೆ-ಪ್ರತಿಕ್ರಿಯೆಗಳಲ್ಲಿ ತೊಡತುವರು. ಈ ಕ್ರಿಯೆ-ಪ್ರತಿಕ್ರಿಯೆಗಳ ಸಂಕೀರ್ಣಸ್ವರೂಪವೇ ಅಂತಃಕ್ರಿಯೆ. ಅತ್ಯಂತ ಸರಳವಾಗಿ ಹೇಳಬೇಕೆಂದರೆ, ಸಮಾಜಶಾಸ್ತ್ರವು ಜನರನ್ನು ಅಧ್ಯಯನ ಮಾಡುವ ಒಂದು ಅಧ್ಯಯನ. ಜನರು ನಿರ್ದಿಷ್ಟ ರೀತಿಯಲ್ಲಿ ಏಕೆ ನಡೆದುಕೊಳ್ಳುತ್ತಾರೆಂದು ತಿಳಿಯಲು ಸಮಾಜಶಾಸ್ತ್ರಜ್ಞರು ಬಯಸುತ್ತಾರೆ. ಅಲ್ಲದೇ, ಅವರು ಗುಂಪುಗಳನ್ನು ಏಕೆ ಸೇರುತ್ತಾರೆ, ರೂಪಿಸುತ್ತಾರೆ, ಯಾವ ಕಾರಣಕ್ಕಾಗಿ ಶಾಂತಿಪ್ರಿಯರಾಗಿರುತ್ತಾರೆ ಅಥವಾ ಯುದ್ಧಗಳನ್ನು ಮಾಡುತ್ತಾರೆ, ಏಕೆ ದೇವರ ಆರಾಧನೆ ಮಾಡುವರು, ವಿವಾಹವಾಗುವರು ಅಥವಾ ಮತದಾನ ಮಾಡುವರು, ಕ್ರೀಡೆಗಳೇಕೆ ರಾಷ್ತ್ರೀಯತೆಯನ್ನು[೧] ಉತ್ತೇಜಿಸುತ್ತದೆ, ತಮ್ಮ ಸಹವಾಸಿಗಳನ್ನೇಕೆ “ನಮ್ಮವರು-ತಮ್ಮವರು” ಎಂದು ವರ್ಗೀಕರಿಸುತ್ತಾರೆಂಬುದನ್ನು ತಿಳಿಯಲು ಉತ್ಸಾಹ ತೋರುತ್ತಾರೆ. ಜನರು ಪರಸ್ಪರ ಅಂತಃಕ್ರಿಯೆಯಲ್ಲಿ ತೊಡಗಿದಾಗ ಏನೆಲ್ಲ ಆಗುತ್ತದೆಂಬುದನ್ನು ಅರಿಯಲು ಬಯಸುತ್ತಾರೆ. ಸಮಾಜಶಾಸ್ತ್ರವು ಸಾಮಾಜಿಕ ಸಂಬಂಧಗಳ, ಸಂಸ್ಥೆಗಳ ಮತ್ತು ಸಮುದಾಯದ ವೈಜ್ಞಾನಿಕ ಅಧ್ಯಯನ ಎನ್ನಬಹುದು.


ಇದೊಂದು ಸಂಕೀರ್ಣ ಆಧ್ಯಯನ ಶಾಸ್ತ್ರವಾಗಿದ್ದು, ಅದನ್ನು ಸಾಧಿಸಲು ವೈಜ್ಞಾನಿಕ[೨] ವಿಧಾನ ಅನುಸರಿಸಬೇಕಾಗಿರುವುದು ಅನಿವಾರ್ಯ. ಆದರೆ, ಸುಸ್ಪಷ್ಟ ಪರಿಕಲ್ಪನೆಗಳು ಮತ್ತು ನಿರ್ದಿಷ್ಟವಾಗಿ ವ್ಯಾಖ್ಯೆ ಮಾಡಲ್ಪಟ್ಟ ತಾಂತ್ರಿಕ ಶಬ್ದಗಳ ಪ್ರಯೋಗ ಅನಿವಾರ್ಯ. ವಾಸ್ತವದಲ್ಲಿ, ಗುಂಪು ಎಂಬ ಪದವೇ ಸಮಾಜಶಾಸ್ತ್ರದ ಪರಿಕಲ್ಪನೆಯಾಗಿರುವುದು. ಸಾಮಾನ್ಯ ಭಾಷೆಯಲ್ಲಿಯೂ ಗುಂಪು ಎಂಬ ಪದ ಬಳಕೆಯಲ್ಲಿದ್ದರೂ ಕೂಡ, ಸಮಾಜಶಾಸ್ತ್ರದಲ್ಲಿ ಆ ಪದದ ಬಳಕೆ ವಿಶಿಷ್ಟ ಸ್ವರೂಪದ್ದಾಗಿದ್ದು, ಅದನ್ನು ಮುಂದೆ ವಿವರಿಸಲಾಗುತ್ತದೆ.

