ಸದಸ್ಯ:Bindu Manjunath/ನನ್ನ ಪ್ರಯೋಗಪುಟ

ಗುದಾಮು ವ್ಯವಸ್ಥೆ

ಸರಕುಗಳನ್ನು ಉತ್ಪಾದನಾ ಸಮಯದಿಂದ ಉಪಭೋಗದ ಸಮಯದವರೆಗೆ ಯೋಗ್ಯ ರೀತಿಯಲ್ಲಿ ಸಂಗ್ರಹಿಸಿಡುವ ವ್ಯವಸ್ಥೆ ಸಂಗ್ರಹಣೆ ಎನ್ನುತ್ತಾರೆ.ಮಾರಾಟದ ಕಾರ್ಯಗಳಲ್ಲಿ ಸಂಗ್ರಹಣಿಯು ಕೂಡಾ ಒಂದು ಮಹತ್ವದ ಕಾರ್ಯವಾಗಿದೆ.[]ಇದರಿಂದಾಗಿ ಉತ್ಪಾದಕರು ಇಲ್ಲವೆ ಠೋಕ ವ್ಯಾಪಾರಿಗಳು ಸರಕುಗಳನ್ನು ವ್ಯಾಪಾರ ಮಾಡಲು ಅನುಕೂಲವಾದ ಸ್ಥಳಗಳಲ್ಲಿ ಸಂಗ್ರಹಿಸಿಡಬಹುದು ಮತ್ತು ಇದರಿಂದ ಉತ್ಪಾದನಾ ಕಾರ್ಯವು ಸುಗಮವಾಗಿ ಸಾಗುವದಲ್ಲದೇ ವಿತರಣಾ ಕಾರ್ಯವೂ ಸುಲಭವಾಗುವುದು.ಪೇಟೆಗೆ ಸಮೀಪದಲ್ಲಿ ಸರಕುಗಳನ್ನು ಸಂಗ್ರಹಿಸುವದರಿಂದ ಗ್ರಾಹಕರಿಗೆ ಮತ್ತು ಬಳಕೆದಾರರಿಗೆ ಸಮಯಕ್ಕನುಸಾರವಾಗಿ ಯಾವ ಅಡೆತಡೆಯೂ ಇಲ್ಲದೇ ಸರಕುಗಳನ್ನು ಸಾಗಿಸಬಹುದು.ಈ ರೀತಿಯಾಗಿ ಸಂಗ್ರಹಣಾ ಕಾರ್ಯವು ಸರಕುಗಳಿಗೆ ಸಮಯೋಪಯುಕ್ತತೆ ಮತ್ತು ಸ್ಥಳೋಪಯುಕ್ತತೆಗಳನ್ನು ದೊರಕಿಸಿಕೊಡುತ್ತದೆ.ಇದಲ್ಲದೇ ಬೇಡಿಕೆಗಳಿಗನುಸಾರವಾಗಿ ಸರಕುಗಳನ್ನು ಪೂರೈಸುವುದರಿಂದ ಬೆಲೆಗಳಲ್ಲಿಯ ಏರಿಳಿತಗಳನ್ನೂ ತಡೆಯಬಹುದು,ವ್ಯಾಪಾರವನ್ನೂ ಹೆಚ್ಚೆಸಿಕೊಳ್ಳಬಹುದಾಗಿದೆ.

