Ashoka Kamath
Joined ೧೧ ಜನವರಿ ೨೦೧೬
ನಾನು ಅಶೋಕ ಕಾಮತ್, ಸರ್ಕಾರಿ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯ, ಮಂಗಳೂರು ಇಲ್ಲಿಯ ಉಪನ್ಯಾಸಕ. ಪ್ರಸ್ತುತ ವಿಕಿಪೀಡಿಯ ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದೇನೆ ೧೦.೦೧.೨೦೧೬ ರಿಂ ೧೩.೦೧.೨೦೧೬.
- ನನ್ನ ಪದವಿ: ಬಿ.ಎಸ್ಸಿ., ಎಂ.ಎ.(ಕನ್ನಡ), ಎಂ.ಇಡಿ., ಪಿಜಿಡಿಹೆಚ್.ಇ. ನಾನು ಗಣಿತ ಎಂ.ಎಸ್ಸಿ. ಪದವಿಯ ಕೋರ್ಸ್ ಪೂರ್ಣಗೊಳಿಸಿರುತ್ತೇನೆ.
- ೧೯೯೦ ರಿಂದ ೧೦ ವರ್ಷ ಕಾಲ ಕೇಂದ್ರ ಗುಪ್ತಚರ ಇಲಾಖೆಯಲ್ಲಿ, ೧೯೯೯ ರಿಂದ ಸರ್ಕಾರಿ ಪ್ರೌಢಶಾಲೆ, ಬ್ರಹ್ಮಾವರ ಇಲ್ಲಿ ಮುಖ್ಯ ಶಿಕ್ಷಕರಾಗಿ, ೨೦೦೩ ರಿಂದ ಸರಕಾರಿ ಪ್ರೌಢಶಾಲೆ,ವಳಕಾಡು ಉಡುಪಿ ಇಲ್ಲಿ ಮುಖ್ಯ ಶಿಕ್ಷಕರಾಗಿ ಬಳಿಕ ೨೦೧೧ ರಲ್ಲಿ ಕೆಲಕಾಲ ಸರಕಾರಿ ಪ್ರೌಢಶಾಲೆ, ಇಂದಿರಾನಗರ, ಉಡುಪಿ ಆ ಬಳಿಕ ಶಿಕ್ಷಣಾಧಿಕಾರಿಯಾಗಿ ಉಡುಪಿ ಜಿಲ್ಲಾ ಉಪನಿರ್ದೇಶಕರ ಕಚೇರಿಯಲ್ಲಿ ೨೦೧೪ರ ಆಗಷ್ಟ್ ನಿಂದ ಸರ್ಕಾರಿ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯದಲ್ಲಿ ಉಪನ್ಯಾಸಕನಾಗಿ ಕರ್ತವ್ಯವನ್ನುನಿರ್ವಹಿಸುತ್ತಿದ್ದೇನೆ.
- ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿಯ ಸದಸ್ಯನಾಗಿ ೫ ವರ್ಷ, ಬ್ರಹ್ಮಾವರ ಕ್ಷೇತ್ರ ಸಂಪನ್ಮೂಲ ಕೇಂದ್ರ ಸಮನ್ವಯಾಧಿಕಾರಿಯಾಗಿ ೨ ವರ್ಷ, ವಳಕಾಡು ಕ್ಲಸ್ಟರ್ ನ ಸಮನ್ವಯಾಧಿಕಾರಿಯಾಗಿ ೨ ವರ್ಷ ಹೆಚ್ಚುವರಿ ಪ್ರಭಾರವನ್ನು ವಹಿಸಿಕೊಂಡಿರುತ್ತೇನೆ.
- ವಳಕಾಡು ಪ್ರೌಢಶಾಲೆಯ ಹಳೆ ವಿದ್ಯಾರ್ಥಿ ಶ್ರೀ ಯು. ರಾಮದಾಸ ಕಾಮತ್, ಹಿರಿಯ ಉಪಾಧ್ಯಕ್ಷರು, ಇನ್ ಪೋಸಿಸ್, ಬೆಂಗಳೂರು ಇವರು ಸುಮಾರು ೨ ಕೋಟಿ ರೂಪಾಯಿಗಳ ಕೊಡುಗೆಯನ್ನು ನೀಡಿದ್ದು, ತರಗತಿಗೊಂದು ಗ್ರಂಥಾಲಯ , ಪುಸ್ತಕ ಓದಿ ಬಹುಮಾನ ಗೆಲ್ಲಿ ಯೋಜನೆ ಜಾರಿಗೆ ತಂದಿದ್ದು ವಿಶೇಷ. ಇಂಟೆಲ್ ಸಂಸ್ಥೆಯಿಂದ ೨೦೦೭ ರಲ್ಲಿ ಶಿಕ್ಷಣದಲ್ಲಿ ಕಂಪ್ಯೂಟರ್ ಶಿಕ್ಷಣವನ್ನು ಸಮನ್ವಯಗೊಳಿಸದ ಬಗ್ಗೆ ರಾಷ್ಟ್ರೀಯ ಪ್ರಶಸ್ತಿಯನ್ನು (ಪ್ರಶಸ್ತಿ ಪ್ರಧಾನ ನಡೆದದ್ದು ಚಂಡೀಘಡದಲ್ಲಿ) ಸರ್ಕಾರಿ ಪ್ರೌಢಶಾಲೆ, ವಳಕಾಡು ಉಡುಪಿ ಇದಕ್ಕೆ ಬಂದಿರುವುದು ಉಲ್ಲೇಖನೀಯ
- ೨೦೧೦ ರಲ್ಲಿ ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ (ವಿಶೇಷ) ದೊರೆತಿದೆ. ತರಬೇತುದಾರನಾಗಿ ಕೆ.ಎಸ್.ಕ್ಯೂ.ಎ.ಒ (ಪ್ರಸ್ತುತ ಕೆ.ಎಸ್.ಕ್ಯೂ ಎ.ಎ.ಸಿ.), ಸಕಾಲ, ಚುನಾವಣೆ ಮುಂತಾದ ಸಂದರ್ಭಗಳಲ್ಲಿ ಕರ್ತವ್ಯ ನಿರ್ವಹಣೆ ನಡೆಸಿರುತ್ತೇನೆ
- ಪಾಲ್ಗೊಂಡ ವಿಶೇಷ ತರಬೇತಿಗಳು ಸಿ.ಸಿ.ಆರ್.ಟಿ. ನವದೆಹಲಿ - ಶಿಕ್ಷಕರ ಶಿಕ್ಷಣದಲ್ಲಿ ಸಾಂಸ್ಕೃತಿಕ ಬೋಧನೆಯ ಸಾದ್ಯತೆಗಳು; ಶಿಕ್ಷಕರ ಶಿಕ್ಷಣದಲ್ಲಿ ವಿವೇಕಾನಂದರ ತತ್ವಗಳ ಸಕಾಲಿಕತೆ - ಎನ್.ಸಿ.ಟಿ.ಇ. ಕನ್ಯಾಕುಮಾರಿ (೨೦೧೫)