Lesser coucal
ಭದ್ರ ಅಭಯಾರಣ್ಯದಲ್ಲಿ
Conservation status
Scientific classification
ಸಾಮ್ರಾಜ್ಯ:
ವಿಭಾಗ:
ವರ್ಗ:
ಗಣ:
ಕುಟುಂಬ:
ಕುಲ:
ಪ್ರಜಾತಿ:
C. sinensis
Binomial name
Centropus sinensis
(Stephens, 1815

ಸಣ್ಣ ಕೆಂಬೂತವು ಕೋಗಿಲೆ ಜಾತಿಗೆ ಸೇರಿದ ಒಂದು ಪಕ್ಷಿಯಾಗಿದೆ.ಈ ಪಕ್ಷಿಯು ಭಾರತದ ಉಪಖಂಡದ (ಶ್ರೀಲಂಕಾದಲ್ಲಿ ಕಂಡುಬಂದ ದಾಖಲೆಗಳು ಇಲ್ಲ) ಉದ್ದಗಲಕ್ಕೂ ಹಾಗು ಏಷಿಯಾದ ಆಗ್ನೇಯ ಭಾಗದಲ್ಲಿ ಕಂಡುಬರುತ್ತದೆ. ಇದನ್ನು ಹಲವಾರು ಉಪವರ್ಗಗಳಾಗಿ ವಿಂಗಡಿಸಲಾಗಿದೆ. ನೋಡಲು ಸಣ್ಣ ಕೆಂಬೂತವು ಸುಮಾರು ಕೆಂಬೂತ-ಘನದ ಹೋಲುವ, ಉದ್ದನೆಯ ಬಾಲವನ್ನು ಹಾಗೂ ಕಂದು ಬಣ್ಣದ ರೆಕ್ಕೆಗಳನ್ನು ಹೊಂದಿರುವ ಪಕ್ಷಿಯಾಗಿದೆ. ಈ ಜಾತಿಯ ಪಕ್ಷಿಗಳ ಗುಂಪು ಹೆಚ್ಚಾಗಿ ಕಾಡು, ಕೃಷಿ ಆಧಾರಿತ ಪ್ರದೇಶ ಹಾಗೂ ತೋಟಗಳಲ್ಲಿ ಕಂಡುಬರುತ್ತವೆ. ಸಣ್ಣ ಕೆಂಬೂತವು ಬೇರೆ ಪಕ್ಷಿಗಳಿಗೆ ಹೋಲಿಸಿದರೆ ಹಾರುವ ಶಕ್ತಿಯಲ್ಲಿ ದುರ್ಬಲವಾಗಿದ್ದೂ, ಹೆಚ್ಚು ಮರದಿಂದ ಮರಕ್ಕೆ ನೆಗೆಯುತ್ತಾ . ಇವು ಆಹಾರವಾಗಿ ನೆಲದಲ್ಲಿರುವ ಕೀಟಗಳನ್ನು, ಬೇರೆ ಪಕ್ಷಿಗಳು ಇಟ್ಟಿರುವ ಮೊಟ್ಟೆಗಳನ್ನು ತಿನ್ನುತ್ತವೆ.[]

