ನನ್ನ ಇತಿಹಾಸ....

ಬದಲಾಯಿಸಿ
 
ಕರ್ನಾಟಕ ತಂಡ, ಭಾಷಾ ಉತ್ಸವ ೨೦೧೯

ನನ್ನ ಹೆಸರು ಭರತ್.ಎಚ್.ಎಂ. ನಾನು ಈ ಭುವಿಯಲ್ಲಿ ಕಂಗೊಳಿಸುತ್ತಿರುವ ಭಾರತ ದೇಶದ, ಶ್ರೀಮಂತ ರಾಜ್ಯವಾದ ಕರುನಾಡಿನಲ್ಲಿರುವ ಬೆಂಗಳೂರು ಜಿಲ್ಲೆಗೆ ಸೇರಿದ ಆನೇಕಲ್ ತಾಲೂಕಿನ ಹಳೇ ಚಂದಾಪುರದಲ್ಲಿ ೨೯ ನವೆಂಬರ್ ೨೦೦೦ನೇ ಇಸವಿಯಲ್ಲಿ ಜನಿಸಿದೆನು. ನನ್ನ ತಂದೆಯ ಹೆಸರು ಶ್ರೀ ಮಂಜುನಾಥ್.ಕೆ ಹಾಗೂ ತಾಯಿಯ ಹೆಸರು ಶ್ರೀಮತಿ ಮಂಜುಳ. ನನ್ನ ತಂದೆ ಖಾಸಗಿಯಾಗಿ ವಿದ್ಯುತ್ ಕೆಲಸಗಾರರಾಗಿದ್ದಾರೆ. ತಾಯಿ ಆಶಾ ಕಾರ್ಯಕರ್ತೆಯಾಗಿ ಸೇವೆಸಲ್ಲಿಸುತ್ತಿದ್ದಾರೆ. ನಮ್ಮ ಕುಟುಂಬದಲ್ಲಿ ನಾಲ್ವರಿರುವೆವು. ನನಗೆ ಒಬ್ಬ ತಮ್ಮನಿದ್ದು, ಅವನು ಈಗ ದ್ವಿತೀಯ ಪಿ.ಯು.ಸಿ ಯಲ್ಲಿ ವ್ಯಾಸಂಗ ಮಾಡುತ್ತಿರುವನು.

