ಜಿ ಹೆಚ್ ತಿಪ್ಪಾರೆಡ್ಡಿ
Nationalityಭಾರತೀಯ
Political partyBharatheeya janatha party


ಇವರು ೨೫ ಜುಲೈ ೧೯೪೭ರಂದು ಕಡಬನಕಟ್ಟೆ, ಚಿತ್ರದುರ್ಗ ತಾಲೂಕಿನಲ್ಲಿ ಜನಿಸಿದರು.ಇವರ ತಂದೆ ಜಿ.ಹನುಮಂತ ರೆಡ್ಡಿ ವೃತ್ತಿಯಲ್ಲಿ ಇವರು ಹತ್ತಿ ಮತ್ತು ಅರಳೆ ವ್ಯಾಪಾರಸ್ಥರು ಹಾಗೂ ಹತ್ತಿ ಸ್ಪಿನ್ನಿಂಗ್ ಮಿಲ್ ಮಾಲೀಕರು. ಇವರು ಬಿ.ಎ ಪದವಿಯಲ್ಲಿ ಉತ್ತೀರ್ಣರಾಗಿದ್ದಾರೆ. ಇವರ ಪತ್ನಿಯ ಹೆಸರು ಜಿ.ಅನುರಾಧ.

ಚಿತ್ರ:Thippareddy g h.png
bjp politician

ರಾಜಕೀಯ ಜೀವನ

ಬದಲಾಯಿಸಿ

ಜಿ ಹೆಚ್ ತಿಪ್ಪಾರೆಡ್ಡಿ ಚಿತ್ರದುರ್ಗದ ಕ್ಷೇತ್ರದವರಾಗಿದ್ದು ಇತ್ತೀಚಿಗೆ ನಡೆದ ಚುನಾವಣೆಯಲ್ಲಿ ಶಾಸಕರಾಗಿ ವಿಧಾನ ಸಭಕ್ಕೆ ಆಯ್ಕೆಯಾಗಿದ್ದಾರೆ. ಇವರು ಭಾರತೀಯ ಜನತಾ ಪಾರ್ಟಿಯ ಸದಸ್ಯರು. ಕೆ. ಸಿ. ವೀರೇಂದ್ರರವರನ್ನು ೩೨೯೮೫ ಮತಗಳಿಂದ ಸೋಲಿಸಿದರು. ಇವರಿಗೆ ಒಟ್ಟು ಸಿಕ್ಕ ಮತಗಳು ೮೨೮೯೬. [] ಇವರು ಹೊಂದಿದ್ದ ಸ್ಥಾನಮಾನಗಳು:- ೧೯೯೪-೨೦೦೮- ವಿಧಾನಸಭಾ ಸದಸ್ಯರು, ೨೦೧೦-೨೦೧೩- ವಿಧಾನಪರಿಷತ್ ಸದಸ್ಯರು ಮತ್ತು ೨೦೧೩ರಲ್ಲಿ ೧೪ನೇ ವಿಧಾನಸಭೆಗೆ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಆಯ್ಕೆಯಾಗಿರುತ್ತಾರೆ.[]

ಇತರೆ ಆಸಕ್ತಿಗಳು

ಬದಲಾಯಿಸಿ

ಇವರು ಕ್ರೀಡೆಗಳಲ್ಲಿ ಆಸಕ್ತಿಯನ್ನು ಹೊಂದಿರುವರು. ೧೯೬೬ರಲ್ಲಿ ಬಾಸ್ಕೆಟ್ಬಾಲ್ ಆಟದಲ್ಲಿ ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸಿದ್ದರು ಹಾಗೂ ರಾಷ್ತ್ರೀಯ ಬಾಸ್ಕೆಟ್ಬಾಲ್ನಲ್ಲಿ ಪ್ರತಿನಿಧಿಸಿದ್ದರು. ಇವರು ಪ್ರಯಾಣ ಮಾಡುವುದರಲ್ಲಿ ಆಸಕ್ತಿ ಹೊಂದಿರುವವರಾಗಿದ್ದು ಯು.ಎಸ.ಎ, ಆಸ್ಟ್ರೇಲಿಯಾ,ನ್ಯೂಜಿಲ್ಯಾಂಡ್, ಯುರೋಪ್ ಮತ್ತು ಚೈನಾ ದೇಶಗಳನ್ನು ಸುತ್ತಿ ಬಂದಿದ್ದಾರೆ.

ಉಲ್ಲೇಖನಗಳು

ಬದಲಾಯಿಸಿ
  1. https://www.deccanchronicle.com/151228/nation-current-affairs/article/was-it-thippareddy%E2%80%99s-ignorance-or-adamance
  2. http://myneta.info/karnataka2013/candidate.php?candidate_id=823