ಅರವಿಂದ್ ರಾವ್

 
ಅರವಿಂದ್ ಎಂ.ಆರ್.

ನಾನು ಅರವಿಂದ್ ರಾವ್, ನಾನು ಕ್ರೈಸ್ತ ಮಹಾವಿದ್ಯಾಲಯದಲ್ಲಿ ಓದುತಿದ್ದೇನೆ. ನನ್ನ ಶಾಲಾ ವಿಧ್ಯಾಭ್ಯಾಸವು ಚಿನ್ಮಯ ವಿದ್ಯಾಲಯದಲ್ಲಿ ನಡಯಿತು ಇದು ಬೆಂಗಳೊರಿನ ಕೋರಮಂಗಲ ಬಡಾವಣೆಯ ಪ್ರಸಿದ್ಧವಾದ ಶಾಲೆ.ನಮ್ಮ ಶಾಲೆಯಲ್ಲಿ ವ್ಯಾಸಂಗದ ಜೊತೆಗೆ ಭಾರತೀಯ ಸಂಸ್ಕೃತಿಗೆ ಮತ್ತು ಭಗವತ್ ಗೀತೆಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗುತ್ತದೆ.ಇಂತಹ ಸುಂದರ ವಾತಾವರಣದಲ್ಲಿ ನನ್ನ ಬೆಳವಣೆಗೆಯು ನನ್ನಲ್ಲಿ ಒಳ್ಳೆಯ ಸಂಸ್ಕಾರಗಳನ್ನು ರೊಡಿಸಿಕೊಳ್ಳಲು ಭದ್ರ ಬುನಾದಿ ಹಾಕಿದಾಲಾಯಿತು.ನಮ್ಮ ಶಾಲೆಯಿಂದ ನಾವು ಒಮ್ಮೆ ಮುದ್ರಾಸಿಗೆ ಪ್ರವಾಸಕ್ಕೆ ಹೋಗಿದ್ದೆವು.ಅಲ್ಲಿ ನಾವು ಕಳೆದ ಕ್ಷಣಗಳು ಎಂದಿಗೂ ನಾನು ಮರೆಯಲಾಗುವುದಿಲ್ಲ.

ಹವ್ಯಾಸಗಳು

ಬದಲಾಯಿಸಿ

ನನಗೆ ಕನ್ನಡ ಭಾಷೆ ಎಂದರೆ ಆಪಾರವಾದ ಆಭಿಮಾನ.ನಮಗೆ ಗೋರೂರು ರಾಮಸ್ವಾಮಿ ಅಯ್ಯಂಗಾರರ 'ನಮ್ಮ ಊರಿನ ರಸಿಕರು' ಎಂಬ ಪಠ್ಯ ಪುಸ್ತಕವಿತ್ತು. ನಾನು ಕನ್ನಡದ ಯೋಜನಾ ಕಾರ್ಯಗಳಿಗೆ ಕವಿಗಳ ಬಗ್ಗೆ ಮಾಹಿತಿ ಸಂಗ್ರಹಿಸಿ ಬರೆಯಲು ಬಹಳ ಇಷ್ಟ ಪಡುತ್ತಿದ್ದೆ ಏಕೆಂದರೆ ನನಗೆ ರಾಷ್ಟ್ರಕವಿ ಕುವೆಂಪುರವರು ಬಹಳ ಪ್ರಿಯವಾದ ಕವಿ. ನಾನು ಶಾಲೆಯ ಎಲ್ಲಾ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಿದ್ದೆ. ಇಂತಹ ಒಂದು ಸಾಂಸ್ಕೃತಿಕ ಕಾರ್ಯಕ್ರಮಒಂದರಲ್ಲಿ ಪ್ರಸಿದ್ದ ಕನ್ನಡ ಚಲನಚಿತ್ರ "ಆಕಸ್ಮಿಕ" ದ "ಹುಟ್ಟಿದರೆ ಕನ್ನಡ ನಾಡಲಿ ಹುಟ್ಟಬೇಕು" ಎಂಬ ಸುಪ್ರಸಿದ್ದವಾದ ಕನ್ನಡ ಚಲನ ಚಿತ್ರದ ಹಾಡಿಗೆ ನೃತ್ಯವನ್ನು ಮಾಡಿದ್ದೆ.ಈಗಲೂ ಆ ಹಾಡನ್ನು ಎಲ್ಲೇ ನಾನು ಕೇಳಿದರೂ ನನ್ನ ಮೈ ರೋಮಾಂಚನವಾಗುತ್ತದೆ.