ನನ್ನ ಶಾಲಾ ಶಿಕ್ಷಣ

ಬದಲಾಯಿಸಿ

ನನ್ನ ಪ್ರಾಥಮಿಕ ಹಾಗೂ ಪ್ರೌಡಶಾಲಾ ಶಿಕ್ಷಣವು ಸ್ವಾಮಿ ವಿವೇಕಾನಂದ ವಿದ್ಯಾ ನಿಕೇತನ, ನೆರಳೂರು ಶಾಲೆಯಲ್ಲಿ ನಡೆಸಿದೆ. ಈ ಸಂಸ್ಥೆಯು ಅನೇಕ ಸಂಸ್ಥೆಗಳಂತಿರದೆ, ನಮ್ಮಲ್ಲಿ ಇರಬೇಕಾದ ನೈತಿಕ ಮೌಲ್ಯಗಳನ್ನು ಶಾಶ್ವತವಾಗಿ ಅಳವಡಿಸಿದೆ. ನಮ್ಮ ಶಿಕ್ಷಕರು ತುಂಬ ಅನುಭವವನ್ನು ಹೊಂದಿದ್ದು, ನಮಗೆ ಜೀವನದ ಪಾಠಗಳನ್ನು ಕಲಿಸಿದ್ದಾರೆ. ಇಲ್ಲಿ ನನಗೆ ಸ್ವಾಮಿ ವಿವೇಕಾನಂದರು, ಭಗತ್ ಸಿಂಗ್, ಹಾ.ಮಾ.ನಾಯಕರು, ಸರ್ದಾರ್ ವಲ್ಲಭಾಯ್ ಪಟೇಲ್, ಅಬ್ದುಲ್ ಕಲಾಮ್, ವಿ.ಕೃ.ಗೋಕಾಕ್ ಮುಂತಾದ ಮಹಾನ್ ವ್ಯಕ್ತಿಗಳ ಬಗ್ಗೆ ತಿಳಿದುಕೊಂಡೆ. ನನಗೆ ಇಳಿಯ ವಯಸ್ಸಿನಿಂದಲು ವಿವೇಕಾನಂದರು ಎಂದರೆ ಏನೋ ಉತ್ಸಾಹ ಹಾಗು ಕಾತುರತೆ. ನನ್ನ ಶಾಲಾ ಶಿಕ್ಷಣದ ಬಹಳಷ್ಟು ಕಾಲ ತರಗತಿಯ ನಾಯಕನಾಗಿ ಸಾಗಿ ಬಂದಿದ್ದೇನೆ. ಹಾಗೆಯೇ ಎಲ್ಲಾ ರೀತಿಯ ಆಟ, ತರಲೆಗಳನ್ನು ಸಹ ಮಾಡಿದ್ದೇನೆ. ನಾವು ನಮ್ಮ ಗುರುಗಳ ಜೊತೆಗೆ ಸ್ನೇಹಿತರಂತೆ ಅನ್ಯೋನ್ಯವಾಗಿ ಆಟವಾಡುತ್ತ, ಊಟಮಾಡುತ್ತ ಕಾಲವನ್ನು ಕಳೆದೆವು. ಶಾಲೆ ನಮಗೆ ನಮ್ಮ ಮನೆಯಂತಾಗಿದ್ದು, ನಾವು ಶಾಲೆಗೆ ಹೋಗಲು ಎಂದೂ ನಿರುತ್ಸಾಹ ಮೂಡುತ್ತಿರಲಿಲ್ಲ. ನಾನು ನನ್ನ ಮೊದಲ ಶಾಲಾಉತ್ಸವದ ದಿನದಂದು ಶ್ರೀಕೃಷ್ಣನ ವೇಶವನ್ನು ಧರಿಸಿದ್ದೆ. ತದನಂತರ, ಅನೇಕ ನಾಟಕ, ನೃತ್ಯಗಳಲ್ಲಿ ಭಾಗವಹಿಸಿದೆ. ನಮ್ಮ ಗ್ರಾಮಾಂತರ ಪ್ರದೇಶದಲ್ಲಿ ನಡೆಯುವ ಪ್ರತಿಭಾ ಕಾರಂಜಿ ಎಂಬ ಸ್ಪರ್ಧೆಯಲ್ಲಿ ಪ್ರತಿವರ್ಷವೂ ಭಾಗವಹಿಸುತ್ತಿದ್ದೆ. ಅದಲ್ಲದೆ ಸಾಕು ಪ್ರಾಣಿಗಳಾದ ಹಸು, ಕುರಿ, ಮೇಕೆ ಹಾಗೂ ನಾಯಿಗಳೊಂದಿಗೆ ಚಿಕ್ಕಂದಿನಿಂದ ಒಡನಾದಡುತ್ತ ಬೆಳೆದೆನು. ವರ್ಷಕೊಮ್ಮೆ ಚಾಮರಾಜನಗರದಲ್ಲಿರುವ ಮಲೆ ಮಹದೇಶ್ವರ ಬೆಟ್ಟಕ್ಕೆ ಹೋಗುತ್ತಿದ್ದೆವು. ಅಲ್ಲಿನ ಪರಿಸರ ನಮಗೆ ಶಾಂತಿ ಹಾಗೂ ಸಂತಸವನ್ನು ತರುತ್ತಿತ್ತು. ಅದರ ಜೊತೆಗೆ ಅನೇಕ ಪ್ರಾಣಿ ಪಕ್ಷಿಗಳನ್ನು ನೋಡುವ ಅವಕಾಶ ಸಿಗುತ್ತದೆ. ನಾನು ಹತ್ತನೆಯ ತರಗತಿಯನ್ನು ಸಿ.ಬಿ.ಎಸ್.ಇ ಮಾಧ್ಯಮದಲ್ಲಿ ೧೦ಸಿ.ಜಿ.ಪಿ.ಎ ಪಡೆದು ಉತ್ತೀರ್ಣಗೊಂಡೆನು.

