ವಿಶ್ವಕಪ್ ಗೆದ್ದು ತನ್ನಿ

ಬದಲಾಯಿಸಿ

ಹಾಲಿ ವಿಶ್ವ ಚಾಂಪಿಯನ್ ಟೀಂ ಇಂಡಿಯಾಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಶುಭ ಹಾರೈಸಿ ಟ್ವೀಟ್ ಮಾಡಿದ್ದಾರೆ.
ವಿಶ್ವಕಪ್ ಗೆದ್ದು ತರುವಂತೆ ಮೋದಿ ಅವರು ಕರೆ ನೀಡಿದ್ದಾರೆ.
ಮೈಕ್ರೋ ಬ್ಲಾಗಿಂಗ್ ತಾಣ ಟ್ವಿಟ್ಟರ್ ನಲ್ಲಿ ಜಾಗತಿಕವಾಗಿ ನಂ.2ನೇ ಸ್ಥಾನಕ್ಕೇರಿರುವ ಮೋದಿ ಅವರು ನೀಡಿರುವ ಕರೆಗೆ ಸಾರ್ವಜನಿಕರು ಕೂಡಾ ತಮ್ಮ ಶುಭ ಹಾರೈಕೆ ಸಂದೇಶಗಳನ್ನು ಪೋಣಿಸಿದ್ದಾರೆ.
ಮೋದಿ ಅವರು ಗುರುವಾರ ಸರಣಿ ಟ್ವೀಟ್ ಮಾಡಿ 'ಖೇಲೋ ದಿಲ್ಸೆ ವರ್ಲ್ಡ್ ಕಪ್ ಲಾವೋ ಫಿರ್ ಸೇ' ಎಂದು ಕರೆ ನೀಡಿದ್ದಾರೆ.
ಎಂಎಸ್ ಧೋನಿ ನೇತೃತ್ವದ ತಂಡ ಪ್ರತಿ ಆಟಗಾರರಿಗೂ ಹುರಿದುಂಬಿಸುವ ಮಾತುಗಳನ್ನು ಬರೆದಿರುವ ಮೋದಿ ಅವರು ಧೋನಿ ಬಗ್ಗೆ ವಿಶೇಷ ಪದಗಳನ್ನು ಬಳಸಿ ನಿಮ್ಮ ಮೇಲೆ ನಂಬಿಕೆಯಿದೆ.
ದೇಶದ ಗೌರವ ಇನ್ನಷ್ಟು ಹೆಚ್ಚಿಸಿ ಎಂದಿದ್ದಾರೆ.