ಸದಸ್ಯ:Chaithra C. K/ನನ್ನ ಪ್ರಯೋಗಪುಟ
ಲಂಗ ಮತ್ತು ದಾವಣಿ
ಬದಲಾಯಿಸಿಲಂಗ ಮತ್ತು ದಾವಣಯು ಭಾರತದ ಹೆಣ್ಣು ಮಕ್ಕಳ ಪ್ರಿಯವಾದ ಉಡುಪಾಗಿದೆ.ದಕ್ಷಿಣ ಭಾರತದ ಮೂರು ರಾಜ್ಯಗಳ್ಳಿ ಇದನ್ನು ವಿವಿಧ ಹೆಸರಿನಿಂದ ಕರೆಯುತ್ತಾರೆ.ಕರ್ನಾಟಕದಲ್ಲಿ ಲಂಗ ದಾವಣಿ ಎಂದೂ ತಮಿಳುನಾಡಿನಲ್ಲಿ ಪಟ್ಟು ಪಡವು ಆಂಧ್ರಪ್ರದೇಶದಲ್ಲಿ ಲಂಗವೋಣಿ ಎಂದು ಕರೆಯುತ್ತಾರೆ.ಸಾಮಾನ್ಯವಾಗಿ ಹಳ್ಳಿ ಉಡುಪಾಗಿ ಬೆಳೆದು ದಿನ ದಿನಕ್ಕೆ ತನ್ನ ಹುರುಪನ್ನು ಹೆಚ್ಚಿಸಿ ಆಕರ್ಷಕವಾಗಿದೆ.ಹೆಣ್ಣು ಮಕ್ಕಳು ತಮ್ಮ ಚಿಕ್ಕ ಪ್ರಾಯದಿಂದ ಮದುವೆಯಾಗುವ ತನಕ ಈ ಉಡುಗೆಯನ್ನು ಇಷ್ಟ ಪಡುತ್ತಾರೆ.ಕೆಲವು ಯುವತಿಯರು ಹಬ್ಬ ಅಥವ ವಿಶೇಷ ದಿನಗಳಲ್ಲಿ ಈ ಉಡುಗೆಯನ್ನು ಉಟ್ಟುಕೊಳ್ಳುತ್ತಾರೆ.ಲಂಗವು ಸೊಂಟದಿಂದ ಕಾಲಿನ ಪಾದದವರೆಗೆ ಉದ್ದವಿರುತ್ತದೆ.ಸೊಂಟದ ಸುತ್ತ ಲಂಗವನ್ನು ಕಟ್ಟಲು ಬಟ್ಟೆಯಿಂದಲೇ ನೇಯ್ದ ಹಗ್ಗವಿರುತ್ತದೆ.ಲಂಗಕ್ಕೆ ಸರಿಹೊಂದುವ ಬಣ್ಣದ ರವಿಕೆಯನ್ನು ಹೊಲಿಸಲಾಗುವುದು.ಉತ್ತರ ಭಾರತದಲ್ಲಿಯೂ ಈ ಲಂಗ ದಾವಣಿಯನ್ನು ಮದುವೆಯಾಗದ ಹೆಣ್ಣು ಮಕ್ಕಳು ಉಡಲುಬಯಸುತ್ತಾರೆ.ಇದೀಗ ಕೆಲವು ಕುವರೊಯರು ಲಂಗ ಮತ್ತು ದಾವಣಿಯೂ ಕಾಣುವಂತೆ ಪುಟ್ಟ ಸೀರೆಯನ್ನು ಉಡುತ್ತಾರೆ[೧].ಈ ಉಡುಗೆಯಿಂದ ಯುವತಿಯರ ಸೌಂದರ್ಯ ಹೆಚ್ಚುತ್ತದೆ.ಲಂಗಗಳಲ್ಲಿ ತುಂಬ ಬಗೆಯ ಆಕರ್ಷಕ ಕಸೂತಿ ಅಲಂಕಾರವಿರುತ್ತದೆ.ಅದರಲ್ಲಿ ಗೋಟ ಪಟ್ಟಿ ಕಸೊತಿಯು ಹಬ್ಬು,ಮದುವೆ ಸಮಾರಂಭಗಳಲ್ಲಿಯೂ ಬಳಸುತ್ತಾರೆ.
ಅನ್ವೇಶಣೆ
ಬದಲಾಯಿಸಿಒಬ್ಬ ಸ್ತ್ರಿಈ ಉಡುಗೆಯನ್ನು ತೂಡುವುದನ್ನು ನಿಲ್ಲಿಸಿದಳು ಎಂದರೆ ಆಕೆ ಮದುವೆ ವಯಸ್ಸಿಗೆ ಕಾಲಿಡುವಗಲಿಗೆ ಎಂಬುದು ಪದ್ದತಿ.ಹಳೆಯ ಸಂಪ್ರದಾಯದಲ್ಲಿ,ಹೆಣ್ಣುಮಗು ತನ್ನ ಹದಿಹರೆಯಕ್ಕೆ ಕಾಲಿಟ್ಟಾಗ,ಅವಳಿಗಾಗಿ ಮಾಡುವ ಸಮಾರಂಭದಲ್ಲಿ ಮೊದಲು ಆಕೆಗೆ ಲಂಗ ದಾವಣಿಯನ್ನು ತೊಡಿಸಿ ಅನಂತರ ಸೀರೆಯನ್ನು ಉಡಲು ಕೊಡುವರು.ಆದರೆ ಆಧುನಿಕರಣಕ್ಕೆ ಒಳ ಬಿದ್ದು ಇಂತಹ ಸಂಸ್ಕ್ರತಿ ನಶಿಸಿಹೋಗಿದೆ.
ಜಾಗತಿಕ ಪ್ರಭಾವ
ಬದಲಾಯಿಸಿದಕ್ಷಿಣ ಭಾರತದಲ್ಲಿ ಬಹಳಷ್ಟು ಜಾಗತಿಕ ಪ್ರಭಾಚವವಾಗಿದ್ದು,ಸಾಂಸ್ಕ್ರಿತಿಕ ಉಡುಗೆಯ ಪುಸ್ತ್ಕದಿಂದ ಲಂಗ ದಾವಣಿಯು ಕಣ್ಮರೆಯಾಗಿದೆ.ಆದರೂ ಇಂತಹ ಉಡುಗೆ ಸಾಮಾನ್ಯವಾಗಿ ಚಿಕ್ಕ ಮಕ್ಕಳ ಮೈಮೇಲೆ ಇರುವುದು ಕಂಡುಬರುವುದು.ಸಲ್ವಾರ್ ಕಮೀಜ್ ಹೀಗೆ ಮುಂತಾದ ಬಗೆಯ ವಿನ್ಯಾಸದಿಂದ ಲಂಗ ದಾವಣಿಯು ಸುಧಾರಿತ.[೨]