ಅರ್ಚನ.ಸಿ
ಜನನ
ಅರ್ಚನ.ಸಿ

೨೪ ಏಪ್ರಿಲ್ ೧೯೯೭
ಬೆಂಗಳೂರು
ರಾಷ್ಟ್ರೀಯತೆಭಾರತೀಯ
ಇತರೆ ಹೆಸರುಅಚ್ಚು.
ವಿದ್ಯಾಭ್ಯಾಸಬಿ.ಕಾಂ

ನನ್ನ ಹೆಸರು ಅರ್ಚನ.ಸಿ. ನಾನು ಪ್ರಸ್ತುತಕ್ಕೆ ಕ್ರೈಸ್ಟ್ ಯೂನಿರ್ವಸಿಟಿಯಲ್ಲಿ ಬಿ.ಕಾಂನಲ್ಲಿ ಓದುತ್ತಿದ್ದೇನೆ.

ನಾನು ೧೯೯೭ ಏಪ್ರಿಲ್ ೨೪ರಂದು ಬೆಂಗಳೂರಿನ ಫಿಲೋಮಿನಾಸ್ಸ್ ಆಸ್ಪತ್ರೆಯಲ್ಲಿ ಜನಿಸಿದೆ. ಈಗ ಹಲಸೂರಿನ ಸರಸ್ವತಿಪುರಂನಲ್ಲಿ ವಾಸಿಸುತ್ತಿದ್ದೇನೆ. ನನ್ನ ತಂದೆ ಚಂದ್ರು.ಏನ್ ಹಾಗೂ ನನ್ನ ತಾಯಿ ಶಕೀಲಾ.ಏಂ. ನನಗೆ ಇಬ್ಬರು ಅಣ್ಣಂದಿರು, ಮೊದಲನೆಯವರು ರಂಜೀತ್ ಕುಮಾರ್ ಹಾಗು ಎರಡನೆಯವರು ಅಜಯ್.ಸಿ. 

ನನ್ನದು ವಿಭಕ್ತ ಕುಟುಂಬ. ನನ್ನ ತಾಯಿಯ ತವರೂರು ಕೋಲಾರಾ. ನನ್ನದು ವಿಭಕ್ತ ಕುಟುಂಬವಾದರೂ ಕೂಡ ನನಗೆ ಎಂದಿಗೂ ಆ ರೀತಿ ಅನಿಸಿರಲಿಲ್ಲ, ಏಕೆಂದರೆ ನಾನ್ನು ನನ್ನ ಪ್ರತಿ ರಜೆಯನ್ನು ನನ್ನ ಅಜ್ಜಿಯ ಮನೆಗೆ ಹೋಗುತ್ತಿದ್ದೆ. ಅಲ್ಲಿ ನಾನು ಬಹಳ ಆನಂದಿಸುತ್ತಿದ್ದೆ. ಅಲ್ಲಿ ಸುತ್ತಮುತ್ತಲಿನಲ್ಲಿ ಇರುವ ಬಯಲಿನಲ್ಲಿ, ನನ್ನ ಸ್ನೇಹಿತರ ಜೊತೆಯಲ್ಲಿ ಆಟವಾಡುತ್ತ ಕಾಲ ಕಳೆಯುತಿದ್ದೆ. ನನ್ನದು ಬೆಂಗಳೂರೆ ಆಗಿದರಿಂದ್ದ ನನ್ನಗೆ ಇಲ್ಲಿಯು ಸಹ ಅನೇಕ ಸ್ನೇಹಿತರಿದ್ದರು. ನಾನು ಅವರ ಜೊತೆ ಲಗೋರಿ, ಕ್ರಿಕೇಟ್, ಹೈಡ್ ಏನ್ ಸಿಕ್ ಹಾಗೂ ಇತರ ಆಟವನ್ನು ಆಡುತ್ತಿದ್ದೆ. ನನ್ನ ಜೀವನದ ಅತ್ಯಂತ ಸಂತೋಷದ ದಿನಗಳೆಂದರೆ ಅದು ನನ್ನ ಬಾಲ್ಯದ ದಿನಗಳೆಂದೆ ಹೇಳಬೇಕು.

ನಾನು ನನ್ನ ಇದ್ದಿ ಶಾಲಾ ವಿದ್ಯಾಭ್ಯಾಸವನ್ನು ಹಲಸೂರಿನಲ್ಲಿರುವ ಶ್ರೀ ರಾಮಕೃಷ್ಣ ಶಾಲೆಯಲ್ಲಿ ಪೂರ್ಣಗೊಳಿಸಿದ್ದೆ. ನಾನು ಶಾಲೆಯಲ್ಲಿ ಎಲ್ಲರ ಹಾಗೆ ಪ್ರಶಾಂತ ವಿದ್ಯಾರ್ಥಿಯಾಗಿರಲಿಲ್ಲ, ನಾನು ಬಹಳ ತುಂಟಿಯಾಗಿದ್ದೆ.ನನಗೆ ಎಲ್ಲರ ಜೊತೆ ಒಳ್ಳೆಯ ಸ್ನೇಹವಿತ್ತು. ಅದೇ ಸಮಯದಲ್ಲಿ ಓದುವುದು ಮತ್ತು ಇತ್ತರ ಪಠ್ಯೆತರ ಚಟುವಟಿಕೆಗಲ್ಲಲ್ಲಿಯೂ ಕೂಡ ನನ್ನ ಪ್ರತಿಭೆಯನ್ನು ತೋರಿಸುತ್ತಿದ್ದೆ. ನಾನು ಒಬ್ಬ ಒಳ್ಳೆಯ ನಾಯಕಿಯೂ ಆಗಿದೆ. ನನಗೆ ಮರೆಯಲಾರದ ನೆನಪು ಎಂದರೆ ನಾನು ನನ್ನ ಸ್ನೇಹಿತರೊಂದಿಗೆ ಪ್ರವಾಸಕ್ಕೆ ಹೋದದ್ದು.ನಾನು ಅಲ್ಲಿ ಬಹಳ ಆನಂದಿಸಿದೆ.ನಾನು ಎಲ್ಲ ಶಿಕ್ಷಕರಿಗೆ ಮೆಚ್ಚುವ ವಿದ್ಯಾರ್ಥಿಯಾಗದಿದ್ದರು,ನನ್ನನ್ನು ನೆನಪಿಸಿಕೊಂಡರೆ ಎಲ್ಲೋ ಒಂದು ಕಡೆ ಅವರ ಮನಸ್ಸಿನಲ್ಲಿ ಸಂತೋಷವನ್ನು ತರುವ ವಿದ್ಯಾರ್ಥಿಯೆಂದು ನಂಬುತ್ತೇನೆ.

