ಕೃಷಿ ಇಲ್ಲದೆ ತುಳು ಸಂಸ್ಕ್ರುತಿಯ ಕಲ್ಪನೆಯೇ ಅಸಾಧ್ಯ


  ಜಯರಾಮ್ ರೈಯವರಂತಹ ಹಿರಿಯರು ಇಂತಹ ವೇದನೆ ಅನುಭವಿಸುತ್ತಾ ಇದ್ದಾರೆ.  ಗದ್ದೆ ಉಲುಮೆ ಮಾಡಿ ಗೊಬ್ಬರ 

ತಲೆಯಲ್ಲಿ ಹೊತ್ತುಕೊಂಡು ಗದ್ದೆಗೆ ಹಾಕಿ. ಗದ್ದೆಯ ನಾಲ್ಕು ಬದಿಗಳಿಗೆ (ಬರಿಮಣ್ಣು) ಗದ್ದೆ ಮಣ್ಣು ಲೇಪಿಸಿ ಭತ್ತ ಬಿತ್ತುವ ಪ್ರಕ್ರಿಯೆ. ಕೋಣಗಳನ್ನು ತೊಳೆದು, ಅವುಗಳೊಂದಿಗಿನ ಒಡನಾಟ ಇವೆಲ್ಲವನ್ನು ಅನುಭವಿಸಿದವರಿಗೆ ಈಗ ಅದರ ನೆನೆಪು ಮರುಕಳಿಸುತ್ತದೆ. ಅದು ಇಲ್ಲವಲ್ಲವೆಂದು, ಆ ಉಲುಮೆಯ ಸಂಸ್ಕ್ರುತಿ ನಾಶವಾಯಿತಲ್ಲ ಎಂಬ ವೇದನೆ, ನಡೆದು ಬಂದುದನ್ನು ಹಿಂತಿರುಗಿ ನೋಡಿದಾಗ ಸಿಂಹಾಲೋಕ ಮಾಡಿದಾಗ ಒಂದು ಕ್ಷಣ ರೈಯವರಂತಹ ಹಿರಿಯರಿಗೆ ಮಾನಸಿಕವಾಗಿ ವೇದನೆ ಸಹಜವೇ ಆಗಿದೆ. ನೆನೆಪುಗಳು ಕಾಡುವುದು ಕೂಡಾ ಸಹಜವೇ ಆಗಿದೆ. ಲೇಖನದ ಕೊನೆಯ ಭಾಗದಲ್ಲಿ ಕಾಲವನ್ನು ಹಿಡಿದಿಡಲು ಸಾಧ್ಯವೇ? ಬದಲಾವಣೆ ಸಹಜವೆಂದು ಸಮಾಧಾನಪಟ್ಟುಕೊಂಡಿದ್ದಾರೆ.


      ಒಮ್ಮೆ ನಾನೊಂದು ಕಾಲೇಜಿಗೆ ಕಾರ್ಯ ನಿಮಿತ್ತ ಹೋದಾಗ ಅಲ್ಲಿನ ಪ್ರಾಂಶುಪಾಲರು

(ಕಟೀಲು ಬಾಲಕೃಷ್ಣ ಶೆಟ್ಟಿಯವರು) ಮಾತನಾಡುತ್ತ ತುಳು ಸಂಸ್ಕ್ರುತಿಯ ಬಗ್ಗೆ ಒಂದು ಮಾತನ್ನು ಹೇಳಿದರು. ಎಲ್ಲಿದೆ ತುಳು ಸಂಸ್ಕ್ರುತಿ? ಯಾವಾಗ ಗದ್ದೆ ಉಲುಮೆ ಕೋಣಗಳಿಂದ, ಎತ್ತುಗಳಿಂದಾಗುವುದು ನಿಂತು ಹೋಯಿತೋ ಅಲ್ಲಿಂದಲೇ ತುಳು ಜನಪದೀಯ ಸಂಸ್ಕ್ರುತಿ ನಾಶವಾಯಿತು. ಅದರೊಟ್ಟಿಗೆ ಉಲುಮೆಯಲ್ಲಿನ