ಸಂಗ್ರಹಣೆಯ ಮಹತ್ವ

ಬದಲಾಯಿಸಿ

ಸಂಗ್ರಹಣೆಯ ಮಹತ್ವವನ್ನು ಈ ಕೆಳಗಿನ ಸಂಗತಿಗಳಿಂದ ತಿಳಿದುಕೊಳ್ಳ ಬಹುದ.ಒಕ್ಕಲುತನದ ಹುಟ್ಟುವಳಿಗಳು ಮತ್ತು ಇನ್ನಿತರ ಉತ್ಪಾದಿತ ಸರಕುಗಳು ಕೆಲ ತಿಂಗಳುಗಳಲ್ಲಿಯಷ್ಟೇ ಉತ್ಪಾದಿಸಲ್ಪಡುತ್ತವೆಯಾದರು,ಅವುಗಳು ವರ್ಷದ ಹನ್ನೆರಡು ತಿಂಗಳುಗಳಲ್ಲಿಯೂ ಉಪಯೋಗಿಸಲ್ಪಡುತ್ತವೆ.[]ಇಂಥ ಸರಕುಗಳನ್ನು ದಾಸ್ತಾನುಗಳಲ್ಲಿ ಸಂಗ್ರಹಿಸಿಡಲೇಬೇಕಾಗುತ್ತದೆ.ಏಕೆಂದರೆ ವರ್ಷವಿಡೀ ಅವುಗಳ ಪೂರೈಕೆಯಾಗಬೇಕಾದುದು ಅವಶ್ಯಕವಾಗಿದೆ.ಉತ್ಪಾದನಾ ಕಾರ್ಯವು ಕೇಂದ್ರೀಕೃತವಾಗಿರುತ್ತದೆ.ಅಂದರೆ ಉತ್ಪಾದಾನ ಕಾರ್ಯವು ಕೇವಲ ಕೆಲ ಸ್ಥಳಗಳಲ್ಲಿಯಷ್ಟೇ ನಡೆಯುತ್ತದೆ.ಆದ್ದರಿಂದ ಎಲ್ಲ ಸ್ಥಳಗಳಲ್ಲಿಯೂ ಅವುಗಳ ಅವಿರತ ಪೂರೈಕೆಯಾಗಬೇಕಾದರೆ ಅವುಗಳುನ್ನು ಪೇಟೆಯ ಸಮೀಪದಲ್ಲಿ,ಯೋಗ್ಯ ಸ್ಥಳದಲ್ಲಿ ಸಂಗ್ರಹಿಸಿಡಬೇಕಾದುದು ಅವಶ್ಯವಾಗಿದೆ.ಇದರಿಂದ ಪೂರೈಕೆಯಲ್ಲಿ ಯಾವ ಅಡೆತಡೆಗಳೂ ಉಂಟಾಗುವುದಿಲ್ಲ.ಕೊಡೆ,ರೇನ್ಕೋಟ್,ಉಲನ್ ಬಟ್ಟೆಗಳು ಮುಂತಾದ ಸರಕುಗಳು ಕೇವಲ ಕೆಲ ತಿಂಗಳುಗಳಲ್ಲಿಯಷ್ಟೇ ಉಪಯೋಗಿಸಲ್ಪಡುತ್ತವೆ.ಆದರೆ ಅವುಗಳ ಉತ್ಪಾದನಾ ಕಾರ್ಯವು ವರ್ಷದ ಹನ್ನೆರಡು ತಿಂಗಳುಗಳಲ್ಲಿಯೂ ನಡದೇ ಇರುತ್ತದೆ.ಇಂಥ ಸರಕುಗಳನ್ನು ಅವುಗಳ ಉತ್ಪಾದನಾ ಸಮಯದಿಂದ,ಬೇಡಿಕೆ ಬರುವ ಸಮಯದಿಂದ ವರೆಗೆ ಹೆಚ್ಚು ಕಾಳಜಿಯಿಂದ ಸಂಗ್ರಹಿಸಿಡ ಬೇಕಾದುದು ಅತ್ಯವಶ್ಯವು.ಸರಕುಗಳನ್ನು ಸಂಗ್ರಹಿಸಿಡುವ ಕಾರ್ಯವನ್ನು ಠೋಕ ವ್ಯಾಪಾರಿಗಳು ಮತ್ತು ಕಿರುಕುಳ ವ್ಯಾಪಾರಿಗಳು ಕೂಡ ಮಾಡಬೇಕಾಗುತ್ತದೆ.ಠೋಕ ವ್ಯಾಪಾರಿಗಳು ಕಿರುಕುಳ ವ್ಯಾಪಾರಿಗಳಿಗೆ ಸಮಯಕ್ಕನುಸಾರವಾಗಿ ಸರಕುಗಳನ್ನು ಆವಿರತವಾಗಿ ಪೂರೈಸಬೇಕಾದುದರಿಂದ,ಸರಕುಗಳನ್ನು ಖರೀದಿಸಿ ಸಂಗ್ರಹಿಸಿಡಬೇಕು.