ಸದಸ್ಯ:Annadanappa S C/ನನ್ನ ಪ್ರಯೋಗಪುಟ

ಲೀನಾ ಸಂಜಯ್‌ ಜೈನ್‌

ಬದಲಾಯಿಸಿ

ಲೀನಾ ಸಂಜಯ್‌ ಜೈನ್‌ ಇವರು ಮಧ್ಯಪ್ರದೇಶದ ಬಸೋಡಾ ಕ್ಷೇತ್ರದ ವಿಧಾನ ಸಭೆಯ ಸದಸ್ಯರು ಮತ್ತು ಭಾರತೀಯ ಜನತಾ ಪಾರ್ಟಿಯ ನಾಯಕಿಯಾಗಿದ್ದಾರೆ

ಜೀವನ ಪರಿಚಯ

ಬದಲಾಯಿಸಿ

ಲೀನಾ ಸಂಜಯ್‌ ಜೈನ್‌ ಇವರು 22ನೇ ಮೇ 1972ರಂದು ಜನಿಸಿದ್ದಾರೆ. ಇವರು ಸಂಜಯ್‌ ಜೈನ್‌ "ತಪ್ಪು" ಎಂಬುವವರನ್ನು ವಿವಾಹವಾಗಿದ್ದಾರೆ.

ರಾಜಕೀಯ ವೃತ್ತಿ

ಬದಲಾಯಿಸಿ

ಲೀನಾ ಸಂಜಯ್‌ ಜೈನ್‌ ಇವರು ತಮ್ಮ ವಿವಾಹದ ನಂತರ ಭಾರತೀಯ ಜನತಾ ಪಾರ್ಟಿಯ ಸದಸ್ಯರಾದರು. ಇವರು ಬಸೋಡಾ ಮುನ್ಸಿಪಲ್‌ ಕೌನ್ಸಿಲ್ ನ ಮೊದಲಾ ಮಹಿಳಾ ಅಧ್ಯಕ್ಷೆಯಾಗಿದ್ದಾರೆ ಮತ್ತು ಇವರು ಬಸೋಡಾ ಕ್ಷೇತ್ರದ ಮೊದಲಾ ಮಹಿಳಾ ವಿಧಾನ ಸಭಾ ಸದಸ್ಯೆ. 2005ರಲ್ಲಿ ಇವರು ಭಾರತೀಯ ಜನತಾ ಪಾರ್ಟಿಯಿಂದ ಗಂಜ್‌ ಬಸೋಡಾದ ಮುನ್ಸಿಪಲ್‌ ಕೌನ್ಸಿಲ್‌ ನ ಅಧ್ಯಕ್ಷೆಯಾಗಿ ಆಯ್ಕೆಯಾದರು. 2005-09ನೇ ಸಾಲಿನಲ್ಲಿ ಇವರು ಮುನ್ಸಿಪಲ್‌ ಕೌನ್ಸಿಲ್‌ ನ ಅಧ್ಯಕ್ಷೆಯಾಗಿದ್ದರು. ನಂತರ ಇವರು ಭಾರತೀಯ ಜನತಾ ಪಾರ್ಟಿಯ ಮಹಿಳಾ ಮೋರ್ಚಾದ ಜಿಲ್ಲಾ ಉಪಾಧ್ಯಕ್ಷೆಯಾದರು. 2018ರಲ್ಲಿ ಇವರು ಬಸೋಡಾ ಕ್ಷೇತ್ರದಿಂದ ವಿಧಾನ ಸಭಾ ಸದಸ್ಯತ್ವದ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು ಮತ್ತು 10,266 ಮತಗಳಿಂದ ಚುನಾವಣೆಯಲ್ಲಿ ಜಯಗಳಿಸಿದರು.

ವಿಧಾನ ಸಭೆಯ ಸದಸ್ಯೆಯಾಗಿ

ಬದಲಾಯಿಸಿ

ಲೀನಾ ಸಂಜಯ್‌ ಜೈನ್‌ ಇವರು 2018ರಲ್ಲಿ ಬಸೋಡಾ ಕ್ಷೇತ್ರದಿಂದ ವಿಧಾನ ಸಭಾ ಸದಸ್ಯೆಯಾದರು. ಇವರು ಮಧ್ಯಪ್ರದೇಶ ಸರ್ಕಾರದ ವಿವಿಧ ಸಮಿತಿಗಳ ಸದಸ್ಯೆಯಾಗಿದ್ದಾರೆ. ಸಾರ್ವಜನಿಕ ಆರೋಗ್ಯ ಇಲಾಖೆ ಮತ್ತು ರಾಜ್ಯ ಸರ್ಕಾರದ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಸಚಿವಾಲಯದ ಸದಸ್ಯೆಯಾಗಿದ್ದ ಇವರು, ಪ್ರಸ್ತುತ ಮಧ್ಯಪ್ರದೇಶ ಸರ್ಕಾರದಲ್ಲಿ ಆಹಾರ ನಾಗರೀಕ ಸರಬರಾಜು ಮತ್ತು ಗ್ರಾಹಕ ಸಂರಕ್ಷಣಾ ಇಲಾಖೆಯಲ್ಲಿ ಸದಸ್ಯೆಯಾಗಿದ್ದಾರೆ.

ವಿಧಾನ ಸಭಾ ಸದಸ್ಯೆಯಾಗಿ ಕೈಗೊಂಡ ಅಭಿವೃದ್ದಿ ಯೋಜನೆಗಳು ಇವರ ಅಧಿಕಾರಾವಧಿಯಲ್ಲಿ ಮಂಜೂರಾದ ವಿವಿಧ ಯೋಜನೆಗಳು ಹೀಗಿವೆ - ಬಸೋಡಾ ಮತ್ತು ಗ್ಯಾರಾಸ್ಪುರ ಪ್ರದೇಶದಲ್ಲಿ 1.4ಎಮ್.ಪಿ.ಇ.ಬಿ 33/11 ಹೆಸರಿನ ವಿದ್ಯುತ್‌ ಉಪಕೇಂದ್ರಗಳು ನಿರ್ಮಾಣಗೊಂಡವು, ತಮ್ಮದೇ ಕ್ಷೇತ್ರದಲ್ಲಿ ಆಟದ ಮೈದಾನವನ್ನು ಆಭಿವೃದ್ದಿಪಡಿಸಲಾಯಿತು, 150 ಹಾಸಿಗೆಯ ಸುಸಜ್ಜಿತ ಸರ್ಕಾರಿ ಆಸ್ಪತ್ರೆಯನ್ನು ಇವರ ಅಧಿಕಾರಾವಧಿಯಲ್ಲಿ ಮಂಜೂರು ಮಾಡಲಾಯಿತು. ಸಾರಿಗೆ ವ್ಯವಸ್ಥೆಯನ್ನು ಸುಲಭಗೊಳಿಸಲು 28 ಕಿಲೋ ಮೀಟರ್‌ ಅಳತೆಯ ರಿಂಗ್‌ ರೋಡ್‌ ಇವರ ಬಜೆಟ್ಟಿನಲ್ಲಿ ಅನುಮೋದಿಸಲಾಯಿತು.

ಉಲ್ಲೇಖಗಳು

ಬದಲಾಯಿಸಿ