ಸದಸ್ಯ:Bharath b007/ನನ್ನ ಪ್ರಯೋಗಪುಟ

ಧ್ವನಿ ತಂತ್ರಜ್ಞಾನ ಬದಲಾಯಿಸಿ

ಚಮತ್ಕಾರ ಎಷ್ಟು ಪ್ರಭಾವ ಬೀರಿದೆ ಎಂದರೆ ಮುಂಬರುವ ದಿನಗಳಲ್ಲಿ ಈ ತಂತ್ರಜ್ಞಾನವು ಎಲೆಕ್ಟ್ರಾನಿಕ್ ಉಪಕರಣಗಳ ಮಾರುಕಟ್ಟೆಯನ್ನೇ ಬದಲಿಸಲಿವೆ ಎಂದು ಹೇಳುತ್ತಾರೆ ತಜ್ಞರು...

'ಆ್ಯಪಲ್ ಐಫೋನ್-4ಎಸ್ನಲ್ಲಿರುವ `ಸಿರಿ' ತಂತ್ರಾಂಶದ ಕುರಿತು ಕೇಳಿರುತ್ತೀರಿ. ಈ 'ಸಿರಿ'ಯನ್ನು ಪ್ರಾರಂಭದಲ್ಲಿ ಅಭಿವೃದ್ಧಿಪಡಿಸಿದ್ದು 'ಎಸ್‌ಆರ್‌ಐ' ಇಂಟರ್‌ನ್ಯಾಷನಲ್ ಎನ್ನುವ ಕ್ಯಾಲಿಫೋರ್ನಿಯಾ ಮೂಲದ ಕಂಪನಿ. 2010ರಲ್ಲಿ 'ಆ್ಯಪಲ್' ಇದನ್ನು ಸ್ವಾಧೀನಪಡಿಸಿಕೊಂಡಿತು.

ಅನೇಕರು 'ಸಿರಿ ಮಹಿಮೆಯಿಂದಲೇ 'ಐಫೋನ್ 4ಎಸ್ ಖರೀದಿಸಲು ಮುಂದಾಗುತ್ತಿದ್ದಾರೆ ಎನ್ನುತ್ತದೆ ಇತ್ತೀಚಿನ ಮಾರುಕಟ್ಟೆ ಸಮೀಕ್ಷೆ. ಈ ಅಪ್ಲಿಕೇಷನ್ ನಿಮ್ಮ ಧ್ವನಿಯನ್ನು ಗುರುತಿಸುತ್ತದೆ. 'ಎಸ್‌ಎಂಎಸ್ ಟೈಪ್ ಮಾಡುವ ಬದಲು ಇಂತವರಿಗೆ ಇಂತಹ ಸಂದೇಶ ಕಳುಹಿಸು ಎಂದು ಮಾತಿನಲ್ಲಿ ಹೇಳಿದರೆ ಸಾಕು. `ಸಿರಿ ತಾನಾಗಿಯೇ ಟೈಪಿಸಿ ಸಂದೇಶ ಕಳುಹಿಸಿರುತ್ತದೆ. ನಿಮ್ಮ ಧ್ವನಿ ಅರ್ಥಮಾಡಿಕೊಳ್ಳುವ ತಂತ್ರಾಂಶ ನೀವು ಹೇಳಿದ ಕೆಲಸ ಮಾಡುತ್ತದೆ. ಇದು 'ಸಿರಿ' ಸೊಬಗು.

'ಸಿರಿಯನ್ನು ಪಕ್ಕಕ್ಕಿರಿಸಿ 'ನ್ಯುಯಾನ್ಸ್ ಕಮ್ಯುನಿಕೇಷನಗೆ ಹೊರಳೋಣ. ನ್ಯುಯಾನ್ಸ್ ಕೂಡ ಕಂಪ್ಯೂಟರ್ ತಂತ್ರಾಂಶಗಳನ್ನು ಅಭಿವೃದ್ಧಿಪಡಿಸುವ ಅಮೆರಿಕ ಮೂಲದ ಬಹುರಾಷ್ಟ್ರೀಯ ಕಂಪನಿ. ಧ್ವನಿ ಮತ್ತು ದೃಶ್ಯಗಳಿಗೆ ಸಂಬಂಧಿಸಿದ ಸಾವಿರಾರು ಅಪ್ಲಿಕೇಷನ್ಸ್‌ಗಳನ್ನು ಈ ಕಂಪನಿ ಈಗಾಗಲೇ ಅಭಿವೃದ್ಧಿಪಡಿಸಿದೆ.

ಅನಧಿಕೃತ ಮೂಲಗಳ ಪ್ರಕಾರ 'ಐಫೋನ್ ಸಿರಿಗೆ ಸರ್ವರ್ ನೆರವು ನೀಡಿರುವುದು 'ನ್ಯುಯಾನ್ಸ್ ಸಂಸ್ಥೆಯಂತೆ. 2005ರಲ್ಲಿ ನ್ಯುಯಾನ್ಸ್‌ನ್ನು ಸ್ಕ್ಯಾನ್‌ಸಾಫ್ಟ್ ಎನ್ನುವ ಕಂಪನಿ ಸ್ವಾಧೀನಪಡಿಸಿಕೊಂಡಿತು. ಈ ಕಂಪನಿ ಕೂಡ ಧ್ವನಿ ಪತ್ತೆ ಹೆಚ್ಚುವ ತಂತ್ರಾಂಶ ಅಭಿವೃದ್ಧಿಪಡಿಸುವ ಕಂಪನಿ. ಈಗ ಇವೆರಡು ಸಂಸ್ಥೆಗಳು ಜಂಟಿಯಾಗಿ ಹೊಸ ತಂತ್ರಜ್ಞಾನವೊಂದನ್ನು ಅಭಿವೃದ್ಧಿಪಡಿಸುತ್ತಿದೆ.

[೧] [೨]

  1. http://www.prajavani.net/news/article/2012/04/11/117955.html
  2. http://computers-tech.global-article.ws/kn/future-shock-voice-recognition-identification-technology.html