 
ಜಿ.ಎಸ್. ಘುರ್ಯೆ


ಸಾಮಾಜಿಕ ಗುಂಪುಗಳ ಅಧ್ಯಯನದ ಮಹತ್ತ್ವವನ್ನು ಅತಿಯಾಗಿ ಒತ್ತಿ ಹೇಳಬೇಕಾದ ಅವಶ್ಯಕತೆಯೇನಿಲ್ಲ. ಮಾನವರ ಜೀವನವೆಲ್ಲವೂ ಗುಂಪಿನಲ್ಲಿಯೇ ಕಾಣಬರುವುದು. ನಾವೆಲ್ಲರೂ ಕುಟುಂಬದಲ್ಲಿ ಹುಟ್ಟುತ್ತೇವೆ ಹಾಗು ನಂತರದ ಜೀವನವೂ ಒಂದಲ್ಲ ಒಂದು ಗುಂಪಿನೊಡನೆ ಸಂಬಂಧಿತವಾಗಿರುತ್ತದೆ. ವಿವಿಧ ಬಗೆಯ ಗುಂಪುಗಳ ಸದಸ್ಯರಾಗಿ ನಾವು ನಿರಂತರ ಕಾರ್ಯನಿರ್ವಹಿಸುತ್ತೇವೆ. ಎಲ್ಲ ಬಗೆಯ ಸಾಮಾಜಿಕ ಸಮಸ್ಯೆಗಳು – ಬಾಲಾಪರಾಧ, ಜನಾಂಗೀಯ ಭೇದ, ವಸತಿ ಸಮಸ್ಯೆ, ಶಿಕ್ಷಣದ ಕೊರತೆ ಇತ್ಯಾದಿಗಳು ಗುಂಪಿನ ಅಸಮರ್ಪಕ ಜೀವನ ವಿಧಾನ ಹಾಗು ಅಂತಃಕ್ರಿಯೆಗೆ ಸಂಬಂಧಿಸಿದೆ.  ಸಾಮಾಜಿಕ ನೀತಿಗಳ ರೂಪಿಸುವಿಕೆಯು ಸಾಮಾಜಿಕ ಗುಂಪುಗಳ ಬಗೆಗಿನ ಜ್ಞಾನವನ್ನು ಅವಲಂಬಿಸಿದೆ. ಆದರೆ, ಅನೇಕ ಸಂದರ್ಭಗಳಲ್ಲಿ ಈ ನಿರ್ಣಯಗಳನ್ನು ಅಸ್ಪಷ್ಟ ಜ್ಞಾನ, ಅಸಮರ್ಪಕ ಮಾಹಿತಿ ಹಾಗು ಪೂರ್ವಾಗ್ರಹಗಳಿಂದ ಕೂಡ ತೆಗೆದುಕೊಳ್ಳಬಹುದು. ಸಾಮಾಜಿಕ ಸಮಸ್ಯೆಗಳ[೩] ಬಗೆಹರಿಸುವಿಕೆಗೆ ಉತ್ತಮ ಸಮಾಧಾನಗಳನ್ನು ಕಂಡುಕೊಳ್ಳಲು, ಪರಿಶೀಲಿಸಲ್ಪಟ್ಟ ಜ್ಞಾನದ ಅವಶ್ಯಕತೆ ಇರುವುದು.

