ಟೆಂಪ್ಲೇಟು:Banking ಬಂಡವಾಳ ಹೂಡಿಕೆಯ (ಬ್ಯಾಂಕ್) ಎಂದರೆ ಒಂದು ಹಣಕಾಸು ಸಂಸ್ಥೆ.ಬಂಡವಾಳ ಒದಗಿಸುವುದು,ಷೇರುಗಳ ವಹಿವಾಟು ಹಾಗು ಕಾರ್ಪೊರೇಟ್ ಗಳ ವಿಲೀನದ ಉಸ್ತುವಾರಿ ಮತ್ತು ಸ್ವಾಧೀನದ ಕಾರ್ಯಕ್ಕೆ ಹಣಕಾಸಿನ ಸಾಲದ ನೆರವು ನೀಡುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಕಾರ್ಪೊರೇಟ್ ಹಣಕಾಸು ಎಂಬುದು ಸಹ ಬಂಡವಾಳ ಹೂಡಿಕೆ ಬ್ಯಾಂಕ್ ಗೆ ಮತ್ತೊಂದು ಸಾಮಾನ್ಯ ಸಮಾನ ಪದವಾಗಿದೆ.


ಬಂಡವಾಳ ಹೂಡಿಕೆ ಬ್ಯಾಂಕುಗಳು ಕಂಪೆನಿ ಮತ್ತು ಸರ್ಕಾರಿ ಸಂಸ್ಥೆಗಳಿಗಾಗಿ ಲಾಭದ ಆಧಾರದ ಮೇಲೆ ಕಾರ್ಯ ನಿರ್ವಹಿಸುತ್ತವೆ.ಬಂಡವಾಳ ಮಾರುಕಟ್ಟೆಯಲ್ಲಿ ಷೇರುಗಳ ಬಿಡುಗಡೆ ಮತ್ತು ಮಾರಾಟ(ಇಕ್ವಿಟಿ ಮತ್ತು ಸಾಲಪತ್ರಗಳು) ಮತ್ತು ವಿಮಾ ಬಾಂಡ್ ಗಳ ಬಿಡುಗಡೆ ಸಹ ಇದರಲ್ಲಿದೆ.(ಉದಾ:ಬಾಕಿ ಉಳಿಸಿಕೊಂಡ ಷೇರುಗಳ ವಿನಿಮಯ ಮಾರಾಟ).ಇದರ ಜೊತೆಗೆ ಕಂಪೆನಿಗಳ ವಿಲೀನ ಮತ್ತು ಸ್ವಾಧೀನ ಕುರಿತ ವ್ಯವಹಾರಗಳಿಗೆ ಅದು ಸಲಹೆಗಾರನಾಗಿಯೂ ಕೆಲಸ ಮಾಡುತ್ತದೆ. ಬಹುತೇಕ ಬಂಡವಾಳ ಹೂಡಿಕೆ ಬ್ಯಾಂಕುಗಳು ವಿಲೀನ ಮತ್ತು ಸ್ವಾಧೀನಪಡಿಸಿಕೊಳ್ಳುವ ಬಗ್ಗೆ ನೈಪುಣ್ಯದ ಸಲಹಾ ಸೇವೆಗಳನ್ನು ಒದಗಿಸುತ್ತವೆ.ಇದೂ ಅಲ್ಲದೇ ಷೇರುಗಳಲ್ಲಿನ ಹಕ್ಕುಗಳ ಒಡೆತನದ ಪರಭಾರೆ ಇವುಗಳ ಬಗ್ಗೆ ಸಲಹಾ ಸೇವೆಗಳನ್ನು ಕೊಡಮಾಡುತ್ತದೆ.ಅಲ್ಲದೇ ಇತರೆ ಗ್ರಾಹಕರಿಗೆ ಮೂಲ ಷೇರುಗಳ ಮಾರಾಟ,ನಿಶ್ಚಿತ ಆದಾಯ,[[ವಿದೇಶಿ ವಿನಿಮಯ{/0),{0}ವಸ್ತುಗಳ ]]ವಹಿವಾಟಿಗೆ ಮತ್ತು ಎಕ್ವಿಟಿ ಷೇರುಗಳ ವಿನಿಮಯಕ್ಕೆ ಅಗತ್ಯ ಹಾಗು ಅನುಕೂಲಕರ ಸಲಹೆಗಳನ್ನು ಕೊಡುತ್ತದೆ.