ಕಿರುಕುಳ ವ್ಯಾಪಾರಿಗಳು ಗ್ರಾಹಕರಿಗೆ ದಿನನಿತ್ಯವು ಸರಕುಗಳನ್ನು ಪೂರೈಸಬೇಕಾದುದರಿಂದ,ಸರಕುಗಳನ್ನು ಖರೀದಿಸಿ ಸಂಗ್ರಹಿಸಿಡಬೇಕಾಗುತ್ತದೆ.ಸರಕುಗಳನ್ನು ಸಂಗ್ರಹಿಸಿಡುವದರಿಂದ ಬೆಲೆಗಳು ಸ್ಥಿರವಾಗಿ ಉಳಿಯುವವಲ್ಲದೇ ಅವಗಳಲ್ಲಿ ಯಾವ ಏರಿಳಿತಗಳೂ ಉಂಟಾಗುವುದಿಲ್ಲ.ಏಕೆಂದರೆ,ಬೇಡಿಕೆಗಳಿಗೆ ತಕ್ಕಂತೆ ಪೂರೈಕೆಯನ್ನು ಮಾಡುವದು ಸಂಗ್ರಹಣೆಯಿಂದ ಸುಲಭವಾಗುತ್ತದೆ.ಸರಕುಗಳನ್ನು ಸಂಗ್ರಹಿಸಿಡುವುದರಿಂದ ಸರಕುಗಳಿಗೆ ಒಳ್ಳೆಯ ಬೆಲೆಗಳನ್ನು ಕೂಡ ಪಡೆಯಬಹುದು.ಏಕೆಂದರೆ,ಒಮ್ಮಿಂದೊಮ್ಮೆಲೇ ಸರಕುಗಳು ಹೇರಳವಾಗಿ ಪೂರೈಸಲ್ಪಟ್ಟರೆ,ಬೇಡಿಕೆಗಿಂತ ಪೂರೈಕೆಯು ಹೆಚ್ಚಿ,ಸರಕುಗಳ ಬೆಲೆಗಳು ಇಳಿಯುತ್ತವೆ.ಆದ್ದರಿಂದ ಸರಕುಗಳನ್ನು ಬೆಲೆಗಳು ಏರುವವರೆಗೆ ಸಂಗ್ರಹಿಸಿಟ್ಟು ನಂತರ ಬಿಡುಗಡೆ ಮಾಡಿದರೆ ಒಳ್ಳೆಯ ಬೆಲೆಗಳು ದೊರೆಯುವವು.ಬೇಗನೋ ನಾಶಾವಾಗುವಂತಹ ಸರಕುಗಳನ್ನು ನಿತ್ಯವು ಗ್ರಾಹಕರಿಗೆ ಪೂರೈಸಬೇಕಾದರೆ ಅವುಗಳನ್ನು ರೆಫ್ರಿಜಿರೇಟರ್ಸದಂತಹ ಯಂತ್ರದಲ್ಲಿ ಸಂಗ್ರಹಿಸಿಡಬೇಕಾಗುತ್ತದೆ.ಸರಕುಗಳನ್ನು ಬೇಡಿಕೆ ಬರುವದೆಂಬ ನಂಬಿಕೆಯಿಂದ ದೊಡ್ಡ ಪ್ರಮಾನದಲ್ಲಿ ಉತ್ಪಾದಿಸುತ್ತಾರಾದ್ದರಿಂದ,ಬೇಡಿಕೆ ಬರುವವರೆಗೆ ಅವುಗಳನ್ನು ಕೆಡದಂತೆ ಸಂಗ್ರಹಿಸಿಡಲೇ ಬೇಕಾಗುತ್ತದೆ.ಕೆಲವು ಸರಕುಗಳನ್ನು ಮತ್ತೊಮ್ಮೆ ಉತ್ಪಾದಾನ ಕಾರ್ಯದಲ್ಲಿ ತೊಡಗಿಸಬೇಕಾಗುತ್ತದೆ.ಅಂಥವುಗಳನ್ನು ಮೊದಲೇ ಸಂಗ್ರಹಿಸಿಟ್ಟುಕೊಳ್ಳಬೇಕಾಗುತ್ತದೆ.ಹತ್ತಿ,ಉಣ್ಣೆ ಮುಂತಾದ ಕಚ್ಚಾ ಸರಕುಗಳನ್ನು ಉತ್ಪಾದಕರಿಗೆ ಅಥವಾ ಬಳಕೆದಾರರಿಗೆ ಅವಿರತವಾಗಿ ಪೂರೈಸಬೇಕಾದುದರಿಂದ,ಅವುಗಳನ್ನು ಸಂಗ್ರಹಿಸಿಡ ಬೇಕಾದುದು ಅವಶ್ಯವಾಗಿದೆ.

