Ashwinihv
ಅಶ್ವಿನಿ ಹೆಚ್. ವಿ ನಾನು ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದಲ್ಲಿ ಸ್ನಾತಕ್ಕೋತ್ತರ ಪದವಿಯನ್ನು ಮುಗಿಸಿ ನಂತರ ಉದ್ಯೋಗದ ಕಡೆಗೆ ಪ್ರಯಾಣಿಸುತ್ತಿದ್ದೇನೆ. ನನಗೆ ಮೊದಲಿನಿಂದಲೂ ಎಮ್ .ಎ .ಮಾಡಿದರೆ ಅದು ಪತ್ರಿಕೋದ್ಯಮದಲ್ಲಿ, ಮಾಡಬೇಕೆಂದು ಅಂದುಕೊಂಡಿದ್ದೆ ಮತ್ತು ಈ ವಿಷಯವು ನನಗೆ ತುಂಬಾ ಇಷ್ಟವಾಯಿತು. ಇದರಿಂದ ಅನೇಕ ವಿಷಯಗಳನ್ನು ನಾನು ಕಲಿತೆನು. ಎಷ್ಟೋ ಅನುಭವಗಳನ್ನು ಕಟ್ಟಿ ಕೊಟ್ಟಿದೆ ಅವುಗಳು ಈ ಕೆಳಗಿನಂತೆ ಇದೆ. ೧.ಸಮಯ ಪ್ರಜ್ಞೆ ೨.ತಾಳ್ಮೆ ೩.ಶಿಸ್ತು ೪.ಒಳ್ಳೆಯ ಸ್ನೇಹಿತರು ಆದರೆ ನನಗೆ ಡಿಗ್ರಿ ಓದುವಾಗ ಇಲ್ಲಿ ಸಿಕ್ಕಂತ ಅನುಭವಗಳಾಗಲಿ, ವಿಭಿನ್ನ ಸ್ವಭಾವದ ವ್ಯಕ್ತಿಗಳಾಗಲಿ, ಅವರ ಮಾತುಗಳಾಗಲಿ ಇದ್ಯಾವುದು ನನಗೆ ಅಲ್ಲಿ ದೊರೆಯಲಿಲ್ಲ ಈ ವಿಭಾಗವನ್ನು ಆಯ್ದುಕೊಂಡು ನಾನು ಯಾವುದೇ ತಪ್ಪು ಮಾಡಲಿಲ್ಲ ವೆಂದು ನನಗೆ ಈಗ ಅನಿಸುತ್ತಿದೆ. ನಮಗೆ ನಮ್ಮ ಡಿಗ್ರಿಯ ಶಿಕ್ಷಕರು ಹೇಳುತ್ತಿದ್ದರು ನಿಮಗೆ ಮುಂದೆ ಓದಿದಂತೆ ಸಮಾಜದ ವಿಷಯಗಳನ್ನು ತಿಳಿಯುತ್ತಾ ಹೋಗುತ್ತೀರಿ ಎಂದು ಹೇಳುತ್ತಿದ್ದರು ಆ ಮಾತುಗಳು ಇಂದು ನೆನಪಾಗುತ್ತಿದೆ. ಅದರಲ್ಲೂ ಎಮ್.ಎ ಓದಿದ ಮೇಲೆ ಅರಿವಿಗೆ ಬಂದಿದ್ದು,