ನನ್ನ ಹೆಸರು ಅರ್ಪಿತ. ನನ್ನ ಜನ್ಮ ದಿನಾಂಕ 12-10-1996. ನಾನು ನರಸಿಂಹರಾಜಪುರ ಎಂಬಲ್ಲಿ ಹುಟ್ಟಿದೆ. 
          ನಾನು ನನ್ನ ಒಂದನೇ ತರಗತಿಯಿಂದ ಆರನೇ ತರಗತಿಯ ವರೆಗಿನ ವ್ಯಾಸಂಗವನ್ನು ನನ್ನ 
     ಹುಟ್ಟೂರಿನಲ್ಲಿಯೇ ಇರುವ ಜೀವನ್ ಜ್ಯೋತಿ ಎಂಬ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಮುಗಿಸಿದ. ನಂತರ ಏಳನೇಯ
     ತರಗತಿಯನ್ನು ಮಹಾರಾಷ್ಟ್ರದಲ್ಲಿರುವ ಪುಣೆಯಲ್ಲಿ ಮುಗಿಸಿ, ಪಟ್ಟಣದ ಸಹವಾಸ ಸಾಕಾಗಿ ವಾಪಸ್ ನರಸಿಂಹರಾಜಪುರಕ್ಕೆ 
     ಬಂದೆ. ತದನಂತರದ ನನ್ನ ಹತ್ತನೇಯ ತರಗತಿಯ ವರೆಗಿನ ವ್ಯಾಸಂಗವನ್ನು ಹುಟ್ಟೂರಿನಲ್ಲೇ ಇರುವ ಶ್ರೀ ಶಾರಧಾ 
     ವಿದ್ಯಾಮಂದಿರದಲ್ಲಿ ಉತ್ತಮ ಅಂಕಗಳೊಂದಿಗೆ ಪೂರ್ಣಗೊಳಿಸಿದೆ. ಬಳಿಕ ನನ್ನ ಪಿಯುಸಿ ವಿದ್ಯಾಭ್ಯಾಸಕ್ಕಾಗಿ ಮೈಸೂರಿನ 
     ಪೆರಿಯಾರಿಯಾಪಟ್ಟಣದಲ್ಲಿರುವ ಭಾರತ್ ಮಾತಾ ಎಂಬ ಕಾಲೇಜಿಗೆ ಸೇರೀ, ಉತ್ತಮ ಅಂಕಗಳೊಂದಿಗೆ ನನ್ನ ಹನ್ನೆರಡನೇಯ 
     ತರಗತಿಯಿಂದ ಉತ್ತೀರ್ಣಗೊಂಡೆ. ಪ್ರಸ್ತುತ ನಾನು ಸಂತ ಅಲೋಶಿಯಸ್ ಕಾಲೇಜಿನಲ್ಲಿ ಡಿಗ್ರಿ ಮಾಡುತ್ತಿದ್ದೇನೆ. ನಾನು ಆಯ್ಕೆ
     ಮಾಡಿಕೊಂಡಿರುವ ವಿಷಯ ವಿಜ್ಞಾನವಾಗಿದೆ.              
          ಇದನ್ನೆಲ್ಲಾ ಹೊರತುಪಡಿಸಿದರೆ ನನಗೆ ಬಹಳ ಇಷ್ಟವಾದ ಮತ್ತೊಂದು ವಿಷಯವೆಂದರೆ ಅದು ನೃತ್ಯ. ನನಗೆ 
     ಭರತನಾಟ್ಯ, ವೆಸ್ಟರ್ನ್, ರೊಬಾಟಿಕ್ಸ ಮೊದಲಾದ ನೃತ್ಯಮಾಡುವುದು ಒಂದು ಹವ್ಯಾಸವಾಗಿದೆ. ಇದಲ್ಲದೇ ಪುಸ್ತಕಗಳನ್ನು 
     ಓದುವುದು ಸಹಾ ನನ್ನ ಹವ್ಯಾಸಗಳಲ್ಲಿ ಒಂದಾಗಿದೆ.