ದಾಸ್ತಾನುಗಾರಿಕೆ

ಬದಲಾಯಿಸಿ

ದಾಸ್ತಾನುಗಳೆಂದರೆ ಸರಕುಗಳನ್ನು ಸಂಗ್ರಹಿಸಿಡುವ ಯೋಗ್ಯ ಸ್ಥಳಗಳು.ಸರಕುಗಳನ್ನು ಬೇಡಿಕೆ ಬರುವವರೆಗೆ ಒಂದು ಸ್ಥಳದಲ್ಲಿ ಇಲ್ಲವೇ ಕಟ್ಟಡದಲ್ಲಿ ಸಂಗ್ರಹಿಸಿಡಬೇಕಾಗುತ್ತದೆ.ಒಂದು ಕಟ್ಟಡದಲ್ಲಿ ಇಲ್ಲವೇ ಸ್ಥಳದಲ್ಲಿ ಸರಕುಗಳನ್ನು ಸಂಗ್ರಹಿಸಿಡುವ ಕಾರ್ಯಕ್ಕೆ ದಾಸ್ತಾನುಗಾರಿಕೆ ಎನ್ನುತ್ತಾರೆ.ಅನೇಕ ಸರಕುಗಳ ಉತ್ಪಾದನನಾ ಕಾರ್ಯವು ನಿತ್ಯ ನಡೆಯುತ್ತಿರುವದರಿಂದಲೂ ಮತ್ತು ಅನೇಕ ಬಗೆಯ ಸರಕುಗಳು ಉತ್ಪಾದಿಸಲ್ಪಡುತ್ತಿರುವದರಿಂದಲೂ ಸಂಗ್ರಹಣೆಯ ಕಾರ್ಯವು ಹೆಚ್ಚೆನ ಪ್ರಾಮುಖ್ಯತೆಯನ್ನು ಪಡೆಯುತ್ತಲಿದೆ.ಇದಕ್ಕಾಗಿ ಅನೇಕ ದಾಸ್ತಾನು ಮಳಿಗೆಗಳು ನಿರ್ಮಾಣವಾಗಿವೆ.ಆದರೂ ಕೂಡ ಭಾರತ್ತದಲ್ಲಿ ಇನ್ನೂ ದಾಸ್ತಾಮ ಮಳಿಗಗುಳ ಕೊರತೆಯುಂಟಾಗುತ್ತಿದೆ.ಸರಕುಗಳನ್ನು ಯೋಗ್ಯ ರೀತಿಯಲ್ಲಿ,ಕೆಡದಂತೆ ಸಂಗ್ರಹಿಸಿಡುವದರ ಸಲುವಾಗಿ ಕಟ್ಟಲಾಗದ ಆಧುನಿಕ ಉಗ್ರಾಣಗಳು ಇಲ್ಲವೇದಾಸ್ತಾನು ಮಳಿಗೆಗಳು ಸರಕುಗಳ ಮಾರಾಟದಲ್ಲಿ ಅನೇಕ ಮಹತ್ವದ ಕಾರ್ಯಗಳನ್ನು ಮಾಡತ್ತಲಿವೆ.

