"ಅಮ್ಮ" ಎಂಬ ಎರಡಕ್ಷರದ ಈ ಶಬ್ದದಲ್ಲಿರುವ ಮನಮೋಹಕ ಚಿತ್ತಾಕರ್ಷಕ ಶಕ್ತಿ ಬೇರೆ ಯಾವ ಶಬ್ದಗಳಲ್ಲೂ ಕಾಣಸಿಗದು. ಅಂಬೆಕಾಲಿಕ್ಕಿ ನಡೆಯುವ. ಮಗುವಿನಿಂದ ಹಿಡಿದು ಮೈಸುಕ್ಕುಟ್ಟಿ ನಡೆಯುವ ಶರೀರದಲ್ಲಿ ಕಸುವಿರದ ಮುದುಕನವರೆಗೆ ಎಲ್ಲೆಲ್ಲು ಸುಲಭವಾಗಿ ಅಯೋಚಿತವಾಗಿ ಹೊರಹೊಮ್ಮುವ ಶಬ್ಧ ಈ ಅಮ್ಮಾ ಎಂದಾಗಿರುತ್ತದೆ. ಮಗುವು ಮಾತನಾಡಲು ಆರಂಭಿಸಿದಾಗ ಮೊದಲು ಹೇಳುವ ಶಬ್ಧವೇ ಅಮ್ಮಾ ಈ ಅಮ್ಮ ಎಂಬ ಶಬ್ದವು ತಾಯಿ,ಮಾತೆ, ಅವ್ವೆ ,ಅಬ್ಬೆ,ಜನನೀ,ಎಂಬ ಶಬ್ಧದ ಪರ್ಯಾಯ ವಾಚಕ ಶಬ್ಧಗಳು, ಉಪ್ಪಿಗಿಂತ ಮಿಗಿಲಾದ ರುಚಿಯಿಲ್ಲ ತಾಯಿಗಿಂತ ಮಿಗಿಲಾದ ಬಂಧುವಿಲ್ಲ. ಎಂಬಗಾದೆ ಮಾತು, ಈ ಅಮ್ಮಾ ಶಬ್ಧದವು ಲೌಕಿಕ ಪ್ರಪಂಚಕ್ಕೆ ವ್ಯವಹಾರದಲ್ಲಿ ಎಷ್ಟು ಅನಿವಾರ್ಯ ಅನುಬಂಧ ಹೊಂದಿದೆ ಆಎಂಬುದನ್ನು ಸೂಚಿಸಿದರೂ ವ್ಯವಹಾರಿಕತೆಯಿಂದ ಪಾರಲೌಕಿಕತೆಯ ಚಿಂತನೆ ಮಾಡಿದಾಗ ಈ ಅಮ್ಮಾ ಶಬ್ಧಕ್ಕೆ ಮಹಾಮಾತೆ, ಜಗನ್ಮಾತೆ, ಜಗದಾಂಬಾ, ದುರ್ಗಾಂಬಾ, ಕಾಳಿಕಾಂಬಾ ಹೀಗೆ ಭಕ್ತಿ ಶ್ರಧೆಗಳ ಧೈಮೋಪಸನಾ ಶಕ್ತಿಯಾಗುತ್ತಾಳೆ. ಸಾತ್ತ್ವಿಕ. ರಾಜಸ ತಾಮಾಸ ತ್ರಿಶಕ್ತಿಗಳ ಸಂಗಮ ಕೇಂದ್ರ ಬಿಂದುವಾಗಿದೆ ಶ್ರೀ ರಾಜರಾಜೇಶ್ವರಿ ಅಮ್ಮ ಎಂದಾಗುತ್ತಾಳೆ. ಉತ್ಸಾಹದ ಚೆಲುಮೆಯ ಪ್ರತೀಕವಾಗಿ ಅಮ್ಮ , ಕಷ್ಟಗಳಿಂದ ತೊಂದರೆಗಳಾದಾಗ ಅಮ್ಮಾ , ಆಪತ್ತಿನಿಂದ ಕಂಗೆಟ್ಟಾಗ ಅಮ್ಮಾ , ಅತ್ಯಂತ. ಹೆದರಿದಾಗ ಅಮ್ಮಾ , ನರಳಿದಾಗ ಅಮ್ಮಾ ಶಬ್ಧದವು ಅಯಾಚಿತವಾಗಿ ಹೊರಹೊಮ್ಮುತ್ತದೆ. ಅದೇನೋ ಮಾನಸಿಕ ಸ್ವಸ್ಥತೆ ಸಿಗುವಂತಿದೆ. ಈ ಸಂದರ್ಭಗಳು ಒಟ್ಟಾರೆ ಹೇಳುವುದಾದರೆ ಮಾತೃವಾತ್ಸಲ್ಯದ ಮಮತೆಯ ಸೇಚನವಿಲ್ಲದೆ ಮನುಷ್ಯನು ಬೆಳೆಯಲಾರದು ಬೆಳೆದರೂ ಈ ಅಮ್ಮನ ಮಮತೆಯ ಮಡಿಲಿನಲ್ಲಿ ವಂಚನೆಯಿಂದ ಸಂಪೂರ್ಣ ಮನುಷ್ಯನಾಗಲಾರ ಅದಕ್ಕಾಗಿ ಯೇ ನಮ್ಮ ಹಿರಿಯರು ಹೇಳಿರುವುದು . ಉತ್ತಮ ತಾಯಿಯ ಮಕ್ಕಳು ಉತ್ತಮ ಪ್ರಜೆಗಳು ಆಗಿರುತ್ತಾರೆ.