ಸದಸ್ಯ:Anusha Serrao/sandbox
ಡಯಾಸ್ಕೋರಿಯ
ಬದಲಾಯಿಸಿಡಯಾಸ್ಕೋರಿಯ ಒಂದು ಸ್ಟೀರಾಯ್ದ್ ಯುಕ್ತ ಔಷಧೀಯ ಸಸ್ಯ. ಈ ಸಸ್ಯವು ಸಂಧಿವಾತ, ಉರಿತ ಮುಂತಾದವುಗಳನ್ನು ಶಮನಗೊಳಿಸುವ ಅನಬಾಲಿಕ್ ಮತ್ತು ಗರ್ಭನಿರೋಧಕ ಔಷಧೀಯ ಗುಣಗಳಿಂದ ಕೂಡಿದೆ.ಇದರ ಬೇರುಗಡ್ಡೆಗಳಿಂದ ಸ್ಟೆರಾಯ್ಡ್ ಮತ್ತು ಸ್ಯಾಪೊಜನಿನ್ ವಸ್ತುವಿನ ಮೂಲವಾದ ಡಯೋಸ್ಜಿನಿನ್ ಅನ್ನು ಉತ್ಪಾದಿಸುತ್ತಾರೆ.
ಸಸ್ಯ ವರ್ಣನೆ ಮತ್ತು ಹಂಚಿಕೆ
ಬದಲಾಯಿಸಿಡಯಾಸ್ಕೋರಿಯ ಪ್ರಭೇದದ ಸಸ್ಯಗಳೆಲ್ಲಾ ಡಯೋಸ್ಕೋರಿಯೇಸಿ ಕುಟುಂಬಕ್ಕೆ ಸೇರಿದ ಬಹುವಾರ್ಷಿಕ ಬಳ್ಳಿಗಳು. ನೆಲದಲ್ಲಿ ಬೇರುಗಡ್ಡೆಗಳು ಇಲ್ಲವೆ ಗುಪ್ತಕಾಂಡಗಳು ಇರುತ್ತವೆ. ಈ ಸಸ್ಯ ಕುಟುಂಬವು ೬೦೦ಕ್ಕು ಹೆಚ್ಚು ಪ್ರಭೇದಗಳನ್ನು ಒಳಗೊಂಡಿದೆ.ಉಷ್ಣ ಮತ್ತು ಸಮಶೀತೋಷ್ಣವಲಯದಲ್ಲಿ ವ್ಯಾಪಕವಾಗಿ ಹರಡಿರುವ ಇವು ಶೀತವಲಯದ ಪ್ರದೇಶಗಳಲ್ಲಿ ಸ್ವಲ್ಪ ಪ್ರಮಾಣದಲ್ಲಿ ಮಾತ್ರ ಕಂಡುಬರುತ್ತವೆ. ಇವುಗಳ ಪೈಕಿ ೧೫ ಪ್ರಭೇದದ ಗಿಡಗಳು ಸ್ಟೆರಾಯ್ಡ್ ಯುಕ್ತ ಸ್ಯಾಪೋಜಿನಿಸ್‍ಗಳನ್ನು ಅದರಲ್ಲೂ ಡಯೋಸ್ಟೆನಿನನ್ನು ಹೊಂದಿರುತ್ತವೆ.ಡಯಾಸ್ಕೋರಿಯ ಕಾಂಪೋಸಿಟ(Diascoria composita) ಮತ್ತು ಡಯೋಸ್ಕೋರಿಯ ಫೋರಿಬಂಡ್ (Diascoria floribund) ಪ್ರಭೇದಗಳು ಮಧ್ಯ ಅಮೇರಿಕಾದಲ್ಲಿ ಕಾಡುಗಿಡಗಳಾಗಿಯೂ ಮತ್ತು ಡಯೊಸ್ಕೋರಿಯ ಡೆಲ್ಟಾಯ್ಡಿಯ( Dioscrea deltodea) ಹಿಮಾಲಯದಲ್ಲಿ ಕಂಡುಬರುತ್ತವೆ.
ಪ್ರಭೇದ ಮತ್ತು ತಳಿಗಳು
ಬದಲಾಯಿಸಿ- ಡಯಾಸ್ಕೋರಿಯ ಡೆಲ್ಟಾಯ್ಡಿಯ
ಹಿಮಾಲಯ ಪ್ರದೇಶಗಳಲ್ಲಿ ಕಂಡುಬರುವ ಇವು ಸಣಕಲಾಗಿ ಎತ್ತರಕ್ಕೆ ಬೆಳೆಯುವ ಬಳ್ಳಿಗಳಾಗಿವೆ. ಇದರ ಬೇರುಗಡ್ಡೆಗಳ ಚೂರುಗಳನ್ನು ನಾಟಿ ಮಾಡಿ ವೃಧ್ಧಿಪಡಿಸುತ್ತಾರೆ. ಇದರ ಗೆಡ್ಡೆಗಳು ಬಲಿತು ಕೊಯ್ಲಿಗೆ ಬರಲು ೭-೧೦ ವರ್ಷ ಹಿಡಿಯುವುದರಿಂದ ಇದನ್ನು ವಾಣಿಜ್ಯವಾಗಿ ಬೆಳೆಯಲಾಗುತ್ತಿಲ್ಲ.
- ಡಯಾಸ್ಕೋರಿಯ ಫೋರಿಬಂಡ
ಮಧ್ಯ ಅಮೆರಿಕಾದ ಮೆಕ್ಸಿಕೊ ಇದರ ತವರಾಗಿದ್ದು ಭಾರತದ ಕರ್ನಾಟಕ,ಅಸ್ಸಾಂ, ಮೇಘಾಲಯ,ಅಂಡಮಾನ್ ಮತ್ತು ಗೋವಗಳಲ್ಲಿ ಇದರ ಬೇಸಾಯವಿದೆ.ಇದರಲ್ಲಿ ಹೆಣ್ಣು ಮತ್ತು ಗಂಡು ಹೂವು ಬೇರೆ ಬೇರೆಯಾಗಿದ್ದು ಬಳ್ಳಿಗಳು ಕಸುವಿನಿಂದಕ ಕೂಡಿದ್ದು ಎಡಸುತ್ತಿನಲ್ಲಿ ಹಬ್ಬಿ ಬೆಳೆಯತ್ತವೆ. ಕವಲುರೆಂಬೆಗಳು ದಪ್ಪನಾಗಿರುತ್ತವೆ. ಇದರ ಬೇರುಗಳು ಹಳದಿ