ದಾಸ್ತಾನು ಮಳಿಗೆಗಳ ಕಾರ್ಯಗಳು

ಬದಲಾಯಿಸಿ

ಈ ಮಹತ್ವದ ಕಾರ್ಯಗಳು ಕೆಳಗಿನಂತಿವೆ.ಸಂಗ್ರಹಣೆ ದಾಸ್ತಾನು ಮಳಿಗೆಗಳನ್ನು ಕಟ್ಟಲಾದ ಮುಖ್ಯ ಉದ್ದೇಶವೇ ಸರಕುಗಳನ್ನು ಸಂಗ್ರಹಿಸುವದಾಗಿದೆ.ಬೇಡಿಕೆಯಿಲ್ಲದ ಮತ್ತು ಬೇಡಿಕೆ ಬರುವಂತಹ ಸರಕುಗಳನ್ನು ದಾಸ್ತಾನು ಮಳಿಗೆಗಳಲ್ಲಿ ಸಂಗ್ರಹಿಸಿಡಲಾಗುತ್ತದೆ.ಕೇವಲ ಸರಕುಗಳನ್ನು ಸಂಗ್ರಹಿಸಿಡುವದಲ್ಲದೆ,ಅವುಗಳು ಕೆಡದಂತೆಯೂ ಮತ್ತು ಅವುಗಳ ಉಪಯುಕ್ತತೆಯು ಹಾಳಾಗದಂತೆಯೂ ಅವುಗಳನ್ನು ನೋಡಿಕೊಳ್ಳಲಾಗುವುದು.ಬೆಲೆಗಳನ್ನು ಸ್ಥಿರಪಡಿಸುವುದು ಸಂಗ್ರಹಣೆ ಮಾಡಲ್ಪಟ್ಟ ಸರಕುಗಳ ಬೆಲೆಗಳ ಸ್ಥಿರವಾಗಿ ಉಳಿಯುವವು.ಅಂದರೆ ಅವುಗಳಲ್ಲಿ ಹೆಚ್ಚಿನ ಏರಿಳಿತಗಳುಂಟಾಗುವದಿಲ್ಲ.ಸಂಗ್ರಹಿಸಿಟ್ಟ ಸರಕುಗಳನ್ನು ಬೇಡಿಕೆಗೆ ತಕ್ಕಂತೆ ಪೂರೈಸಬಹುದು.ಅಂದರೆ ಬೇಡಿಕೆ ಮತ್ತು ಪೂರೈಕೆಗಳಲ್ಲಿ ಹೊಂದಾಣಿಕೆಯನ್ನು ತರಬಹುದು.ಉದಾಹರಣೆಗೆ,ಬೇಡಿಕೆಯು ಕಡಿಮೆ ಇದ್ದರೆ ಕಡಿಮೆ ಸರಕುಗಳನ್ನು ಪೂರೈಸಬಹುದು ಮತ್ತು ಒಂದು ವೇಳೆ ಬೇಡಿಕೆಯು ಹೆಚ್ಚೆಗೆ ಇದ್ದರೆ ಹೆಚ್ಚೆಗೆ ಸರಕುಗಳನ್ನು ಪೂರೈಸಬಹುದು.ಇದರಿಂದ ಬೆಲೆಗಳಲ್ಲಿ ಆಗಬಹುದಾದ ಏರಿಳಿತಗಳನ್ನು ತಡೆಗಟ್ಟಬಹುದು.ನಷ್ಟಭಯ ನಿರ್ವಹಣೆ ಸರಕುಗಳನ್ನು ಉಗ್ರಾಣಗಳಲ್ಲಿ ಸಂಗ್ರಹಿಸಿದಾಗ ಅವುಗಳು ಉಗ್ರಾಣದಲ್ಲಿರುವವರೆಗೂ ಅವುಗಳ ಜವಾಬ್ದಾರಿಯು ಉಗ್ರಾಣದ ಒಡೆಯರ ಮೇಲಿರುತ್ತದೆ.ಉಗ್ರಾಣದಲ್ಲಿ ಸರಕುಗಳಿಗೆ ಏನಾದರೂ ನಷ್ಟ ಸಂಭವಿಸಿದರೆ,ಅದನ್ನು ಉಗ್ರಾಣದ ಅಧಿಕಾರಿಗಳೇ ತುಂಬಿಕೊಡಬೇಕಾಗುತ್ತದೆ.ಈ ರೀತಿಯಾಗಿ ನಷ್ಡಭಯವನ್ನು ದಾಸ್ತಾನು ಮಳಿಗೆಗಳು ನಿರ್ವಹಿಸುತ್ತದೆ.ಹಣಕಾಸು ದಾಸ್ತಾನು ಮಳಿಗೆಗೆಳ ಮಾಲೀಕರು ಸಂಗ್ರ ಹಿಸಿಟ್ಟ ಸರಕುಗಳ ಭದ್ರತೆಯ ಮೇಲೆ ಸರಕುಗಳ ಮಾಲೀಕರಿಗೆ ಸಾಲುಗಳನ್ನು ಕೊಡತ್ತಾರೆ.ಬ್ಯಾಂಕುಗಳ ಮತ್ತು ಇನ್ನಿತರ ಹಣಕಾಸಿನ ಸಂಸ್ಥೆಗಳು ಕೂಡ ದಾಸ್ತಾನು ಮಳಿಗೆಗಳಲ್ಲಿ ಸರಕುಗಳ ಭದ್ರತೆಯ ಮೇಲೆ ಸರಕುಗಳ ಮಾಲೀಕರಿಗೆ ಸಾಲಗಳನ್ನು ಕೊಡುತ್ತವೆ.