ಆಸಕ್ತಿಗಳು

ಬದಲಾಯಿಸಿ

ನನಗೆ ಬಿಡುವಿನ ಸಮಯದಲ್ಲಿ ಪ್ರವಾಸಕ್ಕೆ ಹೋಗುವ ಅಭ್ಯಾಸ , ಮೈಸೂರು ನನಗೆ ಬಹಳ ಪ್ರಿಯವಾದ ಸ್ಥಳ.ನಾನು ಸಣ್ಣ ವಯಸಿನ್ನಲ್ಲಿ ಇದ್ದಾಗ ಚೆನೈ ನ ಮರೀನ ಬೀಚಿ ನಲ್ಲಿ ಅಡುತ್ತಿರುವಾಗ ನಾನು ಕಳೆದು ಹೊದೆ ಆ ಕ್ಷಣವನ್ನು ಎಂದು ಮರೆಯುವುದಿಲ್ಲ.ಊಟಿ,ಪಾಂಡಿಚರಿ,ಮುಂತಾದ ಜಾಗಗಳಿಗೆ ಹೋಗಿ ಬಂದಿರುವೆ.ನನಗೆ ಚಲನಚಿತ್ರೆ ನೋಡುವ ಹವ್ಯಾಸ.ನನಗೆ ಡಾ.ರಾಜಕುಮಾರ್ ಅಂದರೆ ಬಹಳ ಇಷ್ಟ, ಅವರ ಚಲನಚಿತ್ರ ಬಬ್ರುವಾಹನ,ಶಂಕರ್ ಗುರು,ಗಂಧ ಗುಡಿ,ಮೊತಾದ ಚಲನಚಿತ್ರವನ್ನು ನೂಡಿದೆನೆ, ಶಬ್ದವೇದಿ ನಾನು ನೋಡಿದ ಮೊದಲ ಚಲನಚಿತ್ರ.

ಕ್ರಿಕೆಟ್ ಆಡಲು ನನಗೆ ಪ್ರಾಣ . ರಾಹುಲ್ ಡ್ರಾವಿಡ್ ನನ್ನ ಅಚ್ಚುಮೆಚ್ಚಿನ ಆಟಾಗಾರ ಕ್ರಿಕೆಟ್ ಅಲ್ಲದೆ ಫುಟ್ ಬಾಲ್ ಕೂಡ ನೊಡುವ ಹವ್ಯಾಸ ಲಿವರ್ಪೂಲ್ ನನಗೆ ಬಹಳ ಇಷ್ಟವಾದ ತಂಡ.ಇಷ್ಟೆ ಅಲ್ಲದೆ ನನಗೆ ಕಿರುಚಿತ್ರ ತೆಗೆಯುವ ಹವ್ಯಾಸವೂ ಇದೆ.

ನನಗೆ ಛಾಯ ಚಿತ್ರ ಮತ್ತು ಮಾದ್ಯಮ ಅಧ್ಯಯನವೆಂದರೆ ಮೊದಲಿನಿಂದಲೂ ಬಹಳ ಒಲವು. ಈ ಒಲವೇ ನನ್ನನ್ನು ಕ್ರೈಸ್ತ ಮಹಾವಿದ್ಯಾಲಯದ ಮಾದ್ಯಮ ಅಧ್ಯಯನದ ವಿದ್ಯಾರ್ಥಿಯನ್ನಾಗಿ ಮಾಡಿದೆ. ಈ ನಿಟ್ಟಿನಲ್ಲಿ ಕಲಿಯಲು ಬಹಳ ವಿಷಯಗಳಿವೆ. ಎಲ್ಲವೂ ಬಹಳ ಆಸಕ್ತಿಯನ್ನು ನನ್ನಲ್ಲಿ ಮೂಡಿಸುತ್ತಿದೆ. ಜೊತೆಗೆ ಕನ್ನಡ ಭಾಷೆ ಬೆಳೆಸುವುದಕ್ಕಾಗಿ ಸಿಕ್ಕಿರುವ ಅವಕಾಶಗಳು ಅಪಾರವಾದದ್ದು.