ಕಾಲೇಜಿನ ಜೀವನ

ಬದಲಾಯಿಸಿ

ನಂತರ ಪಿ.ಯು.ಸಿ ವ್ಯಾಸಂಗಕ್ಕೆ ಕ್ರೈಸ್ಟ್ ಜೂನಿಯರ್ ಕಾಲೇಜಿಗೆ ಸೇರಿದೆ. ಇಲ್ಲಿ ನಾನು ವಾಣಿಜ್ಯ ಶಾಸ್ತ್ರವನ್ನು ನನ್ನ ವಿಷಯವಾಗಿ ಸ್ವೀಕರಿಸಿದೆ. ನಾನು ಕೆರೆಯಲ್ಲಿದ್ದ ಮೀನು ಸಮುದ್ರಕ್ಕೆ ಬಂದ ಹಾಗೆ, ಹಳ್ಳಿಯ ಶಾಲೆಯಿಂದ ನಗರಕ್ಕೆ ಬಂದು ನಾನು ತುಂಬ ಗಾಬರಿಗೊಳಗಾದೆನು. ಇಲ್ಲಿ ನನಗೆ ಅನೇಕ ಅವಕಾಶಗಳಿದ್ದು ಅದರಲ್ಲಿ ಭಾಗವಹಿಸಲು ಹಿಂಜರಿಕೆ. ಆದರು ಸಹ ಕೆಲವು ಸ್ಪರ್ಧೆಗಳಲ್ಲಿ ಭಾಗವಹಿಸಿದೆನು. ಆಗ ನನಗೆ ಸ್ವಲ್ಪ ಉತ್ಸಾಹ ಬಂದು ಅನೇಕ ಚೆತುವಟಿಕೆಗಳಲ್ಲಿ ಭಾಗವಹಿಸಿದೆ, ಅವುಗಳು ನನಗೆ ಭಹುಮಾನಗಳನ್ನು ತರದಿದ್ದರು, ನಾನು ಅನೇಕ ವಿಷಯಗಳನ್ನು ತಿಳಿದುಕೊಂಡೆ. ನನ್ನ ದ್ವಿತೀಯ ಪಿ.ಯು.ಸಿಯನ್ನು ಶೇಖಡ ೯೧.೩೩ ಅಂಕಗಳೊಂದಿಗೆ ಮುಗಿಸಿದೆನು.

ನನ್ನ ವರ್ತಮಾನ....

ಬದಲಾಯಿಸಿ

ನಂತರ ನನ್ನ ಮುಂದಿನ ಶಿಕ್ಷಣಕ್ಕೆ ಬೆಂಗಳೂರಿನ ಕ್ರೈಸ್ಟ್ ವಿಶ್ವವಿದ್ಯಾನಿಲಯಕ್ಕೆ ಬಿ.ಕಾಂ ವಿಷಯಕ್ಕೆ ಸೇರ್ಪಡೆಯಾದೆ. ಇಲ್ಲಿಯು ಸಹ ನನಗೆ ನೂನಾರು ಅವಕಾಶಗಳು ಕಾಣುತ್ತಿದ್ದರೂ ಸಹ ಅವುಗಳಲ್ಲಿ ಯಾವುದನ್ನು ಆರಿಸಿಕೊಳ್ಳುವುದು ಎಂಬುದು ನನಗೆ ತಿಳಿಯುತ್ತಿಲ್ಲ. ನಾನು ಈಗ ನನ್ನ ಮನಸ್ಸಿಗೆ ಹತ್ತಿರವಾದ ಕನ್ನಡ ಸಂಘ, ಸಿ.ಎಸ್.ಎ ಹಾಗೂ ಇತರೆ ಸಂಘಗಳಿಗೆ ನೊಂದಣಿ ಮಾಡಿದ್ದೇನೆ. ನಮ್ಮ ವಿದ್ಯಾನಿಲಯದ ಭಾಷಾ ವಿಭಾಗವು ಈ ವರ್ಷದ ಸೆಪ್ಟೆಂಬರ್ ತಿಂಗಳಿನಲ್ಲಿ ಭಾಷಾ ಉತ್ಸವವನ್ನು ಆಯೋಜಿಸಿದ್ದರು. ಅದರಲ್ಲಿ ವಿವಿಧ ಸಂಸ್ಕೃತಿಗಳನ್ನು ಬಿಂಬಿಸುವ ಸಲುವಾಹಗಿ, ಸಾಂಸ್ಕೃತಿಕ ನೃತ್ಯ ಸ್ಪರ್ಧೆಯನ್ನು ಆಯೋಜಿಸಿದ್ದರು. ನಾನು ಕರ್ನಾಟಕವನ್ನು ಪ್ರತಿನಿಧಿಸುವ ತಂಡದ ಭಾಗವಾಗಿದ್ದು, ಕಂಸಾಳೆ ನೃತ್ಯದಲ್ಲಿದ್ದೆ. ಆ ಸ್ಪರ್ಧೆಯಲ್ಲಿ ನಮ್ಮ ತಂಡವು ಪ್ರಥಮ ಸ್ಥಾನ ಪಡೆಯಿತು. ಹಾಗೆಯೆ, ನಾನು ಎನ್.ಸಿ.ಸಿ ಗೆ ಸೇರ್ಪಡೆಯಾಗಿದ್ದೇನೆ. ಈ ಸಂಸ್ಥೆಯು ನನಗೆ ಒಳ್ಳೆಯ ವ್ಯಕ್ತಿತ್ವವನ್ನು ರೂಪಿಸಿಕೊಡುತ್ತದೆ ಎನ್ನುವ ನಂಬಿಕೆಯಲ್ಲಿ ಮುಂದೆ ನಡೆಯುತ್ತಿದ್ದೇನೆ.