ರಾಜ್ಯ ದಾಸ್ತಾನುಗಾರಿಕೆ ಕಾರ್ಪೋರೇಷನ್ನಿನ ಕಾರ್ಯಗಳು

ಬದಲಾಯಿಸಿ

ಕೇಂದ್ರ ದಾಸ್ತಾನುಗಾರಿಕೆ ಕಾರ್ಪೋರೇಷನ್ನಿನ ಅನುಮತಿಯನ್ನು ತೆಗೆದುಕೊಂಡು ಪ್ರತಿಯೊಂದು ರಾಜ್ಯವೂ ತನ್ನದೇ ಆದ ರಾಜ್ಯ ದಾಸ್ತಾನುಗಾರಿಕೆ ಕಾರ್ಪೋರೇಷನ್ನನ್ನು ಸ್ಥಾಪಿಸಬಹುದು.ರಾಜ್ಯದಾಸ್ತಾನುಗಾರಿಕೆ ಕಾರ್ಪೋರೇಷನ್ನಿನ್ನ ಕಾರ್ಯಗಳು ಈ ಕೆಳಗಿನಂತಿವೆ:ಕೇಂದ್ರ ದಾಸ್ತಾನುಗಾರಿಕೆ ಕಾರ್ಪೋರೇಷನಿನ್ನ ದಾಸ್ತಾಮ ಮಳಿಗೆಗಳಿಲ್ಲದ ಸ್ಥಳಗಳಲ್ಲಿ ರಾಜ್ಯ ಸರಕಾರವು ದಾಸ್ತಾನು ಮಳಿಗೆಗಳನ್ನು ಪಡೆದುಕೊಳ್ಳುವದು ಇಲ್ಲವೇ ಕಟ್ಟಸುವದು.ಅನುಮತಿ ಪಡೆದ ದಾಸ್ತಾನು ಮಳಿಗೆಗಳ ಮೇಲ್ವಿಚಾರಣೆ ನಡೆಸಬಹುದು.ತನ್ನ ಆಧೀನದಲ್ಲದ್ದ ಸ್ಥಳಗಳಲ್ಲಿಯ ಕ್ರಮಬದ್ಧ ಮಾರುಕಟ್ಟೆಗಳನ್ನು ನಿಯಂತ್ರಿಸುವದು.ಕೇಂದ್ರ ಸರಕಾರದ,ಇಲ್ಲವೇ ರಾಜ್ಯ ಸರಕಾರದ ಇಲ್ಲವೇ ಕೇಂದ್ರ ದಾಸ್ತಾನುಗಾರಿಕೆ ಕಾರ್ಪೋರೇಷನ್ನಿನ್ನ ಮೇಲ್ವಿಚಾರಕಾಗಿ ಸರಕುಗಳನ್ನು ವಿತರಣೆ ಮಾಡುವದು.ಸಂಗ್ರಹಣೆ ಇಲ್ಲವೇ ದಾಸ್ತಾನುಗಾರಿಕೆಯನ್ನೇ ಮುಖ್ಯ ಕಾರ್ಯವನ್ನಾಗಿರಿಸಿಕೊಂಡ,ಇಲ್ಲವೇ ಇವುಗಳನ್ನೇ ಮುಖ್ಯ ಕಾರ್ಯಗಳಲ್ಲೊಂದಾಗಿರಿಸಿಕೊಂಡ ಸಹಕಾರಿ ಸಂಘಗಳಿಗೆ ಶೇರು ಬಂಡವಾಳವನ್ನು ಒದಗಿಸುವದು.