ನನ್ನ ಹೆಸರು ಅನು ಕೀರ್ತನ. ನಾನು ಕ್ರೈಸ್ಟ್ ಯುನಿವರ್ಸಿಟಿಯಲ್ಲಿ ಬಿಕಾಂ ಮಾಡುತ್ತಿದ್ದೇನೆ.ನನ್ನ ಶಾಲಾಭ್ಯಾಸವನ್ನು ಮತ್ತು ಹೈಸ್ಕೂಲನ್ನು ಕ್ರೈಸ್ಟ್ ಎಲ್ಲಿಯೇ ಮುಗಿಸಿದ್ದೇನೆ.ದ್ವಿತೀಯ ಪಿಯುಸಿ ಅನ್ನು ಪ್ರೈಸ್ ಜೂನಿಯರ್ ಕಾಲೇಜಿನಲ್ಲಿ ಮುಗಿಸಿದ್ದೇನೆ.ನಾನು ಹುಟ್ಟಿದ್ದು ಬೆಳೆದಿದ್ದು ಎಲ್ಲ ಬೆಂಗಳೂರಿನಲ್ಲಿಯೇ. ನನ್ನ ತಂದೆಯ ಹೆಸರು ಗುರುಸ್ವಾಮಿ ಮತ್ತು ತಾಯಿ ಕಮಲ. ತಂದೆ ಅಗ್ನಿಶಾಮಕ ಠಾಣೆಯಲ್ಲಿ ಕೆಲಸಮಾಡುತ್ತಿದ್ದಾರೆ ಮತ್ತು ತಾಯಿ ಗೃಹಣಿ. ನನಗೆ ಒಬ್ಬ ಅಣ್ಣ ಮತ್ತು ಒಬ್ಬಳು ತಂಗಿ ಇದ್ದಾಳೆ.ಅಣ್ಣ ಮಂಗಳೂರಿನಲ್ಲಿ ಎಂಬಿಬಿಎಸ್ ಮಾಡುತ್ತಿದ್ದಾನೆ ಮತ್ತು ತಂಗಿ ಸ್ಕೂಲಿನಲ್ಲಿ ಎಸೆಸೆಲ್ಸಿ ಓದುತ್ತಿದ್ದಾಳೆ. ನಾನು ಶಾಲೆಯಲ್ಲಿರುವಾಗ ನನಗೆ ನೃತ್ಯದಲ್ಲಿ ಬಹಳ ಉತ್ಸಾಹವಿತ್ತು ಆದರೆ ನನಗೆ ನೃತ್ಯ ಮಾಡಲು ಬರುತ್ತಿರಲಿಲ್ಲ. ಆದರೂ ನಾನು ಛಲಬಿಡದೆ ನೃತ್ಯ ಕಲಿತೆ. ಕಾಲೇಜಿನಲ್ಲಿ ಬಹಳ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದೇನೆ. ಈಗಲೂ ಕೂಡ ಯುನಿವರ್ಸಿಟಿ ಕಲ್ಚರಲ್ ಟೀಮ್ ನಲ್ಲಿ ಇದ್ದೇನೆ.ನನಗೆ ಓದುವ ಬಗ್ಗೆ ಬಹಳ ಆಸಕ್ತಿ ಇದೆ ನನ್ನ ತಂದೆಯ ಆಸೆಯಂತೆ ನಾನು ಐಎಎಸ ಆಗಲು ಬಯಸುತ್ತೇನೆ. ನನ್ನ ಹವ್ಯಾಸ ಏನೆಂದರೆ ಕೃತ್ಯ ಮಾಡುವುದ ಮತ್ತು ಸಂಗೀತ ಕೇಳುವುದು. ನನಗೆ ಸಾಂಸ್ಕೃತಿಕ ಸಂಗೀತಗಳಲ್ಲಿ ಹೆಚ್ಚು ಆಸಕ್ತಿ ಇದೆ. ನಾನು l.k.g. ಇಂದ ಕ್ರೈಸ್ತ ಓದಿದ್ದೇನೆ ಅದಕ್ಕಾಗಿ ನನ್ನ ಪೂರ್ತಿ ಶಿಕ್ಷಣವನ್ನು ಕ್ರೈಸ್ಟ್ ಎಲ್ಲೆ ಮುಗಿಸುತ್ತೇನೆ. ನಾನು ಮೊದಮೊದಲು ಸ್ನೇಹಿತರ ಮತ್ತು ಶಿಕ್ಷಕರ ಮುಂದೆ ಮಾತನಾಡಲು ತುಂಬಾ ನಾಚಿಕೆ ಪಡುತ್ತಿದ್ದೆ ಆದರೆ ಈಗ ಕ್ರೈಸ್ಟ್ ಯೂನಿವರ್ಸಿಟಿ ನನ್ನನ್ನು ಬದಲಿಸಿದೆ. ನನ್ನನ್ನು ನಾನು ರೂಪಿಸಿಕೊಳ್ಳಲು ಕ್ರೈಸ್ಟ್ ಒಂದು ಪ್ಲೇಸ್ಮೆಂಟ್ ಎನ್ನಬಹುದು. ಕ್ರೈಸ್ಟ್ ನನಗೆ ಎಲ್ಲಾ ನೀರಿದೆ ಶಿಕ್ಷಣ ಸಾಂಸ್ಕೃತಿಕ ಇತ್ಯಾದಿ...ನಾನು ನನ್ನ ತಂದೆಯ ಆಸೆಯಂತೆ ಐಎಎಸ್ ಅನ್ನು ಮುಗಿಸಿದರೆ ಸಾಮಾಜಿಕ ಬದಲಾವಣೆಗಳನ್ನು ತರಲು ಇಷ್ಟ ಪಡುತ್ತೇನೆ. ನನ್ನ ತಾತ ಎಂಎಲ್ಎ ಆಗಿರುವುದರಿಂದ ಅವರ ಜೊತೆ ಕೈಜೋಡಿಸಿ ಜನಸೇವೆಯನ್ನು ಮಾಡಲು ಇಷ್ಟಪಡುತ್ತೇನೆ. ನನ್ನ ಮುಖ್ಯ ಉದ್ದೇಶವೇನೆಂದರೆ ನನ್ನ ತಂದೆತಾಯಿಯರ ಆಸೆಯನ್ನು ಈಡೇರಿಸುವುದು. ನನ್ನ ಆಸೆ ಏನೆಂದರೆ ಸಮಾಜದಲ್ಲಿ ನನ್ನ ಕಾಲಿನ ಮೇಲೆ ನಾನು ನಿಂತುಕೊಳ್ಳುವುದು. ಇದಕ್ಕೆ ನನ್ನ ತಂದೆ-ತಾಯಿಯರ ಪೂಟಿ ಸಹಕಾರ ನನ್ನಲ್ಲಿದೆ. ಅವರಿಬ್ಬರೂ ನನ್ನ ಬೆನ್ನೆಲುಬಾಗಿ ಹೋರಾಡುತ್ತಾರೆ. ನನ್ನ ಅಣ್ಣ ಕೂಡ ನನಗೆ ಬೆನ್ನೆಲುವಾಗಿ ಇರುತ್ತಾನೆ. ಅವನು ಎಲ್ಲ ರೀತಿಯು ನನಗೆ ಪ್ರೋತ್ಸಾಹಿಸುತ್ತಾನೆ. ಈ ಎಲ್ಲರ ಸಹಕಾರದಿಂದ ನನ್ನ ಕನಸನ್ನು ನೆನಸು ಮಾಡಿಕೊಳ್ಳಬೇಕು.