ಕಾಲೇಜು

ಬದಲಾಯಿಸಿ

ಶಾಲೆಯ ನಂತರ ಮೊದಲ ಬಾರಿಗೆ ನಾನು ನೋಡಿದ ಹೊಸ ಲೋಕವೇ ನಾನು ನನ್ನ ಪದವಿ ಪೂರ್ಣ ಶಿಕ್ಷಣವನ್ನು ಮುಗಿಸಿದ ಸಂತ್ ಜೋಸೆಫ಼್ ಇಂಡಿಯನ್ ಕಾಂಪೊಸಿಟ್ಟ್ ಪ್ರೀ ಯುನೀವರ್ಸಿಟಿ ಕಾಲೇಜು.ನನ್ನದು CEBA ವಿಭಾಗ,ಅದು ೧೦೦ ವಿದ್ಯಾರ್ಥಿಗಳು ಹೊಲಗೊಂಡಿರುವ ವಿಭಾಗವಾಗಿತ್ತು.ಆ ನನ್ನ ೨ ವರುಷಗಳು ನನ್ನ ಬದುಕಿನಲ್ಲಿ ಅನೇಕ ಬದಲಾವಣೆಗಳನ್ನು ತಂದಿತು.ಹೇಗೆ ಎಲ್ಲರ ಜೊತೆ ಹೊಂದಿಕೊಳ್ಳುವುದು,ಒಳ್ಳೆಯ ಗೆಳೆತನವೆಂದರೇನು,ಗೆಲವು,ಸೋಲು ಕಲಿಸುತ್ತ,ಇವೆಲ್ಲವನ್ನು ಕಲೆತು ಮುಗಿಯುತ್ತಿರುವ ಮುನ್ನವೇ ಈ ೨ ವರುಷ ಕಳೆಯಿತು.ಈಗ ನಾನು ಕ್ರೈಸ್ಟ್ ಯುನಿವರ್ಸಿಟಿಯಲ್ಲಿ ಬಿ.ಕಾಂನಲ್ಲಿ ಓದುತ್ತಿದ್ದೇನೆ.ನನಗೆ ಮೊದಲು ಈ ಕಾಲೇಜು ಇಷ್ಟವಾಗದಿದ್ದರು ಈಗ ನಿಜವಾಗಲು ಈ ಕಾಲೇಜಿನ ನಿಯಮಗಳಿಗೆ ಹೊಂದಿಕೊಂಡಿದ್ದೇನೆ.ಇಲ್ಲಿ ದೊರೆಯುತ್ತಿರುವ ಅವಕಾಶಗಳನ್ನು ಉಪಯೋಗಿಸಿಕೊಂಡು,ನನ್ನ ಪ್ರತಿಭೆಯನ್ನು ತೋರಿದ್ದರೆ ನಾನು ನನ್ನ ಜೀವನದಲ್ಲಿ ಬಹಳ ದೊಡ್ಡ ಮಟ್ಟಕ್ಕೆ ತಲುಪುತ್ತೇನೆ ಎಂದು ಮನಸ್ಸಾರೆ ನಂಬುತ್ತೇನೆ.ನನ್ನ ಪಿ.ಯು.ಕಾಲೇಜು ಬದಲಾವಣೆಗಳನ್ನು ಕಲಿಸಿತು ಆದರೆ ಕ್ರೈಸ್ಟ್ ಕಾಲೇಜು ಆ ಬದಲಾವಣೆಗಳನ್ನು ಹೇಗೆ ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ಕಲಿಸಿತು.

ಇನ್ನು ಮುಂದೆ ಜೀವನದಲ್ಲಿ ನಾನು ಉತ್ತಮವಾಗಿ ಓದಿ,ಒಳ್ಳೆಯ ಕೆಲಸದ್ದಲ್ಲಿ ಸೇರಬೇಕೆಂಬುದು ನನ್ನ ಗುರಿಯಾಗಿದೆ.

 This user is a member of WikiProject Education in India



ಉಪಪುಟಗಳು

ಬದಲಾಯಿಸಿ

In this ಸದಸ್ಯspace:

ಸದಸ್ಯರ ಚರ್ಚೆಪುಟ:
Archana aj