ಸಾಮಾನ್ಯವಾಗಿ ರಾಜ್ಯ ದಾಸ್ತಾನುಗಾರಿಕೆ ಕಾರ್ಪೋರೇಷನ್ನುಗಳು ತಮ್ಮದೇ ಆದ ದಾಸ್ತಾನು ಮಳಿಗೆಗಳನ್ನು ಜಿಲೆಗಳಲ್ಲಿ ಹೊಂದಿರುತ್ತವೆ.ಕೇಂದ್ರ ಮತ್ತು ರಾಜ್ಯ ದಾಸ್ಥಾನುಗಾರಿಕೆ ಕಾರ್ಪೋರೇಷನ್ನನ್ನುಗಳು ಸಂಗ್ರ ಹಣೆಯ ಸೌಲಭ್ಯಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಒದಗಿಸಿಕೊಡಲು ಪ್ರಯತ್ನಿಸುತ್ತಲಿವೆ;ಅನೇಕ ಮಹತ್ವದ ಸ್ಥಳದಲ್ಲಿ ಹೊಸ ಹೊಸ ದಾಸ್ತಾನು ಮಳಿಗೆಗಳನ್ನು ಕೂಡ ನಿರ್ಮಿಸಿವೆ.ಮಾರ್ಚ ೧೯೬೬ರ ಹೊತ್ತಿಗೆ ೮೨ ಕೇಂದ್ರ ಒಡೆತನದ ದಾಸ್ತಾನು ಮಳಿಗೆಗಳಿದ್ದವಲ್ಲದೇ ಅವುಗಳು ೩ ಲಕ್ಷ ಟನ್ನುಗಳಷ್ಟು ಸರಕುಗಳನ್ನು ಸಂಗ್ರಹಿಸಲು ಶಕ್ಯವಾಗಿದ್ದವು.೪೪೪ ರಾಜ್ಯ ದಾಸ್ತಾನು ಮಳಿಗೆಗಳು ೫-೬ ಲಕ್ಷ ಟನ್ನುಗಳಷ್ಟು ಸಂಗ್ರಹಿಸಲು ಶಕ್ಯವಾಗಿದ್ದವು.

ಉಲ್ಲೇಖಾ

ಬದಲಾಯಿಸಿ
  1. https://en.wikipedia.org/wiki/Warehouse_management_system
  2. http://dlca.logcluster.org/display/LOG/Warehousing+and+Inventory+Management