ಮುಂದಿನ ಕನಸುಗಳು

ಬದಲಾಯಿಸಿ

ನನಗೆ ಪರಿಸರ, ಪ್ರಾಣಿ-ಪಕ್ಷಿಗಳೆಮಂದರೆ ತುಂಬ ಇಷ್ಟ. ಅವುಗಳ ಸ್ವತಂತ್ರವಾಹಗಿರುವುದನ್ನು ನೋಡಲು ಬಯಸುತ್ತೇನೆ. ನಾನು ಅನೇಕ ಬಾರಿ ಮಾನವ ಹಾಗು ಕಾಡು ಪ್ರಾಣಿಗಲಳ ನಡುವಿನ ಸಂಘರ್ಶಗಳ ಕುರಿತು ವಿಚಾರ ಮಾಡುತ್ತಿರುತ್ತೇನೆ. ಅದರ ಜೊತೆಗೆ ನಮ್ಮ ಸಮಾಜ ಮತ್ತೊಂದು ದೊಡ್ಡ ಸಮಸ್ಯೆಯಿದೆ. ಅದೇ ಕಸ ವಿಲೇವಾರಿ ಹಾಗೂ ನೀರಿನ ಸಮಸ್ಯೆ. ಕಸದ ಸಮಸ್ಯೆಯನ್ನು ಪರಿಹರಿಸುವುದಕ್ಕೆ ನಮ್ಮ ಕಾಲೇಜಿನಲ್ಲಿರುವ ಪರಿವರ್ತನಾ ಶಾಖೆಯು ಬಹಳ ಒಳ್ಳೆಯ ಮಾದರಿಯೆಂದು ನಾನು ಮನಹಂಡೆ. ನಾನು ಮುಂದೆ ನನಗೆ ಅನೇಕ ಅವಕಾಶಗಳನ್ನು ನೀಡಿದ ಸಮಾಜಕ್ಕೆ, ಮತ್ತೆ ನಾನು ನನ್ನ ಸೇವೆಯನ್ನು ಸಲ್ಲಿಸಬೇಕೆಂದಿದ್ದೇನೆ. ಅದಕ್ಕಾಗಿ ನಮ್ಮ ದೇಶದ ಭಾರತೀಯ ಆಡಳಿತ ಸೇವಕನಾಗಿರಬೇಕೆಂದು. ಇದಕ್ಕಾಗಿ, ನಾನು ಬಿ.ಕಾಂ ಪದವಿದರನಾದ ಮೇಲೆ ಕೇಂದ್ರ ನಾಗರೀಕ ಸೇವಾ ಪರೀಕ್ಷೆಯನ್ನು ಬರೆಯಬೇಕೆಂದು ನನ್ನ ಹಾದಿಯನ್ನು ನಿರ್ಧರಿಸಿದ್ದೇನೆ.

ಧನ್ಯವಾದಗಳು.......

ಬದಲಾಯಿಸಿ