 
ಹರ್ಬರ್ಟ್ ಸ್ಪೆನ್ಸರ್


ಸಮಾಜಶಾಸ್ತ್ರವು ಕೆಲವು ಅತ್ಯಮೂಲ್ಯವಾದ ಜೀವನ ಕೌಶಲ್ಯಗಳನ್ನು ಪಡೆಯಲು ಸಹಾಯ ಮಾಡುತ್ತದೆ. ಸಮಾಜಶಾಸ್ತ್ರೀಯ ಸಿದ್ಧಾಂತದ ಅಧ್ಯಯನವು ನಿರ್ಣಾಯಕ ಚಿಂತನಾಕ್ರಮವನ್ನು ಬೆಳೆಸುತ್ತದೆ. ಸಾಮಾಜಿಕ ಪ್ರಪಂಚವನ್ನು ವಿಭಿನ್ನ ದೃಷ್ಟಿಕೋಣಗಳಿಂದ ನೋಡುವ ಸಾಮರ್ಥ್ಯವನ್ನು ಸಿದ್ಧಾಂತಗಳು ಒದಗಿಸುವವು. ಪ್ರಪಂಚದಾದ್ಯಂತ ಹಿಂಸೆ, ದ್ವೇಷ, ಪ್ರಕ್ಷುಬ್ಧತೆಯ ವಾತಾವರಣ ತುಂಬಿರುವಾಗ, ಅದನ್ನು ಅರ್ಥ ಮಾಡಿಕೊಳ್ಳಲು ಇದು ಸಹಾಯಕವಾಗಿದೆ.

ಎರಡನೆಯದಾಗಿ, ಸಮಾಜಶಾಸ್ತ್ರದ ಅಧ್ಯಯನವು ಸಂವಹನಾ ಕೌಶಲ್ಯಗಳನ್ನು ಬೆಳೆಸುವುದು. ಸಂವಹನವೆಂದರೆ, ಚಿಂತನೆಗಳನ್ನು ಸ್ಪಷ್ಟವಾಗಿ, ಸಮೂಚಿತವಾಗಿ ಹಾಗು ಅರ್ಥಪೂರ್ಣವಾಗಿ ಪ್ರಸ್ತುತ ಪಡಿಸುವುದು. ವಿವಿಧ ಗುಂಪಿನ ಜನರೊಡನೆ ಸಂವಹನ ನಡೆಸಲು – ಬರಹ ಅಥವ ಮೌಖಿಕವಾಗಿ, ಅವಶ್ಯಕವಾದ ಬುನಾದಿಯನ್ನು ಸಮಾಜಶಾಸ್ತ್ರದ ಪದವಿ ಒದಗಿಸುತ್ತದೆ.

ಮೂರನೆಯದಾಗಿ, ಅಂತಸ್ಸಂಬಂಧ ಕೌಶಲ್ಯಗಳನ್ನು ಉತ್ತೇಜಿಸುವುದು. ಆಧುನಿಕ ಜಗತ್ತಿನ ವ್ಯವಹಾರ ವ್ಯಕ್ತಿ-ವ್ಯಕ್ತಿಗಳ ನೆಟ್ ವರ್ಕಿಂಗನ್ನು[೪] ಅವಲಂಬಿಸಿದೆ. ಗ್ರಾಹಕ ಕೇಂದ್ರಿತ ವಾತಾವರಣ ನಿರ್ಮಿತವಾಗಿದೆ. ಹಾಗಾಗಿ ಉದ್ಯೋಗದಾತರು ಅಂತಸ್ಸಂಬಂಧ ಬೆಳೆಸುವಂತಹ ಕೌಶಲ್ಯಗಳನ್ನು ಹೊಂದಿರುವಂತಹ ಪದವಿಧರರಿಗೆ ಉದ್ಯೋಗ ನೀಡಲು ಬಯಸುತ್ತಾರೆ. ಸಮಾಜಶಾಸ್ತ್ರದಲ್ಲಿ ತಂಡ ಕಾರ್ಯಗಳಿಗೆ, ನಾಯಕತ್ವದ ಗುಣಗಳ ಅಧ್ಯಯನಕ್ಕೆ ಅವಕಾಶವಿರುವುದರಿಂದ ಅದರೆ ಪದವಿಧರರು ನವೀನ ಕಾರ್ಯಗಳ ಪ್ರಾರಂಭಿಸುವಿಕೆಯ ಸೂಕ್ಷ್ಮತೆಗಳನ್ನು ಕಲಿಯುವರು. ಇತರರೊಡನೆ ಹೊಂದಿಕೊಂಡು ಕಾರ್ಯನಿರ್ವಹಿಸುವುದನ್ನು ಕಲಿಯುವರು.

  1. https://en.wikipedia.org/wiki/Nationalism
  2. https://en.wikipedia.org/wiki/Scientific_method
  3. https://en.wikiversity.org/wiki/Social_problems
  4. https://www.investopedia.com/terms/n/networking.asp