B Namratha Rao
Joined ೬ ಡಿಸೆಂಬರ್ ೨೦೧೯
ನನ್ನ ಹೆಸರು ಬಿ.ನಮ್ರತ.ರಾವ್. ಒಂದು ಕಡೆ ಅರಬ್ಬಿ ಸಮುದ್ರದ ಅಲೆಗಳೊಂದಿಗೆ ಆಟವಾಡುತ್ತಾ ಮತ್ತೊಂದೆಡೆ ಪಶ್ಚಿಮ ಘಟ್ಟಗಳ ಹಸಿರನ್ನು ಮುಡಿಗೇರಿಸಿಕೊಂಡಂತೆ ಕಾಣುವ ಭೂಪ್ರದೇಶವೇ ದಕ್ಷಿಣಕನ್ನಡ. ಈ ಜಿಲ್ಲೆಯಲ್ಲಿ ಇತಿಹಾಸ ಪ್ರಸಿದ್ಧವಾದ ಶ್ರೀ ಮಂಗಳಮ್ಮನ ಸನ್ನಿಧಿಯಾಗಿರುವ ಮಂಗಳಾಪುರ. ಇಂದಿನ ಮಂಗಳೂರು ನಗರವೇ ನನ್ನ ಹುಟ್ಟೂರು.
ನಾನು ನನ್ನ ಆರಂಭಿಕ ಶಿಕ್ಷಣವನ್ನು ಶ್ರೀರಾಮಕೃಷ್ಣ ಹಿರಿಯ ಪ್ರಾಥಮಿಕ ಶಾಲೆ,ಹಾಗು ಶ್ರೀರಾಮಕೃಷ್ಣಪ್ರೌಢಶಾಲೆಯಲ್ಲಿ ಪಡೆದೆನು.ತರುವಾಯ ನನ್ನ ಪದವಿಪೂರ್ವವಿದ್ಯಾಭ್ಯಾಸ ಶಾರದಾ ಕಾಲೇಜಿನಲ್ಲಿ ನಡೆಯಿತು. ಪ್ರಸ್ತುತ ನಗರದ ಪ್ರತಿಷ್ಠಿತ ಕಾಲೇಜುಗಳಲ್ಲಿ ಒಂದಾದ ಸಂತ ಅಲೋಷಿಯಸ್(ಸ್ವಾಯತ್ತ)ಕಾಲೇಜಿನಲ್ಲಿ ನಾನು ಪ್ರಥಮ ಬಿ.ಎಸ್ಸಿ ತರಗತಿಯಲ್ಲಿ ವಿದ್ಯಾರ್ಜನೆಗೈಯುತ್ತಿದ್ದೇನೆ.ಅನೇಕ ಹಿರಿಯ ಮುತ್ಸದ್ದಿಗಳು, ಚಿಂತಕರು,ವ್ಯಾಪಾರ,ವಾಣಿಜ್ಯ ಕ್ಷೇತ್ರದಲ್ಲಿ ಸಮಾಜಕ್ಕೆ ಕೊಡುಗೆ ನೀ ಡಿದ ಅನೇಕ ಮಹನೀಯರು ಕಲಿತಂತಹ ಕಾಲೇಜಿನ ಭಾಗವಾಗಿರುವುದಕ್ಕೆ ನನಗೆ ಹೆಮ್ಮೆಎನಿಸುತ್ತದೆ.le:Tulu Wikipedia editathon Mangaluru Dec 07-08 2019 01.jpg|thumb|Tulu Wikipedia editathon Mangaluru Dec 07-08 2019 01]]