ಅಮೇರಿಕಾದಲ್ಲಿ ಇಂತಹ ಸೇವೆಗಳನ್ನು ಒದಗಿಸುವವರು ನಿರ್ದಿಷ್ಟ ಕಾನೂನು ನಿಯಮಗಳನ್ನು ಅನುಸರಿಸಬೇಕಾಗುತ್ತದೆ.ಇಂತಹ ಸಲಹೆಗಾರನು ಲೈಸೆನ್ಸ್ ಹೊಂದಿದ ದಲ್ಲಾಳಿ-ವಹಿವಾಟುದಾರ,ಮತ್ತು ಸೆಕ್ಯೂರೊಟೀಸ್ ಮತ್ತು ಎಕ್ಸೇಂಜ್ ಕಮಿಷನ್ ನ(SEC) (FINRA) ನೀತಿ-ನಿಯಮಗಳಿಗೆ [೧]ಒಳಪಡಬೇಕಾಗುತ್ತದೆ. ಇಸವಿ 1999 ರ ವರೆಗೆ ಯುನೈಟೆಡ್ ಸ್ಟೇಟ್ಸ್ ಬಂಡವಾಳ ಹೂಡಿಕೆ ಬ್ಯಾಂಕ್ ಮತ್ತು ವಾಣಿಜ್ಯ ಬ್ಯಾಂಕುಗಳ ನಡುವೆ ಪ್ರತ್ಯೇಕತೆಯನ್ನು ಅನುಸರಿಸಿಕೊಂಡು ಬಂದಿತ್ತು. ಉಳಿದ ಕೈಗಾರಿಕರಣದ ರಾಷ್ಟ್ರಗಳು,G7 ರಾಷ್ಟ್ರಗಳನ್ನೊಳಗೊಂಡಂತೆ ಈ ಪ್ರತ್ಯೇಕತೆಯನ್ನು ಹಿಂದಿನಿಂದಲೂ ಕಾಯ್ದುಕೊಂಡಿಲ್ಲ. ಷೇರುಗಳನ್ನು ನಗದಿಗೆ ಅಥವಾ ಬದಲಿ ವಿನಿಮಯ(ವಹಿವಾಟಿಗಳಿಗೆ ಸೌಕರ್ಯ,ಮಾರುಕಟ್ಟೆ-ಒದಗಿಸುವಿಕೆ)ಅಥವಾ ಷೇರುಗಳಿಗೆ ಹೆಚ್ಚಿನ ಆದ್ಯತೆ(ಅಂದರೆ ಷೇರುಗಳಿಗೆ ಖಾತ್ರಿ ಒದಗಿಸುವಿಕೆ,ಸಂಶೋಧನೆ,ಇತ್ಯಾದಿ)ಇದನ್ನು "ಮಾರಾಟದ ವರ್ಗಕ್ಕೆ" ಸೇರಿದ್ದು ಎಂದು ಪರಿಗಣಿಸಲಾಗುತ್ತದೆ


ಪಿಂಚಣಿ ನಿಧಿಗಳು,ಮ್ಯೂಚವಲ್ ನಿಧಿಗಳು,(ಫಂಡ್) ಸಂಭವನೀಯ ನಷ್ಟ ಪರಿಹಾರದ ನಿಧಿಗಳಲ್ಲಿ ಇವು ವ್ಯವಹರಿಸುತ್ತವೆ.ಸಾರ್ವಜನಿಕ ಹೂಡಿಕೆದಾರರು ತಮಗೆ ಅಗತ್ಯವಿರುವ ಸರಕು-ಸೇವೆಗಳನ್ನು ಮಾರಾಟ ವಲಯದ ಮೂಲಕ ಪಡೆದುಕೊಳ್ಳುತ್ತಾರೆ.ಈ ಮೂಲಕ ತಮ್ಮ ಹೂಡಿಕೆಗೆ ಉತ್ತಮ ಪ್ರತಿಫಲ ಪಡೆದುಕೊಳ್ಳುವಿಕೆಯನ್ನು "ಖರೀದಿ ವಲಯ" ಹೊಂದಿರುತ್ತದೆ. ಹಲವು ಸಂಸ್ಥೆಗಳು ಉಪ-ವಸ್ತುಗಳ ಖರೀದಿ ಮತ್ತು ಮಾರಾಟದ ಕಾರ್ಯ ಮಾಡುತ್ತವೆ