ಕಮಲಾದಾಸ್

ಕಮಲಾದಾಸ್ ಮಲಯಾಳಂ ಭಾಷೆಯ ಲೇಖಕಿ. ಸಾಹಿತ್ಯವನ್ನು ಬರೆಯಲು ಆರಂಭಿಸಿ 'ಮಾಧವಿಕುಟ್ಟಿ' ಎಂಬ ಕಾವ್ಯ ನಾಮದಿಂದ ಕಮಲಾದಾಸ್ ಕತೆಗಳನ್ನು ಕಾದಂಬರಿಗಳನ್ನು ರಚಿಸಿದರು. ಮಲಯಾಳಂ ಸಾಹಿತ್ಯ ಜಗತ್ತಿನಲ್ಲಿ ಕತೆ, ಕಾದಂಬರಿಗಳ ಕ್ಷೇತ್ರ ಬಹಳ ವಿಶಾಲವಾದುದು. ಅತಿ ಭಾವುಕತೆಯತ್ತ ಕಿರುಗತೆಗಳು ಜಾರುತ್ತಿದ್ದ ಕಾಲದಲ್ಲಿ ಮಾಧವಿಕುಟ್ಟಿ ಎಂಬ ಕಾವ್ಯ ನಾಮದಿಂದ ಕಮಲಾದಾಸ್ ಕತೆಗಳನ್ನು ಕಾದಂಬರಿಗಳನ್ನು ರಚಿಸಿದರು. ವಿವಾದಗಳ ಅಗ್ನಿಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಮನ್ನಣೆಯ ಗುರಿಯನ್ನು ತಲುಪುವಷ್ಟರಲ್ಲಿ ಕಮಲಾದಾಸ್ ಸಾಕಷ್ಟು ಮುಳ್ಳುಹಾದಿಗಳನ್ನು ತುಳಿಯಬೇಕಾಯಿತು. ಖ್ಯಾತ ಕತೆಗಾರರಾಗಿದ್ದ ವೈಕ್ಕಂಮಹಮ್ಮದ್ ಬಷೀರ್, ತಗಳಿ ಶಿವಶಂಕರ ಪಿಳ್ಳೈ, ಎಂ.ಟಿ.ವಾಸುದೇವನ್ ನಾಯರ್, ಟಿ. ಪದ್ಮನಾಭನ್ ರವರ ಜೊತೆ ಜೊತೆಗೆ ಕಮಲಾದಾಸ್ ರೂ ಬರೆಯತೊಡಗಿದರು.