Annadanappa S C
Joined ೧ ಅಕ್ಟೋಬರ್ ೨೦೨೩
ನಮಸ್ಕಾರ,
ನನ್ನ ಹೆಸರು ಅನ್ನದಾನಪ್ಪ ಶಿವ ಚಿಂಪಿಗರ, ನಾನು ಕರ್ನಾಟಕದ ವಿಜಯನಗರ ಜಿಲ್ಲೆಯ ಹೂವಿನಹಡಗಲಿ ತಾಲ್ಲೂಕಿನ ಸೋಗಿ ಗ್ರಾಮದವನು. ನಾನು ನನ್ನ ಪ್ರಾಥಾಮಿಕ ಮತ್ತು ಪ್ರೌಢಶಿಕ್ಷಣವನ್ನು ಶಿಕ್ಷಣವನ್ನು ನನ್ನೂರಿನಲ್ಲಿಯೇ ಕನ್ನಡ ಮಾಧ್ಯಮದಲ್ಲಿ ಪೂರ್ಣಗೊಳಿಸಿದ್ದೇನೆ. ಮುಂದುವರೆದು ಪದವಿಪೂರ್ವ ಶಿಕ್ಷಣವನ್ನು ಪಕ್ಕದ ತಾಲೂಕಾದ ಹರಪನಹಳ್ಳಿಯಲ್ಲಿ ಪಡೆದು ನಂತರ ನಮ್ಮ ತಾಲ್ಲೂಕಿನ ಗಂಗಾವತಿ ಭಾಗ್ಯಮ್ಮ ಪದವಿ ಮಹಾವಿದ್ಯಾಲಯದಲ್ಲಿ ಐಚ್ಛಿಕ ಇಂಗ್ಲಿಷ್ ವಿಷಯದಲ್ಲಿ ಬಿ.ಎ ಪದವಿಯನ್ನು ಪಡೆದಿರುತ್ತೇನೆ. ಅಲ್ಲಿಂದ ಮುಂದೆ ಹರಪನಹಳ್ಳಿಯಲ್ಲಿ ಶಿಕ್ಷಕರ ತರಬೇತಿಯನ್ನು (ಬಿ.ಇಡಿ) ಪಡೆದು, ಮೈಸೂರು ವಿಶ್ವವಿದ್ಯಾಲಯದಲ್ಲಿ ಇಂಗ್ಲಿಷ್ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದು ಪ್ರಸ್ತುತ ಪದವಿ ಕಾಲೇಜೊಂದರಲ್ಲಿ ಉಪನ್ಯಾಸಕನಾಗಿ ಕಾರ್ಯನಿರ್ವಹಿಸುತ್ತಿದ್ದೇನೆ.