ಕನ್ನಡ ಸಂಘ- ಕ್ರೈಸ್ಟ್ ಯೂನಿವರ್ಸಿಟಿ

ಕ್ರೈಸ್ಟ್ ಯೂನಿವರ್ಸಿಟಿಯ ಹಲವು ಭಾಷೆಯ ಸಂಘಗಳಲ್ಲಿ ಕನ್ನಡ ಸಂಘವು ಒಂದಾಗಿದೆ.

ಪ್ರಾರಂಭ

ಬದಲಾಯಿಸಿ

ಕ್ರೈಸ್ಟ್ ಕಾಲೇಜ್‌ನಲ್ಲಿ ಡಿಸೆಂಬರ ೧೯೭೨ರಲ್ಲಿ ಕನ್ನಡ ಸಂಘವನ್ನು ಸ್ಥಾಪಿಸಲಾಯಿತು. ಈ ಸಂಘ ಸ್ಥಾಪಿತವಾದ ಮುಖ್ಯ ದೃಷ್ಟಿ "ಯುವ ಬರಹಗಾರರನ್ನು ಕವನ, ಪ್ರಬಂಧ, ಸಣ್ಣ ಕಥೆ, ಕಾದಂಬರಿ ಮತ್ತು ನಾಟಕ ಮುಂತಾದ ಸೃಜನಶೀಲ ಬರಹಗಳಲ್ಲಿ ಭಾಗವಹಿಸಲು ಪ್ರೋತ್ಸಾಹಿಸುವುದು".

ಚಟುವಟಿಕೆಗಳು

ಬದಲಾಯಿಸಿ

೧೯೮೨ರಿಂದಲೂ ಕನ್ನಡ ಸಂಘ ಹೆಸರಾಂತ ಕನ್ನಡ ಕವಿ ಮತ್ತು ಜ್ಞಾನಪೀಠ ಪ್ರಶಸ್ತಿ ಪಡೆದ ದತ್ತಾತ್ರೇಯ ರಾಮಚಂದ್ರ ಬೇಂದ್ರೆಯವರ ನೆನಪಿನಲ್ಲಿ ರಾಷ್ಟ್ರೀಯ ಮಟ್ಟದ ಕವನ ಬರವಣಿಗೆ ಸ್ಪರ್ಧೆಯನ್ನು ನಡೆಸುತ್ತದೆ. ಹಾಗೆಯೇ ಹೆಸರಾಂತ ಕನ್ನಡ ಕಾದಂಬರಿಕಾರಾದ ಡಾ.ಎ.ಎನ್ ಕೃಷ್ಣ ರಾವ್‌ರವರ ನೆನಪಿಗಾಗಿ ಪ್ರಬಂಧ ಸ್ಪರ್ಧೆಯನ್ನು ೩೫ ವರ್ಷಗಳ ಕಾಲ ಆಯೋಜಿಸುತಿತ್ತು. ಅನಂತರ ೨೦೦೯ ರಲ್ಲಿ ಪ್ರಬಂಧ ಸ್ಪರ್ಧೆಯ ಬದಲಿಗೆ ಸಣ್ಣ ಕಥೆ ಬರೆಯುವ ಸ್ಪರ್ಧೆಯನ್ನು ಆರಂಭಿಸಿದರು. ಈ ಎರಡೂ ಸ್ಪರ್ಧೆಗಳಲ್ಲಿ ಕರ್ನಾಟಕದಾದ್ಯಂತ ವಿದ್ಯಾರ್ಥಿಗಳು ಉತ್ತಮ ಸಂಖ್ಯೆಯಲ್ಲಿ ಭಾಗವಹಿಸುತ್ತಾರೆ. ಇಂದಿನ ಅನೇಕ ಹೆಸರಾಂತ ಲೇಖಕರು, ಮೊದಲು ಕನ್ನಡ ಸಂಘದ ಮೂಲಕ ಪ್ರಖ್ಯಾತಿಗೆ ಬಂದವರು.

ಕ್ರೆಸ್ಟ್ ಯೂನಿವರ್ಸಿಟಿ ಕನ್ನಡ ಸಂಘ

ಬದಲಾಯಿಸಿ

೨೦೦೮ ರಲ್ಲಿ 'ಕ್ರೈಸ್ಟ್ ಕಾಲೇಜು ಕನ್ನಡ ಸಂಘ'ವು "ಕ್ರೈಸ್ಟ್ ಯೂನಿವರ್ಸಿಟಿ ಕನ್ನಡ ಸಂಘ"ವಾಗಿ ಮರುನಾಮಕರಣವಾಯಿತು.

ಸಾಧನೆಗಳು

ಬದಲಾಯಿಸಿ

ಈ ಸಂಘ ವಿದ್ಯಾರ್ಥಿಗಳು ಬರೆದ ಪುಸ್ತಕ ಸೇರಿದಂತೆ ೨೩೪ ಕ್ಕೂ ಹೆಚ್ಚು ಪುಸ್ತಕಗಳನ್ನು ಪ್ರಕಟಿಸಿದ್ದಾರೆ. ಕ್ರೈಸ್ಟ್ ವಿಶ್ವವಿದ್ಯಾಲಯದ ಕನ್ನಡ ಸಂಘದ ಕಡೆಯಿಂದ ಪ್ರಕಟಿಸಿದ ಪುಸ್ತಕಗಳಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಕರ್ನಾಟಕ ರಾಜ್ಯ ಸಾಹಿತ್ಯ ಅಕಾಡಮಿ ಪ್ರಶಸ್ತಿ ಮತ್ತು ಖಾಸಗಿ ಸಂಸ್ಥೆಗಳಿಂದ ಹಲವಾರು ಪ್ರಶಸ್ತಿಗಳು ದೊರಕಿವೆ.

ಈ ಸಂಘ ಪ್ರಕಟಿಸಿದ ಅನೇಕ ಪುಸ್ತಕಗಳು ಬೆಂಗಳೂರು ವಿಶ್ವವಿದ್ಯಾಲಯದ ಪದವಿ ಪೂರ್ವ ವಿದ್ಯಾರ್ಥಿಗಳಿಗೆ ಪಠ್ಯಕ್ರಮದಲ್ಲಿ ಅಳವಡಿಸಿದ್ದಾರೆ.ಕನ್ನಡ ಸಂಘದಿಂದ ಪ್ರಕಟವಾದ "ಕೊಟ್ರ ಹೈಸ್ಕೂಲ್‌ಗೆ ಸೇರಿದ್ದು"ಎಂಬ ಕಾದಂಬರಿಯನ್ನು ಕನ್ನಡ ಕಲಾತ್ಮಕ ಚಲನಚಿತ್ರವಾಗಿ ಮೂಡಿಬಂದಿದೆ.

ಕಾರ್ಯಕ್ರಮಗಳು

ಬದಲಾಯಿಸಿ

ಕ್ರೈಸ್ಟ್ ವಿಶ್ವವಿದ್ಯಾಲಯ ಕನ್ನಡ ಸಂಘ ಇಂಚರ ಮತ್ತು ಕವಿ ದಿನ ಎಂಬ ಮುಂತಾದ ಕಾರ್ಯಕ್ರಮಗಳನ್ನು ಆಯೋಜಿಸುತ್ತಾರೆ.

ಉಲ್ಲೇಖಗಖಳು

ಬದಲಾಯಿಸಿ

[]

  1. https://christuniversity.in/kannada-sangha