ವಿವರಣೆ

ಬದಲಾಯಿಸಿ

ಸಣ್ಣ ಕೆಂಬೂತವು ಕೋಗಿಲೆ ಜಾತಿಗೆ ಸೇರಿದ ದೊಡ್ಡ ಗಾತ್ರದ ಪಕ್ಷಿಯಾಗಿದ್ದು, ೪೮ ಸೆಂ.ಮೀ ಇರುತ್ತದೆ. ತಲೆ ಕಪ್ಪು ಬಣ್ಣ, ಹೊಟ್ಟೆಯ ಭಾಗವು ನೇರಳೆ ಮಿಶ್ರಿತ ಗೆರೆಗಳನ್ನು ಹೊಂದಿದೆ. ಇದರ ಹಿಂದಿನ ಭಾಗ ಹಾಗೂ ರೆಕ್ಕೆಗಳು ಕಂದು ಬಣ್ಣದಿಂದ ಕೂಡಿವೆ, ಸಂತಾನೋತ್ಪ್ಪತ್ತಿ ಮತ್ತು ಎಳೆಯ ಸಂದರ್ಭದಲ್ಲಿ ಮಂದ ಬಣ್ಣವನ್ನು ಹೊಂದಿರುತ್ತವೆ. ಕಣ್ಣುಗಳು ಕಪ್ಪು ಬಣ‍್ಣವನ್ನು ಹೊಂದಿರುತ್ತದೆ.

ವರ್ತನೆ ಮತ್ತು ಪರಿಸರ

ಬದಲಾಯಿಸಿ

ಅರಣ್ಯದ ಪಕ್ಕದಲ್ಲಿ ಜೌಗು ಅಥವಾ ಹುಲ್ಲುಗಾವಲು ಪ್ರದೇಶಗಳಲ್ಲಿ ಗಿಡದ ಕೆಳಭಾಗದಲ್ಲಿ ಕಡಿಮೆ ಇವುಗಳು ಒಂಟಿಯಾಗಿ ಅಥವಾ ಜೋಡಿಯಾಗಿ ಕಂಡುಬರುತ್ತದೆ. ಇವು ಮುಖ್ಯವಾಗಿ ತಗ್ಗು ಪ್ರದೇಶದಲ್ಲಿ ಕಂಡುಬರುತ್ತವೆ. ಇತರ ಕೆಂಬೂತಗಳಂತೆ, ಇವುಗಳು ಸಂಸಾರದಲ್ಲಿ ಪರಾವಲಂಬಿ ಕೋಗಿಲೆಗಳು ಅಲ್ಲ. ಮೇಯಿಂದ ಸೆಪ್ಟೆಂಬರ್‌ವರೆಗೆ ಅವು ಗೂಡು ಕಟ್ಟುತ್ತವೆ ಆದರೆ ಮುಖ್ಯವಾಗಿ ಜೂನ್‌ನಲ್ಲಿ ಭಾರತದಲ್ಲಿ ಮಳೆಯ ನಂತರ, ಒಂದು ಸಣ್ಣ ಮರದ ಮೇಲೆ ಒಂದು ಗುಮ್ಮಟದ ಹುಲ್ಲಿನ ಗೂಡುಗಳನ್ನು ನಿರ್ಮಿಸುತ್ತವೆ. ಸಾಮಾನ್ಯವಾಗಿ ಭಾರತದಲ್ಲಿ ೩ ಮೊಟ್ಟೆಗಳು, ಆಗ್ನೇಯ ಏಷ್ಯಾದಲ್ಲಿ 2 ಮತ್ತು ತೈವಾನ್ನಲ್ಲಿ 4 ಆಗಿದೆ. ಸಣ್ಣ ಕೆಂಬೂತಗಳು "ಊಟ್-ಊಟ್" ಅಥವಾ "ಕುರುಕ್"ಎಂದು ಕೂಗುತ್ತವೆ, ಅದು ಗತಿಯಲ್ಲಿ ಹೆಚ್ಚಾಗುತ್ತದೆ ಮತ್ತು ಸ್ವರದಲ್ಲಿ ಇಳಿಕೆಯಾಗುತ್ತದೆ.

ಉಲ್ಲೇಖಗಳು

ಬದಲಾಯಿಸಿ
  1. "Centropus bengalensis". IUCN Red List of Threatened Species. Version 2013.2. International Union for Conservation of Nature. 2012. Retrieved 26 November 2013. {{cite web}}: Invalid |ref=harv (help)
  2. Deignan, H. G. (1955). "Four new races of birds from East Asia". Proc. Biol. Soc. Wash. 68: 145–148.